ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖುಷಿ ಅನ್ನಿಸಿತು. ಭೇಷ್ ಅನ್ನಿಸಿತು!

ಚಂದ್ರಾವತಿ ಬಡ್ಡಡ್ಕ 

ಇಂತಹ ಪೆನ್ನು ನನ್ನ ಬಳಿ ಹಲವಿದೆ.

ನಿಮ್ಮ ಬಳಿಯೂ ಇರಬಹುದು.

ಆದರೆ ಈ ಪೆನ್ನಿನ ವಿಶೇಷತೆ ಏನಪ್ಪಾ ಅಂದ್ರೇ……

ಮೊನ್ನೆ ನಮ್ಮ ಸುಳ್ಯದ ಕಟ್ಟೆ ಅಂಗಡಿ ಬಳಿ ಹಾದು ಹೋಗುವ ವೇಳೆಗೆ ಪೇಪರ್‍‌ಗಳನ್ನೆಲ್ಲ ಜೋಡಿಸಿಡಲು ಒಂದು ಫೈಲ್ ಬೇಕೆಂಬುದು ನೆನಪಾಗಿ ಅಂಗಡಿ ಹೊಕ್ಕೆ. ನನಗೆ ಬೇಕಾದ ಫೈಲು ಹಾಗೂ ಇನ್ನಿತರ ವಸ್ತುಗಳನ್ನು ಖರೀದಿಸಿ ನನ್ನ ಬಳಿಇದ್ದ ಕೈಚೀಲಕ್ಕೆ ತುರುಕಿಸಿಕೊಳ್ಳುತ್ತಾ ಪ್ಲಾಸ್ಟಿಕ್ ಚೀಲ ಬೇಡವೆಂದೆ.

ಬಿಲ್ ಕೊಡುವ ವೇಳೆಗೆ ಆ ಹುಡುಗನಿಗೆ ಏನನ್ನಿಸಿತೋ, ಈ ಪೆನ್ ಇಟ್ಟುಕೊಳ್ಳಿ. ಕೆಲವರು ಬ್ಯಾಗ್ ಇದ್ದರೂ ಇನ್ನೂ ಬೇಕೆಂದು ‘ಕವರ್’ ತಗೊತಾರೆ, ಅಂತ ಕೊಟ್ಟ.

ಖುಷಿ ಅನ್ನಿಸಿತು. ಭೇಷ್ ಅನ್ನಿಸಿತು!

‍ಲೇಖಕರು avadhi

8 June, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading