ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಲರಾಯನ ಹೆಗಲಿಗೇರಿಸಿಕೊಂಡು..

ಕಾಲಚಕ್ರ

ಪರಮೇಶ್  

ನಿಂತಿದೆ, ಕವಲೊಡೆದ  ದಾರಿಯಲಿ

ಕಾಲರಾಯನ ಹೆಗಲಿಗೇರಿಸಿಕೊಂಡು

ತುಸು ವಿಶ್ರಮಿಸುಲು ಯತ್ನಿಸಿದೆ…

ಎಂದೂ… ಬಸವಳಿದಾ ಕಾಲನೋ !

ದೂಡುತಿಹನು ಹಿಂಬದಿಯಿಂದ

ನಿಲ್ಲದಿರೂ ಎಲ್ಲಿಯೂ,

ನಡೆ ಮುಂದೆ, ನಡೆ ಮುಂದೆ (ಟಿಕ್, ಟಿಕ್) ಎಂಬ ಘೋಷವಾಕ್ಯ ಕಿವಿಯನು ಚುಚ್ಚುತಿಹದು

ಗುರಿಯೋ, ಗಮ್ಯವೋ, ತೀರವೋ

ಯೆತಕಾಗಿ ಈ ಸೆಣಸಾಟ ?

ಸವೆದ ಹಾದಿಯ ನೆನೆಯದೆ,

ಕಾಲನ ಜೊತೆ ಯೆತಕಾಗಿ ಈ ಓಟ ?

ಹಿಂದುರಿಗಿ ಬಾರದಷ್ಟು ದೂರ ಸಾಗಿದೇನೆ…

ಈತನೋ ಮತ್ತೆ, ಮತ್ತೆ ದೂಡುತಿಹನು… ಎಲ್ಲಿಗೋ ?

ocean-clock-370x315

ಕಾಲಚಕ್ರವ ಹೆಗಲ ಮೇಲೆ ಹೊತ್ತು

ಡಾ. ಪ್ರೇಮಲತ ಬಿ

 

ಕಾಲಚಕ್ರವ ಹೆಗಲ ಮೇಲೆ ಹೊತ್ತು

ಬದುಕಿನಾಟದ ಕರೆಗೆ ಕಿವಿಯ ಕೊಟ್ಟು

ಕಳೆದೆಲ್ಲ ಕರ್ಮಗಳ  ಹಿಂದೆ ಬಿಟ್ಟು

ಭವಿಷ್ಯದೆಡೆಗೆ ನೇರ ನೋಟ ನೆಟ್ಟುclick_aytu_kavite

ನೀ ನಿಂತ ಕವಲು ದಾರಿ

ಹೇ ಎಳೆಯ ಒಂಟಿ ಜೀವಿ

ಕೊನೆಗಾಣಿಸಿ ಯುದ್ಧ ಕಡೆಗೆ

ಕರೆದೊಯ್ವದೇ ಶಾಂತಿಯೆಡೆಗೆ ?

ಭರ ಸುರಿದು ನಿಂತ ಗುಂಡಿನ ಮಳೆಗೆ

ಓಗೊಟ್ಟು ಹೊರಗೆ ಬಂದ ಗಳಿಗೆ

ಮುಂದಿನ ದಿನಗಳ ಆಶೆ ಹೊತ್ತು

ನೋಡುತ್ತ ಅವಕಾಶಗಳ ಕಿಟಕಿಯೆಡೆಗೆ

ಕಲ್ಲ ಚಪ್ಪಡಿ ನೆಲದ ಹಾಸೇನು

ಕರ್ರಗೆ ಸುಟ್ಟ ಗೋಡೆಗಳ ತಡೆಯೇನು

ಕಾಲನ ಲೆಕ್ಕಕೆ ನೀನಾಗಿ

ಹೊಸ ಭರವಸೆಗಳ ರೂವಾರಿ

ನೀನಿಲ್ಲದೆ ಕಾಲವೆಲ್ಲಿ ?

ಹಾಗಂತಲೇ ನಿನ್ನ ಹೆಗಲ ಸವಾರಿ

ಫೀನಿಕ್ಸ್ ನಂತೆ ಹೊಸ ಬದುಕಿಗೆ ಒಗ್ಗಿ

ನಿಂತ ಬಿಂಬಕೆ, ನಿನ್ನ ಪ್ರತಿಬಿಂಬವೇ ಸಾಟಿ !!!!

‍ಲೇಖಕರು Admin

19 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading