ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿರಗೂರಿನ ಗಯ್ಯಾಳಿಗಳ ನೆನಪಲ್ಲಿ, ನಾನು ಶಂಕರಪ್ಪ..

santosh angadi

ಸಂತೋಷ್ ಅಂಗಡಿ 

ಸ್ನೇಹಿತರೆ

gayyali1ಈಗ್ಗೆ ಸುಮಾರು ಎರಡು ವರೆ ತಿಂಗಳ ಹಿಂದೆ ತುಮಕೂರಿನ ನಾಟಕ ಮನೆ ಪ್ರಯೋಜಕತ್ವದ ಕಿರಗೂರಿನ ಗಯ್ಯಾಳಿಗಳು ನಾಟಕಕ್ಕೆ ನನ್ನನ್ನು ನಟನಾಗಿ ಆಹ್ವಾನಿಸಲಾಗಿತ್ತು …ಸೃಜನಶೀಲ ಬರಹಗಾರ ಚಿಂತಕ ಸಂಘಟಕರಾದ ಉಗಮ ಶ್ರೀನಿವಾಸ. ಇದರ ನಿರ್ದೇಶಕರು ..ನಾಟಕ ಸುಮಾರು ೨೫ ದಿನ ರಿಹರ್ಸಲ್ ಮಾಡಲಾಗಿತ್ತು ನಾಟಕದ ಪ್ರದರ್ಶನಕ್ಕೆ ಇನ್ನೆರಡು ದಿನ ಬಾಕಿ ಇದ್ದಾಗ ಶಂಕ್ರಪ್ಪ ಪಾತ್ರ ಮಾಡುತ್ತಿದ್ದ ನಾನು ರಂಗದ ಮೇಲೆ ತಾಲೀಮಿನಲ್ಲಿ ಆಯ ತಪ್ಪಿ ಬಿದ್ದು ಎಡಗೈನ ಎರಡು ಮೂಳೆ ಕಣ್ಣು ಮುಚ್ಚಿ ನೋಡುವಷ್ಟರಲ್ಲಿ ತುಂಡಾಗಿ ಕೈ ನೇತಾಡುತ್ತಿತ್ತು ..ಕೂಡಲೇ ನಾಟಕ ಮನೆ ಮಾಲಿಂಗು ಅಲ್ಲಿಯ ಚರಕ ಆಸ್ಪತ್ರೆಗೆ ನನ್ನನ್ನು ಕರೆದೊಯ್ದರು ….

ಡಾಕ್ಟರ್ ಬಸವರಾಜು, ಡಾಕ್ಟರ್ ಉಮಾಶಂಕರ್ ವ್ಯವಹಾರಿಕವಾಗಿ ಯೋಚಿಸದೇ , ನನಗೆ ಕೂಡಲೇ ಚಿಕಿತ್ಸೆ ನೀಡಿದರು ಆಪರೇಷನ್ ಕೂಡಾ ಮಾಡಲಾಯಿತು …
ಎಲ್ಲಾ ವೆಚ್ಚವನ್ನು ನಾಟಕ ಮನೆ ಮಾಲಿಂಗು ಅವರೆ ಭರಿಸಿದ್ದರು ….

ಶಂಕ್ರಪ್ಪನ ಪಾತ್ರ

gayyali2ತೇಜಸ್ವಿಯವರ ಈ ನೀಳ್ಗತೆ ಲಂಕೇಶ್ ಪತ್ರಿಕೆಯಲ್ಲಿ ಹಲವು ಸರಣಿಗಳಲ್ಲಿ ಪ್ರಕಟವಾಗಿತ್ತು …ಬಹಳ ದಿನಗಳ ಹಿಂದೆ ಈ ಕತೆಯ ಓದಿನಲ್ಲಿ ಶಂಕ್ರಪ್ಪನ ಪಾತ್ರವನ್ನು ಒಳಗೊಳಗೇ ಇಳಸಿಕೊಂಡು ಬೆಳಸಿಕೊಂಡಿದ್ದೆ
ಅದೃಷ್ಟದ ಮಾತೆಂದರೆ ಆ ಪಾತ್ರ ನಾಟಕದಲ್ಲಿ ನನಗೆ ಸಿಕ್ಕಿತ್ತು ….ಕಾಸ್ಟೂಮ್ ಡಿಸೈನ್ ಮಾಡಿದ ಎನ್.ಎಸ್.ಡಿ.ಸವಿತಾ ಅವರನ್ನು ಕೇಳಿದ್ದೆ ನೋಡಿ ಶಂಕ್ರಪ್ಪನಿಗೆ ಗೈಯ್ಯಾಳಿಗಳು ಹೊಡೆದು ಕೈ ಮುರಿಯುತ್ತಾರೆ ಅದಕ್ಕಾಗಿ ಬ್ಯಾಂಡೇಜು ತರಿಸಿ ಎಂದಿದ್ದೆ …ಕಾಕತಾಳೀಯ ಎಂಬಂತೆ ದವಾಖಾನೆಯಲ್ಲಿ ಇಷ್ಟುದಪ್ಪ ಬ್ಯಾಂಡೇಜು ಸುತ್ತಿದ್ದರು …

ಅಷ್ಟೂ ದಿನ ದವಾಖಾನೆಯಲ್ಲಿ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ತಮ್ಮ ವಿಜಯನ ಅಂತ:ಕರಣದ ಪ್ರೀತಿಗೆ ಸಾಟಿಯಿಲ್ಲ ….
ಜತಗೆ ಗೋಪಿ, ಮಂಜುನಾಥ, ಮೂರ್ತಿ, ದರ್ಶನ್, ಪ್ರಕಾಶ. ರವಿ, ಸವಿತಾ, ಮಾಲತಿ, ಇವರೆಲ್ಲರ ಪ್ರೀತಿಗೆ ಶರಣು …

ತುಮಕೂರಿನ ಜೀವಪರ ಕಾಳಜಿಯ …..
ಶೈನಾ …
ನಾಟಕಮನೆ ಮಾಲಿಂಗು,
ಚರಕ,
ಗಂಗಾತನಯ ಸಿರಿ,
ಉಗಮ ಶ್ರೀನಿವಾಸ
ಇವರೆಲ್ಲರನ್ನೂ ಈ ಹೊತ್ತು ನೆನೆಯುವೆ …

ಈಗ ಆರೋಗ್ಯವಾಗಿ ಮನೆಯವರ ವಿರೋಧದ ನಡುವೆಯೂ ಮತ್ತೆ ನಟಿಸಿದ್ದೇನೆ ಮಹದೇವ ಹಡಪದ ನಿರ್ದೇಶನದ ಮುಖ್ಯಮಂತ್ರಿ ಅರಸು ನಾಟಕದಲ್ಲಿ …

ಕೊನೆಯದಾಗಿ ನಟನಿಗೆ ದೇಹ ಮತ್ತು ಧ್ವನಿ ಆಸ್ತಿ …

‍ಲೇಖಕರು admin

17 March, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading