ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕು ಸ ಮಧುಸೂದನ್ ಬರೆದ ಎರಡು ಕವಿತೆಗಳು

ಕು ಸ ಮಧುಸೂದನ್

ಚರಿತ್ರೆಯು ಚಡ್ಡಿಯೂ


ಚರಿತ್ರೆಯನ್ನು
ಬರೆದಿದ್ದರೆ
ಆಪ್ಪು ಸ್ಲೇಟಿನ ಮೇಲೆ
ಬೇಕೆಂದಾಗ ಅಳಿಸಿ
ಬೇಕಾದ್ದನ್ನು ಬರೆದುಕೊಳ್ಳಬಹುದಿತ್ತು
ಅವರವರ ಮೂಗಿನ ನೇರಕ್ಕೆ
ಕತ್ತರಿಸಿ ಉದ್ದ ತುಂಡ ಮಾಡಿ
ನಮಗೆ ಬೇಕಾದ ಅಳತೆಯ ಚಡ್ಡಿಗಳನ್ನು
ಹೊಲಿಸಿಕೊಳ್ಳಬಹುದಿತ್ತು!
 

ಧರ್ಮಯುದ್ದ


ಅವತ್ತಿನಿಂದ ಇವತ್ತಿನನೀ ಕ್ಷಣದವರೆಗೂ
ಹೊಡೆದಾಡುತ್ತಲೇ ಇದ್ದೇವೆ
ಮೊದಮೊದಲು ಭಜರ್ಿಗಳ ಬಳಸಿ
ಆಮೇಲೆ ಕತ್ತಿಗಳ
ಆಮೇಲಾಮೇಲೆ ಕೋವಿ ಬಂದೂಕುಗಳ
ಈಗಂತೂ
ಅದು ಇದು ಅಂತೇನೂ ಇಲ್ಲ
ಕೈಗಳಿಗೆ ಸಿಕ್ಕಿದ್ದನ್ನೆಲ್ಲ ಆಯುಧ ಮಾಡಿಕೊಳ್ಳು ಕಲೆ ಕರಗತ
ಮಾಡಿಕೊಂಡಿದ್ದೇವೆ
ಕಂಪ್ಯೂಟರಿನಪ್ಪಿನಿಂದ ಹಿಡಿದು
ಮೊಬೈಲಿನ ಸಂದೇಶಗಳವರೆಗು ಎಲ್ಲವನ್ನು
ಉಪಯೋಗಿಸಿ ಹೊಡೆದಾಡುತ್ತಿದ್ದೇವೆ
ಯಾರೇ ಕೇಳಿದರು
ಯಾಕೆಂದು
ಕೊಡುತ್ತೇವೆ
ನಾವೂ ಅವರು
ಒಂದೇ ಉತ್ತರ
 
 

‍ಲೇಖಕರು G

15 June, 2015

2 Comments

  1. shreekavi

    Nimma kavana istavaayitu sir.

  2. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading