ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊರೋನಾ ಕಾಲದಲ್ಲಿ ಪುಸ್ತಕ ಬಿಡುಗಡೆಗೆ ‘ದೇವರೇ ಗತಿ’

ಹೀಗೂ ಒಂದು ಪುಸ್ತಕ ಬಿಡುಗಡೆಯಾಯ್ತು.

ನಿಮ್ಮ ಗಮನದಲ್ಲಿರಲಿ..

ನನ್ನ ಪ್ರೀತಿಯ ಸಾಹಿತ್ಯ ಬಂಧುಗಳೇ

ಕೊರೋನಾ ಕಾರಣದಿಂದ ಯಾರನ್ನೂ ಕರೆಯದೆ ಯಾರಿಗೂ ತಿಳಿಸದೆ ಇವತ್ತು ನಮ್ಮ ಮನೆಯಲ್ಲೇ ಕೆಲವೇ ಮಂದಿಯ ಸಮ್ಮುಖದಲ್ಲಿ ಒಂದು ಪುಟ್ಟ ಸಮಾರಂಭ ಮಾಡಿದೆವು

ಅದೆಂದರೆ ನಾನು ಬರೆದ ಮೂರು ಕೃತಿಗಳ ಲೋಕಾರ್ಪಣೆ.

ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದವರು ತಾಯಿ ಮಹಾಲಕ್ಷ್ಮಿ.

ಕೃತಿ ಲೋಕಾರ್ಪಣೆಯನ್ನು ಮಾಡಿದವರು ಗಣಪತಿ,

ಮುಖ್ಯ ಅತಿಥಿಗಳಾಗಿ ಭಾಗವಹಿಸಿದವರು ತಂದೆ ಮಂಜುನಾಥ ಸ್ವಾಮಿ, ಗುರು ರಾಘವೇಂದ್ರ ಸ್ವಾಮಿ, ರಾಧಾ ಕೃಷ್ಣ, ಶ್ರೀರಾಮ, ಆಂಜನೇಯ ಮತ್ತಿತರರು.

ಪ್ರೇಕ್ಷಕರಾಗಿ ನಾನು ನನ್ನ ಪತಿ ಹಾಗು ನನ್ನ ಮಗ ಭಾಗವಹಿಸಿದ್ದೆವು.

ಈ ಚಿಕ್ಕ ಹಾಗು ಚೊಕ್ಕವಾದ ಸುಮಾರಂಭದಲ್ಲಿ ನಾವು ನಿಮ್ಮನ್ನೆಲ್ಲ ತುಂಬಾ ಜ್ಞಾಪಿಸಿಕೊಂಡೆವು.

ನಿಮ್ಮ ಶುಭ ಹಾರೈಕೆ ನನಗೆ ಶ್ರೀ ರಕ್ಷೆ ಸ್ನೇಹಿತರೇ..

-ಎಸ್ ಜಿ ಮಾಲತಿ ಶೆಟ್ಟಿ 

ಅವರ ಫೇಸ್ ಬುಕ್ ಪುಟದಿಂದ

‍ಲೇಖಕರು avadhi

28 July, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading