ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುವ ಆ ಮನಸೇ, ಮಳೆ ಹನಿಗಳಾಗಿ ನನ್ನ ಅಪ್ಪಳಿಸಬಾರದೇ…

– ಸುಜಾತಾ ವಿಶ್ವನಾಥ್

ಮಳೆ ಬಂತೆಂದರೆ ಎಲ್ಲರಿಗೂ ಎಲ್ಲಿದ ಸಂಭ್ರಮ ಮನೆಮಾಡಿರುತ್ತದೆ. ಒಬ್ಬೊಬ್ಬರಿಗೊಂದೊಂದು ರೀತಿ ಖುಷಿ ಕೊಡುತ್ತದೆ. ಮಳೆ ಬಂದು ಧರೆ ತಂಪಾಗಿ, ರೈತರೆಲ್ಲ ಮುಂಗಾರಿನ ಬಿತ್ತನೆಗೆ ಸಿದ್ದವಾಗಿದ್ದಾರೆ. ಕೆಲವೇ ಕೆಲವು ಹೃದಯಗಳು ಮಾತ್ರ ಪ್ರೀತಿ ಆ ಸುಳಿಯಲ್ಲಿ ಸಿಕ್ಕಿ ಒದ್ದಾಡುವ, ಆ ನೆನೆಪುಗಳ ಬೆಗುದಿಯಲ್ಲಿ ಮುಳುಗಿರುತ್ತವೆ. ಆದರೆ ಮಳೆ ಬಂದಾಗಲೆಲ್ಲಾ, ಅಂಥವರಲ್ಲಿ ನೋವು, ಆತಂಕ ಮನೆ ಮಾಡಿಬಿಡುತ್ತದೆ. ಮಳೆ ನನ್ನನ್ನು ಕಾಡುವಷ್ಟು ಬೇರೆ ಯಾರನ್ನೂ ಕಾಡದೇನೋ ಎಂಬ ಭಾವನೆ ನನ್ನಲ್ಲಿ ಮೂಡುತ್ತದೆ. ಮಳೆ ಗುಡುಗು, ಸಿಡಿಲು, ಮಿಂಚಿನಿಂದ ಅಬ್ಬರಿಸುತ್ತಿದ್ದರೆ, ನನ್ನ ಮನವೆಲ್ಲ ಆ ಏಕಾಂತದ, ಆ ಅನುಭವದ, ಆ ಗೆಳೆತನದ ನೆಪುಗಳೆಲ್ಲನ್ನೆಲ್ಲ ಹೊತ್ತು ತರುತ್ತದೆ. ಅಲ್ಲದೆ ನೋವೆಂಬ ಬೇಗುದಿಯಲ್ಲಿ ಬೇಯುವಂತೆ ಮಾಡುತ್ತದೆ. ಆದರೂ ಆ ನೋವಿನಲ್ಲೂ ನನ್ನೆದೆಯ ನೋವಿನ ಕಟ್ಟೆ ಹೊಡದು ಮನಸ್ಸಿಗೇನೋ ಹಿತವೆನಿಸುತ್ತದೆ.
ಮಳೆಯಲ್ಲಿ ಅಳುವುದು ನನಗಿಷ್ಟ. ಯಾಕೆಂದರೆ ಮಳೆಯಲ್ಲಿ ಅತ್ತರೆ ನನ್ನ ಕಣ್ಣೀರು ಯಾರಿಗೂ ಕಾಣಿಸುವುದಿಲ್ಲವಲ್ಲಾ. ಎಂದು ಎಷ್ಟು ಸತ್ಯವಾದ, ಅದ್ಭುತವಾದ, ಮಾತನ್ನು, ಚಾಲರ್ಿ ಚಾಂಪ್ಲಿನ್ ಹೇಳಿದ್ದಾರಲ್ಲವೇ? ಬದುಕಿನ ಈ ಹೋರಾಟದಲ್ಲಿ ನಾನು ಸಹ ಎಷ್ಟೋ ಬಾರಿ ನಿಸ್ಸಹಾಯಕವಾಗಿ ಅತ್ತದ್ದೂ ಉಂಟು. ಅಂಥಾ ನೋವಾದಗಲೆಲ್ಲ ಮಳೆ ಬರಬಾರದೇ ಎಂದು ಮನ ಹಾತೊರೆಯುತ್ತದೆ. ಅ ಗೆಳೆಯನ ನೆನಪಾಗುತ್ತದೆ. ಸಮಾದಾನ ಮಾಡುವ ಅವನ ಕೈ ನನಗೆ ಬೇಕೆನಿಸುತ್ತದೆ. ಅಂಥಾ ಸಂದರ್ಭದಲ್ಲಿ ಮಳೆ ಧೋ…ಎಂದು ಸುರಿಯಬಾರದೇ ಎಂದು ಮನ ಆಕಾಶವನ್ನೇ ದಿಟ್ಟಿಸಿ ನೋಡುತ್ತದೆ.
ಹೈಸ್ಕೂಲ್ ವ್ಯಾಸಂಗ ಮುಗಿಸಿ ನನ್ನ ಸಹಪಾಠಿಗಳೆಲ್ಲ ಬೇರೆ ಬೇರೆ ಕಾಲೇಜಿಗೆ ಸೇರಿದ್ದೇವು. ಆದರೂ ವಾರಕ್ಕೊಮ್ಮೆಯಾದರೂ ಒಬ್ಬರನ್ನೊಬ್ಬರು ನೋಡದೇ ಇರುತ್ತಿರಲಿಲ್ಲ. ಆದರೆ ಒಮ್ಮೆ ಹದಿನೈದು ದಿನಗಳಾದರೂ ನನ್ನನ್ನು ನೋಡಲು, ನನಗಿಷ್ಟವಾದ ಗೆಳೆಯ ಬರಲಿಲ್ಲ. ಮನಸ್ಸಿನಲ್ಲೇನೋ ಒಂದು ರೀತಿಯ ತಳಮಳ, ಕಸವಿಸಿ, ಏನನ್ನೋ ಕಳೆದುಕೊಂಡ ಭಾವ ಅವನು ಬರಲಿಲ್ಲವೆಂಬ ದುಗುಡ, ಮನದ ತುಂಬೆಲ್ಲ ತುಂಬಿತ್ತು. ದಿನಾಲು ನಾವು ಸೇರುತ್ತಿದ್ದ ಆ ಜಾಗ ಅವನಿರದೆ ಶೂನ್ಯವಾಗಿತ್ತು. ಅಂದು ಸಂಜೆಯಾದರೂ ಅವನು ಬರುವನೆಂಬ ನಂಬಿಕೆಯಿಂದಲೇ, ನಾನು ಅಲ್ಲಿ ಹೋಗಿ ಕುಳಿತೆ. ನನ್ನ ಅಂತರಾಳವು ಅವನನ್ನು ನೋಡಲು ಆತೊರೆಯುತ್ತಿತ್ತು. ಕಣ್ಣುಗಲಂತೂ ಆ ದಾರಿಯನ್ನೇ ಕಾಯುತ್ತಲಿದ್ದವು. ಅವನ ದಾರಿಯನ್ನೇ ಕಾಯುತ್ತ ಕುಳಿತ ನನಗೆ ಅಂದು ನಿರಾಸೆಯಾಗಲಿಲ್ಲ. ಅವನು ಬಂದೆ ಬಿಟ್ಟ! ಆದರೆ ಅವನು ಬಂದನೆಂಬ ಖುಷಿ ಮನದ ಮೊಲೆಯಲ್ಲಿದ್ದರೂ, ಕೋಪವಂತೂ ಉಕ್ಕಿ ಉಕ್ಕಿ ಬರುತ್ತಿತ್ತು.
ಅವನು ಹತ್ತಿರ ಬಂದವನೇ…’ಸಾರಿ ಕಣೋ ಮನೆಯಲ್ಲಿ ತೊಂದರೆಯಾದ ಕಾರಣ ನಾನು ಬರಲಾಗಲಿಲ್ಲ ಎಂದ’…ನಾನು ಮಾತನಾಡದೇ ಕೋಪದಿಂದ ಅವನನು ದುರುಗುಟ್ಟಿಕೊಂಡು ನೋಡುತ್ತಿದ್ದೆ. ಅಬ್ಬಾ ಅಷ್ಟು ಕೋಪ ಬೇಡ, ನಿನ್ನ ಈ ನೋಟ ನನಗೆ ಸಹಿಸಲಾಗದು…ನನಗೆ ಹುಚ್ಚೇ ಹಿಡಿದು ಬಿಡುತ್ತದೆ. ಎಂದು ಹತ್ತಿರ ಬಂದವನೆ ನನ್ನ ತಲೆ ಸವರಲಾರಂಭಿಸಿದ. ಹಾಗೆಯೇ ಮಂಡಿಯೂರಿ ಕೆಳಗೆ ಕೂತು ನನ್ನ ಕೈ ಹಿಡಿದ.
ಅವನು ಕೈಹಿಡಿದಾಕ್ಷಣ ನನ್ನ ಎದೆ ಡವಡವ ಹೊಡೆದು ಕೊಳ್ಳಲಾರಂಭಿಸಿತು!…ಕೈಕಾಲುಗಳಲ್ಲಿ ನಡುಕ, ಏನೋ ಒಂದು ವಿದವಾದ ಭಯ…ಹಾಗೆ ಮುಂದೆ ಬಂದು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರಂಭಿಸಿದ! ಆ ನೋಟವನ್ನು ಎದುರಿಸುವ ಶಕ್ತಿ ನನಗಿಲ್ಲದೆ ತಲೆ ಬಗ್ಗಿಸಿದೆ. ನನ್ನ ಕಣ್ಣಿಂದ ನೀರು ಬರಲಾರಂಭಿಸಿತು. ಇದೇ ರೀತಿ ಅವನಿಗೂ ಆಗಿರಬೇಕು…ಆದರೆ ಅವನು ಯಾಕೋ ಈ ರೀತಿ ಅಳುತ್ತಿರುವೆ? ಯಾಕೀ ನಡುಕ? ಎಂದು ನನ್ನ ಗಲ್ಲವನ್ನು ಅವನ ಎರಡೂ ಕೈಗಳಿಂದ ಹಿಡಿದ…ಆಗಲಂತೂ ಇನ್ನೂ ನಾನು ಕಕ್ಕಾ ಬಿಕ್ಕಿಯಾಗಿಬಿಟ್ಟೆ.
ಸುತ್ತಲೂ ಮೋಡ ಮುಸುಕಿ ಚಳಿಯಿಂದ ಕೂಡಿದ ತಂಪಾದ ವಾತಾರಣ, ಈಗಲೋ ಆಗಲೋ ಮಳೆ ಬರುವ ಸೂಚನೆ ಕೊಡುತ್ತಿತ್ತ್ತು. ಜೋರಾಗಿ ಮಳೆ ಬಂದು ನಿಂತಂತೆ ಆಗಿತ್ತು ಅವನು ನನ್ನ ಕೈಬಿಟ್ಟಾಗ. ನೀರವ ಮೌನ ನಮಿಬ್ಬಿರಲ್ಲಿ ಆವರಿಸಿತ್ತು. ಆದರೂ ಅವನೋ ಹೇಗೋ ಸಾವರಿಸಿಕೊಂಡು…ಹೇಳಿದ, ನಾನು ಕಾರಣವಿಲ್ಲದೆ ಕಾಲೇಜಿಗೆ ತಪ್ಪಿಸಿಕೊಳ್ಳುವುದಿಲ್ಲವೆಂದು ನಿನಗೆ ಗೊತ್ತಿಲ್ಲವೇ? ಎಂದ. ಅದೆಂತಾ ಕಾರಣ ನೀನು ಕೊಡುವೆಯೋ ಕೊಡು ನೋಡೋಣ. ಎಂದು ಬಿರುಸಿನಿಂದಲೇ ಕೇಳಿದೆ. ಇನ್ನು ‘ನಾನು ಕಾಲೇಜಿಗೆ ಬರುವುದಿಲ್ಲ’…ಆ ಮಾತನ್ನು ಕೇಳಿದ ತಕ್ಷಣ ನನ್ನೆದೆಗೆ ಚೂರಿ ಚುಚ್ಚಿದನೇನೋ ಎನ್ನುವಷ್ಟು ನೋವು ಕಾಡಲಾಂಭಿಸಿತು. ನನ್ನ ಕೋಪ, ದ್ವೇಷಗಳೆಲ್ಲವೂ ಮಂಜಿನಂತೆ ಕರಗಿಬಿಟ್ಟವು. ಯಾಕೋ ಈ ನಿಧರ್ಾರ ತೆಗೆದುಕೊಂಡೆೆ…ಏನಾಗಿದೆ ನಿನಗೆ ಎಂದು ತಬ್ಬಿಬ್ಬಾಗಿಯೇ ಮರು ಪ್ರಶ್ನೆ ಹಾಕಿದೆ. ಅದಕ್ಕವನು ಅದೆಷ್ಟು ಸಮಾಧಾನವಾಗಿ ಉತ್ತರಿಸಿದ್ದನೆಂದರೆ…ಎಷ್ಟು ಸುಲಭವಾಗಿ ಹೇಳಿದನೆಂದರೆ…ಕೇಳಿದ ನನ್ನೆದೆಗೆ ಸಿಡಿಲು ಬಡಿದಂತಾಯಿತು. ಅವನೆದೆಯಲ್ಲಿ ಬರಿಸಲಾಗದ, ನೋವನ್ನು ತುಂಬಿಕೊಂಡಿದ್ದಾನೆಂದು ಭಾಸವಾಗಿತ್ತು. ಅಪ್ಪ ನಮ್ಮಿಂದ ದೂರಾಗಿದ್ದಾರೆ, ಇನ್ನೂ ನನ್ನ ಜೀವನದಲ್ಲಿ ಅಪ್ಪ ನಿಲುಕದ ನಕ್ಷತ್ರವಾಗಿ ಬಿಟ್ಟಿದ್ದಾರೆ. ಅಪ್ಪನ ಸಾವಿನಿಂದ ಅಮ್ಮ ಹೊರ ಬರುತ್ತಿಲ್ಲ. ನಿನಗೆ ಗೊತ್ತಿದೆ ನಮ್ಮ ಮನೆಯ ಪರಿಸ್ಥಿತಿ, ಕೂಲಿ ಮಾಡಿದರೇನೆ ನಮಗೆ ಗಂಜಿ. ಆದ್ದರಿಂದ ಇನ್ನು ಮುಂದೆ ಅಮ್ಮನನ್ನು ಸಾಕುವ ಹೊಣೆ ನನ್ನ ಮೇಲಿದೆ, ಆದ್ದರಿಂದ ನಾನು ಇನ್ನು ಮುಂದೆ ಕಾಲೇಜಿಗೆ ಬರಲಾಗದು…ನಿನ್ನನ್ನೂ ನೋಡಲಾಗದು…ಎಂದ.

ಆ ಮಾತು ಕೇಳುತ್ತಿದ್ದಂತೆ ಭೂಮಿಯೇ ಕುಸಿದಂತಹ ಅನುಭವಾಯಿತು. ತುಂಬಾ ಬುದ್ಧಿವಂತ ಹುಡುಗ ಅವನು, ಅಷ್ಟೇ ಬಡತನವಿತ್ತು ಮನೆಯಲ್ಲಿ. ಅವನೊಬ್ಬನೇ ಮಗನಾದ್ದರಿಂದ ಆ ಜವಾಬ್ದಾರಿಯನ್ನು ಅವನು ತೆಗೆದುಕೊಳ್ಳಬೇಕಾಗಿತ್ತು. ಅವನು ಅಲ್ಲಿ ಪರಿಸ್ಥಿತಿಯ ಕೈಗೊಂಬೆಯಾಗಿದ್ದ. ಮತ್ತೆ ನಮ್ಮಿಬ್ಬರ ಮಧ್ಯೆ ಮೌನ ಆವರಿಸಿಬಿಟ್ಟಿತು.
ಮಳೆ ಬರುವ ವಾತಾವರಣವಿದ್ದುದರಿಂದ ಮಳೆ ಬಂದೇ ಬಿಟ್ಟಿತು. ಇದ್ದ ಒಂದು ಛತ್ರಿಯನ್ನಿಡಿದು ಇಬ್ಬರೂ ಸನಿಹ ಕುಳೆತೆವು. ಆದರೆ ಅವನಿಗೆ ನನಗೂ ಒಬ್ಬರನ್ನೊಬ್ಬರು ಇನ್ನೂ ನೋಡಲಾರೆವೆಂಬ ಆತಂಕದಿಂದ, ಅವನು ಕಣ್ಣಲ್ಲಿ ನೀರು ಬರಲಾರಂಭಿಸಿತು. ಎಂದೂ ಅವನನ್ನು ತಾಕದ ನನ್ನ ಕೈ ಅವನ ಕಣ್ಣೀರು ಒರೆಸಿತ್ತು ಆ ಕ್ಷಣ.
ನನ್ನ ಕೈ ಅವನನ್ನು ತಾಕಿದ ಕೊಡಲೇ…ಇನ್ನೆಂದು ನೀನು ಈ ರೀತಿ ನನ್ನ ಕಣ್ಣೀರು ಒರೆಸುವ, ಸಂದರ್ಭ ಬರುತ್ತದೋ ಇಲವೋ ಎಂದು ನನ್ನ ಕೈಗಳನ್ನು ಮತ್ತೊಮ್ಮೆ ಗಟ್ಟಿಯಾಗಿ ಹಿಡಿದ! ಎಲ್ಲೋ ಒಂದು ಕಡೆ ಇಬ್ಬರಲ್ಲೂ ನೋವಿನ ಮಡುವು ಕಟ್ಟಿತ್ತು. ಅದರಲ್ಲೂ ಮಿಂಚಿನ ಸಂಚಾರವು ಇಬ್ಬರಲ್ಲೂ ಆಗಿತ್ತೇನೋ ಅನಿಸುತ್ತಿತ್ತು. ಆದರೆ ಆಗ ಅದಕ್ಕೆಲ್ಲ ನಮ್ಮಲ್ಲಿ ಜಾಗಿವಿರಲಿಲ್ಲ.
ಇಬ್ಬರ ಕಣ್ಣುಗಳಲ್ಲಿಯೂ ನೀರು ತುಂಬಿದ್ದವು. ಮಳೆ ಜೋರಾಗಿ ಬರುತ್ತಲಿತ್ತು. ಆ ಹನಿಯ ಸಪ್ಪಳದಲ್ಲಿ ನಡುವೆ ಅದೆಂಥಾ ಮಧುರ ಭಾವವಿದು?… ಕಣ್ಣಿಗೆ ಕಾಣದು…ಕೈಗೆ ಸಿಗದು…ಆದರೆ ಮನಸ್ಸಿಗೇನೋ ಹಿತವಾಗಿತ್ತು. ಏನಾದರು ಹೇಳಲೆ ಎಂಬ ತಳಮಳ, ಕಳವಳ ಇಬ್ಬರ ಮನದಲ್ಲೂ ಬುಗಿಲೆದ್ದಿತ್ತು….ನಮಗರಿವಿಲ್ಲದೆ ಪ್ರೇಮದ ಹೂವಂದು ನಮ್ಮಬ್ಬರಲ್ಲಿ ಅರಿಳಿಬಿಟ್ಟಿದೆಯೇನೋ, ಎಂಬ ಆತಂಕ ಆ ಕ್ಷಣ ನಮ್ಮಿಬ್ಬರನ್ನು ಕಾಡಿತ್ತು.
ಮಳೆ ಹನಿಗಳ ಹಿತ…ಘಮ್ಮೆನ್ನುವ ಮಣ್ಣವಾಸನೆ…ಕೊರೆಯುವ ಮಂಜಿನಂತಾ ಚಳಿ…ಆದರೆ ಅವನು ನನ್ನ ಹೃದಯದರಮನೆಗೆ ನುಗ್ಗಲಾರಂಭಿಸಿದ. ಅವನ ರೂಪವನ್ನು ಕಣ್ ತುಂಬಿಕೊಂಡು ನೀ ನನ್ನವನೆಂದು ಮನಸಾರೆ ಹೇಳಿ ಬಿಡಲೆ! ಎಂದು ನನ್ನ ಒಳ ಮನಸ್ಸು ಹೊಂಚು ಹಾಕುತ್ತಲಿತ್ತು.
ಅದ್ಯಾವ ಘಳಿಗೆಯಲ್ಲಿ ನಿನ್ನ ನೋಡಿದೆನೋ…ನನಗೆ ತಿಳಿಯುತ್ತಿಲ್ಲ ಈ ದಿನ ನನ್ನ ಬದುಕಲ್ಲಿ ಎಂದೂ ಮರೆಯಾಲಾಗದ ಅವಿಸ್ಮರಣೀಯ ದಿನ!…ಕಣೇ ಹುಡುಗಿ, ನನ್ನ ಮನ ನನಗರ್ಥವಾಗುವ ಮೊದಲೇ ನಿನ್ನ ಪ್ರೀತಿಗೆ ಶರಣಾಗಿದೆ…ಅದೀಗ ನಿನ್ನ ಅಧೀನಲ್ಲಿದೆ. ಆ ನಿನ್ನ ಸೆಳೆತಕ್ಕೆ ನಾ ಮಾರುಹೋಗಿರುವೆ, ನೂರು ಕನಸುಗಳ ಕಾಣುತ್ತಿದೆ ನನ್ನ ಮನ. ನನ್ನಲ್ಲಿನ…ಅಂತರಾಳದ ಪ್ರೀತಿಯ ಭಾವನೆಗಳಿಗೆ ಬಣ್ಣ ತುಂಬಿದವಳು ನೀನು…ನೀ ಒಮ್ಮೆ ನನ್ನ ಕರೆಯಬಾರದೇ ಇಲ್ಲವೆನ್ನದೆ ನಿನ್ನಲ್ಲಿ ಲೀನವಾಗಿಬಿಡುವೆ ಎಂಬ ಭಾವದಿಂದ ನನ್ನನ್ನು ನೋಡುತ್ತಲಿದ್ದ.
ಮನವೆರಡು ಮಾತನಾಡಿದವೇ ವಿನಃ ನಮ್ಮ ತುಟಿಯ ಮೇಲೆ ಮಾತು ಬರಲಿಲ್ಲ. ಮಳೆ ನಿಂತಿತು. ಇಬ್ಬರಲ್ಲೂ ಮೌನ ಮನೆಆಡಿತ್ತು. ಇಬ್ಬರು ಅವರವರ ದಾರಿಯತ್ತ ಹೆಜ್ಜೆ ಹಾಕಿದೆವು. ಅಂದೆ ನನ್ನಾ ಅವನ ಬೇಟಿ ಕೊನೆಯಾಯಿತು. ಈಗ ಅವನೆಲ್ಲಿರುವನೋ, ಹೇಗಿರುವನೋ ಯಾವುದೂ ನನಗೆ ತಿಳಿದಿಲ್ಲ. ಆದರೆ ನನ್ನಿಂದ ಆ ಮಧುರ ಭಾವನೆಗಳನ್ನು ಮಾತ್ರ ಮರೆಯಲಾಗುತ್ತಿಲ್ಲ. ಮನದ ಭಾವನೆಗಳು ಮೌನವಾಗಿಯೇ ನನ್ನನ್ನು ಸುಡುತ್ತಿವೆ. ಅದೆಷ್ಡು ಸಂಜೆ, ಅದೆಷ್ಟು ಏಕಾಂತ, ಅದೆಷ್ಟು ಮಳೆ ಅವನನ್ನು ನೆನಪಿಸುತ್ತಿವೆ.
ಆದ್ದರಿಂದ ನನ್ನ ಮನ ಆಗಾಗ ಮಳೆ ಬರಲೆಂದು ಹಂಬಲಿಸುತ್ತದೆ. ಆ ಮಳೆಯಲ್ಲಿ ಅತ್ತು ನಾನೇ ನನ್ನನ್ನು ಸಂತೈಸಿಕೊಳ್ಳುವೆ. ಆ ನೆನಪೊಂದೇ ಸಾಕಲ್ಲವೇ? ಮಳೆ ಬಂದಾಗಲೆಲ್ಲ ಆ ಪ್ರೀತಿಯ ಸಿಂಚನ ನನ್ನಲ್ಲಿ ಇಮ್ಮಡಿಯಾಗುತ್ತದೆ…ಮಳೆ ನಿಂತ ಕೊಡಲೆ, ಮತ್ತೆ ಯಾವಾಗ ನೀ ಬರುವೆ ಎಂದು ಆಕಾಶ ನೋಡುತ್ತಿರುತ್ತೇನೆ…
 
ಕಾಡುವ ಮನಸೆ
 
ನನ್ನೆದೆಯ ಸಿಂಹಾಸನದ ಮನೋಹರ
ಹೃದಯ ಕದ್ದ ಮಾಯಾಗಾರ
ಕ್ಷಣ ಕ್ಷಣವೂ ನಿನ್ನ ನೋಡುವ ಕಾತರ
ನನ್ನಾಳುವ ಮೋಹಕ ಸರದಾರ.
 
ಕನಸುಗಳು ಹುಚ್ಚದ್ದು ಕುಣಿಯುತಿವೆ
ಎದೆಯ ಬಯಕೆಗಳು ಬೆತ್ತಲಾಗಿವೆ
ಪ್ರೀತಿಯ ಕನಸುಗಳು ಉಕ್ಕುತಿವೆ
ಯಾಕೆ ಈ ಪರಿ ಕಾಡುತಿರುವೆ
 
ಒಡಲೆಲ್ಲ ಕಂಪನದಿ ಮಿಡಿಯುತಿದೆ
ಅಂತರಾಳವು ಕತ್ತಲೆಯ ಬಯಸುತಿದೆ
ಹಂಬಲವು ಹೆಚ್ಚಾಗಿದೆ
ಅಂತರಾಳವು ನಿನ್ನ ಹುಡುಕುತಿದೆ,
 
ಅಲಿಯುತಿದೆ, ಮರುಗುತಿದೆ,
ಬಿದ್ದೇಳುತಿದೆ-ಎದ್ದು-ಓಡುಡುತಿದೆ,
ನಿನ್ನೆದೆಯ ಪ್ರೀತಿಯರಮನೆಯ,
ಬೆಚ್ಚನೆಯ ಕವಾಟಿನೊಳಗೆ.
 
ಯಾಕೋ ಮೌನಕ್ಕೆ ಶರಣಾಗಿದೆ ಮನ
ಕಾಯುತಿದೆ ನಿನ್ನ ದಾರಿಯನ್ನ,
ಬಂದು ತಾ ಚುಂಬನ
ತಕ್ಷಣ ಈ ಜೀವಕ್ಕೆ ಚೇತನ,
 
ಸೃಷ್ಟಿಯಾದೀತು ಮಧುರ ಭಾವನೆಗಳ ಹೂಬನ
ಇದರ ಆಳದ ಸವಿಗಾನ
ಮೌನವಾಗಿಯೇ ಮುನ್ನುಗ್ಗಿ
ಬಯಸುತಿದೆ ನಿನ್ನೊಡನೆ ಜೀವನ ಯಾನ…
 
 

‍ಲೇಖಕರು G

13 August, 2014

5 Comments

  1. NANDHU.KV.CHETTY

    Yendinanthe sundaravaagi moodi bandide nimmee ankana… Abhinandanegalu. Eradu prabhudda manasugala milanavannu channaage roopisiddeeri.

  2. ಸುಜಾತ

    ಧನ್ಯವಾದಗಳು ನಂದುರವರೆ……

  3. mallikarjuna kalamaralli

    UTTAMA CHINTANE

  4. Rudranna

    vishayada ayke, nirupane ellavu sundaravagide sujatha avare.

  5. mahananda

    ಹೃದಯದ ಮಿಡಿತ ಹಿತಕ್ಕಿಂತಲೂ ಹೆಚ್ಚೇ ನೋವಿದೆ..ಆಗೊಮ್ಮೆ ಈಗೊಮ್ಮೆ ನೆನಪುಗಳು ಕಾಡತೊಡಗುತ್ತವೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading