
ಪ್ರೊ. ಬಿ.ಜಿ.ಎಲ್.ಸ್ವಾಮಿಯವರ ‘ಗಾರ್ದಭ ಪುರಾಣ’ ನಾಟಕ ಪ್ರದರ್ಶನ
ಜುಲೈ 4, 2015 ಶನಿವಾರ ಸಂಜೆ 07.30ಕ್ಕೆ, ಹನುಮಂತ ನಗರದ ಕೆ.ಎಚ್.ಕಲಾಸೌಧದಲ್ಲಿ
ರಂಗ ವಿಸ್ಮಯ ಅಭಿನಯಿಸುವ ‘ಗಾರ್ದಭ ಪುರಾಣ’ ಹಾಸ್ಯ ನಾಟಕ ಪ್ರರ್ದಶನವಿದೆ.

ಡಿ.ವಿ.ಜಿ. ಪುತ್ರ ಖ್ಯಾತ ವಿಜ್ಞಾನಿ/ಸಾಹಿತಿ ಪ್ರೊ. ಬಿಜಿ.ಎಲ್.ಸ್ವಾಮಿಯವರ, ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ಪುರಸ್ಕೃತ ‘ಹಸಿರು ಹೊನ್ನು’ ಕೃತಿಯಿಂದ ಆಯ್ದ ರಂಜನೀಯ ಪ್ರಸಂಗವೊಂದರ
ರಂಗರೂಪವಿದು. ಆಡಳಿತ ವ್ಯವಸ್ಥೆಯ ಅಸಹಕಾರ, ಅಧಿಕಾರಶಾಹಿ ಧೋರಣೆ, ಪಕ್ಷಪಾತ
ಮನೋಭಾವ, ರಾಜಕೀಯ ಅನುಮಾನ ದೃಷ್ಟಿಗಳನ್ನು, ಸ್ವಾಮಿಯವರು ಇಲ್ಲಿ ವಿಡಂಬನಾತ್ಮಕವಾಗಿ
ವಿಶ್ಲೇಶಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಸ್ವಾಮಿಯವರು
ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂಶೋದಕರಾಗಿ/ಸಹ ಪ್ರಾಧ್ಯಾಕರಾಗಿ ಸೇವೆ
ಸಲ್ಲಿಸಿದರು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಧಾನ ಪ್ರಾಧ್ಯಾಪಕ ಹಾಗೂ ಪ್ರಿನ್ಸಿಪಾಲರಾಗಿ
ದುಡಿಯುತ್ತಾ ತಮ್ಮ ಮುನ್ನೂರಕ್ಕೂ ಹೆಚ್ಚು ಸಂಶೋಧನೆಗಳನ್ನು ಪ್ರಚುರಪಡಿಸಿದ್ದರು. ವಿಜ್ಷಾನ ಮತ್ತು
ಸಾಹಿತ್ಯ ಕುರಿತಾದ ಅವರ ಕೃತಿಗಳೆಲ್ಲವೂ ಅಪೂರ್ವವಾದುವು. ‘ಅಮೆರಿಕದಲ್ಲಿ ನಾನು’ ಮತ್ತು
‘ಹಸಿರು ಹೊನ್ನು’ ಕೃತಿಗಳಿಗೆ ಕ್ರಮವಾಗಿ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು
ಪಡೆದಿದ್ದಾರೆ. 1978ರಲ್ಲಿ ನಿವೃತ್ತರಾದ ಸ್ವಾಮಿಯವರು, ನಂತರ ಮೈಸೂರು ವಿಶ್ವವಿದ್ಯಾನಿಲಯದ
ಸಂದರ್ಶನ ಪ್ರಾಧ್ಯಾಪಕರಾಗಿದ್ದಾಗಲೇ 1981ರಲ್ಲಿ ಹಠಾತ್ತಾಗಿ ತಮ್ಮ ಜೀವನ ಯಾತ್ರೆ ಮುಗಿಸಿದರು.
ಈ ನಾಟಕದ ವಿನ್ಯಾಸ/ರಂಗರೂಪ/ನಿರ್ದೇಶನ ಅ.ನಾ.ರಾವ್ ಜಾದವ್.
ಕೆ ಎಚ್ ಕಲಾಸೌಧದಲ್ಲಿ ’ಗಾರ್ದಭ ಪುರಾಣ’
ನಿಮಗೆ ಇವೂ ಇಷ್ಟವಾಗಬಹುದು…




0 Comments