ಕೇವಲ ಕಾಟೋ, ಮಾರೋ ಅಲ್ಲ ಈ ಕಾಟೇರ

ಶಿವಕುಮಾರ ಮಾವಲಿ

**

‘ಕಾಟೇರ’ ನಿಜಾರ್ಥದ Pan India ಸಿನಿಮಾ.‌ Casteism ಮತ್ತು Feudalism ಭಾರತದಾದ್ಯಂತ ಇದ್ದ ಮತ್ತು ಬೇರೆ ಬೇರೆ ರೂಪದಲ್ಲಿ ಈಗಲೂ ಇರುವ ವಾಸ್ತವಗಳು. ಹಾಗಾಗಿ ಇಲ್ಲಿನ ಕಥೆ ಪ್ಯಾನ್ ಇಂಡಿಯಾದ್ದೆ. ನೈಸರ್ಗಿಕ ಸಂಪತ್ತಾದ ಭೂಮಿಯ ಮೇಲೆ ಎಲ್ಲರಿಗೂ ಹಕ್ಕಿದೆ ಎನ್ನುವ ಸತ್ಯದ ವಿರುದ್ಧ ಹೋಗಿ, ಜಮೀನ್ದಾರರು ರೈತರ ಶೋಷಣೆಗೆ ನಿಂತ ಸಮಾಜದಲ್ಲಿ ರೈತರ ಪರವಾಗಿ, ತನ್ನೂರಿನ ಪರವಾಗಿ ನಿಲ್ಲುವ ನಾಯಕನ ಪಾತ್ರ ಸಿನಿಮ್ಯಾಟಿಕ್ ಆಗಿಯೇ ವಾಸ್ತವದ ಕಟು ಸತ್ಯಗಳನ್ನು ಸಂಭಾಷಣೆಯಲ್ಲಿ ನೆನಪಿಸುತ್ತದೆ.

“You can’t put a fence around the planet earth” ಎನ್ನುತ್ತಾಳೆ ಕವಯತ್ರಿ Marina De Bellagente. ನೆನಪಿರಲಿ, ಮನುಷ್ಯನಿಗೆ Mother Earth ಆಗಿದ್ದ ಭೂಮಿ, ಒಡೆತನಕ್ಕೆ ಸಿಕ್ಕಾಗಿನಿಂದ ಕೇವಲ Raw Material ಆಗಿ ಹೋಯ್ತು. ಅಲ್ಲಿಗೆ ಜಮೀನ್ದಾರರ ಮತ್ತು ಬಂಡವಾಳಶಾಹಿಗಳ ಹಾವಳಿ ಶುರುವಾಯಿತು. ಸಿನಿಮಾದಲ್ಲಿ ಒಂದು ಹಾಡೂ ಚೆನ್ನಾಗಿಲ್ಲ ಅನ್ನೋದು ಕಂಪ್ಲೆಂಟು. ಆದ್ರೆ ಆ ಸಿನಿಮಾದ ಪಾತ್ರಗಳ ಬದುಕು ಹಾಗೇ ಇದೆ. ಲಯಬದ್ಧವಾದ ಬದುಕಿನ ಹಾಡು ಆ ಜೀವನದಲ್ಲಿಲ್ಲದಿರುವುದು ದುರಂತ. ಜಾತಿ ಎಂಬುದು ಭಾರತೀಯರ DNA ಗಳಲ್ಲಿಯೇ ಅಂತರ್ಗತವಾಗಿರುವ ಪ್ರಜ್ಞೆ. ಅದು ಈಗಲೂ ಒಂದು ದೊಡ್ಡ ಸಮಸ್ಯೆಯೇ. ಆದರೆ ಅದು ಇಲ್ಲ ಎನ್ನುವಂತೆ ನಾವು ಕೇವಲ ತೋರಿಕೆಗೆ ಹೇಳಿಕೊಂಡು ತಿರಾಗುಡುತ್ತೇವೆ ಅಷ್ಟೆ.

ಇಂಥ ಸಬ್ಜೆಕ್ಟ್ ಗಳನ್ನು ತೀರ ನಿಧಾನ ಚಿತ್ರಕತೆಯಿಂದ ಮಂದಗತಿಯ ಸಿನಿಮಾ ಮಾಡಿ, ಫಿಲ್ಮ್ ಫೆಸ್ಟಿವಲ್ ಗಳಿಗೆ ಮಾತ್ರ ಸೀಮಿತ ಮಾಡಿಕೊಂಡು, ಯಾರೂ ನೋಡದ ಹಾಗೆ ಮಾಡುವುದಕ್ಕಿಂತ ಅದಕ್ಕೊಂದು ಕಮರ್ಷಿಯಲ್ ಟಚ್ ಕೊಟ್ಟು ದರ್ಶನ್ ಅಂಥವರಿಂದ ಮಾಡಿಸಿರುವುದು ನಿಜಕ್ಕೂ ಅಭಿನಂದನೀಯ. ಇಲ್ಲದ ಲೋಕವೊಂದನ್ನು ಅಸಹಜವಾಗಿ ಸೃಷ್ಟಿಸಿ, ಕೇವಲ ಒಬ್ಬ ವ್ಯಕ್ತಿಯ ಯಾವುದೋ ದ್ವೇಷಕ್ಕಾಗಿ ಅಥವಾ ತಂದೆ-ತಾಯಿಯ ಆಸೆಯೊಂದನ್ನು ಈಡೇರಿಸಲು ನಿಮಿಷಕ್ಕೊಂದು ಕೊಲೆಯನ್ನು ವಿಚಿತ್ರ ಆಯುಧಗಳಿಂದ ಮಾಡಿಸಿ, ಸಿನಿಮಾನ ಟಾರ್ಚ್ ಹಾಕಿಕೊಂಡು ನೊಡುವ ಹಾಗೆ ಮಾಡುವ ಸಿನಿಮಾಗಳೆ ಮಧ್ಯೆ, ಇರುವ ಲೋಕದ ಬಹುಜನರ ಸಮಸ್ಯೆಯ, ಇದೇ ನೆಲದ ಕಥೆಯೊಂದನ್ನು ಒಬ್ಬ ಸ್ಟಾರ್ ನಟನಿಂದ ಮಾಡಿಸಿರುವ ಎದೆಗಾರಿಕೆಯನ್ನು ಮೆಚ್ಚಲೇಬೇಕು.

ಸಿನಿಮಾಗಳಿಂದ ಜನ ಬಹುವಾಗಿ ಬದಲಾಗುತ್ತಾರೆ ಎಂದೇನು ನಾನು ನಂಬುವುದಿಲ್ಲ. ಆದರೆ ವಾಸ್ತವಗಳು ಎದೆಯಲ್ಲಿ ಇಳಿದರೆ ಕೆಲವರಾದರೂ ಕೊಂಚ ಬದಲಾವಣೆ ಹೊಂದಬಹುದು. ಸಿನಿಮಾದಲ್ಲಿ ಶಾನಭೋಗರ ಮಗಳನ್ನು ಪ್ರೀತಿಸುವ ಕಾಟೇರ ಇದ್ದಾನೆ. ಆದ್ರೆ ಆಕೆಯ ಮನೆಯಿಂದ ಇದಕ್ಕೆ ಒಮ್ಮೆಯೂ ಪ್ರತಿರೋಧವನ್ನು ತೋರಿಸದಿರುವುದು ಆಶ್ಚರ್ಯ. ಆದರೆ ತನ್ನ ಅಕ್ಕ ಜಾತಿ ಬಿಟ್ಟು ಹೋದಳು ಎಂಬ ಕಾರಣಕ್ಕೆ ಅವಳನ್ನು ಮದುವೆಯ ಹಿಂದಿನ ದಿನವೇ ಕೊಲ್ಲುವ ಶಾನಭೋಗರ ಮಗನಂಥವರು ಈಗಲೂ ನಮ್ಮ ನಡುವೆ ಇದ್ದಾರೆ ಎಂಬುದು ನೋವಿನ ಸಂಗತಿ. ಅಂಥ ಅನೇಕ ಯಾವತ್ತೋ ಸತ್ತೋಗಿರಬೇಕಿದ್ದ ವ್ಯವಸ್ಥೆಗಳು ಇನ್ನೂ ಜೀವಂತ ಇರುವುದನ್ನು ನೆನಪಿಸುತ್ತದೆ ಕಾಟೇರ. ಯೆಸ್ , ಇದು ಕೇವಲ ಕಾಟೋ, ಮಾರೋ ಅಲ್ಲದ ‘ಕಾಟೇರ’

‍ಲೇಖಕರು avadhi

January 2, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ramesh pattan

    ಮರ್ಯಾದಾ ಹತ್ಯೆ (ಮರ್ಯಾದೆಗೇಡು ಹತ್ಯೆ )ಗಳು ನಡೆಯುವದು ಬಹುತೇಕ ಕೆಳವರ್ಗದ ಜನರಿಂದ.
    ಪತ್ರಿಕೆಗಳಲ್ಲಿ ಕಳೆದ ಹಲವು ವರ್ಷಗಳಲ್ಲಿ ಬರುತ್ತಿರುವ ವರದಿಗಳನ್ನು ಓದಿದರೆ ಇದು ಅರಿವಾಗುತ್ತದೆ.ಆದರೆ ನಿರ್ದೇಶಕ ಈ ಸತ್ಯ ಕೈಬಿಟ್ಟಿದ್ದಾರೆ.
    ರಮೇಶ ಪಟ್ಟಣ.
    ಕಲಬುರ್ಗಿ

    ಪ್ರತಿಕ್ರಿಯೆ
  2. ANURADHA ARUN

    ರಾಕ್ ಲೈನ್ ಸಂಸ್ಥೆಯಿಂದ ದರ್ಶನ್ ಅಭಿನಯದ ಸಿನೆಮಾ ಅದ್ದೂರಿಯಾಗಿ ಮೂಡಿ ಬಂದಿದೆ. ಕಾಟೇರನ ಪಾತ್ರಕ್ಕೆ ತಕ್ಕ ನ್ಯಾಯವನ್ನು ದರ್ಶನ್ ಒದಗಿಸಿದ್ದಾರೆ. ಮೊದಲ ಚಿತ್ರದಲ್ಲಿಯೇ ಆರಾಧನ ರಾಮು ಅವರ ನಟನೆ ತಾಯಿ ( ಮಾಲಾಶ್ರೀ ) ನಟನೆಯನ್ನು ನೆನಪಿಸುವಂತಿದೆ. ಎಲ್ಲ ಕಲಾವಿದರು ತಮ್ಮ್ ಪಾತ್ರಗಳನ್ನು ಒಂದೇ ಬಾರಿ ಬಂದು ಹೋದರೂ ಸಹ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಬಹುತಾರಾಗಣ ನಿರ್ವಹಣೆ, ಸಂಗೀತ, ಸಾಹಿತ್ಯ, ಕಥೆ, ಚಿತ್ರಕಥೆ ಮೆಚ್ಚುವಂಥಹುದು. ಪ್ರಧಾನಿ ಇಂದಿರಾ ಗಾಂಧಿ ಮತ್ತು ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರ ರಾಜಕೀಯಕ್ಕೆ ಕನ್ನಡಿ ಹಿಡಿಯುವ ಕೆಲಸ ತರುಣ್ ಸುಧೀರ್ ಅವರಿಂದ ಮೂಡಿಬಂದಿದೆ. ಎಲ್ಲ್ ಕಲಾವಿದರಿಗೂ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: