ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಗಂಗೆ ನೀನು ಸದಾ ಕೊಳಕಿ' – ಸಿ ಎ ಜಿ ವರದಿಯ ಅನುವಾದ

ಅನುವಾದ : ನಾ ದಿವಾಕರ

ಇನ್ನೆಷ್ಟೇ ನರೇಂದ್ರ ಮೋದಿಗಳು ಭಾರತದ ಪ್ರಧಾನಿಗಳಾದರೂ ಗಂಗಾ ನದಿಯಲ್ಲಿನ ಕೊಳಕು ನೀರನ್ನು ಶುಚಿಗೊಳಿಸುವುದು ಅಸಾಧ್ಯ. ‘ ಗಂಗಾ ನೀನು ಸದಾ ಕೊಳಕಿ ‘ ಎಂಬ ಹಣೆಪಟ್ಟಿ ಹೊತ್ತಿರುವ ಪವಿತ್ರ ಗಂಗೆ ಪರಿಶುದ್ಧಳಾಗಬೇಕಾದರೆ ಜನರು ತಮ್ಮ ಮನೋಭಾವ, ವರ್ತನೆ, ನಡವಳಿಕೆ, ಧೋರಣೆಗಳನ್ನು ಬದಲಾಯಿಸಿಕೊಂಡು ತಮ್ಮ ಮೂಢ ನಂಬಿಕೆಗಳನ್ನು ಅಂಧ ವಿಶ್ವಾಸಗಳನ್ನು ಕೈಬಿಡಬೇಕು. ಇಲ್ಲವಾದಲ್ಲಿ ಗಂಗೆಯ ಶುದ್ಧೀಕರಣಕ್ಕಾಗಿ ಸರ್ಕಾರ ವಿನಿಯೋಗಿಸುವ ಕೋಟ್ಯಂತರ ರೂಗಳು ನದಿಯಲ್ಲಿ ಹೋಮ ಮಾಡಿದಂತಾಗುತ್ತದೆ . ಸುಟ್ಟ ಮೃತ ದೇಹಗಳನ್ನು, ಅರೆಬೆಂದ ಮೃತ ದೇಹಗಳನ್ನು, ಸತ್ತ ಪ್ರಾಣಿಗಳನ್ನು ಗಂಗಾ ನದಿಯಲ್ಲಿ ಎಸೆಯುವುದನ್ನು ಬಿಡಬೇಕು. ರಾಸಾಯನಿಕ ವಸ್ತುಗಳು ಮತ್ತು ಜೀವಾಣು ವéಿಷಭರಿತ ಕೈಗಾರಿಕಾ ತ್ಯಾಜ್ಯ ಗಂಗಾ ನದಿಯಲ್ಲಿ ಬೆರೆಯುವುದನ್ನು ತಪ್ಪಿಸಬೇಕು. ಗಂಗಾ ನದಿ ತೀರದಲ್ಲಿರುವ ಪಟ್ಟಣಗಳು, ನಗರಗಳಲ್ಲಿನ ಬ್ಯಾಕ್ಟೀರಿಯಾಗಳಿಂದ ತುಂಬಿರುವ ಚರಂಡಿಯ ನೀರನ್ನು ಗಂಗಾನದಿಗೆ ಬಿಡದಂತೆ ಎಚ್ಚರವಹಿಸಬೇಕು. ಕೃಷಿ ಭೂಮಿಯಿಂದ ಹರಿಯುವ ರಾಸಾಯನಿಕ/ಜೀವಾಣು ವಿಷಭರಿತ ನೀರು ಗಂಗೆಯ ಒಡಲನ್ನು ಸೇರದಂತೆ ತಡೆಗಟ್ಟಬೇಕು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಗಂಗಾನದಿಯ ಶುದ್ಧೀಕರಣಕ್ಕಾಗಿ ಪಣ ತೊಟ್ಟಿರುವ ಹಿನ್ನೆಲೆಯಲ್ಲಿ ಈ ಸವಾಲುಗಳನ್ನು ದೇಶ ಎದುರಿಸುತ್ತಿದೆ. ಇನ್ನೆಷ್ಟೇ ಪ್ರಧಾನಿಗಳು ಬಂದು ಹೋದರೂ ಈ ಸವಾಲನ್ನು ಸಮರ್ಥವಾಗಿ ಎದುರಿಸಿ ನಿಲ್ಲುವುದು ಅಸಾಧ್ಯ. ಏಕೆಂದರೆ ದಶಕಗಳ ಕಾಲ ಗಂಗೆ ಸದಾ ಕೊಳಕಾಗಿಯೇ ಹರಿದಿದೆ !!!! ಗಂಗೆಯನ್ನು ಶುದ್ಧೀಕರಿಸಿ ಕನಿಷ್ಠ ಸ್ನಾನ ಮಾಡುವ ಮಟ್ಟಿಗಾದರೂ ನೀರನ್ನು ಶುದ್ಧವಾಗಿರಿಸುವ ಹಲವಾರು ಪ್ರಯತ್ನಗಳು ವಿಫಲವಾಗಿವೆ
ಹಿಮಾಲಯದ ಗಂಗೋತ್ರಿಯ ಒಡಲಲ್ಲಿ ಉಗಮಿಸುವ ಗಂಗೆ ಹಿಮಾಲಯದಿಂದ ಬಂಗಾಲ ಕೊಲ್ಲಿಯವರೆಗೆ 2500 ಕಿಲೋಮೀಟರ್ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಪಟ್ಟಣ/ನಗರಗಳನ್ನು ಕ್ರಮಿಸಿ ಹರಿಯುತ್ತದೆ. ಭಾರತೀಯ ಜನತೆ ಆಧ್ಯಾತ್ಮಿಕವಾಗಿ, ಭಾವನಾತ್ಮಕವಾಗಿ ಗಂಗೆಯೊಡನೆ ಅವಿನಾಭಾವ ಸಂಬಂಧ ಹೊಸೆದುಕೊಂಡಿದ್ದಾರೆ, ಬೆಸೆದುಕೊಂಡಿದ್ದಾರೆ. 1984ರ ಡಿಸೆಂಬರ್ನಲ್ಲಿ ಭಾರತ ಸರ್ಕಾರ ಗಂಗಾ ಕಾರ್ಯಪಡೆ ಯೋಜನೆಯನ್ನು ಘೋಷಿಸಿ 1985ರ ಏಪ್ರಿಲ್ ತಿಂಗಳಲ್ಲಿ ಈ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗೆ ತನ್ನ ಅಂಗೀಕಾರ ನೀಡಿತ್ತು. ಗಂಗಾನದಿಯಲ್ಲಿನ ಮಾಲಿನ್ಯವನ್ನು ತಡೆಗಟ್ಟುವ ಮತ್ತು ಕಡಿಮೆ ಮಾಡುವ ಬೃಹತ್ ಯೋಜನೆ ಇದಾಗಿತ್ತು. ನಂತರ ಕೇಂದ್ರ ಗಂಗಾ ಪ್ರಾಧಿಕಾರವನ್ನು ಸ್ಥಾಪಿಸಿ 1985ರ ಸೆಪ್ಟಂಬರ್ನಲ್ಲಿ ಈ ಪ್ರಾಧಿಕಾರವನ್ನು ಪ್ರಧಾನ ಮಂತ್ರಿಗಳ ಘನ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಗಂಗಾ ಸಂರಕ್ಷಣಾ ಪ್ರಾಧಿಕಾರ ಎಂದು ಪುನರ್ ನಾಮಕರಣ ಮಾಡಿತ್ತು. 1985ರ ಜೂನ್ನಲ್ಲಿ ಕೇಂದ್ರ ಸರ್ಕಾರ ಗಂಗಾ ಯೋಜನಾ ನಿರ್ದೇಶನಾಲಯವನ್ನೂ ಸ್ಥಾಪಿಸಿತ್ತು. ಕೇಂದ್ರ ಗಂಗಾ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ ಗಂಗಾ ಯೋಜನೆಯನ್ನು ಜಾರಿಗೊಳಿಸುವುದು ಈ ನಿರ್ದೇಶನಾಲಯದ ಆದ್ಯತೆಯಾಗಿತ್ತು. ನಂತರದಲ್ಲಿ ಗಂಗಾ ಯೋಜನಾ ನಿರ್ದೇಶನಾಲಯವನ್ನು ರಾಷ್ಟ್ರೀಯ ನದಿ ಸಂರಕ್ಷಣಾ ನಿರ್ದೇಶನಾಲಯ (ಎನ್ಆರ್ಸಿಡಿ) ಎಂದು ಮರುನಾಮಕರಣ ಮಾಡಲಾಯಿತು.

ಗಂಗಾ ಕಾರ್ಯಪಡೆ ಯೋಜನೆ ಒಂದನೆಯ ಹಂತದಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಲದ 25 ಪ್ರಥಮ ದಜರ್ೆ ನಗರಗಳಿಂದ ವಜರ್ಿತವಾಗುವ 1324 ಎಂಎಲ್ಡಿ (ಒಂದು ದಿನದಲ್ಲಿ ದೊರೆಯುವ ದಶಲಕ್ಷ ಲೀಟರ್) ತ್ಯಾಜ್ಯ ನೀರನ್ನು ಸಂಗ್ರಹಿಸಿ 882 ಎಂಎಲ್ಡಿ ನೀರನ್ನು ಸಂಸ್ಕರಿಸಲು ತೀಮರ್ಾನಿಸಲಾಗಿತ್ತು. ಈ ಯೋಜನೆಯನ್ನು 1990ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಎನ್ಆರ್ಸಿಡಿ ನಿರ್ಧರಿಸಿದ್ದು ನಂತರ ಗಡುವನ್ನು ಮಾರ್ಚ್  2000ದವರೆಗೆ ವಿಸ್ತರಿಸಲಾಗಿತ್ತು. ಗಂಗಾ ಕಾರ್ಯಪಡೆ ಯೋಜನೆಯ ಮೊದಲ ಹಂತ ಜಾರಿಯಲ್ಲಿರುವಾಗಲೇ ಕೇಂದ್ರ ಗಂಗಾ ಪ್ರಾಧಿಕಾರ (ಸಿಜಿಎ) ಫೆಬ್ರವರಿ 1991ರಲ್ಲಿ ಗಂಗಾ ಕಾರ್ಯಪಡೆ ಯೋಜನೆಯ ಎರಡನೆ ಹಂತವನ್ನು ಜಾರಿಗೊಳಿಸಲು ನಿರ್ಧರಿಸಿತ್ತು. ಈ ಹಂತದಲ್ಲಿ ಈ ಕೆಲವು ಪ್ರದೇಶಗಳಲ್ಲಿ ಮಾಲಿನ್ಯ ನಿವಾರಣೆಯ ಉದ್ದೇಶ ಹೊಂದಲಾಗಿತ್ತು. (ಎ) ಗಂಗಾ ನದಿಯ ಉಪನದಿಗಳಾದ ಯಮುನಾ, ದಾಮೋದರ್ ಮತ್ತು ಗೋಮತಿ ನದಿಗಳು (ಬಿ) ಮೊದಲ ಹಂತದಲ್ಲಿ ಕೈಬಿಡಲಾಗಿದ್ದ 25 ಪ್ರಥಮ ದರ್ಜೆ ನಗರಗಳು (ಸಿ) ನದಿಯ ತೀರದ ಇತರ ಮಾಲಿನ್ಯ ಉಂಟುಮಾಡುವ ಪಟ್ಟಣಗಳು. ಏಪ್ರಿಲ್ 1993ರಿಂದ ಅಕ್ಟೋಬರ್ 1996ರ ಅವಧಿಯಲ್ಲಿ ಗಂಗಾ ಕಾರ್ಯಪಡೆ ಯೋಜನೆಯ ಎರಡನೆ ಹಂತವನ್ನು ವಿವಿಧ ಹಂತಗಳಲ್ಲಿ ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ಅಂಗೀಕರಿಸಿತ್ತು.
ಗಂಗಾ ಕಾರ್ಯಪಡೆ ಯೋಜನೆಯ ಮೊದಲನೆ ಹಂತದಲ್ಲಿ 2794 ಎಂಎಲ್ಡಿ ಚರಂಡಿ ನೀರನ್ನು ಸಂಸ್ಕರಿಸಲು ನಿರ್ಧರಿಸಲಾಗಿತ್ತು. ಮೊದಲನೆಯ ಹಂತದಲ್ಲಿ 882 ಎಂಎಲ್ಡಿ,ಎರಡನೆ ಹಂತದಲ್ಲಿ 1912 ಎಂಎಲ್ಡಿ. ಗಂಗಾ ನದಿ ಮತ್ತು ಅದರ ಉಪನದಿಗಳ ಆಸುಪಾಸಿನ ಪಟ್ಟಣಗಳಲ್ಲಿ ಉತ್ಪತ್ತಿಯಾಗುವ ಚರಂಡಿ ತ್ಯಾಜ್ಯದ ಪ್ರಮಾಣ 5044 ಎಂಎಲ್ಡಿ ಇರಬಹುದು ಎಂದು ಎನ್ಆರ್ಸಿಡಿ ಸಂಸ್ಥೆಯ ಸಮೀಕ್ಷೆ ಹೇಳುತ್ತದೆ. ಇದರಲ್ಲಿ ದೆಹಲಿಯೇ 2270 ಎಂಎಲ್ಡಿ ಪೂರೈಸುತ್ತದೆ. 1993-94ರಿಂದ 1999-2000ದ ಅವಧಿಯಲ್ಲಿ ಗಂಗಾ ಕಾರ್ಯಪಡೆ ಯೋಜನೆಯ ಮೊದಲನೆಯ ಹಂತದಲ್ಲಿ ಅಡ್ಡಗಟ್ಟುವ ಮತ್ತು ದಿಕ್ಕು ಚ್ಯುತಿಯ ಯೋಜನೆಗಳಿಗೆ ಹಾಗೂ ಚರಂಡಿ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ 655 ಕೋಟಿ ರೂಗಳನ್ನು ಖಚರ್ು ಮಾಡಲಾಗಿತ್ತು. ಕಡಿಮೆ ವೆಚ್ಚದ ಶೌಚಾಲಯ ಯೋಜನೆ, ನದಿ ಮುಂಚೂಣಿಯ ಅಭಿವೃದ್ಧಿ ಯೋಜನೆಗಳು, ವಿದ್ಯುತ್ ಮತ್ತು ಸುಧಾರಿತ ಉರುವಲು ಬಳಸುವ ಶವಾಗಾರಗಳು ಮತ್ತು ಅಳತೆ ಮಾಡಲಾಗದ ಮಾಲಿನ್ಯಗಳಾದ ಘನತ್ಯಾಜ್ಯದ ಸಂಗ್ರಹ, ಮುಕ್ತ ಶೌಚಾಲಯದ ತ್ಯಾಜ್ಯ, ಅರೆಸುಟ್ಟ, ಸುಡದ ಮೃತದೇಹಗಳ ಸಂಗ್ರಹ ಇವುಗಳನ್ನು ಜಾರಿಗೊಳಿಸಲು ಈ ಮೊತ್ತವನ್ನು ಬಳಸಲಾಗಿತ್ತು.
1994-2000ದ ಅವಧಿಯ ಸಿಎಜಿ ವರದಿಯನ್ವಯ (ವರದಿ5-ಎ) ಭಾರತ ಸರ್ಕಾರದ ವಿಜ್ಞಾನ ವಿಭಾಗಗಳು ಗಂಗಾ ಕಾರ್ಯಪಡೆ ಯೋಜನೆಗಳ ಆಳವಾದ ಅಧ್ಯಯನ ನಡೆಸಿದ್ದು ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಖರ್ಚು ಮಾಡಿರುವ ಯೋಜನೆಗಳ ಲೆಕ್ಕ ಪರಿಶೋಧನೆ ನಡೆಸಿವೆ. ( ಗಂಗಾ ಶುದ್ಧೀಕರಣ ಮತ್ತಿತರ ಯೋಜನೆಗಳಿಗೆ ಸರ್ಕಾರದ ಬೊಕ್ಕಸದಿಂದ ಎಷ್ಟು ಹಣ ಖರ್ಚಾಗಿದೆ ಎಂಬ ಮಾಹಿತಿ ಎಲ್ಲಿಯೂ ಲಭ್ಯವಾಗುವುದಿಲ್ಲ.) ಪವಿತ್ರ ಗಂಗೆಯಲ್ಲಿರುವ ಕೊಳಕು ನೀರನ್ನು ಶುದ್ಧೀಕರಿಸುವ ಸಾಹಸಕ್ಕೆ ಕೈ ಹಾಕುವ ಮುನ್ನ ಸಿಎಜಿ ತನ್ನ ಲೆಕ್ಕಪರಿಶೋಧನಾ ವರದಿಯಲ್ಲಿ ನೀಡಿರುವ ಈ ಕೆಲವು ಸೂಚನೆಗಳನ್ನು, ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಶೀಲಿಸುವುದು ಅಗತ್ಯ.
ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾದ ಕಾರಣ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಲ್ಲಿ ಯೋಜನಾ ವೆಚ್ಚದಲ್ಲಿ ತೀವ್ರ ಹೆಚ್ಚಳವಾಗಿತ್ತು.
ಪೂರ್ಣಗೊಂಡ ಚರಂಡಿ ಸಂಸ್ಕರಣಾ ಘಟಕಗಳ ಕಳಪೆ ಕಾರ್ಯ ನಿರ್ವಹಣೆ.
ಹೊರಹರಿಯುವ ನೀರಿನ ಅಸಮರ್ಪಕ ಸಂಸ್ಕರಣೆ, ಬ್ಯಾಕ್ಟೀರಿಯಾ ನಿಯಂತ್ರಣದಲ್ಲಿ ವೈಫಲ್ಯ
ಯೋಜನೆಗಳ ನಿರ್ವಹಣೆಯಲ್ಲಿನ ಅದಕ್ಷತೆ ತತ್ಪರಿಣಾಮವಾಗಿ ಜಾರಿಗೊಳಿಸಲು ನಿಯೋಜಿಸಲಾಗಿದ್ದ ಏಜೆನ್ಸಿಗಳಿಂದ ಹಣ ದುರುಪಯೋಗ ಮತ್ತು ದುರ್ವಿನಿಯೋಗ.
ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ವೈಫಲ್ಯ ಮತ್ತು ಕಡಿಮೆ ಭಾಗವಹಿಸುವಿಕೆ.
ಎಲ್ಲ 27 ಸ್ಯಾಂಪ್ಲಿಂಗ್ ಘಟಕಗಳಲ್ಲಿ ನಿಗದಿ ಪಡಿಸಲಾಗಿದ್ದ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದ್ದರೂ ಅದನ್ನು ನಿಯಂತ್ರಿಸಲು ಗಂಗಾ ಕಾರ್ಯಪಡೆ ಯೋಜನೆ ಸೂಕ್ತ ಅವಕಾಶ ನೀಡಲಿಲ್ಲ.
ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಉಪಯುಕ್ತವಾದ ಮತ್ತು ಲಾಭದಾಯಕವಾದ ತಂತ್ರಜ್ಞಾನವನ್ನು ಅಳವಡಿಸಲು ಎನ್ನಆರ್ಸಿಡಿ 1993 ಡಿಸೆಂಬರ್ನಿಂದ 1995ರ ಡಿಸೆಂಬರ್ ಅವಧಿಯಲ್ಲಿ ನಾಲ್ಕು ಸಂಶೋಧನಾ ಯೋಜನೆಗಳಿಗೆ ಸಮ್ಮತಿ ನೀಡಿತ್ತು. ಅಲ್ಟ್ರಾ ವಯಲೆಟ್ ರೇಡಿಯೇಷನ್, ಗಾಮಾ ರೇಡಿಯೇಷನ್, ಕ್ಲೋರಿನೇಷನ್ ಮತ್ತು ಇತರ ಜೈವಿಕ ವಿಧಾನಗಳನ್ನು ಹಲವು ಸಂಶೋಧನಾ ಕೇಂದ್ರಗಳಲ್ಲಿ ಬಳಸಲು ಅನುಮತಿ ನೀಡಿತ್ತು. ಹರಿದ್ವಾರ, ಬರೋಡ, ಲಕ್ನೋ ಮತ್ತು ದೆಹಲಿಯಲ್ಲಿದ್ದ ಸಂಸ್ಥೆಗಳು ಕ್ರಮವಾಗಿ ಈ ಎಲ್ಲ ಸಂಶೋಧನೆಗಳನ್ನೂ 1998-99ರ ವೇಳೆಗೆ ಪೂರ್ಣಗೊಳಿಸಿದ್ದವು.
ಎನ್ಆರ್ಸಿಡಿ ವರದಿಯ ಪ್ರಕಾರ ಈಈ ಯೋಜನೆಗಳಲ್ಲಿ ಬಳಸಿದ ತಂತ್ರಜ್ಞಾನಗಳು ದುಬಾರಿಯಾಗಿದ್ದವು ಅಥವಾ ಆಥರ್ಿಕವಾಗಿ ಲಾಭದಾಯಕವಾಗಿರಲಿಲ್ಲ. ಈ ಯೋಜನೆಗಳಡಿ ನಿಮರ್ಿಸಲು ಇಚ್ಚಿಸಿದ್ದ ಸ್ಥಿರೀಕರಣ ಕೊಳಗಳಿಗೆ ಬೇಕಾದಷ್ಟು ಭೂಮಿ ದೊಡ್ಡ ಪಟ್ಟಣಗಳಲ್ಲೂ ಲಭ್ಯವಿರಲಿಲ್ಲ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧ್ಯಕ್ಷರ ನೇತೃತ್ವದಲ್ಲಿ ಎನ್ಆರ್ಸಿಡಿ ನೇಮಿಸಿದ್ದ ತಜ್ಞರ ಸಮಿತಿಯೊಂದು ಈ ಯೋಜನೆಗಳ ಮಾನದಂಡಗಳನ್ನು ಮತ್ತು ತಂತ್ರಜ್ಞಾನದ ಆಯ್ಕೆಗಳನ್ನು ಕುರಿತು, ಸೆಪ್ಟಂಬರ್ 1999ರಲ್ಲಿ ತನ್ನ ಶಿಫಾರಸು ನೀಡಿತ್ತು. ತ್ಯಾಜ್ಯ ಸ್ಥಿರೀಕರಣ ಕೊಳದ ತಂತ್ರಜ್ಞಾನ ಮಾತ್ರವೇ ಕಡಿಮೆ ವೆಚ್ಚದ ಲಾಭದಾಯಕ ತಂತ್ರಜ್ಞಾನವಾಗಿದ್ದು ಇದರಿಂದ ಮಾತ್ರ ಸಂಸ್ಕರಿತ ನೀರಿನಲ್ಲಿನ ಮೈಕ್ರೋಬ್ ಮಾಲಿನ್ಯವನ್ನು ಕಡಿಮೆ ಮಾಡಿ ಬಳಸಲು ಯೋಗ್ಯವಾಗಿ ಮಾಡಬಹುದಿತ್ತು.
ಯಾವುದೇ ಸಾಂಪ್ರದಾಯಿಕ ತಂತ್ರಜ್ಞಾನವನ್ನು ಅಳವಡಿಸಿದರೂ ಇದರೊಂದಿಗೆ ಬ್ಯಾಕ್ಟೀರಿಯಾ ಪ್ರಮಾಣವನ್ನು ನಿಯಂತ್ರಿಸುವ ಸಲುವಾಗಿ ಮೆಚುರೇಷನ್ ಕೊಳಗಳನ್ನು ನಿಮರ್ಿಸುವಂತೆ ಸಮಿತಿ ಶಿಫಾರಸು ಮಾಡಿತ್ತು. ಆದರೆ ಎನ್ಆರ್ಸಿಡಿ ಮೆಚುರೇಷನ್ ಕೊಳಗಳನ್ನು ಒಳಗೊಳ್ಳಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ ಬ್ಯಾಕ್ಟೀರಿಯಾ ಹೊರೆಯನ್ನು ನಿರೀಕ್ಷಿತ ಪ್ರಮಾಣಕ್ಕೆ ತಗ್ಗಿಸುವ ಉದ್ದೇಶ ಈಡೇರದಂತಾಯಿತು.
1985ರಲ್ಲಿ ಜಾರಿಗೊಂಡ ಗಂಗಾ ಕಾರ್ಯಪಡೆ ಯೋಜನೆಯ ಮೊದಲನೆಯ ಹಂತದಲ್ಲಿ ಗಂಗಾ ನದಿ ಮತ್ತು ಅದರ ಉಪನದಿಗಳ ನೀರನ್ನು ಸ್ನಾನ ಯೋಗ್ಯ ನೀರನ್ನಾಗಿ ಪರಿವತರ್ಿಸಲು ಉದ್ದೇಶಿಸಲಾಗಿತ್ತು. ಆದರೆ 15 ವರ್ಷಗಳ ದೀರ್ಘ ಅವಧಿಯಲ್ಲಿ 901.71 ಕೋಟಿ ರೂಗಳನ್ನು ಖಚರ್ು ಮಾಡಿದರೂ ಉದ್ದೇಶಿತ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ.
ಈ ಯೋಜನೆಯಲ್ಲಿ ಸಿದ್ಧಪಡಿಸಿದ ಸ್ಥಿರಾಸ್ಥಿಗಳು ತಾಂತ್ರಿಕ ವಿನ್ಯಾಸದ ನ್ಯೂನ್ಯತೆಯಿಂದ ಮುಚ್ಚಲ್ಪಟ್ಟು ನಾಶಹೊಂದಿದವು. ವಿವಿಧ ಯೋಜನೆಗಳ ನಡುವೆ ಸಾಮರಸ್ಯ ಇಲ್ಲದಿದ್ದುದು, ಯೋಜನೆಗಳ ವಿಭಾಗಗಳಲ್ಲಿನ ಕೊರತೆ, ಭೂ ಸ್ವಾಧೀನದ ಸಮಸ್ಯೆ, ಗುತ್ತಿಗೆ ಕಾಮರ್ಿಕರ ಕೆಟ್ಟ ನಿರ್ವಹಣೆ, ಸೂಕ್ತ ನಿರ್ವಹಣೆಯ ಕೊರತೆ ಮತ್ತು ರಾಜ್ಯಗಳ ಹಾಗೂ ಯೋಜನೆಯನ್ನು ಜಾರಿಗೊಳಿಸಲು ನಿಯೋಜಿಸಿದ್ದ ಸಂಸ್ಥೆಗಳ ನಿರ್ಲಕ್ಷ್ಯ ಮನೋಭಾವ ಯೋಜನೆಗಳ ವೈಫಲ್ಯಕ್ಕೆ ಕಾರಣವಾಗಿತ್ತು.
ಎನ್ಆರ್ಸಿಡಿ ವಿಶೇಷ ತಾಂತ್ರಿಕ ಯೋಜನೆಯಲ್ಲಿ ಅಳವಡಿಸಲಾದ ತಂತ್ರಜ್ಞಾನಗಳು ಹಲವು ಸಂದರ್ಭಗಳಲ್ಲಿ ಪ್ರಶ್ನಾರ್ಹವಾಗಿದ್ದವು. ನದಿಗಳಲ್ಲಿನ ಬ್ಯಾಕ್ಟೀರಿಯಾ ಪ್ರಮಾಣದ ಹೊರೆಯನ್ನು ನಿರೀಕ್ಷಿತ ಮಟ್ಟಕ್ಕೆ ಇಳಿಸುವುದರಲ್ಲಿ ಈ ತಂತ್ರಜ್ಞಾನಗಳು ವಿಫಲವಾಗಿದ್ದವು.
ಸೆಪ್ಟಂಬರ್ 1999ರ ನಂತರ ಎನ್ಆರ್ಸಿಡಿ ಗಂಗಾ ನದಿಯ ನೀರಿನ ಗುಣಮಟ್ಟ ಮಾಪನ ಮತ್ತು ನಿರ್ವಹಣೆಯ ಕಾರ್ಯವನ್ನು ನಿರ್ಲಕ್ಷಿಸಿ ಸ್ಥಗಿತಗೊಳಿಸಿದೆ. ಹಣಕಾಸಿನ ಕೊರತೆ ಇದಕ್ಕೆ ಒಂದು ಕಾರಣವಾಗಿತ್ತು. ತತ್ಪರಿಣಾಮವಾಗಿ ಗಂಗಾ ಕಾರ್ಯಪಡೆ ಯೋಜನೆಯನ್ನು ಸಾಧಕ ಬಾಧಕಗಳನ್ನು ಗಮನಿಸಿ ನಿಯಂತ್ರಿಸುವ ಒಂದು ಪ್ರಮುಖ ಅಸ್ತ್ರವನ್ನು ಎನ್ಆರ್ಸಿಡಿ ಕಳೆದುಕೊಂಡಿತ್ತು.
ಯೋಜನೆಯಲ್ಲಿ ಭಾಗವಹಿಸುವ ರಾಜ್ಯಗಳು ಮತ್ತು ಜಾರಿಗೊಳಿಸುವ ಏಜೆನ್ಸಿಗಳ ಕಾರ್ಯ ನಿರ್ವಹಣೆಯನ್ನು ಸಮರ್ಥವಾಗಿ ನಿರ್ವಹಿಸುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಎನ್ಆರ್ಸಿಡಿ ಸಿಎಜಿಗೆ ಸಮರ್ಥವಾದ ಸಾಕ್ಷಿ ಪುರಾವೆಗಳನ್ನು ಒದಗಿಸಿಲ್ಲ.
ಲೆಕ್ಕ ಪರಿಶೋಧನಾ ವರದಿಯನ್ವಯ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಈ ಕೆಳಕಂಡ ಕಾರ್ಯಗಳನ್ನು ತುರ್ತು ಕೈಗೊಳ್ಳಬೇಕಿದೆ.
ಇಡೀ ಗಂಗಾ ಕಾರ್ಯಪಡೆ ಯೋಜನೆಯನ್ನು ಪುನರ್ ವಿಮರ್ಶೆಗೊಳಪಡಿಸುವುದು.
ರಾಜ್ಯಗಳು ಮತ್ತು ಯೋಜನೆ ಜಾರಿಗೊಳಿಸಲು ನಿಯೋಜಿಸಲಾಗಿರುವ ಸಂಸ್ಥೆಗಳು ಇನ್ನೂ ಹೆಚ್ಚು ಆಸಕ್ತಿಯಿಂದ ಯೋಜನೆಯಲ್ಲಿ ಭಾಗವಹಿಸುವಂತೆ ಮಾಡಲು ಹಾಗೂ ಸ್ಥಿರಾಸ್ಥಿಗಳನ್ನು ಸೃಷ್ಟಿಸಿ ಅವುಗಳನ್ನು ಉತ್ತಮವಾಗಿ ನಿರ್ವಹಿಸಿ ಸಿಬ್ಬಂದಿಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಹಣಕಾಸು ವ್ಯವಸ್ಥೆ ಮಾಡುವುದು.
ತಾಂತ್ರಿಕ ಮತ್ತು ಆಡಳಿತಾತ್ಮಕ ನಿರ್ವಹಣೆಯನ್ನು ಪರಾಮರ್ಶಿಸಿ ಸಾರ್ವಜನಿಕರ ಹಣವನ್ನು ಖರ್ಚುಮಾಡಿ ಸೃಷ್ಟಿಸಿದ ಸ್ಥಿರಾಸ್ಥಿಗಳ ಮೌಲ್ಯವನ್ನು ರಕ್ಷಿಸುವುದು.
ಸಂಪನ್ಮೂಲಗಳ ಸಮರ್ಥ ಬಳಕೆಗೆ ನೆರವಾಗುವಂತೆ ಉತ್ತಮ ತಂತ್ರಜ್ಞಾನವನ್ನು ಒದಗಿಸುವುದು.
ಉತ್ತರ ಭಾರತದಲ್ಲಿನ ನದಿಗಳಿಂದ ಉಂಟಾಗುವ ಪ್ರವಾಹಸ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಮತ್ತೊಂದು ಪ್ರಸ್ತಾಪವನ್ನು ಮುಂದಿಡಲಾಗುತ್ತಿದೆ. ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳಾದ ಕೃಷ್ಣ, ಕಾವೇರಿಯೊಡನೆ ಸೇರಿಸುವ ಬೃಹತ್ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಈ ಯೋಜನೆಯನ್ನು ಯೋಜನೆಯ ಫಲಾನುಫಲಗಳ ಅಧ್ಯಯನದ ನಂತರವೇ ಜಾರಿಗೊಳಿಸಬೇಕಿದೆ. ತಮ್ಮಲ್ಲಿರುವ ನದಿ ನೀರು ಸ್ವಚ್ಚವಾಗಿರಬೇಕೆಂದು ಜನತೆ ಬಯಸುವುದು ಸಹಜ. ಈ ಸಂದರ್ಭದಲ್ಲಿ ಗಂಗೆಯ ಮಲಿನ ನೀರನ್ನು ತಂದು ಸ್ವಚ್ಚವಾಗಿರುವ ಕೃಷ್ಣ, ಕಾವೇರಿ ನದಿಗಳೊಂದಿಗೆ ಜೋಡಿಸುವುದು ದಕ್ಷಿಣ ಭಾರತದ ನದಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇಲ್ಲಿನ ಜನತೆ ತಮ್ಮ ನದಿಗಳ ರಕ್ಷಣೆಗೆ ಹೋರಾಟದಲ್ಲಿ ತೊಡಗುವ ಮುನ್ನ ಈ ಸಮಸ್ಯೆಯನ್ನು ಕೂಲಂಕುಷವಾಗಿ ವಿಶ್ಲೇಷಿಸುವುದು ಅಗತ್ಯ.
ಆಧಾರ : ಸಿಎಜಿ ವರದಿ-ವಸಂತ್ ಮೈಸೂರುಮಠ್
 

‍ಲೇಖಕರು G

11 October, 2014

2 Comments

  1. Prabhakar M. Nimbargi

    First of all, let the Pollution Control Boards of all the states impose the existing rules on the industries that dispose wastes into the rivers, tributaries and the streams. They are the worst polluters, disposing untreated chemical and metallurgical industrial wastes. Moreover, the officers (lowest to the top most) of the PCBs are more concerned about the bribes they get from these industries. I believe, if pollution from the industries is prevented, I repeat PREVENTED, it will lead to lessening of nearly 75-80% of un-degradable pollutional load. After all, the dead carcasses are but a small fraction,that too they get biodegraded faster. The PCBs must become active and close all the units which do not conform to pollution control laws without bending to political pressure. In that way, political pressures can be termed as the worst pollutants of environment.

  2. maheshwari.u

    ಸಮಸ್ಯೆಯ ಭೀಕರತೆ ಮತ್ತು ಅಗಾಧತೆ ಮನಸ್ಸನ್ನು ಪ್ರಕ್ಷುಬ್ಧಗೊಳಿಸಿತು.ಈ ಇಂತಹ ವಿವರಗಳು ಇನ್ನಷ್ಟು ವಿಶದವಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ಮಾಧ್ಯಮಗಳಲ್ಲಿ ಬಿಂಬಿಸಲ್ಪಡಬೇಕು.ಅರಿವುಮೂಡಿಸುವುದರಲ್ಲಿ ನಿರಂತರವಾದ ಹಾಗೂ ದೊಡ್ಡಮಟ್ಟದ ಪ್ರಯತ್ನದ ಅಗತ್ಯವಿದೆ.ಮಾಧ್ಯಮಗಳು ರೋಚಕ ಸಂಗತಿಗಳ ಬೆನ್ನುಹತ್ತುವುದರ ಬದಲು ಈ ಕಾರ್ಯದಲ್ಲಿ ಮುಂದಾದರೆ ಎಷ್ಟು ಒಳ್ಳೆಯದು.ಅಂತೆಯೇ ಪ್ರಜ್ಣಾವಂತರಾರೂ ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಸಿಎಜಿಯ ವರದಿಯ ಅನುವಾದ ಮಾಡಿದ ನಿಮಗೂ ಪ್ರಕಟಿಸಿದ ಅವಧಿಗೂ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading