ಹಲಗೂರು ಜಯಶಂಕರ್
ಕೆನ್ನಾಯಿಯ ಜಾಡಿನಲ್ಲಿ | ಕೃಪಾಕರ ಸೇನಾನಿ

ಇದೀಗ ಓದುತ್ತಿರುವೆ….ಇನ್ನೇನು ಮುಗಿಯಲಿದೆ
ಈ ಪುಸ್ತಕ ಕೊಡುತ್ತಿರುವ ಅನುಭವ ಈ ಕಾಲಕ್ಕೆ ಅನಿವಾರ್ಯವಾದ ಮದ್ದು. ಮನುಷ್ಯ ಹೇಗೆ ಮನುಷ್ಯಕೇಂದ್ರಿತವಾಗಿ ಮಾತ್ರ ಯೋಚಿಸುತ್ತಾ, ಚಲಿಸುತ್ತಾ, ಬೆಳೆಯುತ್ತ ( ?) ಒಟ್ಟು ಜೀವಕೇಂದ್ರಿತವಾದ ಆಲೋಚನಾ ವಿಧಾನಗಳಿಂದ ಸಂಪೂರ್ಣ ದೂರಾವಾಗಿ ಉಳಿದಿದ್ದಾನೆ ಎಂಬುದನ್ನು, ಜೀವಕೇಂದ್ರಿ ಬದುಕು ಎಷ್ಟು ಮುಖ್ಯ ಎಂಬುದನ್ನೂ ಸ್ಪಷ್ಟವಾಗಿ ಕಾಣಿಸುತ್ತದೆ. ಮನುಷ್ಯ ತಾನೇ ರೂಪಿಸಿದ ಸಮಾಜ, ಸಂಸ್ಕೃತಿ, ಚರಿತ್ರೆ, ರಾಜಕಾರಣ ಮೊದಲಾದ ರೆಡಿಮೇಡ್ ಚೌಕಟ್ಟು ಮತ್ತು ಸಂಗತಿಗಳಲ್ಲೇ ಕಳೆದುಹೋಗಿ ವಿಶ್ವಸತ್ಯವಾದ ಜೀವಜಾಲದ ಕೊಂಡಿಯಿಂದ ದೂರವೇ ಉಳಿದು ಸಮಸ್ತ ಸೃಷ್ಟಿಯ ನಾಶಕ್ಕೆ ಹೇಗೆ ತಯಾರಾಗುತ್ತಿದ್ದಾನೆ ಎಂಬುದು ಹೊಳೆಯುತ್ತದೆ. ನಮ್ಮ ಪ್ರಾದೇಶಿಕ ಪರಿಸರ ಅದರ ವೈವಿಧ್ಯತೆ ಅದರ ಮಹತ್ವ ಅದರ ಬಗೆಗಿನ ಅರಿವು ಎಷ್ಟು ಅಮೂಲ್ಯವಾದುದಲ್ಲವೇ ಎಂಬ ತಿಳಿವು ಮೂಡುತ್ತದೆ.
ಈ ಕೃತಿಯ ಬಗೆಗೆ ಮುಂದೆ ವಿಸ್ತಾರವಾಗಿ ಬರೆಯುವೆ.
ಈ ಕೃತಿ ಕಳಿಸಿದ ನನ್ನ ಪ್ರೀತಿಯ ಬಂಧುಗಳಾದ, ಜೀವಜಾಲದ ಬಗೆಗೆ ಅನನ್ಯವಾದ ಅಪಾರವಾದ ವಿಶೇಷವಾದ ಜ್ಞಾನವಿರುವ ಕೃಪಾಕರ ಸೇನಾನಿ ಅವರಿಗೆ ಕೃತಜ್ಞತೆಗಳು.





0 Comments