ಕುಪ್ಪಸದ ಬೆನ್ನ ಹಿಂದಿನ ಕಿಟಕಿಯಲ್ಲಿ..

ಭವ್ಯ ಕಬ್ಬಳಿ 

ನಮ್ಮೊಳಗೆ ನಾವು
ಬಂದಿಯಾದಷ್ಟೂ
ಸ್ವತಂತ್ರರಾಗುವ ನಮಗೆ !
ಒಬ್ಬರಿಂದೊಬ್ಬರು
ಎಲ್ಲವನ್ನು ಪಡೆದುಕೊಳ್ಳುವ,
ಏನನ್ನೂ ಉಳಿಸಿಕೊಳ್ಳಬಾರದೆಂಬ
ಸುಳ್ಳು ಹಂಬಲ

ಸಂಜೆ ದೀಪ ಉರಿಯುವಾಗ
ಸಣ್ಣಗೆ ಗುನುಗುವ ಅವನ ಕೊರಳ ದನಿಗೆ,
ಪ್ರತಿ ಬಾರಿಯೂ ಸೋಲುತ್ತೇನೆ,
ಮತ್ತದೇ ಸೋಲಿಗೆ ಕಾಯುತ್ತೇನೆ

ಅಂಗೈಬೆಸೆದು
ಮತ್ತೊಂದು ಅಂಗೈಯಿಗೆ
ನನ್ನ ನಡುವನು ನೀಡುವಾಗ
ಅವನೆದುರು ನವಿಲಾಗಿದ್ದೇನೆ,
ಜೊತೆಗೇ ಹೆಜ್ಜೆ ಹಾಕುವ ದೀಪವು ನಾಚಿ
ನಮ್ಮ ನೆರಳ ಕಡೆ ತಿರುಗಿ
ಗೋಡೆಯ ಮೇಲೆ
ಒಂದೇ ದೇಹದಂತೆ ಕಾಣುವ
ನಮ್ಮಿಬ್ಬರ ಕಂಡು
ಕರಗಿಹೋಗುತ್ತದೆ

ಕುಪ್ಪಸದ ಬೆನ್ನ ಹಿಂದಿನ ಕಿಟಕಿಯಲ್ಲಿ
ಜೇಡದ ಬಲೆಯೊಂದನ್ನು ಬಿಡಿಸಿ
ಅಲ್ಲಿ ನನ್ನದೇ ಒಂದಷ್ಟು
ಕವಿತೆಗಳನ್ನು ಸಿಕ್ಕಿಸಿಬಿಡುತ್ತಾನೆ,
ಮತ್ತೆ ಮತ್ತೆ ಓದುತ್ತಾನೆ

ಏಕಾಂತದಲ್ಲಿ
ಇಡೀ ಭವಿಷ್ಯದ
ಪರ್ಯಟನೆ ನಡೆಸಿ
ನೂರು ಆಸೆಗಳನು
ಗುರುತು‌ಮಾಡುತ್ತೇವೆ

ತಡೆದ ಆಸೆಗಳನ್ನು
ಹಡೆಯುವುದೆಂದರೆ
ಈಗ ಇಬ್ಬರಿಗೂ ಅಷ್ಟೆ ಸಲೀಸು
ಎಷ್ಟೆಲ್ಲಾ ತುಂಬಿಸಿಕೊಡುವ ಬದುಕು!

ಇದ್ದುಬಿಡಬೇಕು,
ಇಬ್ಬರೂ ಒಬ್ಬರಾಗಿಯೇ
ಕೊನೆಯಿಲ್ಲದಂತೆ
ಮೊದಲಿನಿಂದ ಪ್ರಾರಂಭಿಸುತ್ತಾ
ಎಲ್ಲವನ್ನೂ ಪಡೆದುಕೊಳ್ಳುತ್ತಾ
ಒಂದಿಷ್ಟನ್ನು ಬೇಕೆಂದೆ ಉಳಿಸಿಕೊಳ್ಳುತ್ತಾ

‍ಲೇಖಕರು avadhi

October 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Ashok Gowda Doddajala

    ಚೆಂದದ ಕವನ ಮೇಡಂ. ಅಭಿನಂದನೆಗಳು

    ಪ್ರತಿಕ್ರಿಯೆ
  2. Ashoka mallappa Surapur

    ಕವಿತೆ ಅನ್ಯೋನ್ಯತೆಯನ್ನು ನವಿರಾಗಿ ಎಳೆದಾಡಿದೆ..
    ತಾಯಿ ಕೂಸನ್ನು ಮುದ್ದಿಸುವಂತೆ….

    ಪ್ರತಿಕ್ರಿಯೆ
  3. Nagraj Harapanhalli

    ಚೆಂದ ಕವಿತೆ…

    ತುಂಬಾ ಮುಗ್ಧತೆ ಹಾಗೂ ಪ್ರಾಮಾಣಿಕ ಅಭಿವ್ಯಕ್ತಿ ಕಾವ್ಯಕ್ಕೆ ಶಕ್ತಿ ತುಂಬುತ್ತದೆ..

    ಪ್ರತಿಕ್ರಿಯೆ
  4. Ravichandra Malled

    ಓದಿದರೆ..ಒಲಿದು ಬರುವ ಭಾವ
    ಸೊಗಸಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: