ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಯ್ಕಿಣಿ 'ಪಾರ್ಲರ್'ನಲ್ಲಿ ತಗಲಾಕ್ಕೊಂಡೆ.. ನಾನು ತಗಲಾಕ್ಕೊಂಡೆ..

ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು.  ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು.
ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು.
ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು.
kaikini
 
ನಿಮಗೂ ಇಷ್ಟವಾದರೆ ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ ಎಂದು ಕೇಳಿದ್ದೆವು ..
ಹಾಗೆ ಮುಂದುವರೆದ ಎರಡು ಲಹರಿಗಳು ಇಲ್ಲಿವೆ. ಅದಕ್ಕೆ ಎಸ್ ಪಿ ವಿಜಯಲಕ್ಷ್ಮಿ ತಮ್ಮದೊಂದು ಹೂ ಸೇರಿಸಿದರು
ನಂತರದ ಸರದಿ ಚೈತ್ರಾ ಅವರದ್ದು. ತಮ್ಮ ಹುಬ್ಬುಗಳ ಲೋಕವನ್ನು ಅವರು ಹಿಡಿದಿಟ್ಟರು.
ರೇಷ್ಮಾ ನಾರಾಯಣ ಉಪ್ಪುಂದ ಈ ಲಹರಿಯನ್ನು ಮುಂದುವರಿಸಿದರು. ಕರ್ಚೀಫಿನ ಮೂಲಕ
ಪಾರ್ಲರ್ ನಲ್ಲಿ ಇದುವರೆಗೆ ಇಣುಕಿದ್ದು ಹೆಣ್ಣು ಮಕ್ಕಳು ಮಾತ್ರ ಆದರೆ ಮೊದಲ ಬಾರಿಗೆ ಪುರುಷನೊಬ್ಬನ ರಂಗಪ್ರವೇಶವಾಗಿದೆ. ವೀರೇಶಕುಮಾರ ಬೆಟಗೇರಿ ಪಾರ್ಲರ್ ಹೊಕ್ಕಿದ್ದಾರೆ.      
jayanth kaikini vachike
ನಿಮ್ಮ ಮನದಾಳದೊಳಗೂ ನವಿರಾದ ಭಾವಗಲಿದ್ದರೆ ತಡ ಯಾಕೆ?
ನೀವೂ ಬರೆದು ಕಳಿಸಿ
jayanth kaikini
ವೀರೇಶಕುಮಾರ ಬೆಟಗೇರಿ
ಸರ್ ನಿಮ್ಮ ರೂಪಕ ಅತ್ಯದ್ಬುತ ಸರ್ , ಇದನ್ನು ಮುಂದುವರೆಸಿದ ಸಂಯುಕ್ತರವರ ಕಲ್ಪನೆಯು ಚನ್ನಾಗಿದೆ ಅದನ್ನೇ ಮುಂದುವರೆಸೋಣ ಎಂದೆನಿಸಿ ಬರೆದಿದ್ದೇನೆ.
ಈ ಹೆಂಗಸು ಕಣ್ಣು ಮುಚ್ಚಿ ಕಂಫ಼ರ್ಟ್ ಸೀಟಿಗೊರಗಿ, ಸಿದ್ಧಳೆಂಬಂತೆ ಹುಬ್ಬು ಮೇಲೇರಿಸುತ್ತಾಳೆ…
ಹಾಗೇ ಕಣ್ಣು ಮುಚ್ಚಿದ್ದಾಳೆ ಒಮ್ಮೆಲೇ ಪಾರ್ಲರ್ ನ ಬೆಡಗಿ ”ಬರೀ ಐಬ್ರೋ ಸಾಕಾ ಆಂಟೀ, ಫ಼ೇಶಿಯಲ್ ಮಾಡಿಸಿಕೊಳ್ಳಿ, ಸ್ಕಿನ್ ತುಂಬಾ ಡ್ರೈ ಆಗಿದೆ” ಎಂದು ಇನ್ನೊಮ್ಮೆ ಕಿವಿಯಲ್ಲಿ ಊದಿದಂತಾದಾಗ ಬಾಯಿಯಲ್ಲಿನ ನಾಲಿಗೆ ತನ್ನಷ್ಟಕ್ಕೆ ತಾನೇ ಹೇಳಿತ್ತು. ಜೊಂಡು ಕಟ್ಟಿದ ಅಂಟಿಯ ಕೆನ್ನೆಯನ್ನು ಬ್ಯೂಟಿಪಾರ್ಲರ್ ನವಳು ಮುಟ್ಟಿದಾಗ ಹದಿನಾರರ ಹರೆಯದಲ್ಲಿ ನನ್ನ ಅಜ್ಜಿ ಕೆನ್ನೆಗೆ ಸವರಿದ್ದ ಅರಿಷಣದಿಂದಾಗಿ ವಯಸ್ಸು 50 ತ್ತಾದರೂ ಬ್ಯೂಟಿ ಬಾಡದಂತಿತ್ತು.
ನಾನು ಇನ್ನು ಸುಂದರವಾಗಿಯೇ ಇರುತ್ತದ್ದೇ ಸಮುದ್ರದಂತ ಸಮಾಜದಲ್ಲಿ ಬರೀ ಸಮಸ್ಯೆ ಎಂಬ ಅಲೆಗಳ ಜೊತೆ ಈಜಾಡಿ ಹೀಗಾಗಿದ್ದೇನೆ. ಏನವನ ವಯ್ಯಾರ ಆ ದಿನಗಳಲ್ಲಿ ಅವನೇ ನನ್ನ ಹೀರೋ. ಹಳೆ ಬಜಾಜ್ ಚೇತಕ್ ಹತ್ತಿಕೊಂಡು ಬಂದರೆ ನೋಡುವದೇ ಸಂಭ್ರಮ. ಆ ದಿನಗಳೇ ಹಾಗೆ …
ಕಣ್ಣು ಬಿಟ್ಟಾಗ ತಾನು ನಾಲ್ಕನೇ ಅಂತಸ್ತಿನ ಮೇಲಿರುವ ನೆನಪಾಯಿತು. ನಾನು ಮೊದಲು ಕೆಳ ಅಂತಸ್ತಿನಲ್ಲಿದ್ದೆ. ಹಳೆ ಚೇತಕ್ ಗಾಡಿ ಬಿಟ್ಟು ಮಾರುತಿ 800 ಕಾರು ಏರಿದಾಲೇ ಸಮಾಜದ ಅಂತಸ್ತಿನ ಒಂದೊಂದೆ ಮೆಟ್ಟಿಲು ಏರಿದ್ದು. ಕಾಲಡಿಯಲ್ಲಿ ನೆಲಹಾಸು ಒರೆಸುವ ಹುಡುಗ ಕನ್ನಡಿ ಮುಗಿಸಿ ನೆಲಕ್ಕೆ ಕೈಹಾಕಿದ್ದ ಹುಡುಗನ ಕೈಚಳಕದಿಂದ ನೆಲವೆಷ್ಟು ಶುಭ್ರವಾಗಿದೆ ಎಂದೆನಿಸಿತು.
ಹಾ ಹತ್ತಿಯ ಹಣ್ಣಿನಂತೆ ಈ ಬದುಕು ಹಳೆ ಚೇತಕ್ ಗಾಡಿ ಬಿಟ್ಟಿದ್ದಕ್ಕೆ ಈ ಸಮಾಜ ನನ್ನನ್ನ ನಾಲ್ಕು ಸಂಘ ಸಂಸ್ಥೆಗಳಿಗೆ ಅಧ್ಯಕ್ಷೆ ನಾಯಕಿಯನ್ನು ಮಾಡಿರುವುದು.. ಯಾಕಂದರೆ ದುಡ್ಡಿದೆಯಲ್ಲಾ .. ಕೆಳಗೇನೆ ಇರಲಿ ನೆಲಹಾಸು ಶುಭ್ರವಾಗಿದೆಯಲ್ಲಾ ಅನಿಸಿತು. ಕಾಯುವ ಹುಡಗನಿಗಾಗಿ ಮೆಟ್ಟಲಿನಿಂದ ಇಳಿಯುತ್ತದ್ದ ಸುಂದರಿಯನ್ನು ನೋಡಿದ ಮಧುಮಗ ಲಿಫ್ಟ್ ಎಂದು ಸನ್ನೆ ಮಾಡಿದ ..
ದೂರದವಳು ಹತ್ತಿರ ಬಂದು ಕರೆಂಟು ಇಲ್ಲಾ ಎಂದಳು ಮರು ಮಾತಾಡದೆ ಬೈಕ್ ಮೇಲ್ಹೇರಿಕೊಂಡು ಹೊರಟ.. ಬಿನ್ನಾಣದ ಚಲುವೆಗೆ ಪರಮಾಶ್ಚರ್ಯ ಪಾರ್ಲರ್ ನ ಬೆಡಗಿ ಬೊಂಬೆಯಂತೆ ಸಿಂಗಾರ ಮಾಡಿ ಕಳುಹಿಸಿದ್ದಳು.  ನನ್ನವ ನನ್ನ ನೋಡಿ ಹೊಗಳಿಕೆಯ ಮಾತೇಕೆ ಆಡಲಿಲ್ಲ.. ಸಮಾಜವೆಂಬ ರಭಸದ ನೀರನ್ನು ಸೀಳಿ ತನ್ನವನ ಬೈಕು ಮುನ್ನುಗ್ಗುತ್ತಿದೆ.
ಅದಕ್ಕೇನು ಗೊತ್ತು ಮಾಲಿಕನ ಹುಡುಗಿ ಬೇಸರದಿಂದ ಇರುವಳೆಂದು, ನಡುವೆ ಸಿಗುವ ಕೆರೆ, ಕೆರೆಯಲ್ಲಿ ಬಿರು ಬಿಸಲಿಗೆ ಈಜಾಡುವ ಅರೆನಗ್ನ ದೇಹಗಳನ್ನು ನೋಡಿದರೂ ಕಣ್ಣ ಮನಸ್ಸು ತನ್ನವನ ಹೊಗಳಿಕೆ ಮಾತುಗಳಿಗೆ ಕಾಯುತ್ತಲಿತ್ತು.
ಕಣ್ಣು ಬಿಟ್ಟಾಗ 50ರ ಹರೆಯ ಈಗ 35ಕ್ಕೆ ಜಾರಿದಂತಿದೆ. ಇದ್ದಕ್ಕಿದ್ದಂತೆ ಮಧುಮಗಳಾಗುವವಳಿಗೆ ಒಳಗೊಳಗೇ ಅನುಮಾನ. ನನ್ನ ಮೇಕಪ್ ಏನಾಯಿತು. ಹೌದಲ್ಲಾ..  ಲಿಫ್ಟ್ ಇಲ್ಲಾ ಅಂತ ನಾಲ್ಕು ಅಂತಸ್ತು ಇಳಿದಾಗ..  ಬಣ್ಣ ಕರಗಿ ಮುಖದ ಅಸಲಿಯತ್ತು ಹಾಗೇ ಮೂಡಿತ್ತು. 35ರ ಹರಯ ಲಿಫ್ಟ್ ಇಲ್ಲದಿದ್ದಾಗ ಮತ್ತೆ 50 ಕ್ಕೇ ಬಂದು ಕುಳಿತಿತ್ತು.

‍ಲೇಖಕರು Avadhi

28 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading