’ಖುಷ್ವಂತ್ ಸಿಂಗ್ ಇನ್ನಿಲ್ಲ’ – ಅವಧಿಯ ಕಂಬನಿ


 
೧೯೧೫ ರಲ್ಲಿ ಈಗ ಪಾಕಿಸ್ಥಾನದಲ್ಲಿರುವ ಪಂಜಾಬ್ ನಲ್ಲಿ ಜನಿಸಿದ ಖುಷ್ವಂತ್ ಸಿಂಗ್ ತುಂಟ ಮನಸ್ಸಿನ ಅಜ್ಜ ಎಂದೇ ಎಲ್ಲರಿಗೂ ಪರಿಚಿತ.
೯೯ ವರ್ಷಗಳ ಅಜ್ಜ, ಆಟ ಮುಗಿಸಿ ಎದ್ದು ಹೋದಂತೆ ಎದ್ದು ಹೋಗಿದ್ದಾರೆ.
ಅವರ ಜೀವನ ಪ್ರೀತಿ, ದಿನಕ್ಕೆರಡು ಪೆಗ್ ಸ್ಕಾಚ್, ಸುಂದರ ಹೆಣ್ಣುಗಳ ಬಗೆಗಿನ ಪ್ರೀತಿ, ಅವರ ಪೆನ್ನಿನ ಮೊನಚು, ಹಾಸ್ಯ, ವ್ಯಂಗ್ಯ, ಒಮ್ಮೊಮ್ಮೆ ಗಾಡ ವಿಷಾದ ಎಲ್ಲವನ್ನೂ ಕಂಡಿದ್ದ, ನಲಿದಿದ್ದ ಮನಸ್ಸು ಯಾಕೋ ಖಾಲಿ ಖಾಲಿ.
ದೇಶ ವಿಭಜನೆಯ ಬಗ್ಗೆ ಅವರ ಪುಸ್ತಕ ’ಟ್ರೇನ್ ಟು ಪಾಕಿಸ್ತಾನ್’, ದೆಹಲಿಯನ್ನೂ ಭಾಗ್ ಮತಿಯನ್ನೂ ಒಟ್ಟೊಟ್ಟಾಗಿ ಕಟ್ಟಿ ಕೊಟ್ಟ ’ದಿಲ್ಲಿ’, ಹೆಣ್ಣನ್ನು ಹುಡುಕುತ್ತಾ ತನ್ನನ್ನು ತಾನು ಕಳೆದುಕೊಳ್ಳುವ ಕಥೆಯ ’ಕಂಪನಿ ಆಫ್ ವುಮನ್’, ‘Truth, Love and a Little Malice’, ‘The Portrait of a Lady’ …. ಅವರಲ್ಲಿದ್ದ ಬರಹಗಾರನನ್ನು, ಕಥೆಗಾರನನ್ನು ಪರಿಚಯಿಸಿದರೆ, ಅವರಲ್ಲಿದ್ದ ಪತ್ರಕರ್ತ ಮಿಂಚಿದ್ದು ಅವರು The Illustrated Weekly ಯ ಪ್ರಧಾನ ಸಂಪಾದಕರಾಗಿದ್ದಾಗ.
ಹೆಸರಿಗೆ ತಕ್ಕಂತೆ ’ಖುಷ್’ ವಂತರಾಗಿ ಬದುಕಿದ ಅಜ್ಜನಿಗೆ ವಿದಾಯ ಕಂಬನಿಯೊಂದಿಗೆ..

‍ಲೇಖಕರು G

March 20, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. parashuram boner

    sir khusavant singh oda vishya kelli bejarayitu. avaga inu hareyada vayasu. avra the comppany of women book mate mate odide. avagininda nanu kushwanthana hucunade. nantar the train to pakistan odide. tumba besaravagide sir.
    -parashuram boner, gangavati

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: