
ಎಪ್ಪತ್ತಾದರೂ ಯಾಕೆ ತುಂಬಿದವೊ???
ಭುವಿ
ಮಾತುಬಾರದ
ದೇವರುಗಳಿದ್ದರೆ
ಹೀಗೇ ಇಲ್ಲಿ,
ಹೂವ ಹಾಸಿನ ಮೇಲೆಯೇ
ಮೊಳೆಗಳ ಹೊಡೆಯುತ್ತಾರೆ
ಛೀ…..
ಯಾವ ಕಟಕಟೆಯಲ್ಲೂ
ಈ ಉಸಿರ ವ್ಯಾಪಾರ
ನ್ಯಾಯದ ಕಣ್ಣು
ತೆರೆಸಲಿಕ್ಕಿಲ್ಲ
…………….
ಚರಿತ್ರೆಯಲ್ಲೂ
……………….
ಎಪ್ಪತ್ತಾದರೂ
ಯಾಕೆ ತುಂಬಿದವೊ??
ಬರೊಬ್ಬರಿ ಎಪ್ಪತ್ತು
ಬಲಿಹಾರವೇ!!!
ಕೂಸೊಂದು
ಕೂಗೀತೆಂದು
ಆರ್ತಳಾಗಿ ಒರಗಿದ್ದಾಳೆ
ಬುದ್ಧಿಭ್ರಮೆಯಾದ
ಭರವಸೆಯ ಗೋಡೆಗೆ,
ಮತ್ತೆಂದೂ ಚೇತರಿಕೆ
ಇಣುಕದ
ಬೆಂಡೆ ಹೂವಿನಂತೆ;
ನಿಯಮವಿದೆ
ಸೂತಕಗಳ
ಕಲನ ಮಾಡದೆ
ಬಾವುಟ ಪೂರ್ತಿಯಾಗಿ
ತುದಿ ಮುಟ್ಟಲೇಬೇಕಂತೆ,,!
ಉಸಿರ ಕೊಂಡುಕೊಡದ
ಅರಾಜನೊಬ್ಬ
ನೆಗದು ಬಿದ್ದಿದ್ದರೆ?!!






0 Comments