ಕೊಳ್ಳಿ: ನಿರಂಜನರೇ ಬರೆದ 'ಚಿರಸ್ಮರಣೆಯ ಕಯ್ಯೂರು'

ಒಂದು ಮಹತ್ವದ ಹೋರಾಟವನ್ನು ಅದ್ಭುತ ಶೈಲಿಯಲ್ಲಿ ನಿರಂಜನರು ಕಟ್ಟಿ ಕೊಟ್ಟಿದ್ದಾರೆ. ‘ಚಿರಸ್ಮರಣೆಯ ಕಯ್ಯೂರು’ ಒಂದು ನೆನಪಿನ ಬುತ್ತಿ.
ಈ ಕೃತಿ ಈಗ ಮತ್ತೆ ಓದಲು ಲಭ್ಯ. ಸುಂದರ ಮುದ್ರಣದಲ್ಲಿ. ಜೊತೆಗೆ ಈ ಕೃತಿ ಓದಿ ಸ್ಫೂರ್ತಿ ಪಡೆದು ಕಯ್ಯೂರಿಗೆ ಭೇಟಿ ಕೊಟ್ಟ ಪತ್ರಕರ್ತ ಜಿ ಎನ್ ಮೋಹನ್ ಅವರು ಬರೆದ ನೆನಪು-‘ ಚಿರಸ್ಮರಣೆಯ ಪುಟಗಳಲ್ಲಿ ಅಡ್ಡಾಡುತ್ತಾ..’ ಸಹಾ ಇದರಲ್ಲಿದೆ.
ಸಾಕಷ್ಟು ಜನರಿಗೆ ಇದು ತಲುಪಬೇಕು ಎನ್ನುವ ಕಾರಣಕ್ಕೆ ಅದು ಎಲ್ಲರ ಕೈನಲ್ಲಿ ಮತ್ತೆ ಇರಬೇಕು ಎನ್ನುವ ಕಾರಣಕ್ಕೆ 10ಕ್ಕಿಂತ ಹೆಚ್ಚು ಪ್ರತಿ ಕೊಂಡರೆ ಶೇ ೩೩ ರಿಯಾಯಿತಿ ಇದೆ. ಒಂದು ಪ್ರತಿ 30 ರೂ ಮಾತ್ರ.
ಸಂಪರ್ಕಿಸಿ : [email protected]
phone: 7019182729
ಜಿ ಎನ್ ನಾಗರಾಜ್ 
ಹುರ್ರಾ ! ಒಂದು ಸಣ್ಣ ಶೋಧ.
ಬಹಳ ದಿನಗಳಿಂದ ಹುಡುಕಾಡುತ್ತಿದ್ದರೂ ಸಿಗದ ಈ ಕಿರು ಹೊತ್ತಿಗೆ ನಿನ್ನೆ ಕೈಗೆ ಸಿಕ್ಕಿತು.

ಚಿರಸ್ಮರಣೆ ಓದುವವರಿಗೆ ಅತ್ಯವಶ್ಯ ಓದು.
ನಿರಂಜನರೇ ಬರೆದದ್ದು.

ಇಡೀ ಮಲಬಾರ್ ನಲ್ಲಿ ನಡೆಯುತ್ತಿದ್ದ ರೈತರ ಭೀಕರ ಶೋಷಣೆಯ ಸ್ವರೂಪದ ಚಿತ್ರಣ. ಜೊತೆಗೆ 1928 ರಲ್ಲಿ ಆರಂಭವಾಗಿ 15 ವರ್ಷಗಳ ಕಾಲ ಬೆಳೆದು ಬಲಿತ ಹೋರಾಟದ ಹಿನ್ನೆಲೆಯ ಸಂಕ್ಷಿಪ್ತ ವಿವರಣೆ.

ಚಿರಸ್ಮರಣೆಯ ಚಿರಸ್ಮರಣೀಯ ಕಯ್ಯೂರು ಹೋರಾಟದ ಬಗ್ಗೆ ಈ ಕಿರು ಪುಸ್ತಕವನ್ನು ಬರೆದದ್ದು ಸಾಂಸ್ಕೃತಿಕ ಲೋಕದಲ್ಲಿ ಇತಿಹಾಸ ನಿರ್ಮಿಸಿದ ಸಮುದಾಯ ಸಾಂಸ್ಕೃತಿಕ ಜಾಥಾದ ಎರಡನೆಯ ಆವೃತ್ತಿ ರೈತನತ್ತ ಜಾಥಾದ ಸಮಯದಲ್ಲಿ. 1981 ರಲ್ಲಿ.
ನರಗುಂದದ ರೈತ ಬಂಡಾಯ ಸ್ಫೋಟಗೊಂಡ ಆ ಸ್ಫೂರ್ತಿಯಲ್ಲಿ.

” ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ ” ಸಂದರ್ಭದಲ್ಲಿ ಹೋರಾಟದ ಹಿನ್ನೆಲೆಯನ್ನು ಪರಿಚಯಿಸಲು ಹಲವು ಪುಸ್ತಕಗಳನ್ನು ತಡಕಾಡಬೇಕಾಯಿತು. ಆದರೆ ನಿರಂಜನರು ಅದನ್ನು ಮೂರು ದಶಕಗಳ ಹಿಂದೆಯೇ ಸಾಕಷ್ಟು ಶೋಧ ಮಾಡಿ ಈ ಕಿರು ಹೊತ್ತಿಗೆ ರಚಿಸಿದ್ದಾರೆ.

ಚಿರಸ್ಮರಣೆಯಿಂದ ಸ್ಫೂರ್ತಿ ಪಡೆದವರು ಈ ಹೊತ್ತಿಗೆ ಓದಲು ಮರೆಯದಿರಿ.


ಚಿರಸ್ಮರಣೆಯ ಮುಂದಿನ ಮರು ಮುದ್ರಣದಲ್ಲಿ ಪುಸ್ತಕದ ಕೊನೆಯಲ್ಲಿ ಸೇರ್ಪಡೆಯಾಗಬೇಕಾದದ್ದು .

ಕಯ್ಯೂರು ವೀರರ ಮರಣ ದಂಡನೆಯ ನಂತರ ಕೇರಳದ ಮೂಲೆ ಮೂಲೆಗಳಲ್ಲಿ ಸಹಸ್ರ ಸಹಸ್ರ ಕಂಠಗಳಲ್ಲಿ ಮೊಳಗಿದ ಹಾಡು.

“ಅದೋ ಕೇಳಿ ನಾಡವರೇ
ದೂರದಿಂದ ಬರುತಲಿರುವ
ತೂಗುಗಂಬದ ವೀರ ಕರೆ

ಕಿವಿಕೊಡಿ ಬಾಂಧವರೇ
ಕಠಿಣ ತ್ಯಾಗದ ಪವಿತ್ರ ಪುಲಕದ
ರೋಮಾಂಚಕರ ನಾದಕೆ.

ರಚನೆ: 1942. ಕ್ರಾಂತಿ ಕವಿ ಸ್ವತಃ ರೈತ ಚಳುವಳಿಗಾರರೂ ಆಗಿದ್ದ ಟಿ.ಸುಬ್ರಹ್ಮಣ್ಯ ತಿರುಮುಂಬು.
ಮಲಯಾಳಂ ನಿಂದ ಅನುವಾದ ನಿರಂಜನ.

‍ಲೇಖಕರು avadhi

June 18, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: