ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇರಳದಲ್ಲಿ ಕಿರಣ್ ಭಟ್: ಬಾದಲ್ ಸರ್ಕಾರ್ ಗೌರವ ನಮನ

ಬಾದಲ್ ಸರ್ಕಾರ್
ಜನ್ಮಶತಮಾನೋತ್ಸವದ ಗೌರವ ನಮನ

-ಕಿರಣ್ ಭಟ್

ಬಾದಲ್ ಸರ್ಕಾರ್ ರ ಜನ್ಮ ಶತಮಾನೋತ್ಸವದ ಆಚರಣೆಗಳು ನಡೆದಿವೆ.ಈ ವರ್ಷದ itfok ಕೂಡ ತನ್ನದೇ ರೀತಿಯಲ್ಲಿ ಅವರಿಗೆ ಗೌರವವನ್ನು ಸಲ್ಲಿಸುತ್ತಿದೆ. ನಾಟಕೋತ್ಸವದ ಅಂಗಳದಲ್ಲಿ ಅವರ ನಾಟಕಗಳ ಕುರಿತ ಚಿತ್ರ ಪ್ರದರ್ಶನ ನಡೆದಿದೆ.

ಈ ಪ್ರದರ್ಶನ ಆಧುನಿಕ ಭಾರತೀಯ ರಂಗಭೂಮಿಯ ಅತ್ಯಂತ ಪ್ರತಿಭಾವಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಾದಲ್ ಸರ್ಕಾರ್ ರ ಕುರಿತಾದದ್ದು. ಇದು ಬರಿಯ ಅವರ ಗೌರವವಷ್ಟೇ ಅಲ್ಲ ಭಾರತೀಯ ರಂಗಭೂಮಿಯ ಭಾಷೆ ಮತ್ತು ಉದ್ದೇಶವನ್ನು ಮರುರೂಪಿಸಿದ ನಾಟಕಕಾರ, ರಂಗಕರ್ಮಿ ಮತ್ತು ರಾಜಕೀಯ ಚಿಂತಕರಾಗಿ ಸರ್ಕಾರ್ ಅವರ ಕೊಡುಗೆಗಳ ಪರಿಚಯ ಕೂಡ.

1960 ರ ಹೊತ್ತಿಗೆ ಬಂದ ಸರ್ಕಾರ್ ಅವರ ಐತಿಹಾಸಿಕ ನಾಟಕ ‘ಏವಂ ಇಂದ್ರಜಿತ್’ (Ebong Indrajit), ಸಾಂಪ್ರದಾಯಿಕ ನಾಟಕ ಶೈಲಿಯಿಂದ ಹೊರಬಂದು, ಅಸಂಗತ ರೂಪ ಮತ್ತು ಆಂತರಿಕ ಸಂಘರ್ಷದ ಮೂಲಕ ಬದಲಾಗುತ್ತಿರುವ ಮಧ್ಯಮ ವರ್ಗದ ಆತಂಕಗಳನ್ನು ಚಿತ್ರಿಸಿತು. ಈ ಪ್ರದರ್ಶನವು ಅವರು ಸಾಂಪ್ರದಾಯಿಕ ವೇದಿಕೆಯ ರಂಗಭೂಮಿಯಿಂದ (proscenium theatre) ತಾವು ರೂಪಿಸಿದ ‘ಥರ್ಡ್ ಥಿಯೇಟರ್’ (ಮೂರನೇ ರಂಗಭೂಮಿ) ಕಡೆಗೆ ನಡೆಸಿದ ಆಮೂಲಾಗ್ರ ಬದಲಾವಣೆಯನ್ನು ಸಹ ಗುರುತಿಸುವ ಕೆಲಸವೂ.

ಅವರ ‘ಶತಾಬ್ದಿ’ ತಂಡದ ಈ ಪ್ರದರ್ಶನದ ವಿನ್ಯಾಸ ಮಾಡಿದೆ. ಈ ಪ್ರದರ್ಶನವನ್ನು ಪ್ರದರ್ಶನಗಳನ್ನು ಬೀದಿಗಳಿಗೆ ಮತ್ತು ಸಮುದಾಯಗಳಿಗೆ ಕೊಂಡೊಯುವ ಪ್ರಯತ್ನವೂ ಸಾಗಿದೆ. ಹಸಿವು, ಶೋಷಣೆ ಮತ್ತು ಪ್ರಸ್ತುತ ಸಂಗತಿಗಳನ್ನೂ ಕೂಡ ಮನದಟ್ಟು ಮಾಡಬಲ್ಲ ಪ್ರದರ್ಶನ ಇದು. ರಂಗಭೂಮಿಯನ್ನು ಸಾಮಾಜಿಕ ಜವಾಬ್ದಾರಿ, ಸಂವಾದ ಮತ್ತು ಸಾಮೂಹಿಕ ತೊಡಗಿಸಿಕೊಳ್ಳುವಿಕೆಯ ಸಾಧನವಾಗಿ ನೋಡುವ ಸರ್ಕಾರ್ ಅವರ ಅಚಲ ದೃಷ್ಟಿಕೋನ ಇಲ್ಲಿದೆ.


ಪ್ರದರ್ಶನದ ಕೆಲವು ಚಿತ್ರಿಕೆಗಳು ಇಲ್ಲಿವೆ

‍ಲೇಖಕರು avadhi

31 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading