‘ಅವಧಿ ಕ್ಲಿಕ್’ ನಲ್ಲಿ ಪ್ರಕಟವಾದ ಮೇಲಿನ ಫೋಟೋ ನೋಡಿ ಬರೆದ ಕವಿತೆ

ಗೀತಾ ಹೆಗ್ಡೆ ಕಲ್ಮನೆ
ಹೇಳು
ಮುಖ ಯಾಕೆ
ಮರೆಯಾಗಿಟ್ಟೆ?
ಕಪ್ಪು
ಗುಂಗುರು ಹೆರಳ ಬಾಲೆ
ಅಡಕತ್ತರಿಯಲ್ಲಿ ಸಿಕ್ಕ
ಅಡಿಕೆ ತುಂಡಾದಂತೆ
ನಿನ್ನ ಕೂದಲೇಕೆ
ಮೊಂಡು ಮಾಡಿಕೊಂಡೆ?
ನಿನಗಿಷ್ಟವೊ
ಅಥವಾ
ಕಟ್ಟಿಕೊಂಡವನ
ಒತ್ತಾಯಕೆ ನೀ
ಮಣಿದೆಯೊ?
ಮರೆಯಾದ ಮುಖ
ಕಣ್ಣು ಮಂಜಾಗಿರುವುದೂ
ಕಾಣುವುದಿಲ್ಲ
ಕೊಂಚ ಮುಖ
ತಿರುಗಿಸು ಬಾಲೆ
ನಾ ನಿನ್ನಮ್ಮನಾಗಿ
ಮುಂಗುರುಳ ಸವರಿ
“ಹಳ್ಳಿ ಹುಡುಗಿ
ದಿಲ್ಲಿ ಸೇರಿ”
ಹೈರಾಣಾದ ಕೊರಗ
ಮಡಿಲೊಳಗಡಗಿಸಿಕೊಂಡು
ನಿನಗೊಂದು ಸವಿ
ಮುತ್ತನಿತ್ತು ಸಂತೈಸುವೆ
ಬಾ ಮಗಳೆ!
ಚಿಂತಿಸದಿರು
ಇದು ಕಲಿಗಾಲ
ಕಾಲಕ್ಕೆ ತಕ್ಕಂತೆ
ನೀನೂ ಬದಲಾಗು
ಹೆಣ್ಣೆಂದು ದೂರುವ
ತುಚ್ಚ ನುಡಿಯಾಡುವ
ಮನಸುಗಳ ನೀ ಮೆಟ್ಟಿ ನಿಲ್ಲು
ಗಂಡಂತೆ ಪುಟಿದೇಳು
“ಹೆಣ್ಣೆ ಹುಟ್ಟಲಿ ನನಗೆ
ಎಂದೂ”
ಹೆರುವವರ ಕೂಗು
ಶಾಶ್ವತವಾಗಲಿ!




I beg to differ from you.
ಅವಳ್ಯಾಕೆ ಗಂಡಂತೆ ಆಗಬೇಕು?
ಎಲ್ಲಿಂದೆಲ್ಲಿಗೆ ಕಿತ್ತು ಬಿಸುಟರೂ ಚಿಗಿಯುವುದು, ಪುಟಿದರಳಿ ಮತ್ತೆ ಹೊಸ ಜೀವ ನೀಡುವುದು ಹೆಣ್ಣಲ್ಲವೇ ?
ಹುಟ್ಟಿ ಬೆಳೆದ ಮನೆ, ಊರು ಕೇರಿ ತೊರೆದು ಕಂಡು ಕೇಳರಿಯದ ಮನೆಗೆ ಬಂದು ಮೂರೇ ದಿನಕ್ಕೆ ಮತ್ತೆ ಮೊದಲಿನಂತೆ ನಸುನಗುತ ಬಾಳುವುದು ಹೆಣ್ಣಿಗಷ್ಟೇ ಸಾಧ್ಯ ಆಗುವ ಚೈತನ್ಯ ಶಕ್ತಿಯಲ್ಲವೇ ?