ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ವೈ ನಾರಾಯಣಸ್ವಾಮಿಯವರ 'ಚಕ್ರರತ್ನ': ಇದೊಂದು ನೋವಿನ ಸಂಗತಿ..

ಈ ಸಾಂಸ್ಕೃತಿಕ ಹುಣ್ಣಿಗೆ ದಯಮಾಡಿ ಮುಲಾಮು ಹುಡುಕಿಕೊಡಿ…

ಬಂಧುಗಳೇ ಇದೊಂದು ನೋವಿನ ಸಂಗತಿ…

ಡಾ.ಕೆ.ವೈ.ನಾರಾಯಣಸ್ವಾಮಿಯವರ ‘ಚಕ್ರರತ್ನ’ ನಾಟಕ ಕುರಿತು ವಿವಾದ ಶುರುವಾಗಿದೆ. ನಾಟಕ ನೋಡಿದ ಜೈನ ಸಮುದಾಯದ ಕೆಲ ಧರ್ಮಾಂಧರು ಈ ವಿವಾದ ಸೃಷ್ಟಿಸಿದ್ದಾರೆ.
‘ಚಕ್ರರತ್ನ’ ನಾಟಕದಲ್ಲಿ ಬಾಹುಬಲಿಯನ್ನು ಒಬ್ಬ ‘ಚಮ್ಮಾರ’ನಾಗಿ ಚಿತ್ರಿಸಲಾಗಿದೆ. ನಾಟಕದ ಮೊದಲಿಗೆ ಜಿನಮೂರ್ತಿಯನ್ನು ಕಡೆಯುವ ಚಾವುಂಡರಾಯನ ಆಸೆಯಂತೆ ಶಿಲ್ಪಿ ಅರಿಷ್ಟನೇಮಿ ಬೃಹತ್ ಬಂಡೆಯೊಂದರ ಹುಡುಕಾಟದಲ್ಲಿರುತ್ತಾನೆ. ಅವನ ಹುಡುಕಾಟದ ದಾರಿಯಲ್ಲಿ ಒಬ್ಬ ಚಮ್ಮಾರ ಸಿಗುತ್ತಾನೆ. ಅವನು ಹಗಲು ಚಪ್ಪಲಿಯನ್ನು, ರಾತ್ರಿ ಯುದ್ಧದಲ್ಲಿ ಗಾಯಗೊಂಡ ಸೈನಿಕರ ಗಾಯಗಳನ್ನು ಹೊಲಿಯುತ್ತಾನೆ. ಅವನ ಗಲ್ಲೇಬಾನಿಯಿಂದ ನೀರು ಕುಡಿದು ದಣಿವು ತೀರಿಸಿಕೊಳ್ಳುವ ಅರಿಷ್ಟನೇಮಿ ಹನ್ನೆರಡು ವರುಷಗಳಿಂದ ಸಿಗದ ಬಂಡೆಗಾಗಿ ಹುಡುಕಿ ಆತ್ಮಹತ್ಯೆಯ ಆಲೋಚನೆಯಲ್ಲಿರುತ್ತಾನೆ. ಆದರೆ ಆ ಚಮ್ಮಾರ ಸೂಕ್ಷ್ಮವಾಗಿ ಬಂಡೆ ಸಿಗಬಹುದಾದ ದಾರಿ ತೋರಿಸಿ ಮುಂದೆ ನಡೆಯುತ್ತಾನೆ..

ನಂತರ ಹಾಗೆ ಸಿಕ್ಕ ಬಂಡೆಗೆ ಹುಳಿ ತಾಗಿಸಿದರೆ ಅದರಿಂದ ರಕ್ತ ಚಿಮ್ಮುವುದ ಕಂಡು ಹೆದರುವ ಶಿಲ್ಪಿ ಅದಕ್ಕೆ ಪರಿಹಾರಕ್ಕಾಗಿ ಮತ್ತೆ ಚಮ್ಮಾರನನ್ನು ಹುಡುಕಿಕೊಂಡು ಹೊರಡುತ್ತಾನೆ… ಹಾಗೆ ಹುಡುಕಹೊರಟ ದಾರಿಯಲ್ಲಿ ಅವನಿಗೆ ನೀಲಾಂಜನೆ, ಆದಿನಾಥ, ಭರತ, ಚಕ್ರರತ್ನ ಸಿಗುತ್ತಾರೆ.. ನಾಟಕ ಕಾಲಾಂತರಗಳ ಗೋಜಿಲ್ಲದೆ ತಣ್ಣಗೆ ಹರಿಯುತ್ತದೆ.
ನಾಟಕದ ಕೊನೆಗೆ ಬಾಹುಬಲಿಯೇ ಆ ಚಮ್ಮಾರನೆಂಬುದನ್ನು ಅರಿಷ್ಟನೇಮಿ ಅರಿಯುತ್ತಾನೆ. ಬಾಹುಬಲಿ ಹೇಳುತ್ತಾನೆ; ನಾನು ಜಗದ ಚಮ್ಮಾರ ಹಗಲು ಚಪ್ಪಲಿ ಹೊಲಿಯುತ್ತೇನೆ, ರಾತ್ರಿ ಗಾಯಗಳನ್ನು ಹೊಲಿಯುತ್ತೇನೆ ಎಂದು… ಹಾಗೂ ಬಂಡೆಯಿಂದ ಚಿಮ್ಮುವ ರಕ್ತ ನಿಲ್ಲಲು ಪರಿಹಾರವನ್ನೂ ಹೇಳುತ್ತಾನೆ.

ಕೆ.ವೈ.ಎನ್. ಚಕ್ರರತ್ನದಲ್ಲಿ ಝೆನ್ ಕತೆಯೊಂದರ ಎಳೆ ಹಿಡಿದು ಹಾಗೂ ಕುವೆಂಪು ಅವರ ‘ಜಲಗಾರನ’ ದರ್ಶನದಿಂದ ಚಮ್ಮಾರನನ್ನು ಸೃಷ್ಟಿಸಿ ಭರತನ ರಕ್ತದಾಹದ ಎದುರು ಸಂಬಂಧಗಳನ್ನು ಹೊಲಿಯಬೇಕಾದ ಚಮ್ಮಾರಿಕೆಯನ್ನು ನಾವೆಲ್ಲರೂ ಕಲಿಯಬೇಕಾದ, ಎಲ್ಲರೂ ಚಮ್ಮಾರರಾಗಬೇಕಾದ ಸೂಕ್ಷ್ಮವನ್ನು ಹೇಳಿದ್ದಾರೆ. ಅವರು ಹೆಣ್ಣಿಗೆ ಸಮೀಕರಿಸಿ ಸೃಷ್ಟಿಸಿರುವ ಚಕ್ರರತ್ನದ ಪಾತ್ರವಂತೂ ಅದ್ಭುತವಾಗಿದೆ.

ಆದರೆ ಶಾಂತಿಗೆ ಹೆಸರಾದ ಜೈನ ಸಮುದಾಯದ ಮನಸ್ಸುಗಳ ಸೂತಕದ ಎಕ್ಸಾಂಪಲ್ ನೋಡಿ… ”Bahubali depicted as a Cobbler – Dr.K.Y.N. has made a futile attempt by distorting the real and established image of Lord Bahubali. It is very painful to state that his script has caused an ir-repairable damage by depecting Lord Bahubali as a cobbler and this discharacterisation in the name of ‘creativity’ is highly objectionable, deplorable & unpardonable. It is surprising to note that the author has made this change by inserting an unequivocal character. If one undergoes through a huge gamut of literature accumulated in the works of Bharatha & Bahubali’s life of Jinasenacharya, Adikavi Pampa, G.P.Rajarathnam, G.Gundanna, H.B.Jwalanaiah and other renowned writers/play rights of Kannada literature, no author has inclined to this act of distorting the image of Prathama Mokshagami Lord Bahubali.” ಅಂತ ಬರೆಯುತ್ತಾರೆ ಅವರ  ಬ್ಲಾಗಿನಲ್ಲಿ... ಹಾಗು ಬಾಹುಬಲಿಯನ್ನು ಚಮ್ಮಾರನಿಗೆ ಹೋಲಿಸಿ ಅಪಮಾನಗೊಳಿಸಿದ್ದಾರೆ ಎಂದು ಹೇಳುವ ಮೂಲಕ ಚಮ್ಮಾರಿಕೆಗೆ ಅಪಮಾನ ಮಾಡಿದ್ದಾರೆ… ಈ ಸಾಂಸ್ಕೃತಿಕ ಹುಣ್ಣಿಗೆ ದಯಮಾಡಿ ಮುಲಾಮು ಹುಡುಕಿಕೊಡಿ…
 

‍ಲೇಖಕರು G

18 August, 2013

ನಿಮಗೆ ಇವೂ ಇಷ್ಟವಾಗಬಹುದು…

31 Comments

  1. Somalinga Kharge

    Sir, The members of the Jain community who viewed the productions staged subsequently on June 15, 2013 and August 11, 2013 by this troupe. All the points mentioned above were discussed at length with the author and the director and were appraised about the distortions in the script. The members and devotees of Jain community have felt that this distorted image of one of their most revered deities sends a false message and gives a spurious image about Lord Bahubali. Further, they have felt that it is highly regrettable to distort the divine characters in name of creativity.

  2. Dharanendra Jinesha

    maanyare, prastuta naatakadinda novaagiruvudu jinamatastharige. jinashreshta baahubaliya avaastavika chitranadinda tamagaada novannu jinamatastharu todikolluvudoo tappe?! novige kaaranavaada vikrutigalannu saatvikavaagi pratibhatisuvudoo tappe?! naatakartru haagoo nirdeshakarondige vikrutigala bagge prajaasattaatmakavaagi charchisuvudoo tappe?! jinamatastharu naatakartru haagoo nirdeshakarige shikshe aagabeku anta fatwa kottiddareye?! prastuta lekhanavu ekapaksheeyavaagi baredu jinamatastharige anyaaya maadiddare.

  3. ದಿವ್ಯ ಆಂಜನಪ್ಪ

    ಲಿಂಗಾಯಿತ ಸಮುದಾಯದಲ್ಲಿ ಶಿವನು ಆರಾಧ್ಯ ದೈವ. ಅದೇ ಶಿವನನ್ನು ಮಸಣ ಕಾಯುವವ ರುದ್ರನೆಂದು ಕರೆದಿದ್ದಾರೆ ಮತ್ತು ಹಾಗೆಯೇ ಪುರಾಣಗಳಲ್ಲಿ ಚಿತ್ರಿಸಿದ್ದಾರೆ. ಕತೆ-ಪುರಾಣಗಳು ಧರ್ಮ ಗ್ರಂಥಗಳು ಎಲ್ಲವೂ ಒಬ್ಬ ರಚನಾಕಾರರಿಂದ ರಚಿಸಲ್ಪಟ್ಟಿದ್ದು ಎಂದಾದ ಮೇಲೆ ಈ ನಾಟಕ ರಚನೆಯಲ್ಲಿನ ಈ ಪ್ರತಿಮೆಯನ್ನು ಹಾಗೆಯೇ ಒಪ್ಪಿಕೊಳ್ಳತಕ್ಕದೆಂದು ನನ್ನ ಅಭಿಪ್ರಾಯ. ನಾಟಕದಲ್ಲಿ ಚಮ್ಮಾರಿಕೆಯನ್ನು ವಿಶಾಲರ್ಥಕ್ಕೆ ತೆಗೆದುಕೊಳ್ಳಬೇಕೆ ಹೊರತು ಚಮ್ಮಾರ ಜಾತಿಗೆ ಬಾಹಬಲಿಯನ್ನು ಸೇರಿಸಿದಂತೆ ನೋಡಬಾರದು. ಕೊನೆಯಲ್ಲಿ ಬಾಹುಬಲಿಯು ಹೇಳುವ ಮಾತು, “ನಾನು ಜಗದ ಚಮ್ಮಾರ ಹಗಲು ಚಪ್ಪಲಿ ಹೊಲಿಯುತ್ತೇನೆ, ರಾತ್ರಿ ಗಾಯಗಳನ್ನು ಹೊಲಿಯುತ್ತೇನೆ” ಎಂಬುದನ್ನು ಅರ್ಥೈಸಿಕೊಂಡರೆ ಇಷ್ಟೆಲ್ಲಾ ಅನರ್ಥಗಳು ಆಗುತ್ತಿರಲಿಲ್ಲವೋ ಏನೋ?
    ಇಷ್ಟಕ್ಕೂ ಚಮ್ಮಾರ ಜಾತಿಯವನು ಚಮ್ಮಾರಿಕೆಯೇ ಮಾಡಬೇಕೆ ಅಥವಾ ಇತರೇ ಜಾತಿಯವನು ಚಮ್ಮಾರಿಕೆ ಮಾಡಿಲ್ಲವೇ?
    ಧನ್ಯವಾದಗಳು

    • Dharanendra Jinesha

      Please comment after educating yourself about jinapuranas.

  4. Anonymous

    ಒಂದು ದೈವವನ್ನು ನಂಬಿರುವ ಜನಸಮುದಾಯದ ಮನಸ್ಸಿಗೆ ಹಿಂಸೆ ಉಂಟು ಮಾಡುವಂತೆ ಇತಿಹಾಸ/ಪುರಾಣ ತಿರುಚುವ ಸ್ವಾತಂತ್ರ್ಯವನ್ನು ಈ ಬರಹಗಾರ ಸಮುದಾಯಕ್ಕೆ ಯಾರು ಕೊಟ್ಟರು ಎಂದು ಅರ್ಥವಾಗುತ್ತಿಲ್ಲ. ಹೇಳಬೇಕಾದುದನ್ನು ಹೇಳಲು ಇಂಥಹ ದೇವರುಗಳನ್ನೆ ಯಾಕೆ ಆರಿಸಿಕೊಳ್ಳುತ್ತೀರೀ ಸಾಹಿತಿಗಳೆ? ಕಾರ್ನಾಡರಿಗೆ ಇಂಥ ಬರವಣಿಗೆ ಬರದದ್ದಕ್ಕೆ ಪೀಠ ಕೊಟ್ಟರೆಂದು ಎಲ್ಲರಿಗೂ ಅದು ಸಿಗೊಲ್ಲ.ಸೃಜನಶೀಲತೆ ನಿಮ್ಮೊಳಗೆ ನಿಜವಾಗಲು ಇದ್ದುದಾದರೆ ನಿಮ್ಮ ಆಶಯಕ್ಕೆ ತಕ್ಕಂತೆ ಸಮಕಾಲಿನ
    ಭಿತ್ತಿ ಕಲ್ಪಿಸಿಕೊಳ್ಳಿರಿ.ಒಳಗೆ ಹೂರಣ ಇದ್ದರೆ ಇದೆಲ್ಲ ಸರ್ಕಸ್ ಬೇಕಾಗೊಲ್ಲ

  5. Dharanendra Jinesha

    “ಬಾಹುಬಲಿಯನ್ನು ಚಮ್ಮಾರನಿಗೆ ಹೋಲಿಸಿ ಅಪಮಾನಗೊಳಿಸಿದ್ದಾರೆ ಎಂದು ಹೇಳುವ ಮೂಲಕ ಚಮ್ಮಾರಿಕೆಗೆ ಅಪಮಾನ ಮಾಡಿದ್ದಾರೆ” If the writer of the above article and others truly think that chammaara profession is as noble as, say, journalism or theatre, please encourage at least one of your children or grandchildren to take up chammaarike as their profession. Please show your respect for chammaarike by your action.

    • Boom Shiva

      I feign ignorance. Please let me know if brands like Bata, Woodlands, Nike, Reebok employ ONLY “cast cobblers” to design / manufacture their products…?

  6. t.n. vasudevamurthy

    ಹಿಂದೆ ಅಶ್ವತ್ಥಾಮನ್, ಶೂದ್ರತಪಸ್ವಿಯಂತಹ ನಾಟಕಗಳು ಬಂದಾಗಲೂ ಇದೇ ಥರದ ವಿವಾದಗಳು ಹುಟ್ಟಿಕೊಂಡಿದ್ದವು. ನಮ್ಮ ವಿಷಯದಲ್ಲಿ ಲೋಕದ ಜನರು ಇದೇ ಥರದ ಅಭಿಪ್ರಾಯ ಹೊಂದಿರಬೇಕೆಂಬ ಹಟಮಾರಿತನವೇ ಬಾಲಿಶವಾದುದು. ತನ್ನ ಪುಟ್ಟ ಜಗತ್ತೇ ಸರ್ವಸ್ವ ಎಂದು ಯೋಚಿಸುವವನು ಮಾತ್ರ ಈ ಹಟಮಾರಿತನವನ್ನು ಬೆಳೆಸಿಕೊಳ್ಳುತ್ತಾನೆ. ವ್ಯಕ್ತಿಗತ ನೆಲೆಯ ಈ ಬಾಲಿಶತನ ಧರ್ಮದಂತಹ ವ್ಯಾಪಕ ನೆಲೆಗೆ ಪಾದಾರ್ಪಣೆ ಮಾಡಿದಾಗ ಅದು ಮೂಲಭೂತವೆಂಬ ಹೆಸರು ಪಡೆಯುತ್ತದೆ. ಬಾಹುಬಲಿಯಂತಹ ಪರಮನಗ್ನನು ಒಂದು ಸೀಮಿತವಾದ ಸಮುದಾಯಕ್ಕೆ ಒಳಪಟ್ಟವನು ಎಂದು ಯೋಚಿಸುವುದು ಬರೀ ಮೂಲಭೂತವಾದವಲ್ಲ, ಅದೊಂದು ಮೌಢ್ಯ ಕೂಡ. ಇವರ ಎಲ್ಲ ಆಕ್ಷೇಪಣೆಗಳನ್ನೂ ಹಾಗೆಯೇ ನಾಟಕದ ಪ್ರಯೋಗವನ್ನೂ ನೋಡಿದಾಗ ಕೆವೈಎನ್ ಬಾಹುಬಲಿಯನ್ನು ಹೇಗೆ ಅಪಮಾನಿಸಿದ್ದಾರೆ ಎಂಬುದು ನಿಜಕ್ಕೂ ತಿಳಿಯುತ್ತಿಲ್ಲ. ಹಿಂದಣ ಪುರಾಣಗಳನ್ನು ಟೀಕಿಸಿ ಕಾನರ್ಾಡರು ಬೆಳಕಿಗೆ ಬಂದರು ಎಂದು ಯೋಚಿಸುವವರು ಕಾನರ್ಾಡರ ಪ್ರಯೋಗಗಳಿಂದ ಪುರಾಣಗಳೂ ಮತ್ತೆ ಹೊಸಬೆಳಕಿಗೆ, ಹೊಸಬಗೆಯ ಚಚರ್ೆ ಪ್ರಚಾರಗಳಿಗೆ ತೆರೆದುಕೊಂಡವು ಎಂಬುದನ್ನು ಮರೆಯಬಾರದು. ಈ ಥರದ ಪ್ರಯೋಗಗಳಿಂದ ಬಾಹುಬಲಿಯ ಚಾರಿತ್ರ್ಯವು ಜೈನಸಮುದಾಯವನ್ನು ಮೀರಿ ಹೊಸ ವಲಯಗಳಲ್ಲಿ, ಮುಂಬರುವ ಹೊಸತಲೆಮಾರುಗಳಲ್ಲಿ ಬೆಳಗುವುದೆಂದು ಜೈನರು ಸಂತಸ ಪಡಬೇಕು. ಇಲ್ಲಿ ಪರುಷದ ಪುತ್ಥಳಿಗೆ ಕಬ್ಬಿಣದ ಆಭರಣಗಳುಂಟೇ ಅಯ್ಯಾ ಎಂಬ ಅಲ್ಲಮನ ವಚನ ನೆನಪಾಗುತ್ತಿದೆ. ಸ್ಪರ್ಶಮಣಿಗೆ ಕಬ್ಬಿಣ ಸೋಂಕಿದಾಗ ಹೊಲೆಗೆಡುವುದು ಸ್ಪರ್ಶಮಣಿಯೋ ಕಬ್ಬಿಣವೋ? ಬಾಹುಬಲಿಯ ಚಾರಿತ್ರ್ಯ ಅಷ್ಟು ಸುಲಭವಾಗಿ ಸೂತಕಗೊಳ್ಳುವುದೇ? ಆ ಅಚಲಮೂತರ್ಿಯ ಬಗ್ಗೆ ಇವರಿಗಿರುವ ಶ್ರದ್ಧೆ ಇಷ್ಟೊಂದು ಪುಕ್ಕಲುತನದ್ದೇ? ಇವರ ಆತಂಕ, ಮಡಿವಂತಿಕೆಗಳೇ ನಿಜ ಮತ್ತು ಸಕಾರಣ ಎನ್ನುವುದಾದರೆ ಬಾಹುಬಲಿ ಇಂದಿನ ನಮ್ಮ ಪಾಲಿಗೆ ನಿಷ್ಪ್ರಯೋಜನಕಾರಿ ಎಂದೇ ನಾವು ಭಾವಿಸುತ್ತೇವೆ. ಕಲೆಯನ್ನು ನಿರ್ಮಮಭಾವದಿಂದ ಪರಿಭಾವಿಸಲಾಗದವರು ತಮ್ಮ ವ್ಯಥೆಯನ್ನು ಕಲಾವಿದರ, ಕಲಾಭಿಮಾನಿಗಳ ಮುಂದೆ ತೋಡಿಕೊಳ್ಳುವುದು ವ್ಯರ್ಥವೆಂದು ತಿಳಿಯಬೇಕು. ಭಾವುಕತೆ ಕಲಾಭಿರುಚಿಯನ್ನು ಹಾಳುಗೆಡವುತ್ತದೆ. ಮತ್ತು ಕ್ರೌರ್ಯ, ವ್ಯಕ್ತಿನಿಂದೆಗಳಿಗೆ ದಾರಿ ಮಾಡಿಕೊಡುತ್ತದೆ

    • ಹುಲಿಕುಂಟೆ ಮೂರ್ತಿ

      ನಿಜಕ್ಕೂ ಅರ್ಥಪೂರ್ಣ ಆಲೋಚನೆ ಸಾರ್.. ಇದನ್ನು ಅರ್ಥ ಮಾಡಿಕೊಂಡವರು ಆ ಶಾಂತಿಧೂತ ಬಾಹುಬಲಿಗೆ ಹತ್ತಿರವಾಗುತ್ತಾರೆ.

  7. ಹುಲಿಕುಂಟೆ ಮೂರ್ತಿ

    ಮೇಲಿನ ಕೆಲವು ‘ಸಾತ್ವಿಕ’ ಕಾಮೆಂಟ್ ಗಳಲ್ಲಿನ ವ್ಯಗ್ರತೆ, ಕ್ರೌರ್ಯವನ್ನು ಮೆರೆಸಲು ‘ದೈವ’ದ ಮೊರೆ ಹೋಗಲಾಗಿದೆ. Dharanendra Jinesha ಆಗಲಿ, ಇನ್ನೊಬ್ಬರಾಗಲಿ ಜಿನಧರ್ಮ ಸಾರವನ್ನು ಅರ್ಥಮಾಡಿಕೊಂಡಿರುವ ಭ್ರಮೆಯಲ್ಲಿದ್ದಾರೆ; ಆ ಜಾತಿಯಲ್ಲಿ ಹುಟ್ಟಿ ಹೆಸರಿಟ್ಟುಕೊಂಡ ಮಾತ್ರಕ್ಕೆ ಎಲ್ಲವನ್ನೂ ಬಲ್ಲ ಅಹಂಕಾರದಿಂದ ಮಾತನಾಡುವುದು ಸಲ್ಲದು ಎಂಬುದನ್ನು ಇವರಿಗೆ ಆ ಶಾಂತಮೂರ್ತಿ ಬಾಹುಬಲಿಯೂ ಹೇಳಿಕೊಡಲಾರ. ಕುವೆಂಪು ಶಿವನನ್ನು ‘ಜಲಗಾರ’ ಎಂದಾಗ ಪಟ್ಟಷ್ಟೇ ಖುಷಿಯನ್ನು ‘ಚಕ್ರರತ್ನ’ದ ಬಾಹುಬಲಿ ಕನ್ನಡಿಗರಿಗೆ ನೀಡಿದೆ. ಪುರಾಣೇತಿಹಾಸಗಳನ್ನು ತಿರುಚುವ, ಮರೆಮಾಚುವ, ಪುನರ್ ಸೃಷ್ಟಿಸುವ ಯಾವ ಅಂಶಗಳೂ ಈ ನಾಟಕದಲ್ಲಿಲ್ಲ; ಬದಲಾಗಿ ಚಮ್ಮಾರಿಕೆಯೆಂಬುದು ಜಗದ ಗಾಯಗಳನ್ನು ಹೊಲಿಯುವ ರೂಪಕವಾಗಿ ಬಳಕೆಯಾಗಿದೆ. ನಾಟಕಕಾರರು ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು ಮಾನವೀಯತೆಯ ಪಠ್ಯವೊಂದನ್ನು ಸೃಷ್ಟಿಸಿದ್ದಾರೆ. ಈ ನಾಟಕದ ಕುರಿತು ಧರ್ಮಾಂಧತೆಯಿಂದ ಮಾತನಾಡುವವರು ಉತ್ತರಿಸಲಿ; ಚಮ್ಮಾರನೊಬ್ಬನಿಗೆ ಬಾಃಉಬಲಿ ದೈವವಾಗಬಾರದೆ..? ಜೈನರಲ್ಲದವರಿಗೆ ಜಿನಧರ್ಮದ ಆಸಕ್ತಿ ಇರಬಾರದೆ..? ಹೃದಯವನ್ನು ಧರ್ಮದ ಹಗ್ಗದಿಂದ ಬಿಗಿದುಕೊಂಡು ಕಲೆಯನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ದಯಮಾಡಿ ತಮ್ಮ ನಿಜವಾದ ಕಣ್ಣುಗಳಿಂದ ೊಮ್ಮೆ ನಾಟಕ ನೋಡಿ.. ಇಲ್ಲವಾದರೆ ಜಿನಮೂರ್ತಿ ಬಾಹುಬಲಿ ನಿಮ್ಮನ್ನು ಕ್ಷಮಿಸಲಾರ…

    • Dharanendra Jinesha

      Hello Sir, playing with words is easy. I wont make an attempt to match your word play. As I said before, if you truly think that chammaara profession is as noble as, say, journalism or theatre, please encourage at least one of your children or grandchildren to take up chammaarike as their profession. Please leave jina dharma to us, the followers of that dharma. You guys can seek shelter in Mohammad. Or go find a new prophet to meet your tastes. Why do you guys create unnecessary trouble in the name of art?

      • ಹುಲಿಕುಂಟೆ ಮೂರ್ತಿ

        ಕ್ಷಮಿಸಿ… ನಿಮ್ಮ ಸಲಹೆಗಳನ್ನು ತೆಗೆದುಕೊಳ್ಳುವ ‘ಔದಾರ್ಯ’ ನನ್ನಲ್ಲಿಲ್ಲ; ನೀವು ಪದೇ ಪದೇ ಒಂದು ತಪ್ಪು ಮಾಡುತ್ತಿದ್ದೀರಿ. ಓದಿದವರು, ಸೊಫೆಸ್ಟಿಕೇಟೆಡ್ ಸ್ಥಿತಿಯಲ್ಲಿರುವವರು ಚಪ್ಪಲಿ ಹೊಲಿಯುವ ಕಾಯಕಕ್ಕೆ ತಮ್ಮ ಮಕ್ಕಳನ್ನು ಕಳಿಸಬಲ್ಲಿರಾ..? ಎಂದು ಕೇಳುತ್ತಿದ್ದೀರಿ. ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಮಾತನಾಡುವ ನೀವು ಹೀಗೆ ಮಾತನಾಡುವಾಗ ಯಚಿಸಿದ್ದೀರಾ ನಿಮ್ಮ ಮಾತುಗಳು ಏನನ್ನು ಹೇಳುತ್ತಿವೆ ಎಂದು. ಧರ್ಮ ವಯಕ್ತಿಕವಾದುದು. ನಿಮ್ಮ ಧರ್ಮಾಂಧತೆಯಲ್ಲಿ ಚಮ್ಮಾರರ ಜಾತಿಯನ್ನು ನಿಂದಿಸುತ್ತಿದ್ಧೀರಿ ಎಂದು ನಿಮಗೆ ಯಾರು ಹೇಳಿಕೊಡಬೇಕು..? ಕನ್ನಡದಲ್ಲಿ ನಾನು ಬರೆದುಬಿಟ್ಟರೆ ‘playing with words..?’ ಇಂಗ್ಲಿಷಲ್ಲಿ ಹೇಳಿದರೆ ಧಾರ್ಮಿಕ ಭಾವನೆಯಾ…? ಚೆನ್ನಾಗಿದೆ ನಿಮ್ಮ ನ್ಯಾಯ. ನನ್ನ ಕಾಮೆಂಟನ್ನು ಹಾಗೂ ಮೇಲಿನ ರೈಟ್ ಅಪ್ಪನ್ನು ಪುನಃ ಒಬ್ಬ ಮನುಷ್ಯರಾಗಿ ಓದಿ. ಪಂಪನ ಆದಿಪುರಾಣವನ್ನು ಓದಿ ದಯಮಾಡಿ ಜಿನಧರ್ಮವನ್ನು ಅರಿಯಿರಿ; ಬಾಹುಬಲಿಗೆ ಅಪಮಾನ ಮಾಡಬೇಡಿ.

        • Venkatababu

          Dear Murthy, you seem to be thinking that ಚಪ್ಪಲಿ ಹೊಲಿಯುವ ಕಾಯಕ = ಚಮ್ಮಾರರ ಜಾತಿ. This is wrong.

        • ಸುಹಾಸ ಭಜಂತ್ರಿ

          Dear Mr. Murthy, why do you feel hurt when someone gives you a suggestion that you should send your children to cobbler profession? If it is such a noble profession as you people claim, why are you then reluctant to encourage your children to take up that profession? Simple question and I expect honest reply from you. No word play please.
          You asked me to read Pampa’s Adi Purana. Ok, now you tell me where in Adi Purana has Pampa depcited Bahubali as a cobbler?

          • ಹುಲಿಕುಂಟೆ ಮೂರ್ತಿ

            ಪ್ರಿಯ ಸುಹಾಸ್… ನಾವು ಕೇವಲ ಮಾತನಾಡುವವರಲ್ಲ ಎಂಬ ಕಾರಣಕ್ಕೆ ನಿಮಗೆ ‘ನಾನು ನನ್ನ ಮಕ್ಕಳನ್ನು ಚಪ್ಪಲಿ ಹೊಲಿಯುವ ಕಾಯಕಕ್ಕೆ ಕಳಿಸುತ್ತೇನೆ’ ಎಂದು ಹೇಳಿಬಿಡಬಹುದು; ಆದರೆ, ನಿಮ್ಮ ಪ್ರಶ್ನೆ ಹಿಂದಿನ ಕ್ರೌರ್ಯ ನನ್ನನ್ನು ಕೊಲ್ಲುತ್ತಿದೆ. ಅದು ಮೇಲಿನ ಜಿನಭಕ್ತರು ಎಂದು ಹೇಳಿಕೊಳ್ಳುವವರೆಲ್ಲರಿಂದ ನನಗೆ ಆಗುತ್ತಿರುವ ಹಿಂಸೆ. ನಾನು ನನ್ನ ಮಕ್ಕಳನ್ನು ಚಮ್ಮಾರಿಕೆಗೆ ಕಳಿಸಬೇಕಿಲ್ಲ; ಅದು ಅವರ ಆಯ್ಕೆ. ಹಾಗೊಮ್ಮೆ ನನ್ನ ಮಕ್ಕಳ ವೃತ್ತಿ ನನ್ನ ಆಯ್ಕೆಯಾದರೆ, ಘನತೆಯಿಂದ ಎದೆಯುಬ್ಬಿಸಿ ಚಮ್ಮಾರಿಕೆಯನ್ನು ಕಲಿಸುತ್ತೇನೆ; ಯಾಕೆಂದರೆ ಅದು ನನ್ನ ಹಿರೀಕರ ಕಾಯಕ ಹಾಗೂ ನಾನು ಅತ್ಯಂತ ಗೌರವಿಸುವ ಕಾಯಕ; ನನ್ನ ಜಾತಿಯೂ ಅದೇ.. ನಿಮ್ಮ ವ್ಯಂಗ್ಯ ಬಿಟ್ಟು ನಾಟಕವನ್ನು ಕಲೆಯ, ಸೃಜನಶೀಲತೆಯ ಚೌಕಟ್ಟಿನಲ್ಲಿ ನೋಡಿ ಎಂದು ಹೇಳಿದರೆ ಅನಗತ್ಯವಾದ ಮಾತುಗಳಿಂದ ತಪ್ಪಿಸಿಕೊಳ್ಳಬೇಡಿ ಎಂಬುದು ನನ್ನ ಕಳಕಳಿ.

          • Dharanendra Jinesha

            ಮಾನ್ಯ ಮೂರ್ತಿ ಅವರೇ, ಸುಹಾಸ್ ಅವರ ಅಭಿಪ್ರಾಯ ಏನೇ ಇರಲಿ, ನಾನಂತೂ ಚಮ್ಮಾರಿಕೆಯನ್ನು ಕೀಳು ಎಂದು ತಿಳಿದಿಲ್ಲ. ಆದರೆ ಸಮಾಜದ ಬಹುತೇಕ ಮಂದಿ, ವಿದ್ಯಾವಂತ ಚಮ್ಮಾರ ಜಾತಿಯವರೂ ಸೇರಿದಂತೆ, ತಮ್ಮ ಮಕ್ಕಳನ್ನು ಚಮ್ಮಾರಿಕೆಗೆ ಕಳುಹಿಸುತ್ತಿಲ್ಲ. ಚಮ್ಮಾರಿಕೆ ಹಿನ್ನೆಲೆಯಿಂದ ಬಂದ ನೀವೇ ಚಮ್ಮಾರಿಕೆಯನ್ನು ಆಯ್ದುಕೊಳ್ಳದೇ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡಿದ್ದೀರಿ. ಆದುದರಿಂದ ನಿಮ್ಮ ಮಕ್ಕಳಿಗೆ ಚಮ್ಮಾರಿಕೆಯನ್ನು ವೃತ್ತಿಯಾಗಿ ಆಯ್ದುಕೊಳ್ಳಲು ಪ್ರೇರಕ ಶಕ್ತಿಯೇ ಇಲ್ಲದಂತಾಗಿದೆ. ಯಾವಾಗ ಒಂದು ವೃತ್ತಿಯ ಬಗ್ಗೆ ಜನರ ಒಲವು ಕಡಿಮೆಯಾಗುತ್ತದೋ, ಆಗ ಆ ವೃತ್ತಿ ಸಮಾಜದ ದೃಷ್ಟಿಯಲ್ಲಿ ಕೆಳ ಸ್ಥರದ್ದಾಗುತ್ತದೆ. ಬ್ರಾಹ್ಮಣ ಸಮಾಜದಲ್ಲಿ ಒಂದು ಕಾಲದಲ್ಲಿ ಪೌರೋಹಿತ್ಯವು ನಂಬರ್ ೧ ಆಯ್ಕೆ ಆಗಿತ್ತು. ಆದರೆ ಇಂದು ಬ್ರಾಹ್ಮಣರು ಪೌರೋಹಿತ್ಯದ ಬಗ್ಗೆ ಒಲವು ಕಳೆದುಕೊಂಡಿದ್ದಾರೆ. ಅವರ ಮಕ್ಕಳನ್ನು ಪೌರೋಹಿತ್ಯಕ್ಕೆ ಕಳುಹಿಸುತ್ತಿಲ್ಲ. ಹೀಗಾಗಿ ಬ್ರಾಹ್ಮಣ ಸಮಾಜದ ದೃಷ್ಟಿಯಲ್ಲೂ ಪೌರೋಹಿತ್ಯವು ಕೆಳ ಸ್ಥರದ ವೃತ್ತಿ ಆಗಿಬಿಟ್ಟಿದೆ. ಪೌರೋಹಿತ್ಯ ವೃತ್ತಿಯವರಿಗೆ ಹೆಣ್ಣು ಸಿಗುವುದೂ ಕಷ್ಟವಾಗಿದೆ. ಚಮ್ಮಾರ ಜಾತಿಯ ಜನರು ಹೆಚ್ಚು ಹೆಚ್ಚು ವಿದ್ಯಾವಂತರಾಗಿ ನಗರ ಸೇರಿ ಬೇರೆ ವೃತ್ತಿಗಳನ್ನು ಹಿಡಿಯುತ್ತಿದ್ದ ಹಾಗೆ ಚಮ್ಮಾರ ಸಮಾಜದಲ್ಲೂ ಚಮ್ಮಾರಿಕೆ ಬಗ್ಗೆ ಒಲವು ಕಡಿಮೆಯಾಗಿ ಅವರ ದೃಷ್ಟಿಯಲ್ಲೇ ಅದು ಕೆಳಸ್ಥರದ ವೃತ್ತಿ ಆಗಿಬಿಡುತ್ತದೆ. ಇದು ಕ್ರೂರ ಸತ್ಯ.

          • Dharanendra Jinesha

            ಮಾನ್ಯ ಮೂರ್ತಿ ಅವರೇ, ಕನ್ನಡ ವಾಹಿನಿಗಳಲ್ಲಿ ಬರುತ್ತಿರುವ ಧಾರಾವಾಹಿಗಳನ್ನೇ ಗಮನಿಸಿ. ಅವುಗಳ ಪಾತ್ರವರ್ಗದಲ್ಲಿ ಶಿಕ್ಷಕರು, ಎಂಜಿನಿಯರು, ಡಾಕ್ಟರು, ಸ್ವಾಮಿಗಳು, ಲಾಯರ್ರು, ರಾಜಕಾರಣಿಗಳು, ನಟ ನಟಿಯರು, ಬಿಸಿನೆಸ್ ಮೆನ್ನು, ಪೀಯೋನ್, ರೈತ, ಸೆಕ್ರೆಟರಿ, ನರ್ಸು ಮೊದಲಾದವರು ಇದ್ದಾರೆ. ಆದರೆ ಒಬ್ಬನಾದರೂ ಜಾಡಮಾಲಿ, ಚಮ್ಮಾರ, ಕಸಾಯಿ, ರದ್ದಿಯವ, ಚಿಂದಿ ಆಯುವವ ಇದ್ದಾನ? ಮಹಾಪರ್ವದಂತಹ ಧಾರಾವಾಹಿಯಲ್ಲೂ ಇಲ್ಲ. ವೃತ್ತಿ ಶ್ರೇಣಿಕರಣಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೇ?

        • Dharanendra Jinesha

          ಮೂರ್ತಿ ಅವರೇ, ಇದು ಚಮ್ಮಾರ ಜಾತಿಯ ಅಥವಾ ಚಮ್ಮಾರಿಕೆಯ ಮೇಲು ಕೀಳುತನದ ಕುರಿತಾದ ವಿವಾದವಲ್ಲ, ಇದು ಬಾಹುಬಲಿಯ ಅವಾಸ್ತವಿಕ ಚಿತ್ರಣದ ಕುರಿತಾದ ಚರ್ಚೆ. ಬಾಹುಬಲಿಯನ್ನು ಚಮ್ಮಾರನಾಗಿ ಚಿತ್ರಿಸದೆ ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಉತ್ಸವ ನಡೆಸುವ ವಿಪ್ರೋತ್ತಮನಾಗಿ ಚಿತ್ರಿಸಿದ್ದರೂ ಸಹ ನಾವು ಜಿನ ಮತಸ್ಥರು ಪ್ರತಿಭಟಿಸುತ್ತಿದ್ದೆವು. ನಾವು ವಿರೋಧಿಸುತ್ತಿರುವುದು ಬಾಹುಬಲಿಯ ಅವಾಸ್ತವಿಕ ಚಿತ್ರಣವನ್ನು. ಇಲ್ಲಿ ಅನಗತ್ಯವಾಗಿ ಚಮ್ಮಾರಿಕೆಯ ಮೇಲು ಕೀಳುತನವನ್ನು ತಂದು ಗೊಂದಲ ಹುಟ್ಟಿಸುವುದು ಬೇಡ.

          • ಹುಲಿಕುಂಟೆ ಮೂರ್ತಿ

            ಪ್ರೀತಿಯ ಧರಣೇಂದ್ರ.. ನಿಮ್ಮ ಈ ಮಾತುಗಳಲ್ಲಿನ ಬದಲಾವಣೆ ನನ್ನಂಥವರಿಗೆ ಆಶಾಭಾವನೆ ಹುಟ್ಟಿಸುತ್ತಿದೆ. ನನ್ನ ತಕರಾರು ಇರುವುದು ಆ ನಾಟಕವನ್ನು ನೋಡಿದ ಕೆಲವು ಜಿನಭಕ್ತರು ‘ಬಾಹುಬಲಿ ಚಮ್ಮಾರನಾಗಿ ಚಿತ್ರಣಗೊಂಡಿದ್ದಾನೆ’ ಎಂಬ ಕಾರಣಕ್ಕೇನೇ ಅಸಹನೆಯಿಂದ ನಡೆದುಕೊಳ್ಳುತ್ತಿರುವುದು. ಇರಲಿ, ಒಂದು ರಂಗಕೃತಿಯಲ್ಲಿ ವಾಸ್ತವ- ಅವಾಸ್ತವದ ಪ್ರಶ್ನೆ ಬರುವುದಿಲ್ಲ ಎಂದು ಮೀಮಾಂಸೆ ಹೇಳುತ್ತದೆ. ಇಷ್ಟಕ್ಕೂ ಕೆ.ವೈ.ಎನ್ ಅವರು ಬಾಹುಬಲಿ ಚಮ್ಮಾರ ಜಾತಿಗೆ ಸೇರಿದವನು ಎಂದು ಹೇಳುವುದಕ್ಕಾಗಿ ಈ ನಾಟಕ ರಚಿಸಿಲ್ಲ; ಬದಲಾಗಿ ಚಮ್ಮಾರಿಕೆಯನ್ನು ಯುದ್ಧವಿರೋಧಿ ರೂಪಕವನ್ನಾಗಿ ಬಳಸಿಕೊಂಡಿದ್ದಾರೆ. ಇಲ್ಲಿನ ಭರತ ಪಂಪನಲ್ಲಿರುವಂತೆ ಯುದ್ಧ ಮತ್ತು ಕ್ರೌರ್ಯದ ಸಂಕೇತವಾದರೆ, ಬಾಹುಬಲಿ ಶಾಂತಿ ಮತ್ತು ಪ್ರೀತಿಯ ಸಂಕೇತ. ಈ ವಿಷಯಗಳು ಕೇವಲ ಧಾರ್ಮಿಕವೂ ಅಲ್ಲ; ಈ ಎರಡೂ ಅಂಶಗಳು ಜಗತ್ತಿನ ಎಲ್ಲ ಮನುಷ್ಯರ ಒಳಗಿನ ವರ್ತನೆಗಳು. ಯುದ್ಧವನ್ನು ಪ್ರೀತಿಯಿಂದ ಮಣಿಸಬೇಕೆನ್ನುವ ಸಾರ್ವಕಾಲಿಕ ಸತ್ಯವನ್ನು ಈ ನಾಟಕ ಹೇಳುತ್ತದೆಯೇ ವಿನಃ ಬೇರಾವುದನ್ನೂ ಅಲ್ಲ…

          • Dharanendra Jinesha

            ಹುಲಿಕುಂಟೆ ಮೂರ್ತಿ ಅವರೇ, ಜಾತಿ ಮತ ಯಾವುದಾದರೇನು ನೀವು ನಾವು ಎಲ್ಲರೂ ಸಹೋದರರು . ಮೋಕ್ಷ ಸಾಧನೆಗೆ ಬೇರೆ ಬೇರೆ ಮಾರ್ಗವಷ್ಟೇ. ಚಮ್ಮಾರಿಕೆಯಾಗಲಿ ಚಮ್ಮಾರ ಜಾತಿಯಾಗಲಿ ಕೀಳು ಅಂತ ನಾನು ಭಾವಿಸಿಲ್ಲ. ಹಾಗೆಯೇ ಉಡುಪಿ ಕೃಷ್ಣ ಮಠದ ವಿಪ್ರೋತ್ತಮರು ಮೇಲು ಅಂತ ಕೂಡ ತಿಳಿದಿಲ್ಲ. ಆದರೆ ಒಂದಂತೂ ನಿಜ. ಸದ್ಯದ ಸಮಾಜದಲ್ಲಿ ಚಮ್ಮಾರಿಕೆಯನ್ನು ವೃತ್ತಿಯಾಗಿ ಆಯ್ದುಕೊಳ್ಳುವವರು ಬಹಳ ಕಡಿಮೆ ಜನ. ವಂಶಪಾರಂಪರ್ಯವಾಗಿ ಚಮ್ಮಾರಿಕೆ ಮಾಡುತ್ತಾ ಬಂದವರೇ ಬೇರೆ ವೃತ್ತಿಗಳಿಗೆ ಅವಕಾಶವಿಲ್ಲದಿದ್ದಾಗ ಚಮ್ಮಾರಿಕೆಯನ್ನು ಮಾಡುತ್ತಾರೆ. ಚಮ್ಮಾರಿಕೆ ಅಷ್ಟೇ ಅಲ್ಲ, ಪೌರಕಾರ್ಮಿಕ ವೃತ್ತಿಯನ್ನೂ ಕೂಡ ಬಹುತೇಕ ಮಂದಿ ಒಂದು ಆಯ್ಕೆ ಎಂದು ನೋಡುವುದಿಲ್ಲ. ಹಾಗೆ ಪೌರೋಹಿತ್ಯವನ್ನೂ ಕೂಡ. ಆದರೆ ಎಲ್ಲರಿಗೂ ಎಂಜಿನಿಯರ್ ಡಾಕ್ಟರ್ ಆಗುವ ಆಸೆ. ನಮ್ಮ ಕಾಲದ ವೃತ್ತಿ ಆಯ್ಕೆಗಳೂ ಶ್ರೇಣಿಕೃತ. ಚಮ್ಮಾರಿಕೆ ಹಾಗೂ ಪೌರೋಹಿತ್ಯ ವೃತ್ತಿ ಶ್ರೇಣಿಯ ಕೊನೆಯ ಸ್ಥರದಲ್ಲಿವೆ. ಅದೇನೇ ಇರಲಿ, ಬಾಹುಬಲಿ ಅಂತಹ ಐತಿಹಾಸಿಕ ಹಾಗೂ ಪೌರಾಣಿಕ ವ್ಯಕ್ತಿತ್ವಕ್ಕೆ ಅವಾಸ್ತವಿಕ ಸ್ವರೂಪ ಕೊಡುವ ಯತ್ನವನ್ನು ಸಾಹಿತ್ಯವಾಗಲಿ ಕಳೆಯಾಗಲಿ ಮಾಡಕೂಡದು. ಚಮ್ಮಾರಿಕೆಯ ಚಿತ್ರವಿಲ್ಲದೆ ಬಾಹುಬಲಿಯನ್ನು ಶಾಂತಿ ಮತ್ತು ಪ್ರೀತಿಯ ಸಂಕೇತವಾಗಿ ತೋರಿಸಲು ಸಾಧ್ಯವಿಲ್ಲವೇ?
            ಚಮ್ಮರಿಕೆಯು ವ್ಯಕ್ತಿಯ ಆಯ್ಕೆಯ
            ಯನ್ನು ವೃತ್ತಿಯಾಗಿ

    • Venkatababu

      Hello Murthy, D Jinesha has protested in a very democratic and peaceful way. Why do you accuse him of being egotistic?!! If you don’t agree with his protest, fine. But to call him egotistic was uncalled for.

  8. Venkatababu

    Artistic freedom must be tempered by great sense of responsibility, judgment, and discreetness. Otherwise artistic freedom becomes artistic voyeurism.

  9. Anonymous

    ಅಹಿಂಸಾ ಧರ್ಮದವರ ಪೂಜ್ಯಮೂರ್ತಿಗಳನ್ನು ಬಿಟ್ಟು, ಜಗತ್ತಿನ ಎಲ್ಲ ಭಯೋತ್ಪಾದಕರ ಧರ್ಮವನ್ನು ಮುಟ್ಟಿ ನೋಡಿ, ಮುಲಾಮು ಸಿಗುತ್ತದೆ.

  10. ಹುಲಿಕುಂಟೆ ಮೂರ್ತಿ

    ಪ್ರಿಯ ಧರಣೇಂದ್ರ… ಚಮ್ಮಾರಿಕೆ ಮೇಲಿನ ತಮ್ಮ ಗೌರವವನ್ನು ನಾನು ಗೌರವಿಸುತ್ತೇನೆ; ಹಾಗು ನೀವು ಕನ್ನಡದಲ್ಲಿ ಬರೆದದ್ದನ್ನೂ… ದಯಮಾಡಿ ನೀವು ಒಮ್ಮೆ ತಮ್ಮ ಧರ್ಮದ ಹೊರಗೆ ಬಂದು ‘ಚಕ್ರರತ್ನ’ ನೋಡಿ; ನಿಮ್ಮ ಮಾತುಗಳಲ್ಲಿರುವ ನನ್ನಿಯನ್ನು ನಿಮ್ಮ ಧರ್ಮ ಸುಡುತ್ತಿದೆ ಅನ್ನಿಸುತ್ತಿದೆ ನನಗೆ. ಇರಲಿ, ನಾವು ಕಳೆದ ಎಷ್ಟೋ ಶತಮಾನಗಳಿಂದ ಮಾಡಿಕೊಂಡು ಬಂದಿರುವ ವೃತ್ತಿಯನ್ನು ಈಗ ಪ್ರಜ್ಞಾಪೂರ್ವಕವಾಗಿ ಮೀರುತ್ತಿದ್ದೇವೆ; ಆದರೆ, ಅದೂ ಒಂದು ವೃತ್ತಿ ಎಂದು ನಿಮ್ಮಂಥವರೇ ಗೌರವಿಸಿದ ಮೇಲೆ ನೀವೆಲ್ಲರೂ ಯಾಕೆ ಒಂದಷ್ಟು ಕಾಲ ಆ ವೃತ್ತಿಯನ್ನು ಮಾಡಬಾರದು..? ಕಾಲಾಂತರಗಳಲ್ಲಿ ಜೈನರೂ ತಮ್ಮ ವೃತ್ತಿಗಳನ್ನು ಎಷ್ಟು ಬದಲಿಸಿಲ್ಲ..? ದಯಮಾಡಿ ನನ್ನ ಮಾತುಗಳನ್ನು ಸೌಜನ್ಯದಿಂದ ಕೇಳಿ.. ಥ್ಯಾಂಕ್ಯೂ.
    ದಯಮಾಡಿ ಕಲೆಯನ್ನು ಮತ್ತದರ ಔಷಧೀಯ ಗುಣವನ್ನು ಧರ್ಮದ ಖಡ್ಗದಿಂದ ಕತ್ತರಿಸಬೇಡಿ..

    • Dharanendra Jinesha

      ಮೂರ್ತಿ ಅವರೇ, ನಿಮ್ಮ ಸಲಹೆ ಚೆನ್ನಾಗಿದೆ. ವೃತ್ತಿ ಯಾವುದಾದರೇನು ಎಲ್ಲವೂ ಕಾಯಕವೇ. ಆದರೆ ಜಿನಮತಸ್ಥರು ಆರ್ಥಿಕವಾಗಿ ಸಾಕಷ್ಟು ಒಳ್ಳೆಯ ಸ್ಥಿತಿಯಲ್ಲಿರುವುದರಿಂದ ಚಮ್ಮಾರಿಕೆ, ಜಾಡ್ಮಾಲಿ, ಪೌರೋಹಿತ್ಯ, ಚಿಂದಿ ಆಯುವಿಕೆ – ಇವೇ ಮೊದಲಾದ ಆರ್ಥಿಕವಾಗಿ ಹಿಂದುಳಿದಿರುವ ವೃತ್ತಿಗಳ ಬಗ್ಗೆ ಒಲವಿಲ್ಲ. ಕಾರು ಡೀಲರ್ ಶಿಪ್ ಮಾಡುವ ವ್ಯಕ್ತಿ ತನ್ನ ಮಕ್ಕಳನ್ನೇಕೆ ಚಪ್ಪಲಿ ಹೊಲಿಯುವ ಕೆಲಸಕ್ಕೆ ಕಳುಹಿಸುತ್ತಾನೆ? ಆತ ಬೇಕಿದ್ದರೆ ಮಕ್ಕಳಿಗೆಂದು ಚಪ್ಪಲಿ ಅಂಗಡಿ ಮಾಲಕತ್ವ ಕೊಡಿಸಬಲ್ಲ! ಸರಕಾರೀ ಆಫಿಸರ್ ಆಗಿರುವಾತ ತನ್ನ ಮಕ್ಕಳು ಎಂಜಿನಿಯರ್, ಎಂ ಬಿ ಎ, ಡಾಕ್ಟರ್ ಆಗಲಿ ಎಂದು ಬಯಸುತ್ತಾನೆ. ಅವನ ಮಕ್ಕಳು ಚಪ್ಪಲಿ ಹೊಲಿದು ಜೀವನ ನಡೆಸ ಬಯಸುತ್ತಾರೆಯೇ?
      ಯಾವಾಗ ಒಂದು ವೃತ್ತಿಯ ಬಗ್ಗೆ ಜನರ ಒಲವು ಕಡಿಮೆಯಾಗುತ್ತದೋ, ಆಗ ಆ ವೃತ್ತಿ ಸಮಾಜದ ದೃಷ್ಟಿಯಲ್ಲಿ ಕೆಳ ಸ್ಥರದ್ದಾಗುತ್ತದೆ. ಬ್ರಾಹ್ಮಣ ಸಮಾಜದಲ್ಲಿ ಒಂದು ಕಾಲದಲ್ಲಿ ಪೌರೋಹಿತ್ಯವು ನಂಬರ್ ೧ ಆಯ್ಕೆ ಆಗಿತ್ತು. ಆದರೆ ಇಂದು ಬ್ರಾಹ್ಮಣರು ಪೌರೋಹಿತ್ಯದ ಬಗ್ಗೆ ಒಲವು ಕಳೆದುಕೊಂಡಿದ್ದಾರೆ. ಅವರ ಮಕ್ಕಳನ್ನು ಪೌರೋಹಿತ್ಯಕ್ಕೆ ಕಳುಹಿಸುತ್ತಿಲ್ಲ. ಹೀಗಾಗಿ ಬ್ರಾಹ್ಮಣ ಸಮಾಜದ ದೃಷ್ಟಿಯಲ್ಲೂ ಪೌರೋಹಿತ್ಯವು ಕೆಳ ಸ್ಥರದ ವೃತ್ತಿ ಆಗಿಬಿಟ್ಟಿದೆ. ಪೌರೋಹಿತ್ಯ ವೃತ್ತಿಯವರಿಗೆ ಹೆಣ್ಣು ಸಿಗುವುದೂ ಕಷ್ಟವಾಗಿದೆ. ಚಮ್ಮಾರ ಜಾತಿಯ ಜನರು ಹೆಚ್ಚು ಹೆಚ್ಚು ವಿದ್ಯಾವಂತರಾಗಿ ನಗರ ಸೇರಿ ಬೇರೆ ವೃತ್ತಿಗಳನ್ನು ಹಿಡಿಯುತ್ತಿದ್ದ ಹಾಗೆ ಚಮ್ಮಾರ ಸಮಾಜದಲ್ಲೂ ಚಮ್ಮಾರಿಕೆ ಬಗ್ಗೆ ಒಲವು ಕಡಿಮೆಯಾಗಿ ಅವರ ದೃಷ್ಟಿಯಲ್ಲೇ ಅದು ಕೆಳಸ್ಥರದ ವೃತ್ತಿ ಆಗಿಬಿಡುತ್ತದೆ. ಇದು ಕ್ರೂರ ಸತ್ಯ.

  11. H L Pushpa

    ಹುಲಿಕುಂಟೆಮೂರ್ತಿ ಮತ್ತು ಇತರರ ಚಕ್ರರತ್ನ ಕುರಿತಾದ ವಿವಾದಗಳನ್ನು ಗಮನಸಿದ್ದೇನೆ. ಕಾಯಕ ಮತ್ತು ಆ ಕಾಯಕದ ಗೌರವ ಕುರಿತಾದ ಚರ್ಚೆಗಳು ಸರ್ವಸಮ್ಮತವಾಗಿಯೇ ನಡೆದಿವೆ. ಕುಲ ಮುಖ್ಯವಲ್ಲ, ಕುಲವನ್ನು ಮೆಟ್ಟಿ ಪಡೆಯುವ ಹಿರಿಮೆ ಮುಖ್ಯವಾದುದು. ಕೆಲವು ದೈವಗಳು ಕುರುಬನಾಗಿಯೂ, ಬ್ರಾಹ್ಮಣನಾಗಿಯೂ, ಇಸ್ಲಾಂ ಧರ್ಮಕ್ಕೆ ಸೇರಿಯೋ ಜನಿಸಿರುತ್ತಾರೆ. ಆ ಕುಲದ ಗರಿಮೆಯನ್ನು ಎತ್ತಿ ಹಿಡಿಯುತ್ತಾರೆ. ಯಾವ ದೈವ ತನ್ನ ಧರ್ಮದ ಸಂಕೋಲೆಗಳನ್ನು ಕಳಚಿ ಜನಸಾಮಾನ್ಯರಿಗೆ ಹತ್ತಿರವಾಗುತ್ತದೋ ಆಗ ಅದು ಜೀವಂತವಾಗುತ್ತದೆ. ಇದು ಜನಸಾಮಾನ್ಯರ ಕಾಲ, ದೇವತೆಗಳನ್ನು ತಮ್ಮ ಜೀವನದ ನಡುವೆ ನಿಲ್ಲಿಸಿಕೊಳ್ಳುವ ಕಾಲ. ದೇವತೆಗಳು ಕೂಡ ಅನಿವಾರ್ಯವಾಗಿ ತಮ್ಮ ಉಡುಗೆ ತೊಡುಗೆಗಳನ್ನು ಕಳಚಿ ಜನರ ಮಧ್ಯಕ್ಕೆ ಬರಬೇಕಾಗುತ್ತದೆ. ಹರಿದುಹೋದ ಮನುಷ್ಯ ಸಂಭಂಧಗಳನ್ನು ಕೂಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೇ.ವೈ ಅವರ ಚಮ್ಮಾರನ ಕಲ್ಪನೆ ಅರ್ಥಪೂರ್ಣವಾದದ್ದು.
    ಹಿಂದೆ ಶಂಭೂಕನನ್ನು ಕುರಿತು ಮಾಸ್ತಿ ಮತ್ತು ಕುವೆಂಪು ಅವರ ನಡುವೆ ನಡೆದ ಚರ್ಚೆಗಳು ಈಗ ನೆನಪಾಗುತ್ತಿವೆ.

  12. Dayananda Gowda

    ಮಾನ್ಯ ಧರಣೇಂದ್ರ ರವರೇ, ಕನ್ನಡ ವಾಹಿನಿಗಳಲ್ಲಿ ಸಮಾಜದ ಕೆಳಸ್ಥರದ ಬದುಕಿನ ಬಗ್ಗೆ ಬಾರದಿದ್ದ ಮಾತ್ರಕ್ಕೆ ಈ ದೇಶದಲ್ಲಿ ಕೆಳಸ್ಥರದ ಬದುಕೇ ಇಲ್ಲವೇ? ಕನ್ನಡ ವಾಹಿನಿಯಲ್ಲಿ ತೋರಿಸದಿದ್ದ ಮಾತ್ರಕ್ಕೆ ಬೇರೆ ಯಾರೂ ಅದನ್ನು ತೋರಿಸಬಾರದೇ? ಪ್ರತಿಯೊಬ್ಬ ಬರಹಗಾರನಿಗೂ ಅವನದೇ ಆದ ಸ್ವಾತಂತ್ರ್ಯ ಇದೆ… ಕೆ.ವೈ.ಎನ್. ರವರ ಕೃತಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ….ಮೊದಲು ನಾಟಕ ನೋಡಿ ಆಮೇಲೆ ಅದರ ಬಗ್ಗೆ ವಿಮರ್ಷೆ ಮಾಡಿ…. ನೀವು ಹೇಳಿದಂತೆ ನಮ್ಮ ಮಕ್ಕಳನ್ನ ಚಮ್ಮಾರಿಕೆಗೆ ಕಳುಹಿಸಿದ ಮಾತ್ರಕ್ಕೆ ನಿಮ್ಮ ನೋಟ ಬದಲಾಗುತ್ತದೆಯಾ? ಅವರನ್ನೂ ಒಬ್ಬ ಚಮ್ಮಾರನನ್ನಾಗಿ ನೋಡುತ್ತೀರಿ ಅಷ್ಟೆ….

  13. Dr. Shivappa R

    Dear Friends, I have seen the play. Today only I have read the readings of Hulikuntemurthy and Dharanendra and others. Wonderful discussions. KYN’s creative work is creating healthy space for healthy discussions and helping sensitive people to understand the sutler feelings and opinions of people on already constructed images. Of-course, any construction has to be reconstructed over a period of time. we are in the process age not in the static age. I like this discussion should happen.
    Shivappa R

  14. ಎನ್.ನಾರಾಯಣಸ್ವಾಮಿ.

    ಮಹಾ ಶಿಲ್ಪಿ ಕೂಡ ಮಹಾ ಚಮ್ಮಾರನಿದ್ದಂತೆ,ಯಾವುದೋ ಒಂದು ಕೆಲಸಕ್ಕೇ ಭಾರದ ಚರ್ಮವನ್ನು ಜಗಡೊಡರೆಯೆ ಮೆಚ್ಚುವಂತ ಚಪ್ಪಲಿಯನ್ನಾಗಿ ಪರಿವರ್ತಿಸುವ ಕಲೆ ಸಾಮಾನ್ಯವೇನಲ್ಲ.ಅದರಂತೆ ಗೆಳೆಯ ಕೆ.ವೈ.ನಾರಾಯಣಸ್ವಾಮಿಯವರು ಮಹಾ ಮಾನವತಾವಾದಿಯೊಬ್ಬನ ಕಥೆಯನ್ನು ಎಕ್ಕಿ,ಅದಕ್ಕೆ ಚಮ್ಮಾರನ ರೂಪದಲ್ಲಿ ಜನಮೆಚ್ಚುವಂತೆ ನಾಟಕ ರೂಪಿಸಿದ್ದಾರೆ.ನಿಜವಾಗಲೂ ಇದು ಮೆಚ್ಚುವ ಕೆಲಸವೆ.ಏಕೆಂದರೆ ಬಾಹುಬಲಿಯ ಬಗ್ಗೆ ಇರುವ ನಾಟಕದ ರೂಪದ ಪರಿಕರಗಳು ಕಡಿಮೆ ಅದರಲ್ಲೂ ಅದುನಿಕ ಜಗತ್ತಿಗೆ ಬಾಹುಬಲಿಯಂತ ನಾಟಕಗಳು ಅಗತ್ಯವೂ ಇದೆ.ಈಗಿನ ಅಧುನಿಕ ಜಗತ್ತಿನ ಯುದ್ದದಾಹ ಅದುನಿಕವಾಗಿ ಅಮೇರಿಕದ ಕಾಲೆಳೆಯುವ ತಂತ್ರಗಳೂ,ಇವೆಲ್ಲಕ್ಕೂ ಮದ್ದು ಮಾನವೀಯ ಮೂರ್ತಿಯೊಬ್ಬನ ಯಶೋಗಾಥೆಯ ನಾಟಕ.
    ಸದಾ ವ್ಯಾಪಾರಮನೋಬೂಮಿಕೆಯಿಂದಲೇ ಎಲ್ಲವನ್ನೂ ನೋಡುವ ಜೈನ ಸಮುದಾಯಕ್ಕೆ ಎದೆಲ್ಲಾ ಅರ್ಥವಾಗುವುದು ಕಷ್ಟ.ಅದೂ ಅಲ್ಲದೆ ಲಾಭ ಸಿಗುತ್ತದೆ ಎಂದರೆ ಚಪ್ಪಲಿಯನ್ನು ಮಾರಲು ತಯಾರಗಿರುವವರು.ನಾಟಕವನ್ನು ತಿರಸ್ಕರಿಸುವುದೆಂದರೆ ನಂಬಲು ಸಾದ್ಯವಿಲ್ಲ.ೆದರಲ್ಲಿ ಯಾರಾದರೂ ಬುದ್ದಿವಂತರ ಕೈವಾಡವಿರಬಹುದೇ?ಎಂಬುದು ಸಂಶಯಾಸ್ಪಸದ.ಆದ್ದರಿಂದ ವಿವರವಾದ ಚರ್ಚಾವಿದಾನದ ಮುಖಾಂತರ ಅವರಲ್ಲಿರುವ ಅಜ್ಞಾನವೂ ದೂರವಾಗಬಹುದು

  15. ಸಂಜೀವ್ ದೊರೆ

    ನಾನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕ ನೋಡಿದೆ… ಇದನ್ನು ನೋಡಿದ ಮೇಲೆ ನಿಜಕ್ಕೂ ನನಗೆ ಬಾಹುಬಲಿಯ ಮೇಲೆ ಪ್ರೀತಿ ಬೆಳೆಯಿತು. ಈಗ ಗೆಳೆಯರೊಬ್ಬರ ಸಹಾಯದಿಂದ ಪಂಪ ಕವಿಯ ‘ಆದಿಪುರಾಣ’ ಓದುತ್ತಿರುವೆ.

  16. Anonymous

    Hunnu maadidavaru haagu keredavarannu kelidare olitadeetallave?

Trackbacks/Pingbacks

  1. Industrial Contractors - Industrial Contractors Go here for the top Tenant Improvement currently in service anywhere plus reasonably priced.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading