ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಸೊಳ್ಳೆಗೊಂದು ಮೆಸ್ಸೆಜು ಬಂದು… ಅರ್ಜಂಟ್ ಮಿಟಿಂಗ್…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…

15

ನನಗೂ ಅಂಜಿಕೆ ಸ್ಟಾರ್ಟ ಆಯ್ತು. ಇವರ ಮಧ್ಯ ನಾನು ಸತ್ತೆ ಹೋಗತಿನಿ ಅನ್ನೊ ಭಯವಾಗಿ ಅಲ್ಲಿಂದ ಪಕ್ಕದಲ್ಲಿ ಮನೆಯಲ್ಲಿ ಹೊಕ್ಕೊಂಡೆ… ಅದು ರಾಜಕಾರಣಿ ಕಮ್ ಗುತ್ತೆದಾರ… ನಮ್ಮ ಓಣಿಯಲ್ಲಿ ಸಿ.ಸಿ ರೋಡ, ಚರಂಡಿ ಮಾಡಿ ತಿಂಗಳದಲ್ಲೆ ಕಿತ್ತುಕೊಂಡು ಹೋಗುವ ಹಾಗೆ ಕೆಲಸ ಮಾಡಿಸಿದವ. ಬಡವರಿಗೆ ಬರುವ ಉಚಿತ ಮನೆಗಳಿಗೂ ಸಾವಿರಾರು ರೂಪಾಯಿ ಪಡೆಯುತ್ತದ್ದುದ್ದನ್ನು ಕೇಳಿದ್ದೆ. ಎಲೆಕ್ಷನ್ ಟೈಮಿನಲ್ಲಿ ಮಾತ್ರ ಜನರಿಗೆ ಹೆಂಡ, ದುಡ್ಡು ಹೆಣಕ್ಕಳಿಗ ಸೀರೆ ಊಟ ಕೊಡಿಸಿ ಗೆದ್ದು ಬರುತ್ತಿದ್ದ. ಗೆದ್ದ ಮೇಲೆ ಯಾರನ್ನೂ ಮಾತಾಡಿಸುತ್ತಿರಲಿಲ್ಲ. ಜನರೂ ಅಷ್ಟೆ ಎಲೆಕ್ಷನ ಟೈಮಿನ್ಯಾಗ ದೊಡ್ಡತ ಮನೆ ಮುಂದ ಬಂದು ಓಟು ಕೇಳತಾನ ಅಂತ ಕೊಟ್ಟಿದ್ದಿ ಇಸ್ಕೊಂಡು ಓಟು ಹಾಕತಿದ್ರು. ಅವರ ಮನೆ ಒಳಗೆ ಹೊಕ್ಕೊಂಡು ಕುರ್ಚಿಯ ಮೇಲೆ ಕುಳಿತಿದ್ದ ನನಗರಿವಿಲ್ಲದಂತೆ ಅವನ ಮೇಲೆ ಹೋಗಿ ಕುಳಿತು ಕಚ್ಚಿದೆ. ಅಶ್ಚರ್ಯ ಅನಿಸ್ತು. ರಕ್ತ ಚೀ ಅನಿಸಿ ಅವರೊಂದಿಗೆ ಮಾತಾಡುತ್ತಿದ್ದ ಅಧಿಕಾರಿಗಳಿಗೆ ಉಗುಳಿದೆ. ಮೊದಲ ಟೆನ್‌ಶನ್ ನಲ್ಲಿ ಅವರವರಲ್ಲಿ ಜಗಳ ಹತ್ತಿತು.. ತಾರಕಕ್ಕೇರಿತು… “ಪಾನ್ ಹಾಕಿಕೊಂಡು ಮೈಮೇಲೆ ಉಗಿತೇರಿನ್ರಿ? ನಮಗೂ ಆತ್ಮಗೌರವ ಇಲ್ಲೇನ್ರಿ?” ಅಂತ ಅವರು ವಾದಿಸತೊಡಗಿದರು. “ನಾನು ಎಲೆ ಹಾಕಿಲ್ಲೊ?” ಎಂದು ಗುತ್ತೆದಾರ ಹೇಳಿದರು ಅವರು ಒಪ್ಪುತ್ತಿಲ್ಲ… ಅರಿವಿಲ್ಲದಂತೆ ಭಷ್ಟ ಅಧಿಕಾರಿಗಳಿಗೆ ಕಚ್ಚಿದೆ..ಬಾಯಲ್ಲಿ ರಕ್ತ ಹೋಗಿ ಛೀ ಅನಿಸಿ ಉಗಿದೆ. “ಇದನ್ನು ಯಾರೊ ಉಗುಳಿದ್ದು” ಎಂದು ಕೇಳುವ ಸರದಿ ಗುತ್ತೇದಾರನದಾಯಿತು. ಬಿಳಯ ಖಡಕ್ ಅಂಗಿಯಲ್ಲಿ ಎದ್ದು ಕಾಣುತ್ತಿತ್ತು. ಆಗಲೂ ಉತ್ತರವಿಲ್ಲ. ಎಲ್ಲರು ಮುಖ ಮುಖ ನೋಡಿದರು. ಎಲ್ಲರನ್ನು ಕಚ್ಚಲು ಆರಂಭಿಸಿದೆ ಎಲ್ಲರೂ ನೋವಿನಿಂದ ಒದ್ದಾಡಿದ್ದೆ ಒದ್ದಾಡಿದ್ದು. ‘ಪಾಪ, ಬಡವರನ್ನ ಎಷ್ಟು ಕಾಡಿದ್ದೀರಿ, ಒದ್ದಾಡಿ ಒದ್ದಾಡಿ’ ಎಂದು ಅವರ ನರಳಾಟವನ್ನ ಮಜಾ ಮಾಡಿದೆ. ದೊಡ್ಡ ಸೊಳ್ಳೆ ಎಲ್ಲರನ್ನು ಕಚ್ಚುತ್ತಿರುವುದು ಮಾಡುತ್ತಿರುವುದು ಗಮನಕ್ಕೆ ಬಂದು ಬೆಚ್ಚಿ ಬಿದ್ದರು. ಹೊರಗ ಒಬ್ಬವ ಆ ಸೊಳ್ಳೆ ಈ ಮನ್ಯಾಗ ಹೊಕ್ಕಿದೆ ಅಂತ ಜನ ನುಗ್ಗಿದ… ಕಡಿಸಿಕೊಂಡು ನೋವು ‘ಹೊಡ್ರಿ ಬಿಡಬ್ಯಾಡಿ” ಅಂತ ಕೂಗಿದ ಆ ಗುತ್ತೇದಾರ ಹಾಗೂ ಉಳಿದವರು. ಎಲ್ಲರೂ ಕೈಗೆ ಸಿಕ್ಕದ್ದು ತೆಗೆದುಕೊಂಡು ಹೊಡೆದದ್ದೆ ಹೊಡೆದದ್ದು. ಮನೆಯಲ್ಲ ಹತ್ತು ನಿಮಿಷದಾಗ ಧ್ವಂಸ.. ‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಅನ್ನೊ ಸರ್ ಹೇಳುತ್ತಿದ್ದ ಗಾದೆ ನೆನಪಿಗೆ ಬಂದು ಸತ್ಯ ಅನಿಸ್ತು.

ಮೊದಲು ಇಲ್ಲಿಂದ ಪಾರಾಗಿ ಮೊದಲು ನನ್ನ ಫ್ರೆಂಡನ್ನ ಸೇರಿಕೊಬೇಕು ಅಂತ ಮತ್ತೆ ಹಾರಿದೆ… ಮಕ್ಕಳಿದ್ದ ರೂಮಿನೊಳಕ್ಕೆ ನುಗ್ಗಿದೆ… ಅಲ್ಲಂತೂ ಟಿವಿಯಲ್ಲಿ ನನ್ನದೆ ಸುದ್ದಿ.. ನನಗೊ ಖುಷಿ ಒಮ್ಮೊಮ್ಮೆ ಆತಂಕ… ಗ೦ಭಿರವಾಗಿ ಕುಳಿತಿದ್ದ ಟಿವಿ ಮೇಲೆ ಕುಳಿತು “ಹಾಯ್” ಎಂದು ಕೊಂಡಿ ಅಲ್ಲಾಡಿಸಿ ಹಾರಿ ಹಾರಿ ಕುಳಿತೆ.. ಜೊತೆಗೆ ಹಾರಿ ಹೋಗಿ ಅವರ ಮೂಗಿನ ಮೇಲೆಯೂ… ಆ ಮಕ್ಕಳು ನನ್ನ ನೋಡಿ ‘ಅಮ್ಮಾ ದೊಡ್ಡ ಸೊಳ್ಳೆ, ದೊಡ್ಡ ಸೊಳ್ಳೆ” ಅಂತ ಹೊರ ಓಡಿದರು… ಕೆಲಗಿದ್ದವರು ಮೇಳೆ ಓಡಿ ಬಂದ್ರು ಟಿವಿ ಅವರ ಹೊಡತಕ್ಕ ಉಳಿಲಿಲ್ಲ.. ಮೆಲ್ಲಕ್ಕೆ ವೆಂಟಿಲೇಟರ್ ಮೂಲಕ ಹೊರಗ ಬಂದು ನೋಡತೀನಿ ಹತ್ತಾರು ಸುದ್ದಿ ವಾಹಿನಿಗಳ ಗಾಡಿಗಳು ರಾಜಕಾರಣಿಯ ಮನೆಮುಂದೆ ನಿಂತು ಬಿಟ್ಟಿವೆ. ಅಲ್ಲಲ್ಲಿ ಜನರ ಬೈಟು ತೆಗೆದುಕೊಳ್ಳುತ್ತಿವೆ.

ಇದ್ದಷ್ಟು ತೊಂದ್ರೆ ಬಾಳ ಅಂತ ಗೊತ್ತಾಗಿ ಮತ್ತೆ ಫ್ರೆಂಡು ಇದ್ದ ಸ್ಥಳಕ್ಕೆ ಬಂದೆ.
“ಏನು ಸಮು ಹನುಮಂತಗ ಸೀತೆನ ಭೇಟಿ ಆಗಿ ಬಾ ಅಂದ್ರ ಲಂಕೆನ ಸುಟ್ಟ ಹಾಕಿ ಬಂದ೦ಗಾತು ನೋಡು” ಅಂತು.
“ಹೌದಪ..ಏನೊ ಮಾಡಕ ಹೋಗಿ ಏನೊ ಆಗಿಬಿಡ್ತು… ಆದರ ನನಗ ಹೀಗೆ, ಇಷ್ಟೆಲ್ಲಾ ರಾದ್ಧಾಂತ ಆಗತಾದ ಅಂತ ಗೊತ್ತಾಗಲೆ ಇಲ್ಲ. ನನ್ನ ಕೊಂಡಿ ಇಷ್ಟು ಸ್ಟ್ರಾ೦ಗದ… ನಾನು ಚುಚ್ಚಿದ ಕೂಡಲೆ ರಕ್ತ ಪರೀಕ್ಷೆ ಮಾಡಲಿಕ್ಕೆ ಸಿರೆಂಜ್‌ನಾಗ ಎಳೆದು ಕೊಂಡಾ೦ಗ ಎಳಕೊಂಡು ಬಾಯಾಗ ಬಂದು ಬೀಡ್ತು.. “ಯಾಕ ಚೀ… ಎಲ್ಲಾ ಉಪ್ಪುಪ್ಪು… ನೀವು ಹೇಗೆ ಹೀರತಿರೊ”
“ಹೌದೌದು… ಆದರ ನೀನು ಕುಡದು ಕುಡುದ ಹ್ಯಾಂಗ… ಉಬ್ಬಿ ನೋಡು”
“ಹೌದಾ” ಎಂದು ನೋಡಿ” ಕುಡಿದಿಲ್ಲ… ಎಲ್ಲಾ ಉಗುಳಿನಿ”
“ಸ್ವಲ್ಪ ಹೋದದಕ ಹೀಗಾಗಿದೆ… ಇನ್ನೂ ಎಲ್ಲಾ ಕುಡದಿದ್ರ” ಎಂದು ನಕ್ಕತು
“ಈಗ ಏನು ಮಾಡೋಣ”
“ಆಯ್ತು ನೀನು ಮಾಡಿದ್ದು… ಸಾಕಾಗಿ ಹೋಗಿದೆ. ಇಡಿ ಎಲ್ಲಾ ಕಡೆ ನಮ್ಮ ಮೇಲೆ ವಾರ್ ಘೋಷಣೆ ಮಾಡತಾರ”
“ಹಾಗೆಲ್ಲ ಆಗಲ್ಲ ತೊಗು.. ಹಿಂದಕ ಗಣಪ ಹಾಲು ಕುಡದಾನ ಅಂತ ಸುದ್ದಿ ಆಗಿ ಎಲ್ಲಾ ಕಡೆ ಹಾಲು ಕುಡಿಸಿದಿ ವಿಜ್ಞಾನದ ತತ್ವದ ಮೂಲಕ ಹಾಲು ಮೇಲೇರಿದ್ದು. ದೇವಸ್ಥಾನಗಳೆಲ್ಲ ಕ್ಯೂ ಇಟ್ಟು ಹೋಗಿದ್ವು.. ಅದು ವಿದಾನ ಸೌಧದಲ್ಲೂ ಕೂಡಾ ಚರ್ಚೆ ಆಯ್ತು. ನಾನು ಕುಡಿಸಿ ನೀನು ಕುಡಿಸಿನಿ.. ನಮ್ಮ ಹೆಣ್ಮಕ್ಕಳು ಕುಡಿಸ್ಯಾರ ಅಂತ… ಪರವಿರೋದ ಚರ್ಚೆ ಆಗಿ ಅದೆಲ್ಲ… ಸುಳ್ಳು ಅಂತ ತೀರ್ಮಾನ ಆಗಿ ಸಮಾಪ್ತಿ ಆಯಿತು”
“ಇದೆಲ್ಲ ನಿನಗೆ ಹೇಗೆ ಗೊತ್ತಾಯ್ತು”
“ನಾನು.. ಏನೇನೊ ಪ್ರಶ್ನೆ ಕೇಳುವಾಗ..ಅಪ್ಪ ಇಂತವೆಲ್ಲ ಹೇಳತಿರತಾನೆ”
“ಈಗ ನೀನು ಮಾಡಿದ್ದು…ಅಂತಹದ್ದಲ್ಲಲ”
“ಅದು ಹಾಗೆ ಆಗತಾದ ನಮ್ಮ ಕಡೆ ನೀಲಿ ಕೆಟ್ಟ ಸುದ್ದಿ ಅಂತಾರ…”
“ಅ೦ದ್ರ…”
“ಅದಪಾ… ಒಂದೊ೦ದು ಸಾರಿ ವ್ಯಾಪಾರಿಗಳಿ ಮಾಲು ಸ್ಟಾಕ್ ಉಳಿಲಿಕ್ಕೆ ಹತ್ತಿತ್ತು ಅಂದ್ರ ಟಿವಿಲಿ ಜ್ಯೋತಿಷಿಗಳ ಜೊತೆ ಅಡ್ಜಸ್ಟ ಮಾಡಿಕೊಂಡು ಬಿಡತಾರ. ಅವರ ಒಂದು ಸ್ಟೆಂಟಮೆ೦ಟು ಕೊಟ್ರ ಸಾಕಲು ಮಾಲು ಒಂದು ದಿವಸದಾಗ ಖಾಲಿ ಆಗಿ ಬಿಡತಾವ… ಒಬ್ಬರೆ ಗಂಡು ಮಕ್ಕಳಿದ್ವದರು ತವರಿಗೆ ಹೋಗಿ ಸೀರಿ ಉಡಸಿಕೊಂಡು ಬಾ ಅಂದೊ… ದೇವರಿಗೆ ದೀಪ ಹಚ್ಚೆಂದೊ.. ಹೆಣ್ಮಕ್ಕಳು ಇದ್ದೊರು ದೇವರಿಗೆ ಬಳಿ ಕೊಡಸೆಂದೊ, ಸಾಸ್ವಿವ ಎಣ್ಣಿ ದೀಪ ಹಚ್ಚೆಂದು.. ಉಪ್ಪು ಒಂದು ತಿಂಗಳು ಖರೀದಿ ಮಾಡಬಾರದೆಂದೊ… ಹೀಗಿದೆ… ಮಜಾ ಇರುತ್ತದ.. ಇರಲಿ ತಲಿಕೆಡಿಸಿಕೊಳ್ಳಬೇಡ ಬಾ…”
“ಆಯ್ತು ಬಿಡು… ಈಗ ಎಲ್ಲಿಗೆ ಹೋಗೋಣ.. ಹೇಳು”
“ಅದೆ.. ನಿಮ್ಮ ಲೋಕು ತೋರಿಸು ಅಂದೆನಲ್ಲ”
“ಆಯ್ತು ಹೋಗೋಣ”… ಎನ್ನುವಷ್ಟರಲ್ಲಿ… ಸೊಳ್ಳೆಗೊಂದು ಮೆಸ್ಸೆಜು ಬಂದು… ಅರ್ಜ೦ಟ್ ಮಿಟಿಂಗ್.. ಅರ್ಜ೦ಟ್ ಮೀಟಿಂಗ್.. ಕಮ್ ಫಾಸ್ಟ್ ಕಮ್ ಫಾಸ್ಟ್… ಇವತ್ತು ಅರ್ಜಂಟಾಗಿ ಒಂದು ಸಭೆ ಕರೆದಿದ್ದರೆ..
“ಹೌದಾ ನಡಿ ಹೋಗೋಣ”
“ಒನ್ ಮಿನಿಟ್… ನೀನು ಕಣ್ಣು ಮುಚ್ಚಿಕೊ”
“ಏಕೆ…”
“ಹಾಗೆಲ್ಲ ಅಪರಿಚಿತರನ್ನ ಅಲ್ಲೆ ಕರೆದೊಯ್ಯಕಾಗಲ್ಲ.. ಅಲ್ಲಿಯೂ ನೀನು ಸೂಕ್ಷ್ಮವಾಗಿರಬೇಕು…”
“ಯಾಕೆ…”
“ನಿನ್ನನ್ನು ಮನುಷ್ಯ ಅಂತ ಗುರಿತಿಸಿಬಿಟ್ರೆ ಫಜಿತಿ.. ಅದರಲ್ಲಿ ನೀನು ಸ್ವಲ್ಪ ದಪ್ಪ ಇದ್ದಿಯಾ..ನಮಗಿಂತಲೂ ಡಿಫರೆಂಟು ಕಾಣ್ತಿಯಾ?”
“ಸರಿ”
“ಕಣ್ಣುಮುಚ್ಚಿಕೊ…”
“ಆಯ್ತು “
ಸುಂಯ್ಯಿ ಅಂತ ಏನೊ ಸೌಂಡು ಕೇಳಿದಂಗಾಗಿ ಬಿರುಗಾಳಿ ಬೀಸದಂಗ ಆಗಿ ಒಂದಡೆ ಬಿದ್ದಂಗಾಯ್ತು
“ಈಗ ಕಣ್ಣು ತೆಗೆ”
ಸ್ವಲ್ಪೆ ಬೆಳಕಿದ್ದ ಸ್ಥಳ… ಪಕ್ಕದಲ್ಲಿ ದೊಡ್ಡ ಘಟಾರ… ಘಂಮ್ಮನೆ ವಾಸನೆ ಬರುತ್ತಿತ್ತು… ಸಹಿಸಿಕೊಳ್ಳೊಕೆ ಆಗತಿರಲಿಲ್ಲ.
“ಎಲ್ಲಿ ಕರೆದುಕೊಂಡು ಬಂದಿ..”
“ನಮ್ಮ ಸಾಮ್ರಾಜ್ಯಕ್ಕ”
ಸೊಳ್ಳೆಗಳ ದೊಡ್ಡ ಸಾಮ್ರಾಜ್ಯ… ದೊಡ್ಡಪ್ರಮಾಣ ಸೊಳ್ಳೆಗಳು… ಲಾರ್ವ.. ಮುಂದಿನ ಹಂತದ ಮರಿ, ಸಣ್ಣ ಸೊಳ್ಳೆ ಹರೆಯದ ಸೊಳ್ಳೆ… ನಾನಾ ನಮೂನಿ ಸೊಳ್ಳೆಗಳಿದ್ದವು
ಒಂದು ಕ್ಷಣ ಭಯ ಆಯಿತು
ಆದರೆ ನನ್ನ ನೋಡುತ್ತಿದ್ದಂತೆ… ಎಲ್ಲವು ಸಾಲಾಗಿ ನಿಂತು ಚೆಪ್ಪಾಳೆ ತಟ್ಟ ಹತ್ತಿದವು..
ನನಗ ಆಶ್ಚರ್ಯ, ಸೊಳ್ಳೆ ಕಡೆ ನೋಡಿದೆ..
“ನೋಡಿದ್ಯಾ.. ನೀನು ಮಾಡಿದ ಗಲಾಟೆ ನಮ್ಮ ಲೋಕಕ್ಕೂತಿಳದಾದ.. ನನಗ ಗೊತ್ತಿರಲಿಲ್ಲ.. ಅರ್ಜಂಟ ಸಭೆ ಅಂದ್ರು ನಾನು ಬಂದ್ರೆ ಇಲ್ಲಿ ಹೀಗಿತ್ತು.. ಆದರೆ ನೀನು ಮನುಷ್ಯ ಅಂತ ಗೊತ್ತಿಲ್ಲ…”
ರಾಜ ಸೊಳ್ಳೆಯೊಂದು ಬಂದು ತನ್ನ ಕೊಂಡಿಯಿ೦ದ ನನ್ನ ಕೊಂಡಿಗೆ ಮುತ್ತು ಕೊಟ್ಟು “ನೀನು ನಮ್ಮ ಹೆಮ್ಮ… ಕ್ಷಣದಲ್ಲಿ ಇಡಿ ಜನರನ್ನ ಬೆದರೊ ಹಾಗೆ ಮಾಡಿದ್ದೀಯಾ…?
ಎಲ್ಲವೂ ಚೆಪ್ಪಾಳೆ ತಟ್ಟಿದವು
“ನೀನು ನಮ್ಮಯ ಹೊಸ ಜನರೇಶನ್ನ… ನಮ್ಮಲ್ಲೂ ನಿನ್ನಂತ ಸೊಳ್ಳೆ ಮುಂದೆ ಒಂದು ದಿನ ಹುಟ್ಟತಾರೆ ಅನಕೊಂಡಿದ್ರು… ನನಗೆ ನಂಬಲಾಗಿರಲಿಲ್ಲ… ಇವತ್ತು ಆ ಸುದಿನ ಕೂಡಿತು.. ಭೇಷ್ ಭೇಷ್” ಎಂದು ರಾಜ ಸೊಳ್ಳೆ “ಎಲ್ಲಿ… ಸನ್ಮಾನ ಮಾಡೋರೆಲ್ಲ ಬನ್ನಿ… ಸನ್ಮಾನಿಸಿ” ಎಂದಾಗ ಎಂದು ಹಲವು ಸೊಳ್ಳೆಗಳು ಬಂದು ವಿಶ್ ಮಾಡಿ ಏನೇನೊ ಹಾಕಿದವು… ಕೆಟ್ಟವಾಸನೆ ಹೊಡಿತಿತ್ತು… ಸಹಿಸಿಕೊಳ್ಳಲೇಬೇಕು… ನಾನು ಮನುಷ್ಯ ಅಂತ ವಾಸನೆ ಬರದೆ ಇರೋ ಹಾಗೆ ಮಾಡಲೆ ಬೇಕು…
ಮುಂದುವರೆದ ಸೊಳ್ಳೆ ರಾಜ “ಆಯ್ತು ನಮ್ಮ ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸೋಣ” ಅಂದಿತು
ಅಡ್ಡ ಬಂದ ಫ್ರೆಂಡು…” ಇಲ್ಲ ಈಗ ಇವನ ಪ್ರಕಾರ ನಡೆಯೋಣ… ಮುಂದೆ ಯಾವುದಕ್ಕೂ ಇಟ್ಟುಕೊಳ್ಳೋಣ.. ಬಾಣಗಳ ಪ್ರಯೋಗ ಒಂದೊ೦ದೆ ಆಗಬೇಕು” ಎಂದ
ಸೊಳ್ಳೆಗಳ ರಾಜನಿಗೂ ಸರಿ ಎನಿಸಿತು. “ಹೌದು ಈ ತರಹದ ಜನರೇಶನ್ ಡೆವಲಪ್ ಆಗಲು ಮೊದಲು ಮಾರ್ಗ ಕಂಡು ಹಿಡಿಯಬೇಕು.. ಕರಿರಿ ನಮ್ಮ ಸೈಂಟಿಸ್ಟು ಸೊಳ್ಳೆನ” ಎಂದಿತು ನನಗೆ ಮಾತಾಡಲು ಆಸ್ಪದೆ ಕೊಡದೆ… ನನಗೂ ಅದೆ ಬೇಕಿತ್ತು… ಏನಂತ ಮಾತಾಡಬೇಕು ಅವುಗಳೊಂದಿಗೆ…
ಫ್ರೆ೦ಡು “ಅಲ್ಲ … ಅವರಿಗೆ ಮಾತಾಡೋಕೆ ಕೊಡಿ” ಎಂದಾಗ ಝಲ್.. ಎಂದು ನಾನು ಒಲ್ಲೆ ಎನ್ನುವ ಸನ್ನೆ ಮಾಡಿದೆ.
“ಇಲ್ಲ.. ಇಷ್ಟೊತ್ತು.. ಮನುಷ್ಯರೊಂದಿಗೆ ಹೋರಾಡಿ ದಣಿವಾಗಿರಬೇಕು… ಆಯ್ತು.. ಮೊದಲು ಈ ಸಂತತಿ ಬೆಳೆಸಲು ಪ್ರಯೋಗ.. ನಡೆಯಲಿ” ಎಂದಾಗ
ಅದೆ ಟೈಮಿಗೆ ಥೇಟ್ ವಿಜ್ಞಾನಿಗಳಾಂಗ ಮೈತುಂಬ ಕೂದಲು ಬಿಟ್ಟುಕೊಂಡಿತ್ತು.. ತಿಕ್ಕಲು ತಿಕ್ಕಲು ಆಗಿ ವರ್ತನೆ ಮಾಡತಿತ್ತು… ಸೊಳ್ಳೆ ನಿಧಾನವಾಗಿ ಬರಹತ್ತಿತು… ಅದು ಹತ್ತಿರ ಬಂದ೦ತೆಲ್ಲ… ಇನ್ನೂ ನನಗ ಭಯ… ಇದು ನನ್ನನ್ನ ಗುರುತು ಹಿಡಿದುಬಿಟ್ಟರೆ… ಗೆಳೆಯನ ಕಡೆ ನೋಡಿದೆ… ಅವನ ಮುಖದಲ್ಲೂ ಭಯ ಆವರಿಸಿತ್ತು.

ಅದು.. ತಿಕ್ಕುಲು ತಿಕ್ಕುಲಾಗಿ ಎಲ್ಲರಿಗೂ ಕಿಂಡಲ್ ಮಾಡತಾ… ಮಾತಾಡಸ್ತಾ… ನನ್ನ ಸುತ್ತಲೂ ‘ಗುಂಯ್ ಗುಯಂ’ ಅಂತ ಓಡಾಡಿ ಹತ್ರ ಬಂದು ಮೇಲೆ ಕೆಳಗೆ ನೋಡಿ.. ದೇಹ ಮುಟ್ಟಿ, ವಾಸನೆ ನೋಡಿ, ಕೊಂಡಿ ಹಿಡಿದು ಜಗ್ಗಿ ಏನೆಲ್ಲಾ ಮಾಡಿದ ಮೇಲೆ ಸೈಂಟಿಸ್ಟು ಸೊಳ್ಳೆ ಕುತೂಹಲದಿಂದ ಕಾಯುತ್ತಿದ್ದ ರಾಜ ಸೊಳ್ಳೆಗೆ, ಅಲ್ಲಿ ನೆರದಿದ್ದವರಿಗೆ ಏನೋ ಹೇಳಲು ಹೊರಟಿತ್ತು.. ನನಗೂ ಭಯ ಆವರಿಸಿತ್ತು. ಸೊಳ್ಳೆ ಫ್ರೆಂಡು ನಡುಗುತ್ತಿತ್ತು ಅದೆ ಹೊತ್ತಿಗೆ… ಶರವೇಗದಲ್ಲಿ ಏನೊ ಪಟ್ ಅಂತ ಬಡದಂಗ ಆಯ್ತು… ಉಸಿಕಟ್ಟಿದ ಅನುಭವ.. ಒಮ್ಮೆಲೆ ಸುಂಟರಗಾಳಿ ಬೀಸಿದ ಅನುಭವ… ಎಲ್ಲಾ ಸೊಳ್ಳೆಗಳು ಚೆಲ್ಲಾಪಿಲ್ಲಿಯಾದವು… ನನಗೆ ಯಾರೊ ಬಂದು ಮೂಗನ್ನು ಕಣ್ಣನ್ನು ಮುಚ್ಚಿದ ಹಾಗಾಯ್ತು ಅಷ್ಟೆ.. ಏನಾಯ್ತು ಅಂತ ಯೋಚಿಸಲು ಸಾಧ್ಯವಾಗಲಿಲ್ಲ…

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

May 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: