ಕ್ವಿಜ್: ಇಲ್ಲಿದೆ ಕುತೂಹಲಕರ ಟ್ವಿಸ್ಟ್


ನಾನು ಧಾರವಾಡಕ್ಕೆ ಹೋಗಿದ್ದೂ, ಅಲ್ಲಿ ವಿದ್ಯಾವರ್ಧಕ ಸಂಘಕ್ಕೆ ಕಾಲಿಟ್ಟದ್ದು, ಅಲ್ಲಿನ ಗೋಡೆಗಳನ್ನು ನೋಡಿದ್ದೂ, ಅಲ್ಲಿ ದೇವನೂರು ಮಹಾದೇವರ ಫೋಟೋ ಕಾಣಿಸಿದ್ದೂ.. ಎಲ್ಲವನ್ನೂ ಬರೆದಿದ್ದೇನೆ
ಆ ಫೋಟೋವನ್ನೇ ತೆಗೆಯಲು ಕಾರಣವೂ ಇತ್ತು. ನೋಡಿದರೆ ಅದು ದೇವನೂರು ಫೋಟೋ ಅನಿಸುತ್ತಿರಲಿಲ್ಲ. ಆದರೂ ಅಷ್ಟು ವರ್ಷದ ಇತಿಹಾಸ ಇರುವ, ಎಂತೆಂತಹ ಸಾಹಿತಿಗಳನ್ನು ಕಂಡಿರುವ ಸಂಘ ತಪ್ಪು ಮಾಡಲು ಹೇಗೆ ಸಾಧ್ಯ ಅಂದುಕೊಂಡಿದ್ದೆ
ನಾನು ದೇವನೂರರದ್ದು ಎಂದು ನೋಡಿದ ಅತ್ಯಂತ ಹಳೆಯ ಫೋಟೋ ಎಂದರೆ ‘ನೆಲಮನೆ ಪ್ರಕಾಶನ’ದ ಮುಖಪುಟದಲ್ಲಿದ್ದ ಫೋಟೋ
ಅದಕ್ಕೂ, ವಿದ್ಯಾವರ್ಧಕ ಸಂಘದ ಗೋಡೆಯ ಮೇಲೆ ಇದ್ದ ಫೋಟೋಕ್ಕೂ ಆರ್ಥಾತ್ ಸಂಬಂಧವಿರಲಿಲ್ಲ

ಈ ಮಧ್ಯೆ ಇತ್ತೀಚಿಗೆ ಸೃಜನ್ ಹಾಗೂ ಪಲ್ಲವ ವೆಂಕಟೇಶ್ ಕಾರಣದಿಂದಾಗಿ ಹೊಸಪೇಟೆಯಲ್ಲಿ ರವಿವರ್ಮ ಅವರನ್ನು ಭೇಟಿಯಾದೆ
ಆ ಫೋಟೋಗೂ, ಇವರ ಮುಖಕ್ಕೂ ಥೇಟ್ ಹೋಲಿಕೆ
 
ಆದರೂ ವಿದ್ಯಾವರ್ಧಕ ಸಂಘದಲ್ಲಿ ಎಷ್ಟೊಂದು ಹಳೆಯ ನೆನಪುಗಲಿತ್ತು ಹಾಗೂ ಅವರ ಭಂಡಾರದಲ್ಲಿ ಯಾವ ಕಾಲದ ಫೋಟೋಗಳೂ ಇತ್ತು
ಆ ಕಾರಣದಿಂದ ಅವರೇ ಸರಿ ಇರಬೇಕು ಎಂದು ಮನಸ್ಸು ಅವರತ್ತಲೇ ವಾಲಿತು
 
ಈ ಮಧ್ಯೆ ನಾವು ಆ ಫೋಟೋ ಹಾಕಿ ಕ್ವಿಜ್ ಮಾಡಿದ್ದೂ ಆಯ್ತು. ಬಹಳಷ್ಟು ಮಂದಿ ಇದು ರವಿವರ್ಮ ಎಂದು ಗುರುತಿಸಿದ್ದೂ ಆಯ್ತು
ಆದರೂ ನಾವು ಫೋಟೋದಲ್ಲಿದ್ದ ಹೆಸರಿನ ಪ್ರಕಾರ ದೇವನೂರು ಎಂದು ಘೋಷಿಸಿದ್ದು ಆಯ್ತು

ಆದರೆ ಕಥೆಗೆ ಕುತೂಹಲಕರ ಟ್ವಿಸ್ಟ್ ಬಂದಿರುವುದು ಈಗ
ದೇವನೂರು ಮಹದೇವರೆ ನನಗೆ ಫೋನ್ ಮಾಡಿ ‘ಇದು ನನ್ನ ಫೋಟೋ ಖಂಡಿತಾ ಅಲ್ಲ. ಆ ರೀತಿಯಲ್ಲಿ ನಾನು ಅಂದವಾಗಿ ತಲೆ ಬಾಚಿದ್ದೂ ಇಲ್ಲ. ಫೋಟೋಗೆ ಪೋಸ್ ಕೊಟ್ಟಿದ್ದೂ ಇಲ್ಲ
ನಿಜವಾಗಿ ಇದು ಯಾರು ಎಂದು ಪತ್ತೆ ಹಚ್ಚುತ್ತೀರಾ’ ಎಂದು ಕೇಳಿದರು
 
ಆ ವೇಳೆಗೆ ಇನ್ನೊಂದು ಕರೆ ಬಂತು ಹೊಸಪೇಟೆಯಿಂದ ರವಿವರ್ಮ ಅವರದ್ದು
‘ಇದು ನನ್ನ ಫೋಟೋ ದೇವನೂರರದ್ದಲ್ಲ’ ಎಂದವರೇ ಹಳೆ ನೆನಪುಗಳನ್ನು ನನ್ನ ಮುಂದೆ ಹರಡಿದರು
 
ಅವರ ಪ್ರಕಾರ ಈ ಹಿಂದೆ ಹುಬ್ಬಳ್ಳಿಯ ಸಾಲಿ ಸ್ಟುಡಿಯೋದವರು ನೀನಾಸಂನಲ್ಲಿ ನಡೆದ ಸಾಂಸ್ಕೃತಿಕ ಶಿಬಿರಕ್ಕೆ ಬಂದಿದ್ದರಂತೆ ಸಾಹಿತಿಗಳ ಫೋಟೋ ಹಿಡಿಯಲು
ಅವರು ಸಾಲುಸಾಲಾಗಿ ತೆಗೆದ ಫೋಟೋಗಳಲ್ಲಿ ಇವರದ್ದೂ ಇತ್ತಂತೆ. ಹೀಗೆಯೇ ಪೋಸ್ ಕೊಟ್ಟಿದ್ದರಂತೆ
ಆ ನಂತರ ಏನಾಯ್ತು ಗೊತ್ತಿಲ್ಲ ಧಾರವಾಡದ ವಿದ್ಯಾವರ್ಧಕ ಸಂಘ ಆ ಭಾಗದಲ್ಲಿ ಸಾಕಷ್ಟು ಹೆಸರಾದ ಸಾಲಿ ಸ್ಟುಡಿಯೋದಿಂದ ಫೋಟೋ ತೆಗೆದುಕೊಂಡಿರಬೇಕು
ಕಣ್ತಪ್ಪಿನಿಂದ ನನ್ನ ಫೋಟೋ ದೇವನೂರು ಹೆಸರು ಹೊತ್ತಿರುವ ಸಾಧ್ಯತೆ ಇದೆ ಎನ್ನುತ್ತಾರೆ

ಈ ಮಧ್ಯೆ ರೂಪಾ ಹಾಸನ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಅವರಿಗೆ ಫೋನ್ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ
ಫೋಟೋ ನಿಜಕ್ಕೂ ಯಾರದು ಎಂದು ಕೇಳಿದ್ದಾರೆ
ಈಗ ಬಾಲು ಸಂಘದ ಕೋರ್ಟ್ ನಲ್ಲಿದೆ
ಅವರು ಹೇಳುವ ಕಥೆಗಾಗಿ ಕಾಯುತ್ತಿದ್ದೇವೆ
 
ಅಲ್ಲಿಯವರೆಗೂ ಬಹುಮಾನದ ಕಥೆ..??

‍ಲೇಖಕರು G

August 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

  1. prashant adur

    ha..ha.. very nice story…then award should go to anu pavanje, she is the first one to say it is ravi varma…in fact i too had doubt about this..any way congrats anu pavanje…

    ಪ್ರತಿಕ್ರಿಯೆ
  2. Rj

    ಅಯ್ಯೋ…ರಾಮ..ನನ್ನ ಸ್ಟೋರಿ ಕೇಳ್ರಿ ಇಲ್ಲಿ. ಈ ಮೇಲಿನ ಫೋಟೋವನ್ನು ನಾನು ಬಹಳಷ್ಟು ಸಲ ರವಿವರ್ಮ,ಹೊಸಪೇಟೆ ಎಂಬುವವರ ಪ್ರೊಫೈಲ್ ಫೋಟೋದಲ್ಲಿ ನೋಡಿದ್ದಿದೆ.ಹಾಗಾಗಿ ಅದು ಅವರದ್ದೇ ಇರಬೇಕು ಅಂತ ನನ್ನ ಯೋಚನೆಯಾಗಿತ್ತು.ಆದರೆ ಯಾವಾಗ ನೀವು ಅದು ದೇವನೂರು ಮಹಾದೇವರದ್ದು ಅಂತ ಹೇಳಿದಿರೋ-ನನ್ನ ಆಲೋಚನೆ ತಲೆಕೆಳಗಾಯ್ತು.ಬಹುಶಃ ಈ ರವಿವರ್ಮ ಎಂಬುವವರು ದೇವನೂರರ ಕಟ್ಟಾ ಅಭಿಮಾನಿ ಆಗಿರಬೇಕು,ಹಾಗಾಗಿ ಪ್ರೀತಿ,ಅಭಿಮಾನಕ್ಕಾಗಿ ಅವರ ಹಳೆಯ ಭಾವಚಿತ್ರವನ್ನು ತಮ್ಮ ಪ್ರೊಫೈಲಿಗೇರಿಸಿಕೊಂಡಿದ್ದಾರೆ ಅಂತ ಭಾವಿಸಿಕೊಂಡೆ..
    ಈಗ ನೋಡಿದರೆ ಇನ್ನೇನೋ ಹೇಳಿ,ನನ್ನ ತಲೆ ಮೊಸರುಗಡಿಗೆ ಮಾಡಿದಿರಿ.. 🙁

    ಪ್ರತಿಕ್ರಿಯೆ
  3. lalitha siddabasavaiah

    ಒಮ್ಮೊಮ್ಮೆ ಹೀಗಾಗಿಬಿಡುತ್ತೆ, ವಿದ್ಯಾವರ್ಧಕ ಸಂಘ ಈಗ ಫೋಟೊ ಬದಲಿಸಬೇಕಷ್ಟೆ, ಅವಧಿಯಿಂದ ಈ ಕಾರ್ಯ ಆಯಿತಲ್ಲ , ಒಳ್ಳೇದಾಯ್ತು.

    ಪ್ರತಿಕ್ರಿಯೆ
  4. ರೂಪ ಹಾಸನ

    ಕ್ವಿಜ್ ಗೆ ಇಟ್ಟಿರುವ ಫೋಟೋ ದೇವನೂರರದ್ದಲ್ಲ ಎಂದೆನಿಸಿ, ಅವರಿಗೇ ನೆನ್ನೆ ಬೆಳಗ್ಗೆ ಅವಧಿಯ ಕ್ವಿಜ್ ಪುಟವನ್ನು ಮೈಲ್ ಮಾಡಿ ನೋಡಲು ಹೇಳಿದ್ದೆ.ಅವರದನ್ನು ನೋಡಿ ಇದು ಖಂಡಿತಾ ನಾನಲ್ಲ, ಮೋಹನ್ ಹತ್ತಿರ ನಾನು ಮಾತಾಡ್ತೀನಿ, ನೀನು ಧಾರವಾಡದ ವಿಧ್ಯಾವಧಱಕ ಸಂಘಕ್ಕೆ ಹೇಳಿ ತಕ್ಷಣ ಅಲ್ಲಿಂದ ಫೋಟೊ ತೆಗೆಸು ಎಂದರು.ಈ ವಿವರವನ್ನು ಮೋಹನ್ ಸರ್ ಗೆ ತಿಳಿಸಿ. ಸಂಘದ ಕಾಯಱದಶಿಱ ಶಂಕರ ಹಲಗತ್ತಿ ಸರ್ ಅವರ ಹತ್ತಿರ ಮಾತಾಡಿದಾಗ ಆ ಫೋಟೋ ಯಾರೋ ಕಟ್ಟು ಹಾಕಿಸಿ 5-6 ವಷಱಗಳ ಕೆಳಗೆ ಕೊಟ್ಟಿದ್ದರು. ವಿವರಗಳನ್ನು ಹುಡುಕುತ್ತೇನೆ ಎಂದು ಹೇಳಿದ್ದಾರೆ.ಅವರು ತಿಳಿಸಿದ ನಂತರ ಹೇಳುತ್ತೇನೆ. ಹಾಗೂ ಈಗಾಗಲೇ ಈ ಫೋಟೋವನ್ನು ಕೆಲವು ದಿನಗಳ ಹಿಂದೆ ತೆಗೆದು ಹಾಕಿದ್ದಾಗಿಯೂ ದೇವನೂರರ ಇತ್ತೀಚಿನ ಫೋಟೋ ಕಟ್ಟು ಹಾಕಿಸುತ್ತಿದ್ದು ಅದನ್ನೇ ಹಾಲ್ ನಲ್ಲಿ ಹಾಕುವುದಾಗಿಯೂ ತಿಳಿಸಿದರು. ಅಬ್ಬಬ್ಬಾ ಒಂದು ಫೋಟೋ ಹಿಂದೆ ಎಷ್ಟೆಲ್ಲಾ ಕಥೆಗಳಿವೆ….
    ರೂಪ ಹಾಸನ

    ಪ್ರತಿಕ್ರಿಯೆ
  5. Somashekhar

    ಅವಧಿ ಹೊಸ ಗಾದೆ ‘ ಸರಿ ಉತ್ತರಕ್ಕೆ ಎಲ್ಲರೂ ಅಂತಿದ್ರಂತೆ ನಾನೆ ಅಪ್ಪ/ಅಮ್ಮ ‘

    ಪ್ರತಿಕ್ರಿಯೆ
  6. RUDRESH KITTUR

    ದಾರವಾಡದ ವಿದ್ಯಾವರ್ಧಕ ಸಂಘದ ಈ ಭವನದ ಅನೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ ಆದರೆ ಈ ವ್ಯೆತ್ಯಾಸವನ್ನು ಗಮನಿಸಿರಲಿಲ್ಲ,ನಿಮ್ಮ ತೀಕ್ಷಣ ನೋಟಕ್ಕೆ ಮತ್ತು “ಅವಧಿ”ಗೆ ಅಭಿನಂದನೆಗಳು,

    ಪ್ರತಿಕ್ರಿಯೆ
  7. ಪಿಚ್ಚಳ್ಳಿಶ್ರೀನಿವಸ್

    modalu photo teegilike hellrapa maarayre

    ಪ್ರತಿಕ್ರಿಯೆ
  8. D.Ravivarma

    ಸರ್ ನಮಸ್ಕಾರ ನನ್ನ ಫೋಟೋ ಅವಧಿ ಕ್ವಿಜ್ ನಲ್ಲಿ ಬಂದಾಗ ನನಗೆ ಅನುಮಾನಾ ಸುರುವಾಯ್ತು ನಾನು ಆ ತಕ್ಷಣ ನಿಮಗೆ ನಿಮಗೆ ಕರೆ ಮಾಡಲು ಆಲೋಚಿಸಿದೆ ,,ಕೆಲವೊಮ್ಮೆ ನೀವು ಜಲಕ್ ಕೊಡ್ತಿರಲ್ಲ ಅಂತ ಸುಮ್ಮನಾದೆ ಹಾಗಲು ನನ್ನ ಮನಸ್ಸು ಸುಮ್ಮನಾಗಲಿಲ್ಲ ಇಂತ ಫೋಟೋ ನನ್ನ ಬಳಿ ಇಲ್ಲ ಇದು ಯಾರು ಯಾವಾಗ ತೆಗೆದದ್ದು ಅಂತಾ ಆಲೋಚಿಸಿದೆ ಅದು ನಾನು ಹೆಗ್ಗೋಡಿಗೆ ಸಂಸ್ಕ್ರತಿ ಶಿಬಿರಕ್ಕೆ ಹೋಗಿದ್ದೆ ಆಗ ರವಿ ಬೆಳೆಗೆರೆ ಜೊತೆ ಅವರ ಗೆಳೆಯ ಸಾಲಿ ಬಂದಿದ್ದರು ಅವರು ಒಬ್ಬ ಫೋಟೋಗ್ರಾಫರ್ ರವಿಬೆಳೆಗೆರೆ ಜೊತೆ ಅಲ್ಲಿದ್ದ ಎಲ ಸಾಹಿತಿಗಳ ಫೋಟೋ ತೆಗೆದರು ರವಿ ಅವರಿಗೆ ನನ್ನನ್ನು ಪರಿಚಿಸಿದ .ಽಅಗ ನನ್ನ ಹತ್ತಾರು ಫೋಟೋ ತೆಗೆದರು ಅವರು ನನಗೆ ಕಳಿಸುತ್ತೇನೆ ಅಂತ ಹೇಳಿದರು ಆಗ ನನ್ನ ಮನೆಲು ಫೋನ್ ಇರಲಿಲ್ಲ.. ಒಂದು ಪತ್ರ ಬರೆದೆ .ಽಅದ್ರೆ ನನ್ನ ಫೋಟ ಅವರು ಕಲಿಸಲಿಲ್ಲ ನನ್ನ ಫೋಟೋ enlarge ಮಾಡಿ ಕಳಿಸುತ್ತೇನೆ ಎಂದು ಹೇಳಿದ್ದರು .ಽವರು ಒಬ್ಬ ಒಳ್ಳೆ ಫೋಟೋಗ್ರಾಫರ್ ಕನ್ನಡ ನಾಡಿನ ಎಲ್ಲ ಸಾಹಿತಿಗಳ ಫೋಟೋ ತಗೆದಿದ್ದಾರೆ ..ಬಹುಶ ವಿದ್ಯಾವರ್ಧಕ ಸಂಘ ಇವರ ಬಳಿ ಸಾಹಿತಿಗಳ ಫೋಟೋ ಕಾಲಾನುಕ್ರಮದಲ್ಲಿ ಕೇಳಿದಾಗ ಅವರ ಸ್ಟುಡಿಯೋ ಹುಡುಗರು ಮಾಡಿದ ತಪ್ಪಿನಿಂದಾಗಿ ದೇವನೂರು ಮಹಾದೇವ ಅವರ ಜಾಘದಲ್ಲಿ ನನ್ನ ಫೋಟೋ ಕಳಿಸಿಕೊಟ್ಟಿದ್ದಾರೆ ..ಕೊನೆ ಪಕ್ಷ ಈಗ ಅವಧಿ ಈಗ ಅದನ್ನು ಗುರುತಿಸಿದೆ .ಽವಧಿಗೆಗೆ ನಾನು ಋಣಿ ಎಲ್ಲಿಯ ದೇವನೂರು ಎಲ್ಲಿಯ ರವಿ ವರ್ಮ …ನಿಮ್ಮ ಈ ಪತ್ತೇದಾರಿ ಜನತನಕ್ಕೆ ನಾನು ಋಣಿ ನನಗೆ ಗೊತ್ತು ಇದು ಕೂಡ ನಿಮಗೆ ಗೊತ್ತಿಲ್ಲದೇ ಆಗಿದ್ದು ಅಂತ ಆದರೆ ವಿದ್ಯವರದಕ ಸಂಗ ಗೊತ್ತಿಲ್ಲದೇ ಮಾಡಿದ ತಪ್ಪನ್ನು ಎತ್ತಿ ತೋರಿಸಿದ್ದಿರಲ್ಲ . ನಿಮಗೆ ನಾನು ಋಣಿ .ಕೊನೆ ಮಾತು
    ನನ್ನ ಫೋಟೋ ಅವಧಿಯಲ್ಲಿ ಬಂದಾಗ ನೀನೆ ಕೇಳಿ ಹಾಕಿಸಿ ಕೊಂಡಿದಿಯ ಅಂತ ಒಬ್ಬ ಗೆಳೆಯ ಫೋನ್ ಮಾಡಿದ ..
    ಪಾಪ ಒಬ್ಬ ಓದುಗಳು ನೀವೇ ಹಾಕಿದ್ದೀರ ಅಂತಾ ನಾನು ಆಲೋಚಿಸಿದೆ ಅಂತಾ ಕೆಲಿದಲು…
    ಕೊನೆಗೆ ನನ್ನ ಪ್ರಸ್ನೆ ಹೀಗು ಉಂಟೆ …
    ರವಿವರ್ಮ ಹೊಸಪೇಟೆ

    ಪ್ರತಿಕ್ರಿಯೆ
  9. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

    ಬಹಳ ಒಳ್ಳೆಯ ಕೆಲಸ ಮಾಡಿದಿರಿ..ಇಂಥ ಅವಾಂತರಗಳು ಇನ್ನಷ್ಟು ಇರಬಹುದು,ವಿದ್ಯಾ ವರ್ತಕ ಸ್ವಾರಿ..ವಿದ್ಯಾವರ್ಧಕ ಸಂಘದವರು ಸುಧಾರಿಸಿಕೊಳ್ಳಲಿ.

    ಪ್ರತಿಕ್ರಿಯೆ
  10. shanthi k.a.

    oh….!! sikkaapatte twists and turns ..!! kadegoo bekku cheeladinda horage bantalla saku.
    andahaage bahumaanada kathe ?

    ಪ್ರತಿಕ್ರಿಯೆ
  11. ಟಿ.ಕೆ.ಗಂಗಾಧರ ಪತ್ತಾರ

    ಬಹಳ ವರ್ಷಗಳ ಹಿಂದೆ ಧಾರವಾಡ ವಿದ್ಯಾವರ್ಧಕ ಸಂಘಕ್ಕೆ ಹೋದಾಗ ನಾನೂ ಈ ಫೋಟೊ ನೋಡಿ ವಿಚಲಿತ-ವಿಸ್ಮಿತನಾಗಿದ್ದೆ. ಆ ಸಂದರ್ಭದಲ್ಲಿ ಅಲ್ಲಿ ಸ್ವಚ್ಛತಾ ಕೆಲಸಗಾರರ ಹೊರತು ಬೇರಾರೂ ಇರಲಿಲ್ಲ. ಅಲ್ಲಯ್ಯಾ ಚಿತ್ರಕಲಾವಿದರ ಫೋಟೋ ಹಾಕಿ ಸಾಹಿತಿ ದೇವನೂರು ಮಹಾದೇವರ ಹೆಸರು ಬರೆದಿದ್ದಾರಲ್ಲಯ್ಯ-ಎಂದಿದ್ದೆ. “ನಮಗೇನು ಗೊತ್ತಾಗ್ತೈತ್ರೀ ಸಾಯೇಬ್ರ. ದೊಡ್ಡೋರು ಬರೋದು ಲೇಟಾಗ್ತೈತ್ರಿ. ಅವ್ರು ಬಂದ್ಮ್ಯಾಲೆ ಕೇಳ್ರಿ.” ನಾನು ಬಹಳ ಹೊತ್ತು ಇರುವಂತಹ ಸ್ಥಿತಿಯಲ್ಲಿರಲಿಲ್ಲ. ಸರ್ಕಾರಿ ಮೆಡಿಕಲ್ ಕಾಲೇಜು ನೌಕರಿ ನಿಮಿತ್ತ ಬಹುದೂರದ ಬಳ್ಳಾರಿಯಲ್ಲಿದ್ದುದರಿಂದ ಆಮೇಲೆ ಮತ್ತೇ ಆ ಕಡೆ ಹೋಗಲಿಕ್ಕಾಗಲಿಲ್ಲ. ಅವಧಿ ಏನೇನೆಲ್ಲ ನೆನಪಿಸುತ್ತದಲ್ಲ ಎಂಬುದೇ ಬಲು ಬೆರಗು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: