ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖ್ಯಾತ ನಟಿ ರಂಜನಿ ರಾಘವನ್ ಜೊತೆ ಮೈಸೂರಿನಲ್ಲಿ ಸಂವಾದ..

‘ಕನ್ನಡತಿ’ ಹಾಗೂ ‘ಪುಟ್ಟಗೌರಿ ಮದುವೆ’ ಖ್ಯಾತಿಯ ನಟಿ, ಕಥೆಗಾರ್ತಿ ರಂಜನಿ ರಾಘವನ್ ಅವರೊಂದಿಗೆ ಸಂವಾದ ಹಾಗೂ ಅವರ ಕೃತಿಗೆ ಹಸ್ತಾಕ್ಷರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿರುವ ಖ್ಯಾತ ಪುಸ್ತಕ ಮಳಿಗೆ ‘ನವಕರ್ನಾಟಕ’ ಬಹುರೂಪಿ ಪ್ರಕಾಶನದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನವೆಂಬರ್ ೧೨, ಶುಕ್ರವಾರದಂದು ಸಂಜೆ ೪ಕ್ಕೆ ರಂಜನಿ ರಾಘವನ್ ಅವರು ತಮ್ಮ ಓದುಗರ ಜೊತೆ ಸೆಲ್ಫಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರಲ್ಲದೆ, ತಮ್ಮ ಕೃತಿಗೆ ಆಟೋಗ್ರಾಫ್ ಕೂಡ ನೀಡಲಿದ್ದಾರೆ.

ರಂಜನಿ ಅವರು ಕಿರು ಹಾಗೂ ಹಿರಿ ತೆರೆ ನಟಿಯಾಗಿ ನಡೆದು ಬಂದ ದಾರಿ, ಕಥೆಗಾರ್ತಿಯಾಗಿ ಹೊಸ ಆಯಾಮ ಪಡೆದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.

ನಟಿಯಾಗಿ ಜನಪ್ರಿಯರಾಗಿರುವ ರಂಜನಿ ರಾಘವನ್ ಅವರು ‘ಅವಧಿ’ ಅಂತರ್ಜಾಲ ತಾಣಕ್ಕೆ ಕಥೆ ಅಂಕಣವನ್ನು ಬರೆದರು. ಅವರ ಕಥೆಗಳು ಅತ್ಯಂತ ಜನಪ್ರಿಯವಾಗಿದ್ದು ‘ಬಹುರೂಪಿ’ ಪ್ರಕಾಶನ ಅದನ್ನು ‘ಕತೆ ಡಬ್ಬಿ’ಯಾಗಿ ಹೊರತಂದಿತು. ಒಂದು ತಿಂಗಳಲ್ಲಿ ನಾಲ್ಕು ಮುದ್ರಣ ಕಂಡ ಕೃತಿ ಎನ್ನುವ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ. ಪ್ರಕಟವಾದ ನಂತರ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಅತಿ ಹೆಚ್ಚು ಮಾರಾಟವಾದ ದಾಖಲೆಯನ್ನು ನಿರ್ಮಿಸಿದೆ.

‍ಲೇಖಕರು Admin

12 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading