ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ರೀಡೆ ಅಂದ್ರೆ ಕ್ರಿಕೆಟ್ ಮಾತ್ರಾನಾ?

ದೇಸಿ ಕ್ರೀಡೆಯಲ್ಲೂ ಅಪರೂಪದ ಸಾಧನೆ

ವಿನಾಯಕ ಜಿ

ಕ್ರೀಡೆ ಎಂದಾಕ್ಷಣ ಇತ್ತೀಚೆಗಂತೂ ಕೇವಲ ಕ್ರಿಕೆಟ್ ಮಾತ್ರ ಎನ್ನುವಂತಾಗಿದೆ. ಅದಕ್ಕಿರುವಷ್ಟು ರಾಜ ಮರ್ಯಾದೆ ಬೇರಾವ ಕ್ರೀಡೆಗೆ ಇಲ್ಲವೆಂದರೂ ತಪ್ಪಿಲ್ಲ. ಆದರೆ ಪ್ರಸ್ತುತ ಕ್ರೀಡಾಲೋಕದತ್ತ ದೃಷ್ಟಿ ನೆಟ್ಟರೆ ಕ್ರಿಕೆಟ್ ಆಚೆಯೂ ಒಂದು ಸಾಧನೆಯ ಪಥವಿದೆ ಎಂಬುದು ಅರಿವಿಗೆ ಬರುತ್ತದೆ.
17 ನೇ ಏಷ್ಯಾನ್ ಕ್ರೀಡಾಕೂಟಕ್ಕೆ ತೆರೆ ಬಿದ್ದು ವಾರಗಳೇ ಕಳೆದಿವೆ. ಆದರೆ ಕ್ರೀಡಾಕೂಟದಲ್ಲಿ ಬಾರತದ ಸ್ಪರ್ಧಾಳು ನಿರೀಕ್ಷಿಸಿದ್ದ ಸಾಧನೆ ಮೂಡಿಬರದೆ, ಹಿನ್ನೆಡೆ ಅನುಭವಿಸಿದ್ದೇ ಜಾಸ್ತಿ.

ಮೂರು ಮಕ್ಕಳ ತಾಯಿ ಮಣಿಪುರದ ಮೇರಿ ಕೋವ್ ದಕ್ಷಿಣ ಕೊರಿಯಾದ ಇಂಚಾನ್ನಲ್ಲಿ ನಡೆದ 51 ಕೆ.ಜಿ ವಿಬಾಗದ ಬಾಕ್ಸಿಂಗ್ನಲ್ಲಿ ಕಝಖ್ಸ್ತಾನದ ಝೈನಾ ಬೆಕರ್ ಬೆಕೋವಾ ವಿರುದ್ಧ 2-0 ಅಂತರದಿಂದ ಗೆಲ್ಲುವ ಮೂಲಕ ಚಿನ್ನದ ಪದಕ ಪಡೆಯುವುದರೊಂದಿಗೆ 2016ರ ಓಲಂಪಿಕ್ಸ್ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಬೇಟೆಯಾಡಿದ್ದ ಮೇರಿಕೋವ್ ಮೇಲೆ ಬಾರತೀಯ ಬಾಕ್ಸಿಂಗ್ ಅಭಿಮಾನಿಗಳು ಇಂಚಾನ್ ಕ್ರೀಡಾಕೂಟದಲ್ಲಿಯೂ ಚಿನ್ನದ ಬೇಟೆಯಾಡುತ್ತಾರೆ ಎನ್ನುವ ವಿಶ್ವಾಸವನ್ನು ನಿರೀಕ್ಷಿಸಿದ್ದರು. ಆದರೆ ಮೇರಿ ಕೋವ್ ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಯಾಗಿಸದೇ, ಬಂಗಾರ ಪದಕ ಗೆದ್ದು, ಬಾರತದಲ್ಲಿ ಬಾಕ್ಸಿಂಗ್ನ್ನು ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ.
ಕಬ್ಬಡ್ಡಿಯಲ್ಲಿ ನಾವೇ ನಂ.1
ಗ್ರಾಮೀಣ ಕ್ರೀಡೆ ಎಂದೆ ಕರೆಸಿಕೊಳ್ಳುವ ಕಬ್ಬಡ್ಡಿಗೆ ಈ ಬಾರಿಯ ಇಂಚಾನ್ ಏಷ್ಯಾನ್ ಕ್ರೀಡಾದಲ್ಲಿ ಬಾರತದ ಮಹಿಳಾ ಹಾಗೂ ಪುರುಷ ತಂಡಗಳು ಚಿನ್ನದ ಪದಕ ಪಡೆಯುವುದರೊಂದಿಗೆ ಸಾಧನೆ ಸೃಷ್ಠಿಸಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಬಾರತದಲ್ಲಿ ಬಹು ಸುದ್ದಿ ಮಾಡಿದ್ದ ಪ್ರೊ.ಕಬ್ಬಡ್ಡಿ ಲೀಗ್ ಏಷ್ಯಾನ್ ಕ್ರೀಡಾಕೂಟದಲ್ಲಿ ನಂ. 1 ಸ್ಥಾನ ಪಡೆಯಲು ಕಾರಣವಾಗಿದೆ ಎಂದು ಹೇಳಬಹುದು. ಬಾರತ ಮಹಿಳಾ ತಂಡ ಇರಾನ್ ವಿರುದ್ಧ 31-21 ರ ಅಂತರದಿಂದ ಗೆಲುವು ಸಾಧಿಸಿದರೆ, ಪುರುಷರ ತಂಡ ಅದೇ ಇರಾನ್ ತಂಡದ ವಿರುದ್ಧ 27-25 ಅಂಕಗಳ ಅಂತರದಿಂದ ಜಯಗಳಿಸಿತು. ಇದರೊಂದಿಗೆ ಬಾರತದ ಕಬ್ಬಡ್ಡಿ ತಂಡ ಏಷ್ಯಾನ್ ಕ್ರೀಡಾಕೂಟದಲ್ಲಿ 2 ಚಿನ್ನದ ಪದಕ ಪಡೆದು ಸಾಧನೆ ನಿಮರ್ಿಸಿದೆ.
ಚಿನ್ನದ ಯೋಗೀಶ್…


ಕಳೆದ ತಿಂಗಳುಗಳ ಹಿಂದೆ ಸ್ಕಾಟ್ಲ್ಯಾಂಡ್ನ ಗ್ಲೊಸ್ಕೋದಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 65 ಕೆ.ಜಿ ವಿಬಾಗದ ಕುಸ್ತಿಯಲ್ಲಿ ಚಿನ್ನ, 2006 ರ ದೋಹಾದಲ್ಲಿ ನಡೆದ ಏಷ್ಯಾನ್ ಗೇವ್ಸ್ನಲ್ಲಿ ಚಿನ್ನ ಗೆಲ್ಲುವಲ್ಲಿ ವಿಫಲತೆ ಹೊಂದಿ ಕಂಚಿಗೆ ತೃಷ್ತಿ ಪಟ್ಟಿದ್ದ ಹರಿಯಾಣಾದ ಸೋನಿಪತ್ ಜಿಲ್ಲೆ ಯೋಗೀಶ್ವರ್ ದತ್, ಈ ಬಾರಿಯೂ ತಜಾಕಿಸ್ತಾನ್ದ ವಿರುದ್ದ 3-0 ಅಂತರದಿಂದ ಗೆಲ್ಲುವುದರೊಂದಿಗೆ ಬಾತರದ ನಂಬಿಕಸ್ತ ಕುಸ್ತಿಪಟುವಾಗಿ ಗುರುತಿಸಿಕೊಂಡಿದ್ದಾರೆ.
ಚಿನ್ನ ಗೆದ್ದ ಜೀತು ರೈ
ನೇಪಾಳದ ಶೂಟರ್ ಜೀತು ರೈ ಕಳೆದ ಬಾರಿ ಕಾಮನ್ವೆಲ್ಸ್ ಗೇವ್ಸ್ನ ಗೆಲುವಿನ ಅಭಿಯಾನವನ್ನು ಇಂಚಾನ್ನಲ್ಲಿಯೂ ಮುಂದವೆರೆಯಿತು. 50 ಮೀಟರ್ ಏರ್ ಪಿಸ್ತೂಲ್ ಹಾಗೂ 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚು ಗೆದ್ದು ಪದಕ ಪಟ್ಟಿದಲ್ಲಿ ಬಾರತದ ಸ್ಥಾನ ಹೆಚ್ಚಾಲಿಕ್ಕೆ ಕಾರಣವಾಗಿದ್ದಾರೆ.
ಗ್ರಾಮೀಣ ಪ್ರತಿಭೆಗಳಿಗೆ ಸ್ಪೂರ್ತಿ
ಕರ್ನಾಟಕದ ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಎಂ.ಆರ್. ಪೂವಮ್ಮ ಅವರ ರಿಲೇ ಹಾಗೂ 400 ಮೀಟರ್ ಓಟದ ಸ್ಪರ್ಧೆಯಲ್ಲಿನ ಸಾಧನೆ ಅಪಾರ. ಹುಟ್ಟಿನಿಂದ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಪೂವಮ್ಮ 2008ರ ಕಾಮನ್ವೆಲ್ತ್ ಗೇವ್ಸ್ ಹಾಗೂ ಏಷ್ಯಾನ್ ಚಾಪಿಂಯನ್ಶಿಷ್ಗಳಿಲ್ಲಿ ಬಂಗಾರ ಹಾಗೂ ಕಂಚು ಪಡೆದು ಬಿಗಿದ್ದ ಅವರು, ಇಂಚಾನ್ ಕ್ರೀಡಾಕೂಟದಲ್ಲಿ 4*400 ಮೀಟರ್ ರಿಲೇ ಸ್ಪಧರ್ೆಯಲ್ಲಿ ಬಂಗಾರ ಹಾಗೂ 400 ಮೀಟರ್ ಓಟದಲ್ಲಿ ಕಂಚು ಪಡೆಯುವುದರೊಂದಿಗೆ ಬಾರತದ ರಿಲೇಯನ್ನು ಜಗತ್ತೆ ನೋಡುವ ಹಾಗೇ ಮಾಡಿದ್ದಾರೆ ಎಂದರೆ ತಪ್ಪಿಲ್ಲ. ಹೀಗೆ ಪ್ರತಿಯೊಂದು ಕ್ರೀಡಾಕೂಟದಲ್ಲಿಯೂ ಪದಕ ಬೆಟಿಯಾಡುತ್ತಿರುವ ಪೂವಮ್ಮ ಅವರ ಸಾಧನೆ ಇನ್ನಷ್ಟು ಎಚ್ಚಲಿ ಎಂಬುದೆ ಬಾರತೀಯ ಅಥ್ಲೆಟ್ಗಳ ಹಾರೈಕೆಯಾಗಿದೆ. ಇನ್ನೂ ಮಮತಾ ಪೂಜಾರಿ ಕಬ್ಬಡ್ಡಿಯಲ್ಲಿ ಚಿನ್ನದ ಗಳಿಸುವುದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾರತದ ಕಬ್ಬಡ್ಡಿಯನ್ನು ಬೆಳೆಸಿದ ಕೀತರ್ಿ ಅವರಿಗೆ ಸಲ್ಲುತ್ತದೆ.
ಸ್ಕ್ವಾಷ್ನಲ್ಲಿ ಇತಿಹಾಸ
ಇಂಚಾನ್ನಲ್ಲಿ ಬಾರತಕ್ಕೆ ಮತ್ತೊಂದು ಸಂತೋಷದ ಸಂಗತಿ ಎಂದರೆ ಸ್ಕ್ವಾಷ್ನಲ್ಲಿ ಚಿನ್ನದ ಸಾಧನೆ ಮಾಡಿದ್ದು. ಬಾರತದಲ್ಲಿ ಸ್ಕ್ವಾಷ್ ಅಷ್ಟೊಂದು ಪ್ರಚಲಿತವಾದ ಆಟವಲ್ಲಿ. ಅಂತಹ ಕ್ರೀಡೆಯಲ್ಲಿ ಬಾರತದ ಸ್ಕ್ವಾಷ್ ತಂಡ ಚಿನ್ನದ ಬೇಟೆಯಾಡಿ ಇತಿಹಾಸ ನಿಮರ್ಿಸಿದೆ. ಪುರುಷರ ವೈಯಕ್ತಿಕ ವಿಬಾಗದಲ್ಲಿ ಸೌರವ್ ಘೋಷಲ್ ಚಿನ್ನ, ದೀಪಿಕಾ, ಜೋಷ್ನಾ ತಂಡ ಬೆಳ್ಳಿ ಪದಕ ಪಡೆದಿದೆ. ಹಾಗೆಯೇ ದೀಪಿಕಾ ವೈಯಕ್ತಿಕ ವಿಬಾಗದಲ್ಲಿಯೂ ಕಂಚು ಪಡೆಯುವುದರೊಂದಿಗೆ ಬಾರತದಲ್ಲಿಯೂ ಸ್ಕ್ವಾಷ್ ಕ್ರೀಡೆ ಇದೆ ಎಂಬುದನ್ನು ಜಗತ್ತಿದೆ ಪರಿಚಯಿಸಿದೆ.
ಬೆಳ್ಳಿಗೆ ವಿಕಾಸ್ ಚಕ್ರ
ಕರ್ನಾಟಕ ಇನ್ನೊಂದು ಅದ್ಭುರ ಪ್ರತಿಬೆ ಎಂದರೆ ಮೈಸೂರಿನ ವಿಕಾಸ ಗೌಡ. ವಿಕಾಸ್ ಚಕ್ರ ಎಸೆತದ ಮೇಲೆ ಈ ಬಾರಿಯೂ ಇಟ್ಟಿದ್ದ ಭರವಸೆ ಅಳಿಸಿ ಹೋಗಿಲ್ಲ. ಕಳೆದ ಕಮನ್ವೆಲ್ತ್ ಕ್ರೀಡೆಯಲ್ಲಿ ಬಂಗಾರ ಗೆದ್ದಿದ್ದ ವಿಕಾಸ ಈ ಬಾರಿ ಬೆಳ್ಳಿ ಗೆಲ್ಲುವುದರ ಮೂಲಕ ತಮ್ಮ ಮೇಲಿನ ನಂಬಿಕೆ ಉಳಿಸಿಕೊಂಡಿದ್ದಾರೆ. ಇನ್ನೊಬ್ಬ ಕನ್ನಡಿಗ ಪ್ರಕಾಶ ನಂಜಪ್ಪ ಕಳೆದ ಬಾರಿಯ ಪ್ರದರ್ಶನ ತೊರುವಲ್ಲಿ ಸಫಲ ಹೊಂದಿ, ಶೂಟಿಂಗ್ನಲ್ಲಿ ಕಂಚಿಗಷ್ಟೇ ತಮ್ಮ ಗುರಿ ಇಟ್ಟಿದ್ದಾರೆ.
ಹಾಕಿಯಲ್ಲಿ ಜೈ ಹೋ ಇಂಡಿಯಾ..
1998ರಲ್ಲಿ ಥೈಲ್ಯಾಂಡ್ನಲ್ಲಿ ನಡೆದ ಏಷ್ಯಾನ್ ಕ್ರೀಡಾಕೂಟದಲ್ಲಿ ಬಂಗಾರ ಗೆದ್ದಿದ್ದ ಭಾರತದ ಪುರುಷರ ಹಾಕಿ ತಂಡ 15 ವರ್ಷಗಳ ಬಳಿಕ 2014 ರ ಇಂಚಾನ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದಿದೆ.ಇದರೊಂದಿಗೆ ಹಾಕಿಯಲ್ಲೂ ಬಾರತ ಚಿನ್ನ ಗೆಲ್ಲುವುದರೊಂದಿಗೆ ಬಾರತದ ಚಿನ್ನದ ಪದಕ ಪಟ್ಟಿಯ ಸ್ಥಾನ ಹೆಚ್ಚಿಸಿದೆ. ಮಹಿಳಾ ಹಾಕಿ ತಂಡ ಕಂಚು ಮಾತ್ರ ತೃಪ್ತ ಪಟ್ಟು ಟೂನರ್ಿಯಿಂದ ಹೊರನಡೆಯಿತು.
7 ದಿನ ಕಳೆದರೂ ಸಿಗದ ಚಿನ್ನ
ಹೌದು! ಇಂಚಾನ್ನಲ್ಲಿ ಯಾವುದೇ ಕ್ರೀಡಾಪಟುವಿನ ಚಿನ್ನದ ಪದಕ ಕಳೆದು ಏಳು ದಿನಗಳು ಕಳೆದರೂ ಸಿಕ್ಕಿಲ್ಲವೇ ಎಂದು ಆಶ್ಚರ್ಯಪಡಬೇಡಿ.ಇದು 2014ರ ಇಂಚಾನ್ ಕ್ರೀಡಾಕೂಟದ ನೈಜ ಸಾಧನೆ. ಏಕೆಂದರೆ ಕ್ರೀಡೆ ಆರಂಭವಾದ ಮೊದಲನೇ ದಿನ ಜೀತು ರೈ ಶೂಟಿಂಗ್ನಲ್ಲಿ ಚಿನ್ನ ಪದಕ ಪಡೆದು ಬಾರೀ ಸಂಚಾಲನ ಹುಟ್ಟಿಸಿದ್ದರು. ಆದರೇ ನಂತರ 7 ದಿನಗಳು ಕಳೆದರೂ ಒಂದೇ ಒಂದು ಚಿನ್ನ ಒಡೆಯು ಬಾರತೀಯ ಕ್ರೀಡಾಪಟು ಹೆಣಗಾಡಿದ್ದು ಮಾತ್ರ ಸುಳ್ಳಲ್ಲ. ಇದಕ್ಕೆ ಪ್ರಮುಖ ಆಟಗಾರರಾದ ಬ್ಯಾಡ್ಮಿಂಟನ್ ಸೈನಾ ನೆಹ್ವಾಲ್, ವಿ.ಪಿ.ಸಿಂಧು ಸೇರಿದಂತೆ ಇತರ ಪ್ರಮುಖ ಆಟಗಾರರ ಏಷ್ಯಾನ್ ಕ್ರೀಡಾಕೂಟದಲ್ಲಿ ಬಾಗವಹಿಸದೆ ಇದ್ದದ್ದು ಇದಕ್ಕೆ ಕಾರಣ ಎಂದು ಹೇಳಬಹದು.
ಕಳಪೆ ಸಾಧನೆ
ಕಳೆದ ಬಾರಿ 2010ರಲ್ಲಿ ಚೀನಾದ ಗುವಾಂಗ್ ಜೌದಲ್ಲಿ ನಡೆದ 16ನೇ ಏಷ್ಯಾನ್ ಕೀಡಾಕೂಟದಲ್ಲಿ ಬಾರತ 14 ಚಿನ್ನ, 17 ಬೆಳ್ಳಿ, 34 ಕಂಚು ಪಡೆಯುವುದರೊಂದಿಗೆ ಒಟ್ಟು 64 ಪದಕಗಳನ್ನು ಪಡೆದು ಕ್ರೀಡಾಕೂಟದಲ್ಲಿ 6 ಸ್ಥಾನ ಪಡೆದಿತ್ತು. ಆದರೆ ಇಂಚಾನ್ನಲ್ಲಿ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಬಾಗವಹಿಸದೆ ಇಲ್ಲದಿರುವುದ ಕಾರಣ 11 ಚಿನ್ನ, 10 ಬೆಳ್ಳಿ, 36 ಕಂಚಿನೊಂದಿಗೆ 57 ಪದಕಗಳನ್ನು ಪಡೆದು 8ನೇ ಸ್ಥಾನ ಪಡೆದು 17 ನೇ ಏಷ್ಯಾನ್ ಕ್ರೀಡಾಕೂಟ ಮುಗಿಸಿದೆ. ಬಾರತ ಈ ಪ್ರದರ್ಶವನ್ನು ಇನ್ನಿತರ ದೇಶಗಳೊಂದಿಗೆ ಹೊಲಿಕೆ ಮಾಡಿಕೊಂಡಾಗ ಅಥ್ಲೆಟಿಕ್ಸ್, ಹಾಕಿ, ಶೂಟಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ನಿರೀಕ್ಷಿತ ಪ್ರದರ್ಶನ ತೊರಬೇಕಾಗಿದೆ.
ಒಟ್ಟಾರೆ ಬಾರತದಲ್ಲಿ ಕ್ರಿಕೆಟ್ನ್ನೇ ದೇವರಂತೆ ಪೂಜಿಸುತ್ತಿರುವ ಅಭಿಮಾನಿಗಳು ಉಳಿದ ಕ್ರೀಡೆಗಳಲ್ಲಿ ಮುಂದುವರೆಯಬೇಕೆನ್ನುವುದು ಒತ್ತಿ ಹೇಳಬೇಕಿಲ್ಲ. 2016 ರಲ್ಲಿ ಬ್ರೆಜಿಲ್ನ ರಿಯೋ ಡಿ ಜನೈರೋದಲ್ಲಿ ನಡೆಯುವ ಓಲಂಪಿಕ್ಸ್ಗೆ ಬಾರತದ ಕ್ರೀಡಾಪಟುಗಳು ಉತ್ತಮ ತರಬೇತಿಯೊಂದಿಗೆ ಸನ್ನದ್ಧರಾಗಬೇಕಾಗಿದೆ. ಕೇವಲ ಕ್ರೀಡಾಪಟುಗಳು ಸನ್ನದ್ಧರಾದರೆ ಮಾತ್ರ ಉತ್ತಮ ಪ್ರದರ್ಶನ ತೊರಲು ಸಾಧ್ಯವಿಲ್ಲ. ಅದಕ್ಕೆ ಸರ್ಕಾರ ಬೇಕಾದ ಸೌಕರ್ಯಗಳನ್ನು ಒದಗಿಸಬೇಕಾಗಿದೆ.

‍ಲೇಖಕರು G

28 October, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading