ಮಯೂರ ನನ್ನ ಪಾಲಿಗೆ ಟೆಕ್ಸ್ಟ್ ಬುಕ್. ಅದನ್ನ ಶಾಲಾದಿನಗಳಿಂದಲೂ ಓದುತ್ತಲೇ ಬಂದಿದ್ದೇನೆ, ಈಗಲೂ ಓದುತ್ತಲೇ ಇದ್ದೇನೆ.
ನೀವು ಹೇಳಿದ ಹಾಗೆ ಈ ಬಾರಿಯ ಲಂಕೇಶ್ ಸ್ಪೆಶಲ್ ಬಹಳ ಉಪಯುಕ್ತ, ಸಂಗ್ರಹಯೋಗ್ಯ ಕೃತಿ.
ಅಂದಹಾಗೆ, ಲಂಕೇಶರ ’ಅವ್ವ’ ಕವಿತೆಯನ್ನ ಮೊದಲ ಸಾರ್ತಿ ಓದಿದ್ದು ಮಯೂರದಲ್ಲೇ. ನರಹಳ್ಳಿ ಬಾಲಸುಬ್ರಹ್ಮಣ್ಯರು ವಿಮರ್ಶೆ ಮಾಡಿದ್ದರು. ಆಮೇಲೆ ‘ಅಮ್ಮ’ನ ಪರಿಕಲ್ಪನೆಯೇ, ನೋಡುವ ನೋಟವೇ ಬದಲಾಗಿಹೋಯ್ತು. ಅಲ್ಲಿಂದ ಮುಂದೆ ಆ ಸಾಲುಗಳು ಅದೆಷ್ಟು ಭಾಷಣಗಳ್ಅಲ್ಲಿ ಬಳಕೆಯಾದವೋ?
ಇಂಥಹ ಪಾಠಗಳನ್ನು ‘ಮಯೂರ’ ಸಾಕಷ್ಟು ಕಲಿಸಿಕೊಟ್ಟಿದೆ.
***
ಸತೀಶ್ ಶಿಲೆ| satisha.gt@gmail.com
ಅವಧಿ, ನಿಜ. ಮಯೂರ ತುಂಬಾ ಸೊಗಸಾಗಿದೆ .
ಬಿ ಚಂದ್ರೇಗೌಡರ ಲೇಖನ ಓದಲೇಬೇಕು. ಹಾಗೆ ಬಿ ಟಿ ಜಾಹ್ನವಿ
ಅವರ ಲೇಖನ…
ಅವರ ನೆನಪಿಗೆ ಅಂತ ಎಲ್ಲರೂ ಅವರನ್ನು ಹೊಗಳಿ ಅಟ್ಟಕ್ಕೆರಿಸುವ
ಕೆಲಸ ಮಾಡಿಲ್ಲ. ಅದೇ ಈ ಸಂಚಿಕೆ ವಿಶೇಷ.
ಜಿ ಪಿ ಬಸವರಾಜು ಅವರಿಗೆ ಬಹುಪರಾಕು ಹೇಳಲೇಬೇಕು …
***
ಈಗೀಗ ಮಾಯುೂರ ತುಂಬಾ ಚೆನ್ನಾಗಿ ಚೆನ್ನಾಗಿ ಬರುತ್ತಿದೆ
***
ಸುಶ್ರುತ| http://hisushrutha.blogspot.com/ |hisushrutha@gmail.com |
ನಿಜ. ನಮ್ಮ ಮನೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಯೂರ ಸಹ ಇದೆ. ಇತ್ತೀಚೆಗಂತೂ ಮಯೂರ ಮುದ್ದಾಡುವಷ್ಟು ಚೆನ್ನಾಗಿ ಬರುತ್ತಿದೆ.
***
Tina| tinashashikanth@gmail.com |
ಅವಧಿ,
ಮಯೂರ ಬರೆ ಈ ಸಾರೆಯದು ಮಾತ್ರವಲ್ಲ, ಪ್ರತಿ ಸಂಚಿಕೆಯೂ ಸಂಗ್ರಹಯೋಗ್ಯ.
ಮಯೂರವನ್ನ ಪ್ರೊಮೋಟ್ ಮಾಡುತ್ತ ಇರುವುದಕ್ಕೆ ಧನ್ಯವಾದಗಳು!!






0 Comments