ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಹೂ..ಕುಹೂ….ಓ ಪ್ರಿಯೇ..

ವೀಣಾ ಭಟ್

ಬೆಳಗ್ಗೆ ಸುಮಾರು ೫.೩೦ –೬ ಗಂಟೆ ಇರಬಹುದು .ಥಟ್ಟನೆ ಅಲಾರ್ಮ್ ಹೊಡೆದಂತೆ ಎಚ್ಚರವಾಯಿತು .ಅರೆ ..ಕುಹೂ ..ಕುಹೂ…ಹೊಸ ಅಲಾರ್ಮ್ ಎಲ್ಲಿಂದ ಬಂತು ?ನಾನಿಟ್ಟಿಲ್ಲವಲ್ಲಾ ..ಅಂದುಕೊಂಡು ಎದ್ದಾಗ ಇದು ಅಲಾರ್ಮ್ ಅಲ್ಲವೇ ಅಲ್ಲ ,ಹೊರಗಡೆ ಕೋಗಿಲೆ ಹಾಡುತ್ತಿದೆ ಎಂದು ತಿಳಿಯಲು ಕೆಲವು ಕ್ಷಣಗಳು ಬೇಕಾದವು .ಕಿವಿಗಳನ್ನು ನಂಬಲಾಗಲಿಲ್ಲ .ಬೆಂಗಳೂರಿನಂತಹ ಮಹಾನಗರಿಯಲ್ಲಿ ಇನ್ನೂ ಕೋಗಿಲೆ ನಾದ ಕೇಳಲು ಸಾಧ್ಯವಿದೆಯೇ ..?ಸಾಧ್ಯವಿದೆ ಎಂದಾಯಿತು.ಚಕ್ಕನೆ ಎದ್ದು ಹೊರಗೆ ಬಂದೆ .ಕೋಗಿಲೆ ಇನ್ನೂ ಮರದ ಮೇಲೆ ಕುಳಿತು ಹಾಡುತ್ತಿದೆ .ವಾಹ್…ಇಂತಹ ದೃಶ್ಯ ಸಿಗುವುದು ಅದೃಷ್ಟವೇ ಸರಿ ..ನಾನು ಪುಟ್ಟ ಹಳ್ಳಿಯ ,ಹಸಿರು ಕಾಡಿನ ಪರಿಸರದಲ್ಲಿ ಹುಟ್ಟಿ ಬೆಳೆದಿದ್ದರೂ ಕೋಗಿಲೆಯನ್ನು ನೋಡಿರಲಿಲ್ಲ.ಕೋಗಿಲೆಯೂ ನೋಡಲು ಕಾಗೆಯಂತೆ ಅಂತ ಅಜ್ಜಿ ಹೇಳಿದ ನೆನಪು.ಹಾಡುವುದನ್ನು ಆಲಿಸಿದ ನೆನಪು ..ಇನ್ನೂ ಹಸಿರು ಹಸಿರು ..

ಕೋಗಿಲೆ ಜೊತೆ ನನಗೆ ಏನೋ ವಿಶಿಷ್ಟ ಪ್ರೀತಿ ಬೆಳೆಯಲು ಆರಂಭವಾಯಿತು .ನಾನೂ ೫.೩೦ ಗೆ ಏಳಲು ಪ್ರಾರಂಭಿಸಿದೆ.ಒಮ್ಮೊಮ್ಮೆ ನಾನೇ ಏಳುತ್ತಿದ್ದೆ.ಒಮ್ಮೊಮ್ಮೆ ಕುಹೂ ..ವಿನೊಂದಿಗೆ ಏಳುತ್ತಿದ್ದೆ . ಪ್ರಕೃತಿಯೊಂದಿಗೆ ಒಂದಾದ ಅನುಭವ .ಬೆಳಗಿನ ಪ್ರಶಾಂತ ವಾತಾವರಣದಲ್ಲಿ ಮಧುರ ಗಾನ. ಅಲ್ಲೊಂದು ಪ್ರಕೃತಿಯ ರಮ್ಯತೆ ,ಪ್ರೀತಿಯ ಸಿಂಚನ .ವಿಶಿಷ್ಟ ಅನುಭೂತಿ …ಮುಂಜಾವಿನ ಮಂಜಿನ ಹನಿ ಹನಿಯಲ್ಲಿ ಹೊಸತನ .

ಕೋಗಿಲೆ ನಮಗಾಗಿ ಹಾಡುವುದಿಲ್ಲ .ತನ್ನ ಸಂಗಾತಿಯನ್ನು ಕೂಗಿ ಕರೆಯುತ್ತದಂತೆ !ಈ ಪ್ರದೇಶದ ಒಡೆತನ ತನ್ನದೇ ಎಂಬ ಜಂಬದ ವಾಣಿಯೂ..ಇದಾಗಿದೆಯಂತೆ…!ಹೇಗಿದೆ ಕೋಗಿಲೆಯ ಪ್ರೇಮದ ಪರಿ..!ಕೋಗಿಲೆ ಕಾಗೆಯ ಗೂಡಲ್ಲಿ ಮೊಟ್ಟೆಯಿಡುತ್ತದೆ.ಮರಿಗಳನ್ನು ಕಾಗೆಯೇ ಸಾಕುತ್ತದೆ.ಕಾಗೆಯದು ಎಂತಹ ತ್ಯಾಗ..!ಇದೊಂದು ಪ್ರಕೃತಿ ವಿಸ್ಮಯ .ಕಾಗೆಗೂ ..ಕೋಗಿಲೆಗೂ ..ಎಲ್ಲಿಯ ಸಂಬಂಧ ….

ಕೋಗಿಲೆಗೆ ಹಾಡುವುದಕ್ಕೆ ನಿಗದಿತ ಸಮಯವೆಂಬುದಿಲ್ಲ.ಒಂದೊಮ್ಮೆ ನಸುಕಿಗೆ ಗಾನ ಲಹರಿ ..ಇನ್ನೊಮ್ಮೆ ಮಧ್ಯಾನ್ನ..ಶುರು … ಕುಹೂ …ಕೇಳುತ್ತಾ ಕಿಟಕಿಯ ಬಳಿ ಬಂದು ನಿಲ್ಲುತ್ತೇನೆ .ಹಸಿರೆಲೆ ನಡುವೆ ಇದ್ದಕ್ಕಿದ್ದಂತೆ ಕೋಗಿಲೆ ಮಾಯವಾಗಿಬಿಡುತ್ತದೆ .ನಿತ್ಯವೂ ಬರುತ್ತಿದ್ದ ಕೋಗಿಲೆ ಒಂದು ದಿನ ಬರುವುದೇ ಇಲ್ಲ .ಬೆಳಗೆಲ್ಲಾ ನೀರಸ .ಆದರೂ ಕಾಯುತ್ತಿರುತ್ತೇನೆ ..ಬಂದೇ ಬರುತ್ತದೆ ಕುಹೂ .. ವಿನೊಂದಿಗೆ ….ಎಂಬ ಆಶಯ ಹೊತ್ತು ಅಲ್ಲೇ ನಿಲ್ಲುತ್ತೇನೆ .ಹಸಿರೆಲೆ ನಡುವೆ ಹುಡುಕುತ್ತೇನೆ …. ಎಲ್ಲ ಮರೆತು ಆಲಿಸಿ …ನಿಮಗೂ ಕುಹೂ …ಕುಹೂ….ಕೇಳಬಹುದು …!!

 

 

‍ಲೇಖಕರು G

20 July, 2011

1 Comment

  1. D.RAVIVARMA

    tumba chennagide,namma ella ottadagala madye naavu prakruthiyannu maretiddeve,ratriya neelakashada chandra manjavina kempu surya paksigala chilipili adarallu neevu heluva kogile gana nijakku thrill uttisuttave,bahushaha adakke eno magu aluttiruvaga tayiyaru chandrananannu torisi samadanagolisuttiddaru namage kadualeyalu sadyavagadidru sari kone paksh ura horagina ekanta stalagalli adaru naavu nammannu hudukikolla bekagideyono shubhavagali d,ravi varma hospet

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading