ಭಾರತವನ್ನು ಇಂದು ಕಾಡುತ್ತಿರುವ ಭಯ ಆತಂಕಗಳಲ್ಲಿ ಭಯೋತ್ಪಾದನೆ ಇತ್ತೀಚೆಗಂತೂ ಹೆಚ್ಚು ಪ್ರಚಾರಕ್ಕೆ ಬಂದಿದೆ. ಬಡತನ ಮತ್ತು ನಿರುದ್ಯೋಗ ಜೊತೆ ಸೇರಿ ಶಿಷ್ಟ ಸಮಾಜದಿಂದ ಅಪರಾಧ ಎಂದು ಕರೆಯಲಾಗುವ ಎಲ್ಲ ಚಟುವಟಿಕೆಗಳು ಭಯೋತ್ಪಾದನೆಯ ಗರ್ಭದಲ್ಲಿ ಅಡಗಿ ಕುಳಿತಿವೆ. ಎಳೆಯ ಮನಸ್ಸುಗಳ ಎಳೆಯ ವಯಸ್ಸುಗಳ ಮಿದುಳುಗಳನ್ನು ತೊಳೆದು ತಮಗೆ ಬೇಕಾದ ಬಣ್ಣದ ದ್ರಾವಣದಲ್ಲಿ ಅದ್ದಿ ತೆಗೆದು ಅಂತಹ ಮಿದುಳುಗಳನ್ನು ಬಹುಬಗೆಯ ಬಾಂಬುಗಳ ರೂಪದಲ್ಲಿ ಸಿಡಿಸುವ ಪ್ರವೃತ್ತಿ ಹೆಚ್ಚಾಗುತ್ತಲೇ ಬಂದಿದೆ. ಮಿದುಳುಗಳನ್ನು ತೊಳೆಯುವುದು (ಬ್ರೈನ್ ವಾಶಿಂಗ್) ಎನ್ನುವ ಪರಿಭಾಷೆ ತುಂಬ ಅರ್ಥಪೂರ್ಣವಾದುದು. ಖಾಲಿಯಿರುವ ಮಿದುಳುಗಳು ತೊಳೆಯಲು ದೊರೆಯುತ್ತವೆ ಮತ್ತು ತಮಗೆ ಇಷ್ಟವಾದುದನ್ನು ತುಂಬಲು ಸಿಗುತ್ತವೆ. ಅಪರಾಧ ಭಯೋತ್ಪಾದನೆ ಇವೆಲ್ಲವೂ ಎಳೆಯ ಮಿದುಳುಗಳನ್ನು ಬಾಹ್ಯ ಶಕ್ತಿಗಳು ನಿಯಂತ್ರಿಸಿ ಬಳಸಿದಾಗ ನಿರ್ಮಾಣವಾಗುವ ಭಸ್ಮಾಸುರರು.
ಪೂರ್ಣ ಓದಿಗೆ ಭೇಟಿ ಕೊಡಿ: ಬಿ ಎ ವಿವೇಕ ರೈ

ಖಾಲಿಯಿರುವ ಮಿದುಳುಗಳು ತೊಳೆಯಲು ದೊರೆಯುತ್ತವೆ..
ನಿಮಗೆ ಇವೂ ಇಷ್ಟವಾಗಬಹುದು…





0 Comments