ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಟಿ ಶಿವಪ್ರಸಾದ್ ಹಾಗೂ ಸುದರ್ಶನ್ ಕಾರ್ಲೆ ಜೊತೆ…

ಸಿ ಸುವರ್ಣ ವರ್ಣ

ಒಂದಷ್ಟು ತಿಂಗಳ ಹಿಂದೆ ನಾನು ಕೆ.ಟಿ. ಶಿವಪ್ರಸಾದ್ ಹಾಗೂ ಅವರ ಸಹೋದರರಾದ ಸುದರ್ಶನ್ ಕಾರ್ಲೆ ಹೀಗೆ ಮನೆಯಲ್ಲಿ ಮಾತಾನಾಡ್ತಾ ಇರೋವಾಗ ಅವರು ತಾವು ಗಾರ್ಮೆಂಟ್ ಉದ್ಯಮ ಆರಂಭಿಸಿದ ಬಗ್ಗೆ ನಮ್ಮೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಆರಂಭದಲ್ಲಿ ಒಂಬತ್ತು ಸಾವಿರ ಕಾರ್ಮಿಕರು ನಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲೂ ಮಹಿಳೆಯರಿಗೆ ಅಲ್ಲಿ ಹೆಚ್ಚು ಉದ್ಯೋಗ ಅವಕಾಶವನ್ನ ಕಲ್ಪಿಸಲಾಗಿತ್ತು ಎಂದು ಹೇಳುತ್ತಾ ಕಂಪನಿಯಲ್ಲಿ ದುಡಿದ ಕಾರ್ಮಿಕರ ಮಕ್ಕಳು ಇಂದು ಒಳ್ಳೆಯ ವಿದ್ಯಾವಂತರಾಗಿ ಡಾಕ್ಟರ್, ಇಂಜಿನಿಯರ್, ಅಧಿಕಾರಿಗಳಾಗಿದ್ದಾರೆ. ಅವರ ಕುಟುಂಬ ಒಳ್ಳೆಯ ಜೀವನ‌ ನಡೆಸುತ್ತಿದ್ದಾರೆ.

ಒಂದು ಕಂಪನಿ ತೆರೆದರೆ ಎಷ್ಟೋ ಮಂದಿಗೆ ಉದ್ಯೋಗಾವಕಾಶ ಸಿಗುತ್ತದೆ. ಕೇವಲ ಮಾಲೀಕರ ಬದುಕಷ್ಟೇ ಹಸನಾಗುವುದಿಲ್ಲ. ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಬದುಕು ಅವರ ಕುಟುಂಬದವರ ಬದುಕು ಕೂಡ ಚೆನ್ನಾಗಿರುತ್ತದೆ ಎಂದರು

ಒಂದು ದಿನ ಒಬ್ಬ ಇಂಜಿನಿಯರ್ ಸುದರ್ಶನ್ ಅವರನ್ನು ಭೇಟಿ ಮಾಡಿ ಮಾತನಾಡುತ್ತಾ ಹೀಗೆ ಹೇಳಿದರಂತೆ, ‘ಸರ್ ನಿಮ್ಮ ಗಾರ್ಮೆಂಟ್ಸ್‌ನ್ನು ನಾನು ಒಂದನೇ ತರಗತಿಯಿಂದಲೂ ನೋಡುತ್ತಿದ್ದೆನೆ. ನಿಮ್ಮ ಕಂಪನಿ ನ‌ನ್ನ ತಾಯಿಯ ಬದುಕು ಅಷ್ಟೇ ರೂಪಿಸಿಲ್ಲ ಸಾರ್ ನನ್ನ ಬದುಕನ್ನೂ ಕೂಡ ರೂಪಿಸಿದೆ. ಈ ಕಂಪನಿಯನ್ನು ನಾನೂ ಎಂದಿಗೂ ಮರೆಯಲೂ ಸಾಧ್ಯ ವಿಲ್ಲ. ನಮ್ಮ ತಾಯಿ ನಿಮ್ಮ ಕಂಪನಿಯಲ್ಲಿ ಕೆಲಸ ಮಾಡಿ ನನ್ನ ಇಂಜಿನಿಯರಿಂಗ್ ಪದವಿ ಓದಿಸಿದರು. ನಿಮ್ಮ ಕಂಪನಿ ಇಲ್ಲದಿದ್ದರೇ ನಾನು ಇಂದು ಇಂಜಿನಿಯರ್ ಆಗಲು‌ ಸಾಧ್ಯವಾಗುತ್ತಿರಲಿಲ್ಲ ಸರ್.’ ‌ಎಂದು ಹೇಳಿ ಕೃತಜ್ಞತೆಯನ್ನು ಸಲ್ಲಿಸಿದರಂತೆ ಅವರು ‌ಹೇಳಿದಾಗ ನನಗೆ ಬಹಳ ಖುಷಿ ಆಯ್ತು.

ನಾನು‌ ಉದ್ಯಮ ಆರಂಭಿಸಿದ್ದಕ್ಕೆ ಸಾರ್ಥಕ ಆಯ್ತು ಎಂದು ಸುದರ್ಶನ್ ತಮ್ಮ ಖುಷಿಯನ್ನು‌ ನಮ್ಮೊಂದಿಗೆ ಹಂಚಿಕೊಂಡರು. ಇವರ ಮಾತಿನಲ್ಲಿ ನಿಜಕ್ಕೂ ಅರ್ಥ ಇದೆ. ಇಂದು ಎಷ್ಟೋ ಮಂದಿ ‌ಯುವಕರು ‌ನಿರುದ್ಯೋಗಿಗಳಾಗಿ ಸಂಕಷ್ಟದಲ್ಲಿದ್ದಾರೆ. ಅವರಿಗೆ ಉದ್ಯೋಗ ಸಿಗಬೇಕೆಂದರೆ ಹೆಚ್ಚು ಹೆಚ್ಚು ಕೈಗಾರಿಕೆಗಳು ಆರಂಭವಾಗಬೇಕು ಅಲ್ಲವಾ ಇಂದು ಹಾಸನ ಜಿಲ್ಲೆಯ ಒಂದು ಪುಟ್ಟ ಗ್ರಾಮ ಕಾರ್ಲೆ ‌ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾಗಿರುವುದು ಹಾಸನ ಜಿಲ್ಲೆಗೆ ಹೆಮ್ಮೆ.

‍ಲೇಖಕರು Avadhi

25 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading