ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಪಿ ಮೃತ್ಯಂಜಯ ಅವರಿಗೆ 2013 ರ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ

ಕಾವ್ಯವನ್ನು ಉಸಿರಾಗಿಸಿಕೊಂಡಿದ್ದ ಕವಯಿತ್ರಿ ವಿಭಾ ನೆನಪಿನಲ್ಲಿ ಲಡಾಯಿ ಪ್ರಕಾಶನ ನಡೆಸುವ

2013 ರ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಕೆ ಪಿ ಮೃತ್ಯಂಜಯ ಅವರ ‘ನನ್ನ ಶಬ್ಧ ನಿನ್ನಲಿ ಬಂದು’ ಹಸ್ತಪ್ರತಿ ಕವನ ಸಂಕಲನಕ್ಕೆ ದೊರೆತಿದೆ.


ಪ್ರಶಸ್ತಿಯು 5000 ರೂ ನಗದು ಮತ್ತು ಪಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪಡೆದ ಕೃತಿಯನ್ನು ಲಡಾಯಿ ಪ್ರಕಾಶನ ಪ್ರಕಟಿಸುವುದು.
ಸಂಸ್ಕೃತಿ ಚಿಂತಕರಾದ ಡಾ. ಎಸ್ ನಟರಾಜ ಬೂದಾಳ ಮತ್ತು ಕವಯಿತ್ರಿ ಎಂ. ಆರ್ ಕಮಲಾ ಅವರು ತೀರ್ಪುಗಾರರಾಗಿದ್ದರು. ಸುನಂದಾ ಮತ್ತು ಪ್ರಕಾಶ ಕಡಮೆ ಅವರು ವಿಭಾ ಸಾಹಿತ್ಯ ಪ್ರಶಸ್ತಿಯ ಸಂಚಾಲಕರಾಗಿದ್ದಾರೆ
ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ
ಪ್ರಶಸ್ತಿ ಪಡೆದ ಕೆ.ಪಿ. ಮೃತ್ಯುಂಜಯ ಮೂಲತಃ ತುಮಕೂರು ಜಿಲ್ಲೆಯವರು. ಎರಡು ದಶಕಗಳ ಕಾಲ ಪತ್ರಕರ್ತರಾಗಿ ಕ್ರಿಯಾಶೀಲರಾಗಿದ್ದ ಈ ಕವಿಯೀಗ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವುದು ಮುದ್ದಣನ ನಾಡಾದ ಕಾರ್ಕಳದ ಬಜಗೋಳಿಯಲ್ಲಿ.
ಈ ತನಕ ಅವರ ಐದು ಕವಿತಾ ಸಂಕಲನಗಳು ಪ್ರಕಟವಾಗಿವೆ. ‘ನನ್ನ ಶಬ್ಧ ನಿನ್ನಲಿ ಬಂದು’ ಆರನೇ ಕೃತಿ .
’ಒಂದು ಅನುರಾಗಕ್ಕಾಗಿ ಎಷ್ಟೆಲ್ಲ’ ಕೃತಿಗೆ ’ಮುದ್ದಣ ಕಾವ್ಯ ಪುರಸ್ಕಾರ’ ಲಭಿಸಿದೆ. ೨೦೦೦ದಲ್ಲಿ ’ಮರ್ತ್ಯ ಮೀರದ ಮಾತು’, ೨೦೦೨ರಲ್ಲಿ ’ಎಲೆ ಎಸೆದ ಮರ’, ೨೦೦೪ರಲ್ಲಿ ’ಅವರವರ ಸಾವು’ ಹಾಗೂ ೨೦೧೦ರಲ್ಲಿ ’ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು’ ಕವನ ಸಂಕಲನಗಳು ಪ್ರಕಟವಾಗಿವೆ. ’ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ’, ’ಕನ್ನಡ ಸಾಹಿತ್ಯ ಪರಿಷತ್ ಕಥಾ ಸ್ಪರ್ಧೆ’ಗಳಲ್ಲಿ ವಿಜೇತರು.
ಅವರ ಎರಡನೇ ಕವನ ಸಂಕಲನ ’ಮರ್ತ್ಯ ಮೀರದ ಮಾತು’ವಿಗೆ ಅಂಕೋಲದ ಡಾ|| ದಿನಕರ ದೇಸಾಯಿ ಪ್ರತಿಷ್ಠಾನದ ’ಡಾ|| ದಿನಕರ ದೇಸಾಯಿ ಕಾವ್ಯ ಪುರಸ್ಕಾರ’ ಹಾಗೂ ಮಂಡ್ಯದ ಕನ್ನಡ ಸಾಹಿತ್ಯ ಪರಿಷತ್‌ನ ’ಎಂ.ಎಲ್. ಶ್ರೀಕಂಠೇಶಗೌಡ ಸಾಹಿತ್ಯ ಪ್ರಶಸ್ತಿ’ದೊರೆತಿದೆ. ಮೂರನೇ ಕವನ ಸಂಕಲನ ’ಎಲೆ ಎಸೆದ ಮರ’ಕ್ಕೆ ತುಮಕೂರಿನ ’ವೀಚಿ ಸಾಹಿತ್ಯ ಪ್ರತಿಷ್ಠಾನ’ದ ’ವೀಚಿ ಸಾಹಿತ್ಯ ಪ್ರಶಸ್ತಿ’ ಗಳಿಸಿದ್ದಾರೆ.
’ಅವರವರ ಸಾವು’ ಎಂಬ ನಾಲ್ಕನೇ ಕೃತಿಗೆ ಬೆಂಗಳೂರಿನ ’ಎಂ.ಜಿ. ರಂಗನಾಥನ್ ಸ್ಮಾರಕ ಪುಸ್ತಕ ಬಹುಮಾನ ವಿಶೇಷ ಪ್ರಶಸ್ತಿ’ ಹಾಗೂ ’ಹೂಗಾರ್ ಸ್ಮಾರಕ ಸಾಹಿತ್ಯ ಪ್ರಶಸ್ತಿ’ ಪಡೆದಿದ್ದಾರೆ. ಐದನೇ ಸಂಕಲನ ’ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು’ವಿಗೆ ’ಶೂದ್ರ’ ಸಾಹಿತ್ಯಕ ಪತ್ರಿಕೆಯ ’ಡಾ. ಜಿ.ಎಸ್. ಶಿವರುದ್ರಪ್ಪ ಕಾವ್ಯ ಪುರಸ್ಕಾರ’ವನ್ನು ಪಡೆದುಕೊಂಡಿದ್ದಾರೆ.
 

‍ಲೇಖಕರು G

27 September, 2013

13 Comments

  1. ಪ್ರವೀಣ

    ಕೆ.ಪಿ. ಮೃತ್ಯುಂಜಯ ಅವರಿಗೆ ಅಭಿನಂದನೆಗಳು.

    • Anonymous

      kannadada moulika prashastige bhajanaragiruvdu santas aabhinandanegalu

  2. srujan

    k,p.mrutyunjaya avarige congratulations.

  3. ಅರುಣ್ ಜೋಳದಕೂಡ್ಲಿಗಿ

    ಮೃತ್ಯುಂಜಯ ಅವರಿಗೆ ಅಭಿನಂದನೆಗಳು. ವಿಭಾ ಪ್ರಶಸ್ತಿಗೆ ನ್ಯಾಯ ಒದಗಿಸಿದಂತಿದೆ.

  4. mmshaik

    abhinandanegaLu

  5. Suryakant S.Teli

    ಕವಿ ಮೃತ್ಯುಂಜಯ ಅವರಿಗೆ ಅಭಿನಂದನೆಗಳು.

  6. ಡಾ.ಪ್ರಕಾಶ ಗ.ಖಾಡೆ

    ಕೆ.ಪಿ.ಮೃತ್ಯುಂಜಯ ಅವರಿಗೆ ಅಭಿನಂದನೆಗಳು.

  7. ಹನುಮಂತ ಹಾಲಿಗೇರಿ

    ಅಭಿನಂದನೆಗಳು ಸರ್‍

  8. nagraj.harapanahalli

    ಕಾವ್ಯದ ಮೂಲಕ ಬದುಕನ್ನೇ ಗೆದ್ದೀದ್ದೀರಿ. ಅಭಿನಂದನೆಗಳು.

  9. ಕೃಷ್ಣೇಗೌಡ ಟಿ.ಎಲ್.

    ಅಭಿನಂದನೆಗಳು…

  10. ಸಂತೋಷ ಗುಡ್ಡಿಯಂಗಡಿ

    ಮೃತ್ಯುಂಜಯ ಅವರಿಗೆ ಅಭಿನಂದನೆಗಳು.

  11. Anonymous

    Seeing you after a long time over net. Congratulations . You offered me a launching pad to become a writer while you were in Andolana Mandya. Great to see you being awarded. Call 9448585755
    NA DIVAKAR

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading