ಕಾಯ್ಕಿಣಿ ‘ಪಾರ್ಲರ್’ನಲ್ಲಿ ಸ್ಫೂರ್ತಿ ಗಿರೀಶ್

ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು.

ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು.

ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು.

kaikini

 

ನಿಮಗೂ ಇಷ್ಟವಾದರೆ ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ ಎಂದು ಕೇಳಿದ್ದೆವು ..

ಹಾಗೆ ಮುಂದುವರೆದ ಎರಡು ಲಹರಿಗಳು ಇಲ್ಲಿವೆ. ಅದಕ್ಕೆ ಎಸ್ ಪಿ ವಿಜಯಲಕ್ಷ್ಮಿ ತಮ್ಮದೊಂದು ಹೂ ಸೇರಿಸಿದರು

ನಂತರದ ಸರದಿ ಚೈತ್ರಾ ಅವರದ್ದು. ತಮ್ಮ ಹುಬ್ಬುಗಳ ಲೋಕವನ್ನು ಅವರು ಹಿಡಿದಿಟ್ಟರು.

ರೇಷ್ಮಾ ನಾರಾಯಣ ಉಪ್ಪುಂದ ಈ ಲಹರಿಯನ್ನು ಮುಂದುವರಿಸಿದರು. ಕರ್ಚೀಫಿನ ಮೂಲಕ

ಪಾರ್ಲರ್ ನಲ್ಲಿ ಇದುವರೆಗೆ ಇಣುಕಿದ್ದು ಹೆಣ್ಣು ಮಕ್ಕಳು ಮಾತ್ರ ಆದರೆ ಮೊದಲ ಬಾರಿಗೆ ಪುರುಷನೊಬ್ಬರು ರಂಗಪ್ರವೇಶ ಮಾಡಿದರು. ವೀರೇಶಕುಮಾರ ಬೆಟಗೇರಿ ಪಾರ್ಲರ್ ಹೊಕ್ಕರು.     

ಈಗ ಸ್ಫೂರ್ತಿ ಗಿರೀಶ್ ಸಿಕ್ಕಿದ್ದಾರೆ ಪಾರ್ಲರ್ ನಲ್ಲಿ  

jayanth kaikini vachike

ನಿಮ್ಮ ಮನದಾಳದೊಳಗೂ ನವಿರಾದ ಭಾವಗಲಿದ್ದರೆ ತಡ ಯಾಕೆ?

ನೀವೂ ಬರೆದು ಕಳಿಸಿ

jayanth kaikini

 

ಸ್ಫೂರ್ತಿ ಗಿರೀಶ್ 

 

ಮದುಮಗಳು ಹೊರ ಹೋದ ಮೇಲೆ ಕುಮುದಳ ಕೆನ್ನೆಗಳೂ ಕೆಂಪಗಾದವು.

ಒಂದಲ್ಲ ಒಂದು ದಿನ ಹೀಗೆ ಮದುಮಗಳ ಮೇಕಪ್ ನಲ್ಲಿ ನಾನು ಕೂಡ ಓಡಿಹೋದೇನೂ. ಇಲ್ಲಿಯೇ ನನ್ನ ಹುಬ್ಬುಗಳು ಚೂಪುಗೊಳ್ಳುವುವು. ಕಾಣದ ಬೆರಳುಗಳು ಅವಳ ಕಣ್ಣಿನ ಮೇಲೂ ಸುರು ಸುರುಳಿಯಾಗಿ ಚಲಿಸಿದಾಗ ಎಂತಹ ರೋಮಾಂಚಕ ಅನಿಸಿ ಒಂದು ಕ್ಷಣ ಅವಳ ಬಾಯಿಯಲ್ಲಿ ಹುಬ್ಬು ಕೆತ್ತಲು ಕಚ್ಚಿ ಹಿಡಿದ ದಾರ ಸಡಿಲಗೊಂಡಿತು.

make up kit“ಏ ಕುಮುದ ನಿನ್ನ ಬೆರಳುಗಳು ಮಸಾಜ್ ಮಾಡಲು ಹೇಳಿಮಾಡಿಸಿದಂತೇ ನೀಳವಾಗಿ ಮೃದುವಾಗಿವೆ. ಹಿತವಾಗಿ ಕಣ್ಣಿನ ಮೇಲೆ ಸುರುಳಿ ಸುತ್ತುವೆಯಲ್ಲ ಆವಾಗಂತೂ ಪುರಾಣದಲ್ಲಿ ಗಂಧರ್ವ ಕನ್ಯೆಯರು ಯುವರಾಣಿಯನ್ನು ಹಾಲಿನ ಕೊಳದಲ್ಲಿ ಮೀಯುಸುತ್ತಿದ್ದರಂತಲ್ಲ ಅಂತ ಭಾವ ಥೇಟು ಆಹಾ! ” ಅವಳ ಕೈಚಳಕ ಹೊಗಳದವರೇ ಇಲ್ಲ.

“ಇವತ್ತು ಎಷ್ಟು ಇರಿಸು ಮುರಿಸು ಗೊತ್ತೇನೆ ಆ ಪಿ.ಟಿ ಮಾಸ್ಟರ್ ಒಂಥರಾ ನೋಡುವನು,  ನನಗೆ ಅಂತಹ ವಯಸ್ಸೇನೇ ಸ್ವೀಟ್ ಸಿಕ್ಸ್ಟೀನ್ ಅಲ್ಲ ನಾನು ಎಷ್ಟೋ ಸಾರಿ ಅನಿಸುವುದು ಈ ಬಿಳಿಯ ಕೂದಲು ಎದ್ದು ಕಾಣುವಂತೆ ಬಣ್ಣ ಮೆತ್ತದೆ ಹಾಗೇ ಬಿಟ್ಟು ಬಿಡಬೇಕು ಆವಾಗ ನೋಡುವಾ ಯಾವನು ನೋಡುತ್ತಾನೆ ಅಂತ, ಆದರೂ ಮನಸ್ಸು ತಡೆಯೋದಿಲ್ಲ ಕಣೇ ಎಲ್ಲವೂ ಅಭ್ಯಾಸವಾಗಿದೆ ನನ್ನ ಮುಖ ನನಗೆ ಚಂದ ಅನಿಸದಿದ್ದರೆ ಜಿಗುಪ್ಸೆ ಅನಿಸುವುದಿಲ್ಲವೇ. ಕುಮುದ ಈ ಮೀಸೆಯ ಜಾಗದಲ್ಲೂ ಸ್ವಲ್ಪ ದಾರವಾಡಿಸಿ ಬಿಡು” ಅಂದಾಗ ಕುಮುದ ಸಣ್ಣಗೆ ನಗುತ್ತಾ ಆಂಟಿ ನಿಮಗೆ ಮೀಸೆ ಬಂದಿದ್ದರೆ ನಾನೇ ಹಾರಿಸಿಕೊಂಡು ಹೋಗುತ್ತಿದ್ದೆ ಅಂದುಕೊಂಡಳು.

ಆ ಕ್ಷಣ ಸುಸ್ತಾಗಿ ಇಣುಕಿದ ದೇಹಕ್ಕೆ ಕತ್ತಿನ ಮೇಲೆ ಮುಖವೇ ಇರಲಿಲ್ಲ. ಕುಮುದ ಸ್ವಲ್ಪ ಬಗ್ಗಿ ಇದೇ ಫಸ್ಟ್ ಟೈಮಾ ಅಂದಳು. ಆ ಕಡೆಯಿಂದ ದನಿಯಿರದೇ ಮೌನದಿಂದ ಕತ್ತು ಉಂ ಅಂತ ಅಲ್ಲಾಡಿತು. ನೋಡಿ ಅಲ್ಲಿ ಎದುರಿಗೆ ಬೋರ್ಡ್ ನ್ನು ಒಂದ್ಸಾರಿ ಓದಿಕೊಂಡು ಬಿಡಿ, ಯಾವುದಕ್ಕೆ ಎಷ್ಟೆಷ್ಟು ಅಂತ. ನಿಮ್ಮ ಕೂದಲು ನಯಗೊಳಿಸಿ ಸ್ಟೆಪ್ ಮಾಡಿ, ಗೋಲ್ಡ್ ಫೇಶೀಯಲ್ ಮಾಡ್ಕೊಂಡ್ರೇ ಥೇಟು ಕನ್ನಡವಲ್ಲ ಹಿಂದಿ ಹೀರೋಯಿನ್ನೇ ನೀವು. ಮೈನ್ಟೇನ್ ಮಾಡೋಕೆ ಕ್ರೀಮು, ತಲೆಕೂದಲಿನ ಎಣ್ಣೆ, ಶಾಂಪು ನಿಮಗೊಪ್ಪುವ ಬಿಂದಿಕೂಡ ಇಲ್ಲಿಯೇ ಉಂಟು. ಒಮ್ಮೆ ನೀವು ಇಲ್ಲಿ ಬಂದಿದ್ದೀರಲ್ಲ ಇನ್ನೂ ನೀವು ರೋಡ್ಮೇಲೆ ನಡೆದರೆ ತೇರುಹೋದಂತೆ ಜನ ತಿರುಗಿನೋಡಬೇಕು ಹಂಗೆಮಾಡುವೆವು ನೋಡಿ ಬೇಕಾದರೆ ಅಂದಳು.

ಆ ಕಡೆಯಿಂದ ಧ್ವನಿ ಸಣ್ಣಗೆ ನನಗೆ ಐಬ್ರೋ ಸಾಕು ಈಚೆಗೆ ಉದ್ದ, ಅಡ್ಡ ದಿಡ್ಡಿ ಬೆಳೆದುಕೊಂಡು ಮುಖಕ್ಕೆಲ್ಲಾ ಐಬ್ರೋನೇ ಅಂಟಿದಂಗೆ ಇರಿಸುಮುರಿಸು ಅಲ್ಲದೇ ಅಷ್ಟು ದುಡ್ಡೂ ಇಲ್ಲ ನನ್ನ ಹತ್ರ ಹೊಸದಾಗಿ ಗಾರ್ಮೆಂಟ್ಸ್ ಗೆ ಸೇರಿಕೊಂಡೆ ಅಂದಿತು. ಕುಮುದಳಿಗೆ ಪಾಪ ಅನಿಸಿದರೂ ಪಾರ್ಲರ್ ಅವಳದಾಗಿರಲಿಲ್ಲ. ಅವಳು ಎಷ್ಟು ಉದಾರಿ ಅಂದರೆ ಬಿಡುಬೀಸಾಗಿ ಅಲೆಯುವ ಹುಣ್ಣಿಮೆಚಂದ್ರನ ಮುಖಕ್ಕೂ ಬಿಟ್ಟರೆ ಬಿಟ್ಟಿಯಾಗಿ ಫೇಶಿಯಲ್ ಮಾಡಾಳು.

“ಅಷ್ಟೊತ್ತಿಗೆ ಕಿಟಕಿ ಗಾಜು ಒರೆಸುತ್ತಿದ್ದ ಅವಳ ತಮ್ಮ ಕೂಗುತ್ತಾ ಬಂದು ಅಕ್ಕ ಮುಗೀತಾ ಮನೆಗೆ ಹೋಗುವಾ ಅವ್ವ ಕಾಯುವಳು ಅಲ್ಲದೇ ನಾವು ಹೋಗುವವರೆಗೆ ಅವಳು ಅನ್ನ ಮಾಡಲು ಸಾಧ್ಯವೇ ಇಲ್ಲ ಅಕ್ಕಿ ತಗೊಂಡು ಹೋಗಬೇಕು ನೆನಪಿದೆ ತಾನೇ ನಿನಗೆ ” ಒಂದೇ ಉಸುರಿಗೆ ಒದರಿದನು. ಕುಮುದ ಕಣ್ಸನ್ನೆಯಿಂದ ಕತ್ತಿನಮೇಲೆ ಈಗ ತೆಳುವಾಗಿ ಮುಖ ಗೋಚರವಾದ ಹುಡುಗಿಯನ್ನು ತೋರಿಸಿ ಅವಳಿಗೆ ಹುಬ್ಬು ಕೆತ್ತಿ ಬರುವವಳಂತೆ ಸನ್ನೆ ಮಾಡಿದಳು. ಅವನು ನಿಲ್ಲದೇ ಮತ್ತೆ ಎಲ್ಲಿಗೋ ಹೊರಗೆ ಓಡಿದನು.

 

‍ಲೇಖಕರು Admin

February 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: