ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲೋ ಜೋಗಪ್ಪ ನಿನ್ನರಮನೆ…

ಜೋಗಿ.

ಗೊತ್ತಿರುವವರಿಗೆ ಇಷ್ಟೆ ಸಾಕು. ಬರವಣಿಗೆಯಲ್ಲಿ ಗಾಢತೆ. ಅಷ್ಟೇ ಮೊನಚು. ಲಘು ಧಾಟಿಯಲ್ಲೂ ಲಂಘನದ ತಾಕತ್ತು. ಜೋಕಿನಲ್ಲೂ ಗಾಂಭೀರ್ಯದ ಜೀಕು. ಓದಿನ ವಿಸ್ತಾರ ಮತ್ತು ನಿರಂತರತೆ. ಅದರಿಂದ ಬರವಣಿಗೆಗೆ, ಇಬ್ಬನಿ ಅಂಟಿಸಿಕೊಂಡ ಹೂವಿನ ತಾಜಾತನ. ಸಾಮಾನ್ಯ ಓದುಗನಿಗೂ ಗ್ರಹಿಕೆಗೆ ಬರುವಂತೆ ಬರವಣಿಗೆಯ ಶೈಲಿ… ಇವೆಲ್ಲ ಜೋಗಿಯವರ ಸ್ಪೆಷಾಲಿಟಿ.

jogi.jpgಕನ್ನಡ ಪ್ರಭದಲ್ಲಿ ಸಾಪ್ತಾಹಿಕ ಪುರವಣಿಗಳ ಉಸ್ತುವಾರಿ. ಸಾಹಿತ್ಯ, ಸಿನೆಮಾಗಳಿಂದ ಮೊದಲಾಗಿ ಮನೆ ಸಾಲ, ಕಾರುಗಳ ಮಾಡೆಲ್ ಬಗ್ಗೆಲ್ಲಾ ಚರ್ಚಿಸುವಷ್ಟರವರೆಗೆ ಅವರ ಆಸಕ್ತಿಯ ವಿಶಾಲತೆ. 

ಜೋಗಿಯವರ ಹಾಗೆಯೇ ಬರೆಯುತ್ತಾರೆ ಎಂಬ ಕಾರಣದಿಂದಾಗಿಯೇ, ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಕಾಲಂ ಬರೆವ ಜಾನಕಿ ನಮಗೆಲ್ಲ ಅಚ್ಚುಮೆಚ್ಚು. ಜೋಗಿಯವರ ಹಾಗೆಯೇ ಜಾನಕಿ ಕೂಡ ಓದುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುವಷ್ಟು ಮಟ್ಟಿಗೆ ಆ ಕಾಲಂನ ರುಚಿ ಕಾಪಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಹೊಟ್ಟೆಕಿಚ್ಚು.

ಇರಲಿ. ಸತತವಾಗಿ ಬರೆಯುವ, ಆದರೂ ಕಸುವು ಉಳಿಸಿಕೊಂಡಿರುವ, ವಿಭಿನ್ನ ಬಗೆಯಲ್ಲಿ ಆಲೋಚಿಸುವ ಜೋಗಿಯವರು ತಮ್ಮ ಆ ಆ ಗಳಿಗೆಯ ಯೋಚನೆಗಳನ್ನು ದಾಖಲಿಸಲು ಒಂದು ಬ್ಲಾಗ್ ಕೂಡ ಮಾಡಿಕೊಂಡಿದ್ದಾರೆ. ಇಲ್ಲಿ ಬಲಗಡೆಯಿರುವ ಲಿಂಕ್ಸ್ ಅಡಿ “ಜೋಗಿಮನೆ” ಕ್ಲಿಕ್ಕಿಸಿದರೆ ನೇರ ಜೋಗಪ್ಪನರಮನೆ ತಲುಪುತ್ತೀರಿ.

ಕಾಡು ಬೆಳದಿಂಗಳಲ್ಲಿ ಹುಷಾರು ಮಾರಾಯ್ರೆ!

‍ಲೇಖಕರು avadhi

15 June, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading