ಕುಸಿತ

ಆದಿತ್ಯ ಪ್ರಸಾದ್

ಪುರಾತನ ಮನೆಯದು
ಎತ್ತರೆತ್ತರಕ್ಕೂ ಏರಿ
ವಿಶಾಲವಾಗಿ ಹರಡಿತ್ತು

ಮೂಲೆಯೊಂದರಲ್ಲಿ ಚಿಕ್ಕದಾಗಿ
ಬಿಲಕೊರೆದು ಸಂದಿ ಹಿಡಿದಿದ್ದ
ಇಲಿಗೊಮ್ಮೆ ಏನಾಯಿತೇನೊ
ಚೂರುಚೂರೇ ಬಿಲ ವಿಸ್ತರಿಸ ತೊಡಗಿತು

ಮನೆಗದು ಸುದ್ದಿಯಾಗಲೇ ಇಲ್ಲ
ಚಿಕ್ಕದಾದ ತೂತು
ಅಳುವವರಾರದಕೆ ಕೂತು!

ಇಲಿಗೋ,
ಬಹಳ ಖುಷಿ!
ಮನೆಯ ಉದಾರತೆ
ನೆನೆನೆನೆಯುತ್ತಾ
ಇನ್ನೊಂದಿಷ್ಟು ಕೊರೆದು
ಕುಟುಂಬ ವಿಸ್ತರಣೆ ಶುರು ಹಚ್ಚಿತು…

ಮನೆಗದು ದೊಡ್ಡ ವಿಷಯವೇನಲ್ಲ.

ಸಮಯ ಕಳೆಯಿತು
ನಾಲ್ಕಿದ್ದ ಇಲಿ, ನಲವತ್ತಾಯಿತು
ಅಲ್ಲಲ್ಲಿ ಅಡ್ಡಾಡಿ, ಹರಟಿಕೊಂಡು
ಕೊರೆದದ್ದೋ ಕೊರೆದದ್ದು

ಹಲವು ವಂಸತಗಳ ಕಳೆದು
ಗಾಳಿ ಮಳೆ ಬಿಸಿಲಿಗೆಲ್ಲಾ ಮೈಯೊಡ್ಡಿ
ನಿಂತಿದ್ದ ಮನೆ
ಪುರಾತನ ಮನೆ!

ಗುಂಪುಗುಂಪಾದ ಇಲಿಗಳು
ಮೂಲೆಮೂಲೆಗೂ ಇಲಿಗಳು
ಲೂಟಿದವೆಷ್ಟು ದವಸ-ಧಾನ್ಯ!?
ಲೆಕ್ಕವಿಟ್ಟಾವರಾರು, ಮರುಗಿದವರಾರು…

ಮೊನ್ನೆಯಷ್ಟೇ ಮನೆ ನೋಡಿದವರೊಬ್ಬರು ಅಂದರಂತೆ

‘ಮಾಡು ಅಲ್ಲಲ್ಲಿ ಕುಸಿದಿದೆ.
ತಳ ತುಸು ಗಟ್ಟಿಯಾಗಿದ್ದರೂ
ಗೋಡೆಯ ದೀರ್ಘ ಬಿರುಕುಗಳು, ಕುಸಿತಗಳು
ಮನೆಯ ಇತಿಹಾಸವನ್ನೇ ಅಣಕಿಸುತ್ತಿದೆ’

‍ಲೇಖಕರು Avadhi

May 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ನವಿರಾದ ವ್ಯಂಗ್ಯ ತುಂಬಿದ ಕವಿತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: