ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುವೆಂಪು ರುಜು ಮಾಡಿದರು..

 

 

 

ಈಕೆ ಮುದ್ದು.. ಈಕೆ ವಿನಿಷಾ.. ತುಂಬಾ ಪುಟ್ಟ ವಯಸ್ಸಿನಲ್ಲೇ ಬರೆಯಲು ಆರಂಭಿಸಿದವರಿಗೆ ಮನೆಯೇ ಮೊದಲ ಪಾಠಶಾಲೆ. ಹೇಗೆ?..

ಮುದ್ದು ಹಾಗೂ ವಿನಿಷಾ ಇಬ್ಬರ ಮನೆಯ ಈ ಉಪ್ಪರಿಗೆ ನೋಡಿ.

ಇಲ್ಲಿ ಕುವೆಂಪು ನೆಲೆ ನಿಂತಿದ್ದಾರೆ ದಿಗ್ದಿಗಂತದತ್ತ ನೋಟ ಹರಿಸಿ ..

ಅವರ ಮನೆ, ಅಲ್ಲಿನ ಕುವೆಂಪು ಅಜ್ಜ, ಅಲ್ಲಿನ ಸಾಹಿತ್ಯದ ಪರಿಮಳ ಇಲ್ಲಿದೆ ಚಿತ್ರಗಳಲ್ಲಿ

ಇವತ್ತು ನಮ್ಮ ಮನೆಯಲ್ಲಿ ಕುವೆಂಪು ಅಜ್ಜಯ್ಯನ ಜನುಮ ದಿನ. ಅಜ್ಜಯ್ಯನ ಪಕ್ಕದಲ್ಲಿ ಕುಳಿತು ಅವರ ಒಂದೊಂದು ಕವಿತೆ ಓದಿ ಒಂದಷ್ಟು ಸಂಭ್ರಮಿಸಿದೆವು. Gagana Chukki ನೆನ್ನೆ ನಮ್ಮ ಮನೆಗೆ ಬಂದಿದ್ದಳು. ಇವತ್ತು ಅಜ್ಜಯ್ಯನ ಹುಟ್ಟುಹಬ್ಬವನ್ನು ನಮ್ಮ ಮನೆಯಲ್ಲೇ ಆಚರಿಸೋಣ ಇರು ಎಂದರೂ ಕೇಳದೆ ಬೆಳ್ ಬೆಳಗ್ಗೆ ಕುಪ್ಪಳಿಗೆ ಓಡಿಹೋದಳು. ಹಾಗಾಗಿ ನಾನು ಮತ್ತು ಅಕ್ಕ ಇಬ್ಬರೇ ಆಚರಿಸಬೇಕಾಯಿತು. ಅಕ್ಕ ಅವಳ ಬಹು ಇಷ್ಟದ ‘ದೇವರು ರುಜು ಮಾಡಿದನು’ ಕವಿತೆ ಓದುವಾಗ ಹೊಂಬಣ್ಣದ ಗಗನದಲ್ಲಿ ಹಾಲ್ಬಿಳುಪಿನ ಬಲಾಕ ಪಂಕ್ತಿ ಹಾರುತ್ತಿತ್ತು. ಅಜ್ಜಯ್ಯನ ಜನುಮದಿನಕ್ಕೆ ಉಡುಗೊರೆಯಂತಿತ್ತು ಈ ಸೌಂದರ್ಯ . -ಮುದ್ದು ತೀರ್ಥಹಳ್ಳಿ

‍ಲೇಖಕರು admin

31 December, 2015

1 Comment

  1. sangeetha raviraj

    ಓದಿ ತುಂಬಾ ಖುಷಿಯಾಯಿತು ಮುದ್ದು ಮತ್ತು ವಿನಿಶಾರವರೇ….ನಿಮ್ಮ ಸಾಹಿತ್ಯದ ಒಲವು ನಿರಂತರವಾಗಿರಲಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading