ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಹೊಸ ನಿರ್ದೇಶಕರ ಚಿತ್ರೋತ್ಸವ

ಹೊಸ ನಿರ್ದೇಶಕರ ಚಿತ್ರಗಳ ಚಿತ್ರೋತ್ಸವ


ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ ಟೈಂ ಅಂಡ್ ಸ್ಪೇಸ್ ಚಲನಚಿತ್ರ ಶಾಲೆಯ ಸಹಯೋಗದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೆರೆಕಂಡು ಪ್ರೇಕ್ಷಕರ ಮನ್ನಣೆ ಗಳಿಸಿದ ನಾಲ್ಕು ಹೊಸ ನಿರ್ದೇಶಕರ ಕನ್ನಡ ಚಿತ್ರಗಳ ಉತ್ಸವವನ್ನು ಹಮ್ಮಿಕೊಂಡಿದೆ. ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸುವ ಈ ಚಿತ್ರೋತ್ಸವ ಡಿಸೆಂಬರ್ 21ರಿಂದ ನಾಲ್ಕು ಭಾನುವಾರ ನಡೆಯಲಿದೆ. ಪ್ರತಿ ಚಿತ್ರ ಪ್ರದರ್ಶನದ ನಂತರ ನಿರ್ದೇಶಕರೊಂದಿಗೆ ಪ್ರೇಕ್ಷಕರ ಸಂವಾದ ಇರುತ್ತದೆ. ಅಲ್ಲದೇ, ಯುವ ಪ್ರೇಕ್ಷಕರಿಂದ ಚಿತ್ರಗಳ ವಿಮರ್ಶೆಗಳನ್ನು ಆಹ್ವಾನಿಸಲಾಗಿದ್ದು, ಎರಡು ಅತ್ಯುತ್ತಮ ಬರಹಗಳಿಗೆ ಪ್ರೋತ್ಸಾಹಕ ಬಹುಮಾನಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಶಂಸಾಪತ್ರಗಳನ್ನು ನೀಡಿ ಉತ್ತೇಜಿಸಲಾಗುತ್ತದೆ. ಜನವರಿ 18ರಂದು ನಡೆಯುವ ನಾಲ್ಕೂ ಚಿತ್ರಗಳ ಕುರಿತ ವಿಚಾರ ಸಂಕಿರಣದಲ್ಲಿ ಗಿರೀಶ್ ಕಾಸರವಳ್ಳಿ, ಮನು ಚಕ್ರವರ್ತಿ, ಕಲಾ ವಿಮರ್ಶಕ ಅನಿಲ್ ಕುಮಾರ್, ಬಸಂತಕುಮಾರ್ ಪಾಟೀಲ್, ವಿದ್ಯಾಶಂಕರ್, ಗೋಪಾಲಕೃಷ್ಣ ಪೈ, ಕೇಸರಿ ಹರವೂ, ಎನ್. ಎಸ್. ಶ್ರೀಧರಮೂರ್ತಿ, ಬಿ.ಎಂ. ಹನೀಫ್, ಮುಂತಾದ ನಿರ್ದೇಶಕರು, ನಿರ್ಮಾಪಕರು ಮತ್ತು ವಿಮರ್ಶಕರು ಪಾಲ್ಗೊಳ್ಳಲಿದ್ದಾರೆ. ಉಚಿತ ಪ್ರವೇಶ ಹಾಗೂ ವಿಮರ್ಶಾ ಸ್ಪರ್ಧೆಯಲ್ಲಿ ಭಾಗವಹಿಸಿವುದಕ್ಕೆ ಮುಂಗಡವಾಗಿ ನೋಂದಾಯಿಸಿಕೊಳ್ಳಬೇಕಿರುತ್ತದೆ. ಸಂಪರ್ಕ ಸಂಖ್ಯೆಗಳು: 8892795666 / 9945342433
 
ಚಿತ್ರಗಳ ಪ್ರದರ್ಶನ ವೇಳಾಪಟ್ಟಿ:
ಡಿಸೆಂಬರ್ 28: ಅಗಸೀ ಪಾರ್ಲರ್


ನಿ: ಮಹಾಂತೇಶ್ ರಾಂದುರ್ಗಾ
ಜನವರಿ 04: ಹರಿವು


ನಿ: ಮಂಜುನಾಥ ಮನ್ಸೂರೆ
ಜನವರಿ 11: ಅತ್ತಿಹಣ್ಣು ಮತ್ತು ಕಣಜ


ನಿ: ಪ್ರಕಾಶ್ ಬಾಬು
 

ಸಮಯ: ಪ್ರತೀ ಭಾನುವಾರ ಸಂಜೆ 5.30ಕ್ಕೆ

ಜನವರಿ 18: ಮದ್ಯಾನ್ಹ 3ಕ್ಕೆ ವಿಚಾರ ಸಂಕಿರಣ ಹಾಗೂ ಸಮಾರೋಪ

ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ,

ನಂ 151, 7ನೇ ಅಡ್ಡರಸ್ತೆ, ಟೀಚರ್ಸ್ ಕಾಲೋನಿ 1ನೇ ಹಂತ, ದಯಾನಂದ ಕಾಲೇಜು ಬಳಿ, ವಸುಧಾ ಭವನದ ಎದುರು, ಬೆಂಗಳೂರು 560078

‍ಲೇಖಕರು G

24 December, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading