ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆಯಲ್ಲಿ 'ಮಿಡಿ'

ರೇಣುಕಾ ರಮಾನಂದ 

speech bubble10

“ಅಕ್ಕ. ..
ಸೊನೆಗೆ ಕಡ್ಡಿ ಗೀರುವುದು
ಹಂಗಂದ್ರೇನು? ಪ್ಲೀಜ್ ಎಕ್ಸಪ್ಲೇನು! “

ಅವಧಿ‘ಯಲ್ಲಿ ಪ್ರಕಟವಾದ ನನ್ನ ‘ಅವಳ ಗಂಡ‘ ಕವಿತೆಯ ಒಂದು ಸಾಲಿನ ಮೇಲೆ  Rajkumar Madiwalar ರಿಗೆ ಒಂದು ಡೌಟು…

ನಾ ಕೊಟ್ಟ ವಿವರಣೆ ಹೀಗಿದೆ

FB_IMG_1460168471883

ಉಪ್ಪಿನಕಾಯಿ ರಸ ಮಾಡಲು ನಮ್ಮ ಕಡೆ ತೀರ ಸಣ್ಣ ಮಿಡಿ ಉಪಯೋಗಿಸ್ತಾರೆ… ಅದರಲ್ಲೂ ಮಿಡಿಯ ತೊಟ್ಟು ಮುರಿದಾಕ್ಷಣ ಛಿಲ್ಲನೆ ಸೊನೆ ಹಾರಿದರೆ ಅಂತಹ ಮಿಡಿ ೨ ವಷ೯ವಾದರೂ ಹಾಳಾಗದು…. ಆ ಸೊನೆಗೆ ಬೆಂಕಿಕಡ್ಡಿ ಗೀರಿ ಹಿಡಿದಾಗ ಭಗ್ಗನೆ ಉರಿದರೆ ಅದು ಪ್ರಶಸ್ತ ಮಿಡಿ… ಅಪ್ಪೆಮಿಡಿಗೆ ಮಾತ್ರ ಸೊನೆ ಜಾಸ್ತಿ…

ನೂರು ಮಿಡಿಗೆ ಸಾವಿರ ರೂಪಾಯಿಯಾದರೂ ಕೊಳ್ಳುತ್ತಾರೆ… ಹಾಗಾಗಿ ಮಿಡಿ ಮಾರುವವರು ಬೆಂಕಿಪಟ್ನ ಹಿಡಿದೇ ಮಾರಲು ಕುಳಿತುಕೊಳ್ಳೋದು… ಕಡ್ಡಿಗೀರಿ ಪ್ರಶಸ್ತ ಮಿಡಿಯ ಪ್ರದಶ೯ನ ಮಾಡೋದು… ನಮ್ಮ ಉತ್ತರಕನ್ನಡದಲ್ಲಿ ಇದು ರೂಢಿ.

ಈಗ ಅಪ್ಪೆಮಿಡಿ ಮರಗಳೂ ಕಡಿಮೆಯಾಗಿವೆ… ಎರಡು ವಷ೯ವಾದರೂ ಕೆಡದೆ ಉಳಿವ ಜಾಡಿಗಟ್ಟಲೆ ಮಿಡಿರಸ ಮಾಡುವವರೂ ಕಾಣದಾಗಿದ್ದಾರೆ..

‍ಲೇಖಕರು Avadhi

22 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading