ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುರುಕಿರಣ್ ಗೆ ಹೆರಿಗೆ ನೋವಂತೆ!


 
ಸಿನಿಮಾ ಸಂಗೀತ ನಿದರ್ೇಶಕ ಗುರುಕಿರಣ್ `ನನಗೆ ಇವತ್ತು ಯಾಕೋ ಹೆರಿಗೆ ನೋವು ಶುರುವಾಗಿಬಿಟ್ಟಿದೆ ಎಂದಕೂಡಲೇ ಎದುರಿಗಿದ್ದವರೆಲ್ಲಾ ಒಂದು ಕ್ಷಣ ಗಾಬರಿಗೆ ಬಿದ್ದದ್ದು ನಿಜ. ಹೇಳಿ ಕೇಳಿ ಗುರುವಿನ ಹೊಟ್ಟೆ ಬೇರೆ ಗಾತ್ರದಲ್ಲಿ ದೊಡ್ಡದಿರುವುದರಿಂದ ತಕ್ಷಣಕ್ಕೇ ಎಲ್ಲರ ಕಣ್ಣು ಅವರ ಉದರಭಾಗದ ಮೇಲೆ ಕೇಂದ್ರೀಕೃತಗೊಂಡಿತ್ತು. ಆಮೇಲೆ ಗೊತ್ತಾಗಿದ್ದೆಂದರೆ ಅವರ ಸಂಗೀತ ನಿದರ್ೇಶನದ ಭ್ರಹ್ಮ ಚಿತ್ರದ ಆಡಿಯೋ ಇವತ್ತು ಬಿಡುಗಡೆಯಾಗುತ್ತಿರುವುದರಿಂದ ಗುರುಕಿರಣ್ ಹಾಗೆಂದರು ಎನ್ನುವುದು. ಗುರುಕಿರಣ್ ಸಂಗೀತ ನಿದರ್ೇಶಿಸಿದ್ದ ಕುಟುಂಬ ಮತ್ತು ಜೋಗಿ ಸಿನಿಮಾಗಳ ಆಡಿಯೋ ಬಿಡುಗಡೆ ಹುಬ್ಬಳ್ಳಿಯಲ್ಲಿ ನೆರವೇರಿತ್ತಂತೆ. ಜೊತೆಗೆ ಅವೆರಡೂ ಸಿನಿಮಾಗಳ ಆಡಿಯೋ ಸೂಪರ್ ಹಿಟ್ ಆಗಿ ದಾಖಲೆ ನಿಮರ್ಿಸಿದ್ದವು. ಈಗ ಭ್ರಹ್ಮನ ಹಾಡುಗಳನ್ನೂ ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಿದರೆ ಅದು ಕೇಳುಗರ ಕಿವಿಯನ್ನು ಮೋಡಿ ಮಾಡುತ್ತದೆ ಎನ್ನುವ ನಂಬಿಕೆ ಗುರುಕಿರಣ್ ಮತ್ತು ಅವರ ತಂಡದವರದ್ದು. ಹಾಗಾದರೆ ಗುರುಕಿರಣ್ಗೆ ತಮ್ಮ ಸಂಗೀತ ಸಂಯೋಜನೆಯ ಮೇಲೇ ನಂಬಿಕೆ ಇಲ್ವಾ ಅಂತಾ ಮಾತ್ರ ಯಾರೂ ಪ್ರಶ್ನಿಸೋಹಾಗಿಲ್ಲ!
ಮೊದಲೇ ಗಾಂಧಿನಗರದ ಮಂದಿ ಇಂಥ ಮೂಢ ನಂಬಿಕೆಗಳಿಗೆ ಹೆಚ್ಚು ಮಹತ್ವ ನೀಡುವ ಜನ. ಹೀಗಿರುವಾಗ ಕನ್ನಡ ಎಲ್ಲ ಆಡಿಯೋ ಕಂಪೆನಿಗಳೆಲ್ಲಾ ಸಾರಾಸಗಟಾಗಿ ಹುಬ್ಬಳ್ಳಿಗೇ ಬಂದು ಬೀಡುಬಿಟ್ಟರೂ ಆಶ್ವರ್ಯವಿಲ್ಲ.!
 

‍ಲೇಖಕರು G

1 January, 2014

1 Comment

  1. anon

    sadhya aamEle normalaa caesarian delivery aa anta yaaroo keLalillvalla 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading