ಇದೇ ಮೊದಲ ಬಾರಿಗೆ ‘ಅಂಕಿತ ಪುಸ್ತಕ’ ತನ್ನ ಮಳಿಗೆಯಲ್ಲಿ ಬರಹಗಾರರ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಜಯಂತ ಕಾಯ್ಕಿಣಿ ಈ ಕಾರ್ಯಕ್ರಮದ ಮೊದಲ ಅತಿಥಿ. ಒಂದು ಇಡೀ ದಿನ ಕಾಯ್ಕಿಣಿ ತಮ್ಮ ಓದುಗರನ್ನು ಭೇಟಿ ಮಾಡುವ, ಹಸ್ತಾಕ್ಷರ ನೀಡುವ ಕಾರ್ಯಕ್ರಮ ಇದು.
ಕಾಯ್ಕಿಣಿಯವರೂ ಬೆರಗಾಗುವಂತೆ ಬೆಳಗ್ಗೆಯಿಂದ ಸಂಜೆಯವರೆಗೆ ಓದುಗರು ಓತಪ್ರೋತವಾಗಿ ಹರಿದು ಬಂದರು. ಕಾಯ್ಕಿಣಿ ಕಥೆ ಕೇಳಿದರು, ತಮ್ಮ ಕಥೆಯನ್ನೂ ಹೇಳಿದರು. ಸಂಜೆ ವೇಳೆಗೆ ಪ್ರಕಾಶ್ ಕಂಬತ್ತಳ್ಳಿ ದಂಪತಿಗಳ ಮುಖದಲ್ಲಿ ಸಾಕಷ್ಟು ಬೆಳಕಿತ್ತು
ಚಿತ್ರಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ
[gallery order="DESC" columns="4" orderby="ID"]]]>
ಕಾಯ್ಕಿಣಿ ಕಿಂಕಿಣಿ
ನಿಮಗೆ ಇವೂ ಇಷ್ಟವಾಗಬಹುದು…





ಪ್ರಕಾಶ್ ಕಂಬತ್ತಳ್ಳಿ ದಂಪತಿಗಳಿಗೆ ಹಾಗುಜಯಂತ್ ಕೈಕಿಣಿ ಅಬಿನಂದನೆಗಳು, ಇದು ನಿರಂತರವಾಗಿರಲಿ .RAVI VARMA HOSAPETE
ಈ ಗೆಳೆಯರಿಬ್ಬರೂ ಹೊಸ ಪರಿಪಾಠಕ್ಕೆ ‘ಅಂಕಿತ’ ಹಾಕಿದ್ದಾರೆ… ಇಂಥ ಸಂಭ್ರಮಗಳು ಸದಾ ನಮಗೊದಗಿ ಬರಲಿ.
ಪ್ರೀತಿಯ ಪ್ರಕಾಶ್‍ರವರಿಗೆ,
ನಿಮ್ಮ ಈ ಪ್ರಯೋಗ ನಿಜಕ್ಕೂ ಅಭಿನಂದನಾರ್ಹ. ಆದರೆ ನನ್ನ ಪ್ರಕಾರ ಪ್ರಯೋಗ ಪ್ರಸ್ತುತವಾದ ಸಮಯ ಸರಿ ಇರಲಿಲ್ಲ.
ಬೆಂಗಳೂರಿನಲ್ಲಿ ಹೆಚ್ಚಿನ ಜನ ನನ್ನ ಹಾಗೆ ವಲಸಿಗರೆ. ಯುಗಾದಿ ಹಬ್ಬ…ಅದೂ ವಾರದ ಕೊನೆ. ಮೂರು ದಿನದ ರಜ. ಏಲ್ಲ ವಲಸಿಗರೂ ಹಬ್ಬ ಆಚರಿಸಲಿಕ್ಕೆಂದು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ನೀವು ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಬಾರದಿತ್ತು. ಇದರಿಂದ ನನ್ನಂತ ಬಹಳಷ್ಟು “ಜಯಂತ್” ಸಾರ್ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಸಾಧ್ಯವಾದರೆ ಈ ಕಾರ್ಯಕ್ರಮವನ್ನು ಮತ್ತೊಂದು ಭಾನುವಾರ ಆಯೋಜಿಸಿ. ಹಾಗೆ, ಮುಂದಿನ ಪ್ರಯೋಗಗಳನ್ನು ಎಲ್ಲರ ಲಭ್ಯತೆಯನ್ನು ಗಮನಿಸಿ ಆಯೋಜಿಸ ಬೇಕೆಂದು ಬಿನ್ನಹ.
-ಹರಿ
ಎಲ್ಲ ಫೋಟೋಗಳು ತುಂಬಾನೇ ಚೆನ್ನಾಗಿ ಬಂದಿದೆ.