ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಟ್ಟ ಹೆಮ್ಮೆಯಲೊಂದು ಕೊಡಲಾಗದ ಖೇದದಲೊಂದು..

ಮತ್ತಷ್ಟು ದ್ವಿಪದಿಗಳು

ಬಸವರಾಜ ಸೂಳಿಬಾವಿ

ಲಡಾಯಿ ಪ್ರಕಾಶನ

1 ಹಸಿ ನೆಲ  ಇತ್ತಾದರೂ ಆ ಹೂ ನಡುಗಾಲದಲ್ಲೇ ಬಾಡಿ ಹೋಯಿತು ಬೀಸಿಬಂದ ಗಾಳಿ  ಅಕಾರಣ ಹುಟ್ಟಿದ ನಿನ್ನ ಮೌನದ ಬಿಸಿ ತಾಗಿಸಿತು 2 ಮಗಳೆ ಅಮ್ಮನ ಸಮಾಧಿ  ಅಷ್ಟು   ದೂರವಿದೆ ನಡಿ  ಸತ್ತುಬಿದ್ದ ಈ ಹಂದಿಯನು ರಸ್ತೆಯಾಚೆ ಮಣ್ಣು ಮಾಡೋಣ 3 ಈ ಹೆಜ್ಜೆಗೆ ಮರಭೂಮಿ ಮುಂದಿನ ಹೆಜ್ಜೆಗೆ ಕಡಲಾದ ನಿನ್ನ ತುಂಬಿಕೊಂಡೆ ತುಂಬಿಕೊಂಡೂ ಖಾಲಿಯಾಗುವರಿವು ಹುಟ್ಟಿದಾಗ ನಿನ್ನ  ಪ್ರೇಮಿಸಿದೆನೆನಿಸಿತು 4 ಈ ಪ್ರೇಮ ನವೋದಯ ನವ್ಯ ಬಂಡಾಯ ಕಾವ್ಯದಲಿ ಎದ್ದುಬಂದಿತು ಈಗದು ತನ್ನ ತಾನರಿವ ಕಾವ್ಯದಕ್ಷರದಲಿ ತಾವು  ಕಂಡುಕೊಂಡಿತು 5 ನೀ ಬರೆದ ಓಲೆ ಓದಿದೆ ಈಗ ಲೋಕ ಮದಿರೆ ಕುಡಿದಿರುವೆನೆಂದು ಆರೋಪಿಸುತ್ತದೆ 6 ಅಗಲಿಕೆಯ ಕೊಳದಿಂದೆದ್ದ ಮೌನಗಳೆರಡು ಸಂಜೆ ಹೊತ್ತು ಮುಖಾಮುಖಿಯಾದವು ಕೊಟ್ಟ ಹೆಮ್ಮೆಯಲೊಂದು ಕೊಡಲಾಗದ ಖೇದದಲೊಂದು ಕರಗಿ ಸಂಜೆ ಬೆಳೆಯಿತು 7 ಲೋಕ ಕೇಳಿತು ಊಟ ರಕ್ತ ಗಾಳಿ ಏನೂ ಅಲ್ಲದ ಪ್ರೇಮವನ್ನೇಕೆ ಸದಾ ಅರಸುತ್ತೀ? ಹೇಳುವುದೇನು ಪ್ರೇಮದ ಹೊರತಾದ ಹಾದಿಗಳೆಲ್ಲವೂ ದ್ವೇಷದ ಕಡೆ ತಿರುಗುತ್ತಿವೆ 8 ಮಾವಿನಹಣ್ಣು ಚೀಪಿ ಬೇಕಾಬಿಟ್ಟಿ ಗೊರಟೆ ಎಸೆದರೇನು ಮರಳಿ ಬಂದಾಗ ಗೊರಟೆ ಚಿಗರೊಡೆದ ಹೆಮ್ಮರದ ಹಣ್ಣಿಗೆ ಕೈ ಚಾಚುವನು.. 9 ನೀನು ಆ ಚರಿತ್ರೆ ದೇಶಭಕ್ತಿ ಧರ್ಮದ ಕನ್ನಡಿಗಳಲಿ ಇಣುಕುತ್ತಲೇ ಹೋದೆ ನಿನ್ನ ಪ್ರೀತಿಸುವುದೆಂದರೆ ಉಳಿದವರ ದ್ವೇಷಿಸುವ ಬಿಂಬವೇ ಎದ್ದುಕಂಡಿತು]]>

‍ಲೇಖಕರು G

21 September, 2012

2 Comments

  1. D.RAVI VARMA

    ಲೋಕ ಕೇಳಿತು ಊಟ ರಕ್ತ ಗಾಳಿ ಏನೂ ಅಲ್ಲದ ಪ್ರೇಮವನ್ನೇಕೆ ಸದಾ ಅರಸುತ್ತೀ?
    ಹೇಳುವುದೇನು ಪ್ರೇಮದ ಹೊರತಾದ ಹಾದಿಗಳೆಲ್ಲವೂ ದ್ವೇಷದ ಕಡೆ ತಿರುಗುತ್ತಿವೆ
    …..manamuttuva saalugalu….

  2. shanthi k.a.

    ಆರನೇ ಮತ್ತು ಏಳನೇ ದ್ವಿಪದಿಗಳು ತುಂಬಾ ಸೊಗಸಾಗಿವೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading