ಕಿರಣ ಮಾಡಾಳು ಕವಿತೆ – ಆಕೆಯ ಪರಿಚಯವಾಗಿದ್ದು..

ಕಿರಣ ಮಾಡಾಳು

my poetry { not for v-day}

ಆಕೆಯ ಪರಿಚಯವಾಗಿದ್ದು
ನ್ಯೂಟನ್ ನ ಮೂರನೇ ನಿಯಮದಂತೆ
ಅನ್ನಿಸಿದ್ದರೂ,
ಐನ್ಸ್ಟೈನ್ ನ ರಿಲೇಟಿವಿಟಿ ಗೆ
ಹತ್ತಿರವಿದ್ದದ್ದು ನಿಜ…
ವಿಸ್ಮಯದ ತುಣುಕೊಂದು
ನಾಭಿಯಲ್ಲಿ ಸರಿದಾಡಿದಂತೆ.

ಹೈಸನ್ಬರ್ಗ ನ (Werner Heisenberg)
ಕಣದಂತೆ, ಅಲೆಯಂತೆ..
ಅನಿಶ್ಚಿತತೆ ತತ್ವವನ್ನೂ ಮೀರಿ
ಪ್ಲಾಂಕನ ( Max Plank) ಸ್ಥಿರಾಂಕದೊಳಗೆ
ಹುಡುಕಾಟದ ತುಣುಕೊಂದು
ಹಾರ್ಟಿನಲ್ಲಿ ತೇಲಿದಂತೆ.

ಕಾಲದ ಪರಿವೇ ಇಲ್ಲದೆ
Entrophy ಯನ್ನೂ ದಾಟಿ
ಶ್ರೋಡಿಂಗರನ ( Schrodinger ) ಬೆಕ್ಕಿಗೂ
ತಾನೆಲ್ಲಿದ್ದೇನೆ ಎಂದು
ತಿಳಿಯುವ ಮುನ್ನ
ಅನುಭೂತಿಯ ತುಣುಕೊಂದು
ಗಂಟಲಲ್ಲಿ ಹಾಯ್ದಂತೆ….

Feynman ನ,
ಅನಂತದಿಂದ
ಎರಡು ವಿರುದ್ದ ಕಣಗಳು
ಸಂಧಿಸಿ, ಪ್ರೇಮದ ದಿಕ್ಕನ್ನು
ಇಲ್ಲವಾಗಿಸಿ,
ಖಾಲಿತನದ ತುಣುಕೊಂದು
ಹಣೆಯ ನಡುವೆ ದಿಟ್ಟಿಸಿದಂತೆ….

ಸರಹಪಾದನ
ಪಯಣ,
ನಾಗಾರ್ಜುನನ
ಶೂನ್ಯ ಸಮುತ್ಪ
ಅರ್ಥವಾಗುವ ಹೊತ್ತಿಗೆ
ಖಾಲಿತನಕ್ಕೆ
ಚೇತನದ ಘಮಲು
ವ್ಯಾಪಿಸಿದಂತೆ …

‍ಲೇಖಕರು avadhi

February 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: