ಕೃಷ್ಣನಿಗೆ ಹೀಗೆ, ರಾಧೆಗೆ ಇನ್ಹೇಗೋ….

ಎನ್ವೀ  ವೈದ್ಯ ಹೆಗ್ಗಾರ್

ಮಲಗುವ ಕೋಣೆಯಲ್ಲಿ ರಾಧೆ ಕೃಷ್ಣರ ಫೋಟೊ ಬೇಡ – ಇದು ಅವಳ ಮೊದಲ ಕೋರಿಕೆ.
ಯಾಕೆ ಬೇಡ? – ಕೇಳಲಿಲ್ಲ ಅವನು. ಅವಳೇ ಹೇಳಿದಳು.
ಅವರಿಬ್ಬರೂ ಪ್ರೇಮಿಗಳು. . . ಆ ಉತ್ಕಟತೆಯ ರೂಪಕಗಳು ನಮ್ಮೊಡನಿರಲು ಯಾವುದೇ ಅಭ್ಯಂತರವಿಲ್ಲ. . . ಆದರೆ ಕೃಷ್ಣ ಅವಳನ್ನು ಬಿಟ್ಟು ಹೋಗುತ್ತಾನೆ. ರಾಧೆಗೆ ವಿರಹವೊಂದೇ…
ಮಾತಾಡುತ್ತಿದ್ದವಳ ಕಣ್ಣಲ್ಲಿ ಸಣ್ಣ ಜಿನುಗು.
ಅವನೂ ಕಂಪಿಸುತ್ತಾನೆ.
ಪರಸ್ಪರ ಬಿಗಿಯಾಗಿ ಕೈ ಹಿಡಿದುಕೊಳ್ಳುತ್ತಾರೆ. ಯಾವತ್ತೂ ಬಿಟ್ಟು ಹೋಗಲಾರೆ ಎಂಬರ್ಥದಲ್ಲಿ ಅವನು. . . ಬಿಟ್ಟು ಹೋಗಬೇಡ್ವೋ ಮೂದೇವಿ. . . ಎಂಬರ್ಥದಲ್ಲಿ ಅವಳು ಮತ್ತಷ್ಟು ಕೈ ಬಿಗಿಯುತ್ತಾಳೆ.
ಮೊದಲ ರಾತ್ರಿ ಹಾಗೆ ಕಳೆಯುತ್ತದೆ.
ಗೋಡೆಗೊರಗಿಕೊಂಡಿದ್ದ ಕೃಷ್ಣ ರಾಧೆಯರು ಕೋಣೆಯಿಂದ ಹೊರಗೆ ಪ್ರೇಮಿನ ಒಳಗೆ ಬಂಧಿ. . .
ಕಾಲಾಂತರದಲ್ಲಿ,
ಅವಳು ಕುದಿಯುತ್ತಾಳೆ. ಅವನೂ…
ಅವನು ರಾಜಿಯಾಗುತ್ತಾನೆ. ಅವಳೂ. .
ಮತ್ತೆ ಮತ್ತೆ ಇದೇ
ಇದೇ ಮತ್ತೆ ಮತ್ತೆ…
ಅಸಹನೆಯಲ್ಲೆ ದಿನ ರಾತ್ರಿಗಳು ಬರಿದಾಗುತ್ತಾ. . ಬದಲಾಗುತ್ತಾ. . ಹೊಸತಾಗುವ ಮುನ್ನವೇ ಹಳತಾಗುತ್ತಾ ಹಳಸುತ್ತಿರುವ ಹೊತ್ತಲ್ಲಿ ಇಬ್ಬರಿಗೂ, ಕೋಣೆಯಿಂದ ಹೊರಗಟ್ಟಿದ ಕೃಷ್ಣ ರಾಧೆ ನೆನಪಾಗುವುದೇ ಇಲ್ಲ. ಚಿತ್ರದಲ್ಲಿರುವ ರಾಧೆ ಕಾಯುತ್ತಾಳೆ. ಕೃಷ್ಣ ಕಾಡುತ್ತಾನೆ. . ಪ್ರೇಮವೆಂದರೆ ಅದು. . ಮೋಹವೆಂದರೆ ಅದು. . ಹತ್ತಿರವಿದ್ದರೂ, ದೂರ. . ದೂ. . ರ. . ಹೋದರೂ ಬಿಡಿಸಲಾಗದ ಪಾಶ ಅದು. ನೆನಪಾಗಲೇ ಇಲ್ಲ ಚಿತ್ರ.
ಹಾಗೇ ಒಮ್ಮೆ, ಸಾಕು ಬದುಕು ಇವನೊಟ್ಟಿಗೆ ಅನ್ನಿಸಿದಾಕ್ಷಣ ಹೊರಟೇ ಬಿಟ್ಟಳು. ಕೃಷ್ಣ ಗೋಕುಲದಲ್ಲೇ ಇದ್ದ.
ರಾಧೆ ಹೋದಳು, ಕೃಷ್ಣ ಕಾಯುತ್ತಿದ್ದ.
ಪ್ರೀತಿಯೆಂದರೆ ಕಳಚಿಕೊಳ್ಳಲಾಗದ ಪಾಶ. . ಕೃಷ್ಣನ ನಂಬಿಕೆ ಇದು. ಕೃಷ್ಣನ ವಿರಹ ಇದು. ಕೃಷ್ಣನ ಕೊಳಲ ಉಲಿತ ಇದು. ರಾಧೆ…

**

ಕೃಷ್ಣನಿಗೆ ಹೀಗೆ…
ರಾಧೆಗೆ ಇನ್ಹೇಗೋ….
 
 

‍ಲೇಖಕರು avadhi

August 30, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಸಂ.ಫೈಜ್ನಟ್ರಾಜ್

    ವಾವ್ ಅದ್ಭತ ಚಿಂತನಾ ಲಹರಿ

    ಪ್ರತಿಕ್ರಿಯೆ
  2. Anonymous

    ಕೃಷ್ಣನಿಗೆ ಹೀಗೆ ರಾಧೆಗೆ ಇನ್ಹೇಗೊ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: