‘ಗಾಂಧಿಬಜಾರ್’ ಇನ್ನಿಲ್ಲ

udayakumar habbu

ಉದಯಕುಮಾರ್ ಹಬ್ಬು

ಮಿತ್ರರೆ,

ನಾನು ‘ಗಾಂಧಿ ಬಜಾರ್’ಪತ್ರಿಕೆಯಲ್ಲಿ ಆಗಾಗ್ಗೆ ಲೇಖನ ಬರೆಯುತ್ತ ನೆಮ್ಮದಿಯಿಂದ ಇದ್ದೆ. ಇಂದು ಬೆಳಿಗ್ಗೆ ನನ್ನದೊಂದು ಲೇಖನ ಬಾಕಿಯಿತ್ತು. ಅದು ಆರ್ ಡಿ ಹೆಗಡೆ ಆಲ್ಮನೆಯವರ ‘ಝೆನ್ನಾಯಣ’ ದ ಕುರಿತಾಗಿತ್ತು. ದಯವಿಟ್ಟು ಪ್ರಕಟಿಸಿ ಎಂದೆ.

ಅವರು ನಕ್ಕರು ಮತ್ತು ಹೇಳಿದರು: ನಾನು ಪತ್ರಿಕೆಯನ್ನು ಮುಚ್ಚುವವನಿದ್ದೇನೆ.”

ನನಗೆ ಆಘಾತವಾಯಿತು. ಸರ್! ನಿಮ್ಮ ಪತ್ರಿಕೆ ಕಳೆದ ೨೫ ವರ್ಷಗಳಿಂದ ಪುಸ್ತಕ ವಿಮರ್ಶೆಯನ್ನೆ ಮುಖ್ಯವಾಗಿ ಪ್ರಕಟಿಸುತ್ತ ಎಲ್ಲ ಸಾಹಿತಿಗಳಿಗೆ ಅಚ್ಚುಮೆಚ್ಚಿನ ಪತ್ರಿಕೆ ನಿಮ್ಮದು. ಬಹುಶಃ ಹಣಕಾಸಿನ ಮುಗ್ಗಟ್ಟಿನಿಂದಾಗಿ ನಿಂತು ಹೋಗಲು ಸಾಧ್ಯವಿಲ್ಲ ಅಲ್ಲವೆ?

ಇಲ್ಲ. ಚಂದಾದಾರರರು ಕೊಡುವ ಹಣ ಯಾವುದಕ್ಕೂ ಸಾಲದು. ಆದರೆ ವಿಜಯಶಂಕರ್ ಅವರ್ ವಿಮರ್ಶಕರು. ನಮ್ಮ ಪತ್ರಿಕೆಗೆ ಜಾಹಿರಾತು ರೂಪದಲ್ಲಿ ಹಣ ಕೊಡಿಸಿದ್ದಾರೆ. ನನಗೀಗ ಪ್ರಾಯವಾಯಿತು. ನಾನು ಹಾಗೂ ನನ್ನ ಹೆಂಡತಿ ಮಾತ್ರ ಪತ್ರಿಕೆಗೆ ಕೆಲಸ ಮಾಡುತ್ತಿದ್ದೇವೆ. ನಾನು ನನ್ನ ಮುದ್ರಣಾಲಯವನ್ನೂ ಮುಚ್ಚಿಬಿಟ್ಟೆ ಎಂದು ಹೇಳಿ ಜೋರಾಗಿ ನಕ್ಕರು.

ನಾನು ‘ದಯವಿಟ್ಟು ಪತ್ರಿಕೆ ನಿಲ್ಲಿಸಬೇಡಿ. ಹಣದ ಸಮಸ್ಯೆಯಿಂದ ಪತ್ರಿಕೆ ನಿಲ್ಲುವಂತಾಗಕೂಡದು. ದಯವಿಟ್ಟು ಓದುಗರೊಂದಿಗೆ ಮತ್ತು ಬರಹಗಾರರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಿ ಎಂದೆ. ದಯವಿಟ್ಟು ಗಾಂಧಿ ಬಜಾರ್ ಪತ್ರಿಕೆ ನಡೆಸುತ್ತಿರುವ ಬಾ ಕಿ ನ ರವರಿಗೆ ನಿಮ್ಮ ಮಾತಿನ ಮೂಲಕ ಧೈರ್ಯ ಹೇಳುವಿರಾ? ಅದು ಕನ್ನಡದ ಅಪರೂಪದ ಪತ್ರಿಕೆ. ವಿಮರ್ಶೆಗಾಗಿಯೆ ಮೀಸಲಾದ ಪತ್ರಿಕೆ.

ಅವರ ಮೊಬೈಲ್ ಫೋನ್ ನಂಬರ್ ಹೀಗಿದೆ: 94481 92842

‍ಲೇಖಕರು Admin

January 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. kvtirumalesh

    ಮುಂಜಾನೆಯೇ ಇದೆಂಥಾ ಆಘಾತಕಾರಿ ಸುದ್ದಿ! ನಾನು ಖಂಡಿತಾ ಬಾ.ಕಿ.ನ. (ಕಿಳಿಂಗಾರು ನಡುಮನೆ ಬಾಲಕೃಷ್ಣ)ರ ಜೊತೆ ಮಾತಾಡುವೆ. `ಗಾಂಧಿ ಬಜಾರ್ ಪತ್ರಿಕೆ’ಯ ಒಬ್ಬ ಆಜೀವ ಚಂದಾದಾರ ನಾನು. ಹೆಚ್ಚು ಹಣವಲ್ಲ, ಕೇವಲ ಐನೂರು ರೂಪಾಯಿ. ಪ್ರತಿ ತಿಂಗಳೂ ನಾನು ಈ ಪತ್ರಿಕೆಗೆ ಕಾಯುತ್ತಿದ್ದೆ. ಈಗಿನ್ನು ಇಲ್ಲ ಎಂದರೆ ಏನು ಹೇಳಲಿ? ಇಲ್ಲದಾಗಲೇ ಇದ್ದುದರ ಮಹತ್ವ ಅರಿವಾಗುವುದು, ಅಲ್ಲವೇ?
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
  2. kumbar Veerabhadrappa

    ವಿಷಯ ತಿಳಿದು ದುಃಖವಾಯಿತು, ಅದರಲ್ಲಿ ಎಷ್ಟೋ ಕೃತಿಗಳು ಜೀವ ತಳೆಯುತ್ತಿದ್ದವು, ನನ್ನ ಅರಮನೆ ಕುರಿತ ಲೇಖನ ಗಾಂಧಿ ಬಜಾರದಲ್ಲಿ ಪ್ರಕಟವಾದಾಗಾ ಅದೇ ಒಂದು ಪ್ರಶಸ್ತಿ ಎಂದು ಸಂಭ್ರಮಿಸಿದ್ದೆ ಹೆಂಗೆಂಗೆ ತಿಳೀತದೋ ಹಂಗಂಗೆ ಹಣಾನು ಕಳಿಸ್ತಿದ್ದೆ, ಕನ್ನಡದ ಬಹುಮುಖ್ಯ ಲೇಖಕರೆಲ್ಲರ ಪೂರ್ವಾಶ್ರಮ ಗಾಂಧಿ ಬಜಾರ್ , ಬಾಕಿನ ಅವರಿಗೆ ವಯಸ್ಸಾಗಬಾರದಿತ್ತು, ಅದರ ಸಾರಥ್ಯಾನ ಯಾರಾದರು ವಹಿಸಬಹುದಲ್ಲವೆ?
    ಕುಂವೀ

    ಪ್ರತಿಕ್ರಿಯೆ
  3. narayan raichur

    YNK avarondige “Gandhi Bazaar” patrike shurumadidaga BA KI NA rondige iddu ,kalakshtradalli Patikegalannu

    maari/hanchi, putta putta lekhana,chutuka baredu sambhramisiddu mattu Udayavani yalli ( 2002 ralli bruhat lekhana baredaddu nenapige baruttide ;,EE Patrike nillaabaaradagittu nija ; aadare yellaa olleyadakkoo muktaya iddee ide allave? ! – Bakinaagoo vayssayitu ! ! avariggoo VISHRANTI bekallave !1-

    Brahma-LIPI yenideyo ! ! ! – Gandhi Bazaarina Nenapu maatra Madhura,,…

    Narayan Raichur

    ಪ್ರತಿಕ್ರಿಯೆ
  4. ಬಾಲಕೃಷ್ಣ. ಟಿ.ಜಿ.

    ಇತ್ತೀಚೆಗಿನ ಸುದ್ದಿ ಪ್ರಕಾರ ಗಾಂಧಿ ಬಜಾರ್ ಗೆ ಮರುಹುಟ್ಟು ಆಗಿ ದೆ.ಸಂತೋಷದ ವಿಶಯ.ಹೊಸ ಚಂದಾದಾರರು ಬರಬಹುದು. ಶುಭವಾಗಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: