ಕ್ವಿಜ್: ಇಲ್ಲಿದೆ ಉತ್ತರ


ನಾನು ಇತ್ತೀಚಿಗೆ ನನ್ನ ಅನುವಾದಿತ ಕೃತಿ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಬಿಡುಗಡೆಯ ಕಾರ್ಯಕ್ರಮಕ್ಕಾಗಿ ಧಾರವಾಡಕ್ಕೆ ಹೋಗಬೇಕಾಗಿ ಬಂತು.  ಬೇರೆಡೆ ಓಡಾಡುವಾಗಲೆಲ್ಲಾ ಕೈಯಲ್ಲಿ ಕ್ಯಾಮೆರಾ ಹಿಡಿದಿರುವುದು ನನ್ನ ಹವ್ಯಾಸ. ಅವತ್ತೂ ಹಾಗೇ ಆಯ್ತು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಕಾಲಿಟ್ಟು ಅಲ್ಲಿದ್ದ ಶಂಕರ ಹಲಗತ್ತಿ, ಎಂ ಡಿ ವಕ್ಕುಂದ, ಬಸವರಾಜ ಸೂಳಿಬಾವಿ ಅವರ ಫೋಟೋ ತೆಗೆಯುತ್ತಾ ಗೋಡೆಯ ಮೇಲೆ ಕಣ್ಣಾಡಿಸಿದಾಗ ಸಿಕ್ಕದ್ದು ಈ ಚಿತ್ರ.
ಅರೆ!  ಮಹಾದೇವ ಅವರು ಹೀಗಿದ್ದರಾ.. ಎಂದು ನನಗೆ ಆಶ್ಚರ್ಯವಾಯ್ತು. ತಕ್ಷಣ ಫೋಟೋ ಕ್ಲಿಕ್ಕಿಸಿದೆ. ನಾನು ದೇವನೂರರ ಅತ್ಯಂತ ಹಳೆಯ ಫೋಟೋ ಎಂದು ನೋಡಿರುವುದು ನೆಲಮನೆ ಪ್ರಕಾಶನ ಹೊರತಂದ ‘ದ್ಯಾವನೂರು’ ಕಥಾ ಸಂಕಲನದ ಮುಖಪುಟದಲ್ಲಿದ್ದ ಚಿತ್ರ. ಅದಕ್ಕೂ ಇದಕ್ಕೂ ಹೋಲಿಕೆ ಮಾಡಿಕೊಳ್ಳಲು ಪ್ರಯತ್ನಿಸಿ ಸೋತೆ
ಇರಲಿ ದೇವನೂರರ ಭಾವಚಿತ್ರ ವಿದ್ಯಾವರ್ಧಕ ಸಂಘದ ಗೋಡೆಯ ಮೇಲೆ ಹೇಗಿತ್ತೋ ಹಾಗೆ ಇಲ್ಲಿ ಕೊಟ್ಟಿದ್ದೇನೆ
ಇನ್ನು ಬಹುಮಾನದ ವಿಷಯ
ರವಿವರ್ಮ ಹೊಸಪೇಟೆ, ಶ್ರೀರಾಮುಲು, ದೇವನೂರು ಮಹಾದೇವ, ಹನುಮಣ್ಣ ನಾಯಕ ದೊರೆ, ರಂಜಾನ್ ದರ್ಗಾ, ಅಬ್ದುಲ್ ರಶೀದ್, ಬಷೀರ್, ಎಚ್ ಎಸ್ ಶಿವಪ್ರಕಾಶ್, ಪ್ರಸನ್ನ.. ಹೀಗೆ ನಾನಾ ಉತ್ತರಗಳು ಬಂತು.
‘ಇದು ರವಿವರ್ಮರೇ, ಬಹುಮಾನ ಯಾವಾಗ ತಲುಪಿಸುತ್ತೀರಿ’ ಅಂತ ಕೇಳಿದ್ದು ಶಾಂತಿ ಅಪ್ಪಣ್ಣ.  ರಂಗನಾಥ ಮರಕಿಣಿ ಇದು ರವಿವರ್ಮರೇ 100% ಅಂದರು. ರಮೇಶ್ ಹಿರೆಜಂಬೂರ್  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 200% ಅಂದರು.
ಆದರೆ ಉತ್ತರ ಮಾತ್ರ ದೇವನೂರು ಮಹಾದೇವ.
ಈ ಪೈಕಿ ಮೂವರು ದೇವನೂರು ಮಹಾದೇವ ಅವರನ್ನು ಗುರುತಿಸಿದ್ದಾರೆ. ಮೊದಲು ಈ ಹೆಸರು ಸೂಚಿಸಿದರೂ ಅನುಮಾನ ವ್ಯಕ್ತಪಡಿಸಿದ್ದು ಶಿವಪ್ಪ ನಾಯಕ್ ಇನ್ನಿಬ್ಬರು ಅನಾಮಿಕರು.  ಈ ಪೈಕಿ ಕ್ವಿಜ್ ಪ್ರಕಟಿಸಿದ ದಿನವೇ 9:07 ಕ್ಕೆ ಸರಿಯಾದ ಉತ್ತರ ನೀಡಿದ ಅನಾಮಿಕರಿಗೆ ಬಹುಮಾನ ಸಿಗಬೇಕು.
ಆದರೆ ಏನು ಮಾಡುವುದು ಅವರು ಅನಾಮಿಕರು. ಆದ್ದರಿಂದ ಬಹುಮಾನ ‘ಅವಧಿ’ಯ ಬಳಿಯೇ ಉಳಿಯಲಿದೆ
ಅಥವಾ ಶಿವಪ್ಪ ನಾಯಕರಿಗೆ ಬಹುಮಾನ ನೀಡಿ ಎಂದು ನೀವು ಅಭಿಪ್ರಾಯಪಟ್ಟರೆ ಅವರಿಗೆ ಬಹುಮಾನ ಕಳಿಸುತ್ತೇವೆ. ಏನಂತೀರಿ??

‍ಲೇಖಕರು G

July 31, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

22 ಪ್ರತಿಕ್ರಿಯೆಗಳು

  1. Shivappa Nayak

    I’m honored Sir! Please give the prize money to any deserving Dalit college student or distribute sweets to slum children.

    ಪ್ರತಿಕ್ರಿಯೆ
  2. bharathi

    Aa anaamika naane endu thilisalu harshisuttene. Adu anaamika antha aagiddakke mattondsala bharathi anta hesru haaki utra kotte … address msg maadlaa g n mohan avare ? 🙂

    ಪ್ರತಿಕ್ರಿಯೆ
    • prashant adur

      illa a anaamika nanu…nanu dharwad bad andre ishta karyakramakke hodaga nodidde. bharatiyavaru endu anaamikalagalararu..avaru tumba famous..so prize should come to me. 🙂 🙂

      ಪ್ರತಿಕ್ರಿಯೆ
  3. shanthi k.a.

    oh….! congratulations shivappa sir and bharathi madam. antoo prapanchadalli onde tara kaanoru 7 jana iruttaare annodantoo khaatri aaytu.
    thanks mohan sir….

    ಪ್ರತಿಕ್ರಿಯೆ
  4. bharathi

    Prashanth sumne railu hattisaa bedeeppa !!! Nayakare nimna winner anta declare maadilla … madla anta namnella kelidaare … neeve nodi 🙂

    ಪ್ರತಿಕ್ರಿಯೆ
  5. ranga marakini

    Sir, Correction please, I mentioned as Abdul Rasheed and not as Ravi Verma as you mentioned.
    Ranga marakini

    ಪ್ರತಿಕ್ರಿಯೆ
  6. ಪ್ರಶಾಂತ ಭಾರತಿ

    ನಾನು ನಿಜವಾದ ಅನಾಮಿಕ. ಸನ್ನಾಫ್ ಮಿಕ ಮತ್ತು ಕಾರ್ಮಿಕ. ನನಗೇ ಬಹುಮಾನ ಕೊಡಿರಿ

    ಪ್ರತಿಕ್ರಿಯೆ
    • ಶಿವಾನಂದ.ನಿ.ಕೆಲೂರ

      ನಿಮ್ಮ ಬರವಣಿಗೆ ನಿಮ್ಮ ಬದುಕಿನ ಬೇಳಕಾಗಲಿ ಸರ್…

      ಪ್ರತಿಕ್ರಿಯೆ
  7. ಗುರುಶಾಂತ್ ಎಸ್.ವೈ

    ನಿಮ್ಮ ನಿರ್ಣಯ / ತೀರ್ಪು ಶೇಕಡಾ1000 ದಷ್ಟು ತಪ್ಪು. ಚಿಕ್ಕ ವಯಸ್ಸಿನಿಂದಲೂ ದೇವನೂರು ಮಹಾದೇವರನ್ನು ನಾವು ನೋಡಿದ್ದೇವೆ. ಅವರು ಎಂದೂ ಹೀಗಿರಲಿಲ್ಲ. ಇದು ಹೊಸಪೇಟೆಯ, ಜೆನ್ ಕಥೆಗಳನ್ನು ಅನುವಾದಿಸಿದ ಕವಿ ಮನಸ್ಸಿನ/ ಹುಚ್ಚು ಮನಸ್ಸಿನ ಹತ್ತು ಹವ್ಯಾಸಗಳ ಪ್ರೀತಿಯ ಡಿ.ರವಿವರ್ಮ ನೇ. ಅನುಮಾನ ಬೇಡ. ಪರಿಶೀಲಿಸಿ. ಆಗಿರುವ ತಪ್ಪು ಒಪ್ಪಿಕೊಳ್ಳಿ. ನಮಗೆ ಬಹುಮಾನ ಕಳಿಸಿ. ಅನಾಮಿಕ ಅಂತಾಹೇಳಿ ಬಹುಮಾನ ನಿಮ್ಮಲ್ಲೇ ಉಳಿಸಿಕೊಳ್ಳಬೇಡಿ.

    ಪ್ರತಿಕ್ರಿಯೆ
  8. ಗುರುಶಾಂತ್ ಎಸ್.ವೈ

    ಸ್ವಾಮಿ, ಫ್ರೇಮ್ ಹಾಕಿದ ಫೋಟೋ ಕೆಳಗೆ ದೇವನೂರು ಮಹದೇವ ಅಂತಾ ಬರೆದು ಬಿಟ್ಟರೆ ರವಿವರ್ಮನು ದೇವನೂರು ಆಗಬಲ್ಲನೇ? ಅಥವಾ ದೇವನೂರು ರವಿವರ್ಮ ಆಗಬಹುದೇ? ಎಂತಹ ವ್ಯಂಗ್ಯ! ಕರ್ನಾಟಕ ಸಂಘದವರಿಗೆ ತಿದ್ದಿಕೊಳ್ಳಲು ಹೇಳಿ ಪ್ಲೀಸ್. ಪ್ರತಿಷ್ಠಿತ ಸಂಸ್ಥೆ ಹೀಗೆ ಮಾಡಿಕೊಳ್ಳಬಾರದು. ಇದನ್ನೇ ಜನ ನಂಬಿಕೊಳ್ಳಬಾರದು.

    ಪ್ರತಿಕ್ರಿಯೆ
  9. ಸತ್ಯನಾರಾಯಣ

    ಅಂತರ್ಜಾಲದಲ್ಲಿ ದೊರೆಯುತ್ತಿರುವ ದೇವನೂರರ ಎಲ್ಲಾ ಪೋಟೋಗಳಲ್ಲೂ ಅವರು ತಲೆಯನ್ನು ಕ್ರಾಪ್ ತೆಗೆದು ಬಾಚಿದ್ದಾರೆ. ಆದರೆ ಈ ಪೋಟದಲ್ಲಿ ಕ್ರಾಪ್ ಇಲ್ಲ. ನನಗ್ಯಾಕೊ ಮೇಲಿನದು ದೇವನೂರರದಲ್ಲ ಎನ್ನಿಸುತ್ತಿದೆ. ಗುರುಶಾಂತ್ ಅವರ ಅಭಿಪ್ರಾಯ ಸರಿ ಎನ್ನಿಸುತ್ತಿದೆ. ಯಾವುದಕ್ಕೂ, ಸಂಬಂಧಪಟ್ಟವರಲ್ಲಿ ಸ್ಪಷ್ಟಪಡಿಸಿಕೊಳ್ಳುವುದು ಒಳ್ಳೆಯದು. ತಪ್ಪಾಗಿದ್ದರೆ, ಕರ್ನಾಟಕ ವಿದ್ಯಾವರ್ಧಕ ಸಂಘದವರು ಪೋಟೋದ ಕೆಳಗಿನ ಹೆಸರನ್ನು ಬದಲಿಸಲಿ.

    ಪ್ರತಿಕ್ರಿಯೆ
  10. lalitha siddabasavaiah

    ಇತ್ತೀಚೆಗೆ ವಿದ್ಯಾವರ್ಧಕ ಸಂಘಕ್ಕೆ ಹೋಗಿದ್ದಾಗ ನಾನೂ ಈ ಫೋಟೊ ನೋಡಿ ಇದು ದೇವನೂರಾ ಅಂತ ಆಶ್ಚರ್ಯ ಪಟ್ಟಿದ್ದೆ. ಈಗಲೂ ಅನುಮಾನವೆ.. ?

    ಪ್ರತಿಕ್ರಿಯೆ
  11. Jayarama Adiga

    Preetiya Mohan,
    Sri Devanuur chitra thannudu (athava alla) antha thilisiddare prakatisi

    ಪ್ರತಿಕ್ರಿಯೆ
    • G

      sir
      eegaagale adannu prakatisiddeve
      devanooru avaru aa chitra nannadalla enda meleye
      vishaya vidyaavardhaka sanghada baagilige hogiddu

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: