ಕುವೆಂಪು ಅವರ ನೆನಪಿನಲ್ಲಿ
ರಮೇಶ್ ಹಿರೆಜಂಬೂರ್
ವಿಶ್ವ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕುವೆಂಪು ನಿಜಕ್ಕೂ ಸರಳ ಜೀವಿ. ಕಟು ವಾಸ್ತವದ ನಡುವೆಯೇ ಬದುಕಿದವರು. ಆದರೆ ಅವರು ಸೋತದು ಮಾತ್ರ ಮದುವೆಯ ವಿಚಾರದಲ್ಲಿ! ನಿಜ, ಈ ಮಾತನ್ನು ಅವರೇ ಎಷ್ಟೋ ಬಾರಿ ಒಪ್ಪಿಕೊಂಡಿದ್ದಾರೆ. ಸದಾ ಸರಳತೆಯ ಮಂತ್ರ ಜಪಿಸುತ್ತಿದ್ದ ಕುವೆಂಪು ತಮ್ಮ ಮದುವೆಯ ಸಮಯದಲ್ಲಿ ಆ ಸರಳತೆಯ ಬಗ್ಗೆ ಕೊಂಚ ಎಚ್ಚರ ತಪ್ಪಿದ್ದರು. ಆ ಕಾರಣಕ್ಕಾಗಿಯೇ ಅವರು ಸರಳವಾಗಿ ಮದುವೆಯಾಗಲು ಆಗಲಿಲ್ಲ ಎಂದು ಅವರೇ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ.
ಅವರು ಮಾಡಿದ ಆ ತಪ್ಪನ್ನು ಅವರು ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ವಿವಾಹದ ವೇಳೆ ಅದನ್ನು ಸರಿಪಡಿಸಿಕೊಂಡಿದ್ದಾರೆ. ತೇಜಸ್ವಿ ಹಾಗೂ ರಾಜೇಶ್ವರಿ ಅವರ ವಿವಾಹವನ್ನು ಸರಳವಾಗಿ ನಡೆಸಿ “ಮಂತ್ರ ಮಾಂಗಲ್ಯ”ವನ್ನು ರಚಿಸಿದರು. ಒಂದು ವೇಳೆ ಕುವೆಂಪು ಮೊದಲು ಸರಳವಾಗಿ ಮದುವೆಯಾಗಿದ್ದರೆ ಅವರು ಸಮಾಜ ಹಾಗು ಅದರೊಳಗೆ ನಡೆಯುವ ಮಾಡುವೆ ಬಗೆಗಿನ ಜಂಜಾಟ, ಹೊಡೆದಾಟ, ಬಡಿದಾಟ, ವರಧಕ್ಷಿಣೆ ಹಾಗೂ ಅದರ ಸುತ್ತಲಿನ “ತಣ್ಣನೆಯ ಹಿಂಸೆ”ಯಾ ಕುರಿತು ಅವರು ಆಳವಾಗಿ ಚಿಂತಿಸಿ “ಮಂತ್ರ ಮಾಂಗಲ್ಯ”ವನ್ನು ರಚ್ಚಿಸುತ್ತಿದ್ದರೋ ಇಲ್ಲವೋ ಗೊತ್ತಿಲ್ಲ.
ಸಮಾಜದ ಬದಲಾವಣೆ ಕುರಿತು ತೇಜಸ್ವಿ ಹಾಗೂ ಕಡಿದಾಳು ಶಾಮಣ್ಣನವರು ಆಗಾಗ ಚರ್ಚೆ ನಡೆಸುತ್ತಲೇ ಇರುತ್ತಾರೆ. ಹೀಗೆ ಒಮ್ಮೆ ಸಿಪಿಕೆ ಅವರು ತಂದ ಒಂದು ಮದುವೆ ಕಾರ್ಡ್ ನ ವಿಚಾರವಾಗಿ ನಡೆದ ಚರ್ಚೆಯಲ್ಲಿ ವರದಕ್ಷಣೆಯಂಥ ಪಿಡುಗಿಗೆ ಒಂದು ಕೊನೆ ಹಾಡಲೇಬೇಕು ಎಂದು ಆಲೋಚಿಸುತ್ತಾರೆ. ಆಗ ಅದಕೊಂದು ರೂಪು ರೇಷೆ ನೀಡಲು ಕುವೆಂಪು ಅವರೇ ಸರಿ ಎಂದು ಯೋಚಿಸಿ ಅವರ ಬಳಿ ಈ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಅದೇ ವೇಳೆ ತೇಜಸ್ವಿ ಕೂಡ ಮದುವೆಗೆ ಸಿದ್ಧತೆ ನಡೆಸುತ್ತಿರುತ್ತಾರೆ. ತಾವು ಮಾಡಿದ ತಪ್ಪನ್ನು ಸರಿಪಡಿಸಲು ಇದೆ ಸರಿಯಾದ ಸಮಯ ಎಂದು ಯೋಚಿಸಿದ ಕುವೆಂಪು “ಮಂತ್ರ ಮಾಂಗಲ್ಯ”ಕ್ಕೆ ಸಿದ್ಧತೆ ಮಾಡುತ್ತಾರೆ. ಸದಾ ಮೂರ್ತಿ ಭಂಜಕರಾಗಿ ಗುರುತಿಸಿಕೊಳ್ಳುತ್ತಿದ್ದ ಕುವೆಂಪು ಅವರು ತೇಜಸ್ವಿ ಮದುವೆಯನ್ನು ಸರಳವಾಗಿ ಮಾಡಲು ಕಾರ್ಯ ಯೋಜನೆ ರೂಪಿಸಉಳು ಚಿಂತನೆ ನಡೆಸುತ್ತಾರೆ. ಆಗಲೇ ಪ್ರಭುಶಂಕರ್ ಅವರ ಮೂಲಕ ಯಾವ ಯಾವ ಜಾತಿ ಧರ್ಮದಲ್ಲಿ ಹೇಗೆ ಹೇಗೆ ಮದುವೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಹೇಳುತ್ತಾರೆ. ಆ ಎಲ್ಲ ಮಾಹಿತಿ ಸಂಗ್ರಹಿಸಿದ ನಂತರ ತೇಜಸ್ವಿ ಮಾಡುವೆ ಕುವೆಂಪು ಆಶಯದಂತೆ “ಮಂತ್ರ ಮಾಂಗಲ್ಯ”ದ ಮೂಲಕವೆ ನಡೆಯುತ್ತದೆ.
ಅಂದು ಸಾಗ್ಗಿದ ಕುವೆಂಪು ಅವರ ಆ ಸರಳ ವಿವಾಹದ ಜಾಗೃತಿ ಬಂಡಿ ಇನ್ನು ಸದಿಲ್ಲದೆ ಸಾಗುತ್ತಲೇ ಇದೆ. ಕಡಿದಾಳು ಶಾಮಣ್ಣ, ಪ್ರೊ.ಕೆ.ರಾಮದಾಸ್ ಮುಂತಾದವರು ಯುವ ಪ್ರೇಮಿಗಳಿಗೆ ಈ “ಮಂತ್ರ”ವನ್ನು ಹೇಳಿಕೊಡುತ್ತಲೇ ಇದ್ದಾರೆ. ಸಾವಿರಾರು ಯುವ ಮನಸ್ಸುಗಳು ಇಂದು ಕುವೆಂಪು ಹಾದಿಯಲ್ಲೇ ವರದಕ್ಷಣೆಯ ಪಿಡುಗಿನಿದ ದೂರಾಗುತ್ತಿದ್ದಾರೆ. ಅಂತ ಜೋಡಿಗಳಲ್ಲಿ ನಾನು ನನ್ನ ಪತ್ನಿ ಉಷಾ ಕೂಡ ಹೌದು. ನಾವು ಮಾತ್ರ ಅಲ್ಲ ನಮ್ಮಂತ ಸಾವಿರಾರು ಮನಸುಗಲ್ಲು ನಮ್ಮ ನಡುವೆ ಸದ್ದಿಲ್ಲದೆ ತಮ ಪಾಡಿಗೆ ತಾವು ಸುಂದರ ಬದುಕು ಕಟ್ಟಿಕೊಂಡಿದ್ದಾರೆ.
ಹೀಗೆ ಸಮಾಜದ ಹಾಗು ತಮ್ಮ ನಿಜ ಬದುಕಿನ ಬಗ್ಗೆ ಯೋಚಿಸುವಂತೆ ಸಣ್ಣದೊಂದು ಕಿಡಿ ಹೊತ್ತಿಸಿದ ಕುವೆಂಪು ಇಂದಿಗೂ ನಮ್ಮ ನಡುವೆ ಅಜರಾಮರವಾಗಿ ನೆಲೆಯೂರಿದ್ದಾರೆ. ಒಬ್ಬ ನಿಜವಾದ ಸಾಹಿತಿಯ, ತಣ್ಣನೆಯ ಹೋರಾಟಗಾರನ ಸಾರ್ಥಕ ಬದುಕಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ? ಖಂಡಿತಾ ಇಲ್ಲ ಎನ್ನುವುದು ನನ್ನ ನಂಬಿಕೆ.
ಒಬ್ಬ ಬರಹಗಾರನಿಗೆ ಸಮಾಜದ ಬಗೆಗಿನ ಕಾಳಜಿ ಯಾವ ಮೂಲಕವಾದರೂ ಹೊರ ಹೊಮ್ಮಬಹುದು. ಅಂತ ಒಂದು ಕಾಳಜಿಯನ್ನೇ ಸದ್ದೇ ಇಲ್ಲಾದೆ ಬೇರೂರುವಂತೆ ಮಾಡಿ ಬುನಾದಿ ಹಾಕಿಕೊಟ್ಟ ಕುವೆಂಪು ಅವರಿಗೆ ಹೃದಯಪೂರ್ವಕ ಅಭಿನಂದನೆಗಳು…







Informative sir.
Also I would like to mention here that I too followed the same rule.
I did not take any dowry during my marriage!!
ನನ್ನ ಎಷ್ಟೋ ಗೆಳೆಯರು ಮಂತ್ರಮಾಂಗಲ್ಯದ ಮೂಲಕ ಮದುವೆಯಾಗಿ ಎಲ್ಲಾ ಕಟ್ಟಳೆಗಳನ್ನು ಮೀರಿ ಮಾನವರಾಗಿದ್ದಾರೆ. ಕುಪ್ಪಳ್ಳಿಗೆ ಹೋಗಿ ಕುವೆಂಪು ರವರ ಮನೆಯಂಗಳದಲ್ಲಿ ಮದುವೆ ಆಗಿ ಬಂದಿದ್ದಾರೆ. ಮಂತ್ರಮಾಂಗಲ್ಯ’ವನ್ನು ನೆನಪಿಸಿದ್ದಕ್ಕೆ ವಂದನೆಗಳು… ಆದರೆ, ಅಲ್ಲಲ್ಲಿ ಕಾಗುಣಿತ ದೋಷಗಳಿವೆ. ಬಹುಶಃ ಗೂಗಲ್ ಟ್ರಾನ್ಸ್ ಲೇಟರ್ ನ ಕಣ್ಣಾಮುಚ್ಚಾಲೆಯಾಟವಿರಬಹುದು… 🙂
ತುಂಬಾ ಅರ್ಥಪೂರ್ಣವಾಗಿ ಬರೆದಿದ್ದೀರಿ…ನೀವು, ನಿಮ್ಮ ಧರ್ಮಪತ್ನಿಯವರಂತೆ ನಮ್ಮದು ಕೂಡಾ ಅಂತರ ಜಾತಿ ವಿವಾಹ. ಸಂಪ್ರದಾಯಗಳನ್ನು ಬದಿಗೊತ್ತಿ ಜೀವನಕ್ಕೆ ಅಡಿಗಾಲಿಟ್ಟವರು. ಇದರೊಟ್ಟಿಗೆ ಸಮತಾ ವಿದ್ಯಾಲಯದ ಅಡಿಯ ಕಾರ್ಯಕ್ರಮಗಳೊಂದಿಗೆ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದೇವೆ. ಕಡಿದಾಳು ಶಾಮಣ್ಣ, ದೇವನೂರ ಮಹದೇವ, ಪ್ರೊ||ರವಿವರ್ಮಕುಮಾರ್ ಅವರೊಡನೆಯ ಸಂಪರ್ಕ, ಒಡನಾಟವೂ ಒಂದಿಷ್ಟು ಸನ್ಮಾರ್ಗಕ್ಕೆ ಕಾರಣವಾಗಿದೆ, ಧನ್ಯವಾದಗಳು ರಮೇಶ್ ಅವರೆ…ಉತ್ತಮ ಲೇಖನವಿದು.
ಒಳ್ಳೆ ಲೇಖನ.ನಮ್ಮ ಮದುವೆದಿನ ನೆನಪಾಯಿತು.
ಮದುವೆಯ ಖಾಸಗೀತನದಲ್ಲಿ ಸಮಷ್ಠಿಪ್ರಜ್ಞೆ ಅಳವಡಿಸಿಕೊಂಡರೆ ಬಹುತೇಕ ಸಾಮಾಜಿಕ ಪಿಡುಗುಗಳು ತಂತಾನೇ ಕಾಣೆಯಾಗುತ್ತವೆ.
ಅರಿವಿನಿಂದ ಆಗಬೇಕಾದ ಕಾರ್ಯ ಇದು.
ಒಪ್ಪಿತ ಮದುವೆಗಳೂ,ಪ್ರೇಮವಿವಾಹಗಳೂ ಭೇದವಿಲ್ಲದೆ ಮುರಿದುಬೀಳುತ್ತಿರುವ ಈ ಹೊತ್ತು ಕುವೆಂಪು ಇದ್ದಿದ್ದರೆ ತುಂಬ ನೊಂದುಕೊಳ್ಳುತ್ತಿದ್ದುದು ಖಂಡಿತ.
ಕುವೆಂಪು ಅವರ ಬಗ್ಗೆ ತುಂಬಾ ಕೇಳಿದ್ವಿ, ಆದ್ರೆ ಮಂತ್ರ ಮಾಂಗಲ್ಯದ ಬಗ್ಗೆ ಗೊತ್ತೆ ಇರಲೇ ಇರಲಿಲ್ಲ. ರಮೇಶ್ ಸರ್ ನಿಮ್ಮಿಂದ ಈಗ ದರ ಪರಿಚಯವಾಯ್ತು..ಅಲ್ದೆ ಕುವೆಂಪು ಅವರ ಬಗ್ಗೆ ಮತ್ತಷ್ಟು ತಳಿದುಕೊಳ್ಳಂತಾಯಿತು…
ಕುವೆಂಪು ಹಾಗು ಅವರ ಸದ್ದಿಲ್ಲದ ಸಮಾಜ ಸುಧಾರಣೆಯ ಹಾದಿ ಪರಿಚಯಿಸಿದ್ದಕ್ಕೆ ರಮೇಶ್ ಅವರಿಗೆ ಧನ್ಯವಾದಗಳು. ಅವರು ಹಾಕಿಕೊಟ್ಟ ಈ ಹಾದಿಯಲ್ಲಿ ನಾವೆಲ್ಲರೂ ಸಾಗೋಣ. ಇನ್ನೊಂದು ವಿಷಯ ನನಗೆ ನೀವು (ರಮೇಶ್ ಹಿರೇಜಂಬೂರು) ಫೇಸ್ ಬುಕ್ ನಲ್ಲಿ ಮಾತ್ರ ಪರಿಚಯ. ಆದರೆ ನೀವು ಇಷ್ಟು ಸರಳತೆಯ ಹಾಗು ಸಮಾಜದ ಬಗ್ಗ್ಗೆ ನಿಮ್ಮೊಳಗೂ ಇಂಥದ್ದೊಂದು ಕಾಳಜಿ ಹೊತ್ತಿಸಿಕೊಂಡು ಬಂದಿದ್ದೀರಿ ಎಂದು ತಿಳಿದಿರಲಿಲ್ಲ… ನಿಮ್ಮ ಬಗ್ಗೆ ಹಾಗು ನಿಮ್ಮ ಆ ಮದುವೆಯ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದರೆ ಚನ್ನಾಗಿರುತ್ತಿತ್ತು.
ಆತ್ಮೀಯ ಗೆಳೆಯ ರಮೇಶ್….ನನ್ನದು ಕೂಡಾ ಸರಳ, ಸಾಮೂಹಿಕ ವಿವಾಹ. ಕುವೆಂಪು ನನ್ನ ನೆಚ್ಚಿನ ಗುರುಗಳು. ಮಂತ್ರ ಮಾಂಗಲ್ಯದ ನೆನಪು ನನ್ನ ಮದುವೆ ನೆನಪು ತರಿಸಿತು.
– ಮಾಲತೇಶ್ ಅರಸ್ ಹರ್ತಿಮಠ.
ವಿಜಯವಾಣಿ 9480472030
ಸರ್ ನಾನು ತುಂಬಾ ಕೇಳುತ್ತಿರುತ್ತೇನೆ ಮಂತ್ರ ಮಾಂಗಲ್ಯ ವೆಂದು ಆದರೆ ಅದು ಸರಿಯಾಗಿ ಗೊತ್ತಿರಲಿಲ್ಲ.ತುಂಬಾ ಸರಳವಾಗಿ ತಿಳಿಸಿ ಕೊಟ್ಟಿದ್ದಿರಿ.
ಮನುಜ ಮತ ವಿಶ್ವಪಥದ ದಾರಿ ತೋರಿಸಿದ ಈ ಶತಮಾನದ ಕನ್ನಡದ ದಾರ್ಶಾನಿಕ ಕವಿ ಕುವೆಂಪು , ಅವರನ್ನು ನೆನಪಿಸಿದ ಗೇಳೆಯ ರಮೇಶನಿಗೆ ನಮನಗಳು.
ಆದರ್ಶಗಳು ಮಂತ್ರಗಳಲ್ಲ , ನಮ್ಮ ಜೀವನದ ಉಸಿರು
-ಕುವೆಂಪು
ಎಲ್ಲರಿಗು ಧನ್ಯವಾದಗಳು ಹಾಗು ಹೊಸ ವರ್ಷದ ಶುಭಾಶಯಗಳು. ನವೀನ್ ಅವರೇ ಇದು ಕುವೆಂಪು ಜನ್ಮ ದಿನದ ಪ್ರಯುಕ್ತ ಬರೆದ ಪುಟ್ಟ ಲೇಖನ ಅಷ್ಟೇ, ನನ್ನ ಮದುವೆಯ ಕುರಿತಾದದ್ದು ಅಲ್ಲ. ಸಮಯ ಬಂದಾಗ ಖಂಡಿತ ಅದರ ಬಗ್ಗೆ ತಿಳಿಸುತ್ತೇನೆ
-ರಮೇಶ್ ಹಿರೇಜಂಬೂರು
thumba olle mahiti sir
i like to kuvempu sir