ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇವಲ.. ಪಂಡಿತರಷ್ಟೇ ಜೀವ ತೆತ್ತರಾ?

OPEN FOR DEBATE

t k dayaynand

ಟಿ ಕೆ ದಯಾನಂದ್ 

ಕಾಶ್ಮೀರದಲ್ಲಿ, ಕುರುಬರು, ಅಗಸರು, ಮೋಚಿಗಳು, ಅಲೆಮಾರಿಗಳು, ಬುಡಕಟ್ಟು ಜನಾಂಗದವರು, ಕ್ರಿಶ್ಚಿಯನ್ನರು, ಗಾಣಿಗರು, ಒಕ್ಕಲುತನದವರು, ಇನ್ನಿತ್ಯಾದಿ ಯಾರೊಬ್ಬರೂ.. ಇವರಲ್ಲಿ ಯಾರೆಂದರೆ ಯಾರೂ ಭಯೋತ್ಪಾದಕರ ಗುಂಡಿಗೆ ಸಿಕ್ಕಿ ಇಲ್ಲಿಯವರೆಗೆ ಜೀವ ಬಿಟ್ಟಿಲ್ಲವೇ?

ಕೇವಲ.. ಪಂಡಿತರಷ್ಟೇ ಜೀವ ತೆತ್ತರಾ?

kashmirಒಮ್ಮೆ ಕಾಶ್ಮೀರದಲ್ಲಿ ಭಯೋತ್ಪಾದಕರ ಧಾಳಿಗೆ ಸಿಕ್ಕು ಸತ್ತವರ ಹೆಸರುಗಳನ್ನೊಮ್ಮೆ ಚೆಕ್ ಮಾಡಿದ್ರೆ ಮೇಲೆ ಕಾಣಿಸಿದ ಎಲ್ಲರೂ ಜೀವ ತೆತ್ತಿದ್ದಾರೆ. ಆದ್ರೆ ಎಲ್ಲರನ್ನೂ ಬಿಟ್ಟು ಪಂಡಿತರಷ್ಟೇ ಜೀವ ತೆತ್ತಿದ್ದಾರೆ ಎಂದು ಉಳಿಕೆ ಸಮುದಾಯಗಳ ಬಲಿದಾನವನ್ನು ಮರೆ ಮಾಚುವುದೇಕೆ? ಕಾಶ್ಮೀರದ ಹಿಂದೂಗಳು ಅಂತ ಎಲ್ಲ ಸಮುದಾಯಗಳನ್ನು ಒಳಗೊಂಡಂತೆ ಜೀವ ಬಿಟ್ಟ ಎಲ್ಲರನ್ನು ಒಳಗೊಳ್ಳುವ ಮಾತೇ ಬರುವುದಿಲ್ಲವಲ್ಲ ಯಾಕೆ? ಉಳಿದವರದ್ದು ಜೀವವಲ್ಲ.. ಹುಣಸೇಬೀಜ ಅಂತಲಾ?

ಕಾಶ್ಮೀರಿ ಪಂಡಿತರು ಅಂತ, ಅದನ್ನು ಪಂಡಿತರಿಗಷ್ಟೇ ಸೀಮಿತವಾದ ವಿಷಯವಾಗಿ ಎತ್ತಿ ಹಿಡಿಯುವುದು ತಪ್ಪಲ್ವ.. ? ಎಲ್ಲರನ್ನೂ ಒಳಗೊಂಡಂತೆ ಕಾಶ್ಮೀರಿ ಹಿಂದೂಗಳು ಅಂತ ಅನ್ನೋಣ. ವಾಟ್ಸ್ ದಿ ಪ್ರಾಬ್ಲಂ? ಒಂದು ಸಮುದಾಯದ್ದಷ್ಟೇ ಸಮಸ್ಯೆ ಅನ್ನೋದ್ರ ಬದಲು ಅಲ್ಲಿರೋ ಎಲ್ಲ ಹಿಂದೂ ಸಮುದಾಯದ ಸಮಸ್ಯೆ ಅಂತ ಕರೆಯೋದಕ್ಕೆ, ಪ್ರತಿಭಟಿಸೋಕೆ ನಮಗೇನು ಸಮಸ್ಯೆ?

ನೀನು ಪಂಡಿತನಾ.. ಢಮಾರ್..
ನೀನು ಅಗಸನಾ? ಹೋಗು ಬದುಕ್ಕೊ..

ನೀನು ಪಂಡಿತನಾ ಢಂ ಢಮಾರ್..
ನೀನು ಕುರಿಗಾಹಿಯಾ.. ನಿನ್ನ ಏನೂ ಮಾಡಲ್ಲ ಹೋಗು..

ಹಿಂಗೇನೂ ಆಗಿಲ್ವಲ್ಲ…
ಭಯೋತ್ಪಾದಕರಿಗೆ ಕೊಲ್ಲುವುದಷ್ಟೇ ಗೊತ್ತು..

ಪ್ರತಿಯೊಬ್ಬರ ಜಾತಿ ಪತ್ತೆ ಮಾಡಿ ಸೆಲೆಕ್ಟೀವ್ ಆಗಿ ಕೊಲ್ಲುವುದು ಅವರ ಜಾಯಮಾನವಲ್ಲ. ಕೊಲ್ಲುವರಿಗೇ ಜಾತಿಯಿಲ್ಲವೆಂದರೆ, ಪೊರೆಯಬೇಕಾದ ನಮ್ಮ ಕಣ್ಣುಗಳಿಗೇಕೆ ಜಾತಿಯ ಸೋಂಕು ತಗುಲಬೇಕು. ಕಾಶ್ಮೀರದ ನಿರಾಶ್ರಿತರ ಶಿಬಿರಗಳಲ್ಲಿ ಪಂಡಿತರೊಟ್ಟಿಗೆ ಹತ್ತಾರು ಸಣ್ಣಪುಟ್ಟ ಸಮುದಾಯಗಳೂ ಪರದಾಡುತ್ತಿವೆ. ಎಲ್ಲರನ್ನೂ ಬದುಕು ಕಳೆದುಕೊಂಡ ಹಿಂದೂಗಳಾಗಿಯೇ ಪರಿಗಣಿಸೋಣ.. ಪಂಡಿತರಾಗಿಯಷ್ಟೇ ಮಾತ್ರ ನೋಡುವುದು ಬೇಡ.. ಅಲ್ವ.. ?

‍ಲೇಖಕರು Admin

25 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading