ಶ್ರೀಕಾಂತ್ ಪ್ರಭು
ಕೊಕ್ಕರೆ ಬೆಳ್ಳೂರಿನಲ್ಲಿ ನೆಲೆಸಿರುವ ಮನು ಒಬ್ಬ ಇಂಜಿನೀಯರಿಂಗ್ ಪದವೀಧರ.
ಕೊಕ್ಕರೆಗಳ ಮೈಗ್ರೇಷನ್, ಅವುಗಳ ಉಳಿವು, ಬೆಳವಣಿಗೆ ಇತ್ಯಾದಿಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಂಡ ಅವರು “ಪೆಲಿಕಾನ್ ಮೇನ್” ಎಂದೇ ಕೆಲವು ವಲಯಗಳಲ್ಲಿ ಪರಿಚಿತರು. ಎಲ್ಲ ವ್ಯಾವಸಾಯಿಕ ಅವಕಾಶಗಳನ್ನು ಬಿಟ್ಟುಕೊಟ್ಟು ಆ ಹಳ್ಳಿಯಲ್ಲಿ ನೆಲೆಸಿ ಕೆಲಸ ಮಾಡುತ್ತಿದ್ದಾರೆ.
ಕೊಕ್ಕರೆ ಬೆಳ್ಳೂರು ಹಾಳಾಗುವದನ್ನು ತಡೆಯುವಲ್ಲಿ ಅವರ ಯೋಗದಾನ ಬಹು ಮುಖ್ಯ. ಹಳ್ಳಿಗರು ತಮ್ಮ ಆಸ್ತಿಗಳಾದ ಮರಗಳನ್ನು ಮಾರದಂತೆ ತಡೆದು ಪಕ್ಷಿಗಳ ನೈಸರ್ಗಿಕ ತಂಗುದಾಣಗಳನ್ನು ಸಂರಕ್ಷಿಸುವಲ್ಲಿ ಅವರ ಪ್ರಮುಖ ಪಾತ್ರವಿದೆ.
ತನ್ನಷ್ಟಕ್ಕೆ, ತಾನು ನಂಬಿದ ಕೆಲಸ ಮಾಡಿ ಪ್ರಸಿದ್ಧಿ ಬಯಸದ ಮನು ತರಹದವರು ದೇಶದುದ್ದಕ್ಕೂ ಅನೇಕರಿದ್ದಾರೆ. ಪರಿಸರದ ಉಳಿವು ಅದರ ರಕ್ಷಣೆ ವನ್ಯಜೀವಿಗಳ ಬದುಕಿನ ವೈವಿಧ್ಯ ಇತ್ಯಾದಿ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ವಿದ್ಯಾಸಂಸ್ಥೆಗಳಲ್ಲಿ ಕಾರ್ಯಾಗಾರಗಳನ್ನು ಮಾಡುವದಕ್ಕೆ ಮನು ಎಂದಿಗೂ ತಯಾರು. ಅದು ಅವರ ಮೆಚ್ಚಿನ ಕೆಲಸ.
ಚಲನಚಿತ್ರ ಮತ್ತು ಇತರ ಕಲಾಮಾಧ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ದಂಪತಿಗಳಾದ ಪ್ರಕಾಶ್ ಬಾಬು ಮತ್ತು ಭವಾನಿಯವರಿಂದ ನನಗೆ ಅವರ ಪರಿಚಯ.
ನಾವು ಅಲ್ಲಿ ಹೋದಾಗ ಆಗತಾನೆ ಮರದಿಂದ ಕೆಳಗೆ ಬಿದ್ದ ಕೊಕ್ಕರೆ ಮರಿಗಳನ್ನು ತರಲಾಗಿತ್ತು. ಕಣ್ಣು ಬಿಡಲಾಗದೇ ಪಿಳಿ ಪಿಳಿಸುತ್ತಿದ್ದ ಅವುಗಳನ್ನು ಮನು ನಮಗೆ ತೋರಿಸಿದರು. ಅಂಗೈಯಲ್ಲಿ ಮೃದುವಾಗಿ ನೋವಾಗದಂತೆ ಹಿಡಿದ ಮರಿಯನ್ನು ನೋಡಿದಾಗ ಒಂದು ಕ್ಷಣ ಅದು ಗಾಂಧಿಯ ಮುಖದಂತೆ ಕಂಡಿತು.
ಅದನ್ನು ಬೊಗಸೆಯಲ್ಲಿ ಹಿಡಿದ ಕೈಯ ಮಾತೃತ್ವ ಯಾವ ಗಾಂಧಿಗೂ ಕಡಿಮೆ ಇರಲಿಲ್ಲ. ಒಂದು ಕ್ಷಣ ಗಾಂಧಿ ನಕ್ಕಂತೆ ಭಾಸವಾಯಿತು. ಆಗ ತೆಗೆದ ವಿಡಿಯೋದಿಂದ ಫ್ರೀಜ್ ಮಾಡಿದ ಚಿತ್ರಗಳಿವು. ಗಾಂಧಿಯೊಂದಿಗೆ ಒಂದು ಹೊಸ ಭೇಟಿಯೇನೋ ಅನ್ನಿಸಿದ ಘಳಿಗೆ.









gandhi Nagu Khare arthadalli