ಕ್ಯೂಬಾ ದ ಕ್ರಾಂತಿಗೆ ನಾಂದಿ ಹಾಡಿದ ದಿನ ಜುಲೈ 26. ಈ ನೆನಪಿಗಾಗಿ ಬೆಂಗಳೂರಿನಲ್ಲಿ ಹಲವು ಸಂಸ್ಥೆಗಳು ಒಗ್ಗೂಡಿ ಕ್ಯೂಬಾ ಉತ್ಸವವನ್ನು ಹಮ್ಮಿಕೊಂಡಿತ್ತು ಆ ಉತ್ಸವದ ನೋಟ ಇಲ್ಲಿದೆ.
ಇನ್ನೂ ಹೆಚ್ಚಿನ ಫೋಟೋಗಳಿಗಾಗಿ ಉತ್ಸವದಲ್ಲಿ ಅನಾವರಣಗೊಂಡ ಕ್ಯೂಬಾ ಬ್ಲಾಗ್ ಗೆ ಭೇಟಿ ಕೊಡಿ–


ಕ್ಯೂಬಾ ದ ಕ್ರಾಂತಿಗೆ ನಾಂದಿ ಹಾಡಿದ ದಿನ ಜುಲೈ 26. ಈ ನೆನಪಿಗಾಗಿ ಬೆಂಗಳೂರಿನಲ್ಲಿ ಹಲವು ಸಂಸ್ಥೆಗಳು ಒಗ್ಗೂಡಿ ಕ್ಯೂಬಾ ಉತ್ಸವವನ್ನು ಹಮ್ಮಿಕೊಂಡಿತ್ತು ಆ ಉತ್ಸವದ ನೋಟ ಇಲ್ಲಿದೆ.
ಇನ್ನೂ ಹೆಚ್ಚಿನ ಫೋಟೋಗಳಿಗಾಗಿ ಉತ್ಸವದಲ್ಲಿ ಅನಾವರಣಗೊಂಡ ಕ್ಯೂಬಾ ಬ್ಲಾಗ್ ಗೆ ಭೇಟಿ ಕೊಡಿ–


ಒಳ್ಳೇ ಘನಂದಾರಿ ಕೆಲ್ಸ ಮಾಡಿದ್ರಿ!
ಘನಂದಾರಿ?
ಹೌದು, ಘನ!
ಘನ?
ಹೌದು cube!
ಓಹ್ cubeಆ?
Yes, Cuba!
🙂
ಇಲ್ಲಿನ ಕಾಮೆಂಟುಗಳನ್ನು ಓದಿ ನಂಗೂ ಬೇಜಾರಾಗ್ತಾ ಇದೆ ಅವಧಿ, ದೆಹಲಿಯ ಈ ಕರಾಳ ಬಿಸಿಲಿಗೆ ಸಾಹಿತ್ಯದ ಕಾರ್ಯಕ್ರಮ ಒತ್ತಟ್ಟಿಗೆ ಬೆಳಿಗಿನ ಉಪಹಾರಕ್ಕೂ ಮನೆ ಬಿಟ್ಟು ಹೋಗೋ ಮನಸಾಗೋದಿಲ್ಲ,
ಕ್ಯೂಬಾ ಅನ್ನೊ ರೋಮಾಂಚನ, ಅದರ ಬಗ್ಗೆ ನಡೆದ ಉತ್ಸವ ನಾನು ಮಿಸ್ ಮಾಡಿಕೊಂಡೆ, ಅದಕ್ಕೆಬೇಜಾರು,
ಆದರೂ ಪರ್ಯಾಯವಾಗಿ ಚೇ ನ ಕುರಿತ ಒಂದೆರಡು ಹಾಡು ಕೇಳಿ ಸರಿಮಾಡ್ಕೋತೇನೆ..
ಬೆಂಗಳೂರಿನಲ್ಲಿ ಭಾನುವಾರಗಳಂದು ಏನಾದ್ರೂ ಕಾರ್ಯಕ್ರಮ. ಇಡೀ ವಾರದ ಕೆಲಸ ಮಾಡಿ ದೇಹ ಮನಸ್ಸು ಜಡ್ಡುಗಟ್ಟಿರುತ್ತದೆ. ಒಂದು ರಿಫ್ರೆಶ್ ಸಿಗೊತ್ತೇಂತ ಯಾವುದಾದ್ರೂ ಕಾರ್ಯಕ್ರಮಗಳಿಗೆ ಹೋಗೋದು.
ಇವತ್ತು. ರವೀಂದ್ರ ಕಲಾಕ್ಷೇತ್ರದಲ್ಲಿ ಕೆ.ವಿ.ಸುಬ್ಬಣ್ಣ ಲೇಖನ ಇಂಗ್ಲಿಷ್ ಅನುವಾದ ಕೃತಿ ಬಿಡುಗಡೆ ಇತ್ತು. ದೇಶದ ಪ್ರಮುಖ ಚಿಂತಕರು ಭಾಗವಹಿಸುವ ಕಾರ್ಯಕ್ರಮ ಅಂತಾ ಸ್ನೇಹಿತರ ಜತೆಗೆ ಹೋಗಿದ್ದೆ.
ಯು.ಆರ್.ಅನಂತಮೂರ್ತಿ, ಆಶೀಶ್ ನಂದಿ ಮತ್ತು ರಾಮಚಂದ್ರ ಗುಹಾ ಕಾರ್ಯಕ್ರಮದಲ್ಲಿದ್ದ ಚಿಂತಕರು. ಇಂಗ್ಲಿಷ್, ಇಂಗ್ಲಿಷ್ ಚಿಂತಕರಿದ್ದ ಈ ಕಾರ್ಯಕ್ರಮದಲ್ಲಿ ಗೋಕುಲ ನಿರ್ಗಮನದ ಹಾಡು ವಿವೇಕ ಶಾನುಭಾಗರ ನಮಸ್ಕಾರ ಬಿಟ್ಟರೆ ಬೇರೇನು ಕನ್ನಡವಿರಲಿಲ್ಲ. ಇದೇ ತಕರಾರು ಅಂತಾ ಹೇಳ್ತಿಲ್ಲ. ಅದ್ಯಾಕೋ ಸುಬ್ಬಣ್ಣರಂತಹ ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದರೂ ಕಾರ್ಯಕ್ರಮ ಆಪ್ತವಾಗಲೇ ಇಲ್ಲ.
ಅನಂತ ಮೂರ್ತಿ ಸುಬ್ಬಣ್ಣರ ಸ್ನೇಹದ ಬಗ್ಗೆ ಮಾತಾಡಿದ್ದು, ಗುಹಾ ಬಿಡುಗಡೆಯಾದ ಪುಸ್ತಕದ ಬಗ್ಗೆ ಮಾತಾಡ್ತಾ ಸುಬ್ಬಣ್ಣ ಸಾಂಸ್ಕೃತಿಕ, ರಾಜಕೀಯ ನಡೆಗಳ ಬಗ್ಗೆ ಹೇಳಿದ್ದು ಯಾಕೋ ನಾಟಲಿಲ್ಲ.
ಆಶೀಶ್ ನಂದಿ ಅನ್ ಟೇಮ್ಡ್ ಲಾಂಗ್ಬೇಜ್ ಆಫ್ ಡಿಸೆಂಟ್ ಅಂದ್ರೆ ಪಳಗಿಸಲಾಗದ ಬಂಡಾಯದ ಭಾಷೆ ಅನ್ನೋ ವಿಷಯದ ಬಗ್ಗೆ ಮಾತಾಡಿದರು. ತೀರಾ ಏಲೈಟ್ ಆಗಿದ್ದ ಈ ಕಾರ್ಯಕ್ರಮ ಮಾತ್ರ ನನ್ನಂಥ ಸಾಮಾನ್ಯನಿಗೆ ಹತ್ತಿರವಾಗಲಿಲ್ಲ.
ಇದೇ ಹೊತ್ತಿಗೆ ಸೆಂಟ್ರಲ್ ಕಾಲೇಜಿನಲ್ಲಿ ಒಂದು ಉತ್ಸವ. ಕ್ಯೂಬಾ ಉತ್ಸವ. ನನಗೆ ಕ್ಯೂಬಾ ಬಗ್ಗೆ ಹೆಚ್ಚೇನು ಗೊತ್ತಿಲ್ಲ. ಮೋಟರ್ ಸೈಕಲ್ ಡೈರೀಸ್ ಚಿತ್ರ ನೋಡಿ ಚೆ ಗುವೆರಾ ಯಾರೆಂದು ತಿಳಿದುಕೊಂಡಿದ್ದೆ. ಜಿ.ಎನ್. ಮೋಹನ್ ಬರೆದ ನನ್ನೊಳಗಿನ ಹಾಡು ಕ್ಯೂಬಾ ಓದಿ ಕ್ಯೂಬಾ ಏನೂಂತ ತಿಳಿದುಕೊಂಡಿದ್ದೆ. ಕೆಲ ತಿಂಗಳ ಹಿಂದೆ ಸಹೋದ್ಯೋಗಿ ಮಿತ್ರರೊಬ್ಬರು ಕ್ಯೂಬಾ ಕುತೂಹಲಕಾರಿಯಾದ ಲೇಖನವನ್ನು ಬರೆದ ಮೇಲೆ ಕ್ಯೂಬಾ ಎಂಬ ಪುಟ್ಟ ದೇಶದ ಬಗ್ಗೆ ಸ್ವಲ್ಪ ಕುತೂಹಲವಿತ್ತು.
ಉತ್ಸವ ಕಾಲಿಟ್ಟರೆ ಅಲ್ಲಿ ಜಾಗವಿಲ್ಲ. ಎಲ್ಲೆಲ್ಲೂ ಉತ್ಸಾಹ!
ಪ್ರಬುದ್ಧರ ಭಾಷಣ, ಮಧ್ಯೆ ಮಧ್ಯೆ ಕ್ಯೂಬಾದ ಹಾಡುಗಳು, ಚೆ, ಕ್ಯೂಬಾ ಕುರಿತ ಪದ್ಯಗಳು ನಿಂತು ಉತ್ಸವ ಸವಿಯುಣ್ಣುತ್ತಿದ್ದರು.
20 ನಿಮಿಷ ಆಶೀಶ್ ನಂದಿ ಮಾತಾಡಿ ಪಳಗಿಸಲಾಗದ ಬಂಡಾಯದ ಭಾಷೆ ಮುರ್ತ ರೂಪವೆಂದು ಭಾವಿಸುವಂತೆ ಉತ್ಸವವಿತ್ತು. ಅಲ್ಲಿ ಆಟೋ ಡ್ರೈವರ್ ಇದ್ದ, ಸಾಮಾನ್ಯ ಕಾರ್ಮಿಕ, ಪ್ರಬುದ್ಧ ಚಿಂತಕ, ಮೇಷ್ಟ್ರು, ಗಾಯಕ ಎಲ್ಲರೂ ಇದ್ದರು.
ಕ್ಯೂಬಾದಿಂದ ಮಂತ್ರಿಯೊಬ್ಬರು ಬಂದಿದ್ದರು. 12ಸಾವಿರ ಮೈಲು ದೂರದಾ ಕ್ಯೂಬಾದ ಉತ್ಸವವನ್ನು ಇಷ್ಟೊಂದು ಸಂಭ್ರಮದಿಂದ ಅಚರಿಸಿದ್ದನ್ನು ಬೆರಗಾದರು. ಪ್ರಕಾಶ್ ಕಾರಟ್ ಕೂಡ ಈ ಕಾರ್ಯಕ್ರಮದಲ್ಲಿದ್ದರು.
ಕ್ಯಾಸ್ಟ್ರೋರನ್ನು ಹತ್ತಿರದಿಂದ ನೋಡಿದ ಮೆನನ್, ಕ್ಯಾಸ್ಟ್ರೋ ಮಾನವೀಯತೆಯನ್ನು ವಿವರಿಸಿದ ಜಿ.ರಾಮಕೃಷ್ಣ ಎಲ್ಲರೂ ಒಂದು ಅರ್ಥಪೂರ್ಣ ಪ್ರಯತ್ನವನ್ನು ಸಾರ್ಥಕಗೊಳಿಸಿದರು.
ಬೆಳ್ಳಂಬೆಳಗೆ ನಿದ್ರೆ ಬಿಟ್ಟು ದೇಶಕಾಲದ ಕಾರ್ಯಕ್ರಮಕ್ಕೆ ಹೋದಾಗ ಗೆಳೆಯರೆಲ್ಲಾ ಡೆಮೊಕ್ರಟಿಕ್ ಸೋಷಯಲಿಸಂ, ಡೀಸೆಂಟ್ರಲೈಸೇಷನ್, ಕಲ್ಚರ್ ಅನ್ನೋ ಬರೀ ಒಣ ಮಾತುಗಳನ್ನು ಕೇಳಿದೆವು. ಉತ್ಸವದಲ್ಲಿ ಉತ್ಸಾಹ ತುಂಬಿಕೊಂಡು ಹೊರಬಂದೆವು.
ಜಗತ್ತಿನ್ನ ಯಾವುದೇ
ಮೂಲೆಯಲ್ಲಿ
ನಡೆಯುತ್ತಿರುವ
ದೌರ್ಜನ್ಯದ ವಿರುದ್ಧ
ಸಿಡಿದೆದ್ದು ನಿಂತರೆ
ನೀನು ನನ್ನ ಸಂಗಾತಿ
-ಚೆ ಗೆವಾರ (ಮೇಫ್ಲವರ್ ಕಾರ್ಡ್)
ಅಂಥ ಸಂಗಾತಿಗಳ ದಂಡೇ ಉತ್ಸವದಲ್ಲಿತ್ತು.
kaaryakramakke baralu aagadidakke tumba besaravaayitu.. patrikegalalli kaaryakramada suddi odide. ‘che’ mattu cubannara krantiya nenapugalannu namma kannolage naati maaduva nimma prayatnakke abhinandane…