ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾರ್ಕಳದ ಪೈಗಳು ಅಮರವಾದ ಕಥೆ

-ಶ್ರೀವತ್ಸ ಜೋಷಿ

‘ಅಮರ ಚಿತ್ರ ಕಥೆ ಪುಸ್ತಕಗಳಲ್ಲಿ ಒಂದನ್ನಾದರೂ ಒಮ್ಮೆಯಾದರೂ ಓದದೇ ಇರುವವರು ಕೈಯೆತ್ತಿ!’

ಪ್ರಾಯಶಃ ಈ ಲೇಖನವನ್ನೋದುತ್ತಿರುವವರಾರೂ ಆ ಸಾಲಿಗೆ ಸೇರಿರಲಾರಿರಿ ಎಂದು ನಾನು ದೃಢವಿಶ್ವಾಸದಿಂದ ಹೇಳಬಲ್ಲೆ. ತೀರಾ ‘ಪುಸ್ತಕಹುಳು’ವಾಗಿರುವವರಿಂದ ಹಿಡಿದು ನನ್ನಂತೆ ಅದೊಂದು-ಇದೊಂದು ಪುಸ್ತಕ ಮಾತ್ರ ಓದಿರುವಂಥವರ ವರೆಗೆ ಓದಿನ ಹುಚ್ಚು ನಮಗೆಲ್ಲರಿಗೂ ಹೆಚ್ಚುಕಡಿಮೆ ವ್ಯಾಪಕವಾಗಿಯೇ ಇದೆ. ಹಾಗೆಯೇ ನಾವು ಓದಿರುವ ಸಾಮಗ್ರಿಯಲ್ಲಿ ಕಾದಂಬರಿ, ಕಥೆ-ಕವನ ಸಂಕಲನಗಳು, ವಿಮರ್ಶೆಗಳು, ಆಕರಗ್ರಂಥಗಳು, ನಿಯತಕಾಲಿಕಗಳು, ಸ್ಮರಣಸಂಚಿಕೆಗಳು, ಮತ್ತಿತರ ಪುಸ್ತಕಗಳ ಜತೆಯಲ್ಲೇ ಅಮರಚಿತ್ರಕಥೆ, ಟಿಂಕಲ್‌, ಇಂದ್ರಜಾಲ ಕಾಮಿಕ್ಸ್‌ ಇತ್ಯಾದಿ ಸಹ ಖಂಡಿತವಾಗಿಯೂ ಸ್ಥಾನ ಪಡೆದಿವೆ ಎನ್ನಲಿಕ್ಕಡ್ಡಿಯಿಲ್ಲ…

…ಭಾರತದ ಮಟ್ಟಿಗೆ ಹೇಳಬೇಕಿದ್ದರೆ ಅಮರಚಿತ್ರಕಥೆಯ ಅನಂತ ಪೈ (‘ಪೈ ಅಂಕಲ್‌’ ಎಂದೇ ಮಕ್ಕಳಿಗೆಲ್ಲ ಆತ್ಮೀಯ) ಭಾರತೀಯ ಕಾಮಿಕ್ಸ್‌ನ ಪಿತಾಮಹ ಎನ್ನಬಹುದು. ಸುಮಾರು 450ಕ್ಕೂ ಹೆಚ್ಚು ಶೀರ್ಷಿಕೆಗಳು, 38 ಬೇರೆಬೇರೆ ಭಾಷೆಗಳಲ್ಲಿ, ಸುಮಾರು 80 ಮಿಲಿಯಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿರುವ ಅಮರಚಿತ್ರಕಥೆ ಸರಣಿ ನಿಜವಾಗಿಯೂ ಅಜರಾಮರವಾದುದು. 1967ರಿಂದೀಚೆಗೆ ತಲೆಮಾರಿಂದ ತಲೆಮಾರಿಗೆ ‘ಭಾರತೀಯ’ ಜ್ಞಾನಾರ್ಜನೆಯ ಹರಿವು ಈ ಪುಸ್ತಕಗಳ ಸರಳಭಾಷೆಯ ನಿರೂಪಣೆ, ಸುಂದರ ಚಿತ್ರಗಳೊಂದಿಗೆ ಸಂಭಾಷಣೆ – ಹೀಗೆ ಕಣ್ಣಿಗೆಕಟ್ಟುವ ರೀತಿಯಲ್ಲಿ ಸಾಧ್ಯವಾಗಿದೆ. ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಉದ್ಯೋಗದಲ್ಲಿದ್ದಾಗ ಯಾವುದೋ ಒಂದು ಕ್ವಿಜ್‌ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಪೈಯವರಿಗೆ, ಸ್ಪರ್ಧಿಗಳು ಪಾಶ್ಚಾತ್ಯ ತತ್ವಶಾಸ್ತ್ರದ ಪ್ರಶ್ನೆಗಳನ್ನೆಲ್ಲ ಸಲೀಸಾಗಿ ಉತ್ತರಿಸಿಯೂ ಭಾರತೀಯ ಪುರಾಣಗಳಿಗೆ ಸಂಬಂಧಿಸಿದ – ಅದೂ ‘ಶ್ರೀರಾಮಚಂದ್ರನ ತಾಯಿಯ ಹೆಸರೇನು?’ ಎಂಬಂಥ ಪ್ರಶ್ನೆಯ ಉತ್ತರಕ್ಕೆ ತಡವರಿಸುತ್ತಿದ್ದುದನ್ನು ನೋಡಿದಾಗ ಹೊಳೆದ ಯೋಜನೆಯೇ ಅಮರಚಿತ್ರಕಥೆ! ‘ಅನಂತ’ ಪೈ ಅವರಿಗೆ ಬಂದ ಆ ಪರಿಕಲ್ಪನೆ ‘ಅಮರ’ವೇ ಸೈ. ಉದಯವಾಣಿಯಲ್ಲಿ ಬರುತ್ತಿದ್ದ ರಾಮು-ಶಾಮು ಸಹ ಅನಂತ ಪೈ ರಚನೆ. ಅಮರಚಿತ್ರಕಥೆಯಂತೆಯೇ ಜನಪ್ರಿಯವಾದ ಟಿಂಕಲ್‌ ಕೂಡ ಅವರದೇ ಕೊಡುಗೆ. ‘ರಂಗ ರೇಖಾ ಫೀಚರ್ಸ್‌’ ಎನ್ನುವ ಕಾರ್ಟೂನ್‌/ಕಾಮಿಕ್‌ ಸಿಂಡಿಕೇಟನ್ನೇ ಅವರು ಸ್ಥಾಪಿಸಿದ್ದಾರೆ. ಪೈ ಅಂಕಲ್‌ ಬಗ್ಗೆ ನನಗಂತೂ ವಿಶೇಷ ಅಭಿಮಾನಕ್ಕೆ ಇನ್ನೂ ಒಂದು ಕಾರಣವಿದೆ – ಅವರ ಹುಟ್ಟೂರು ನಮ್ಮ ಕಾರ್ಕಳ!…

thatskannada.com ನಲ್ಲಿ ಪ್ರಕಟವಾದ ಶ್ರೀವತ್ಸ ಜೋಷಿ ಅವರ ಲೇಖನದ ಆಯ್ದ ಭಾಗ ಹಾಗೂ ಚಿತ್ರಗಳು ಅಲ್ಲಿಂದಲೇ..

‍ಲೇಖಕರು G

25 February, 2011

2 Comments

  1. Abhaya Simha

    About 7 years ago i had the honor of meeting and talking to Mr. Anant Pai for almost one full day. some of the conversation is documented in my film, Comic Zone. Please have a look…

  2. Iynanda Prabhu

    ಆರೇಳು ವರ್ಷ ವಯಸ್ಸಿನಲ್ಲೇ ನಾನು ದಿನಪತ್ರಿಕೆಗಳನ್ನು ನೋಡುತ್ತಿದ್ದೆ: ಪ್ರಜಾವಾಣಿಯ ಮೊದ್ದುಮಣಿಯನ್ನು!
    ಕನ್ನಡ ಮಾಧ್ಯಮದಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಡೆಕ್ಕನ್ ಹೆರಲ್ಡಿನಲ್ಲಿ Blondie ನೋಡುತ್ತಿದ್ದೆ.
    ಹುಡುಗನಾಗಿದ್ದಾಗ ಚಂದಮಾಮ ಓದುತ್ತಿದ್ದೆ.
    ಈಗಲೂ ಟಿಂಕ್‌ಲ್ ಸಿಕ್ಕರೆ ಓದದಿರಲಾರೆ.
    ಚಿತ್ರ-ಕಥೆಯ ಪುಸ್ತಕಗಳ ಬ್ರಹ್ಮ ಅನಂತ ಪೈಗಳು ಅಮೋಘರು, ಅಮರರು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading