ಕಲೆ, ದೈವತ್ವ, ಮತ್ತದರ ದಾರಿ, ಗುರಿ…

ರೇಖಾ ಗೌಡ

ಕೆಲ ಕಲಾವಿದರ ಮೈ, ಮನಸು, ಕಣಕಣವೂ divine energy, divine spirit ನಿಂದ ತುಂಬಿ ತುಳುಕ್ತಿರುತ್ತೆ! ಅದಕ್ಕೆ ಅವರ ಕಣ್ಗಳೇ ಸಾಕ್ಷಿ, ಆ ಹೊಳಪು, ಅದರಲ್ಲಿನ ಬೆಳಕು ನಮ್ಮೆದೆಯ ಇರಿದು ಅಲ್ಲೊಂದು ಬೆಳಗು ಮೂಡಿಸಿ, ಒಳಗೆ ಹೊಸದೊಂದೇನೋ ಸೃಷ್ಟಿಸಿ, ಆ ದಿವ್ಯ ಶಕ್ತಿ ಅವರಿಂದ ನಮ್ಮವರೆಗೂ ಹರಿದು, ಆ ದಿವ್ಯ ಚೇತನ ನಮಗೂ ಅನುಭವ ಆಗುವುದೂ,ಅವರ ಕಲೆ, ಅದರ ಅಭಿವ್ಯಕ್ತಿಯ ಮಟ್ಟ ನಮ್ಮ ಹೃದಯ ಮುಟ್ಟಿ ಆತ್ಮವ ಅಲುಗಾಡಿಸುವುದೇ ಸಾಕ್ಷಿ! 

ಹಾಗಂದಾಗ ನನಗೆ ನೆನಪಿಗೆ ಬರೋದು ಶ್ರೀದೇವಿ, ವಿನೋದ್ ರಾಜ್, ಊರ್ಮಿಳಾ ಮಾತೋಂಡ್ಕರ್,  ಹರಿಣಿ ಶ್ರೀಕಾಂತ್ ಸದ್ಯಕ್ಕೆ ಮತ್ತು ತಕ್ಷಣಕ್ಕೆ!

ಕಾರ್ಯಕ್ರಮವೊಂದರಲ್ಲಿ ನೆನ್ನೆ ವಿನೋದ್ ರಾಜ್ ಅವರು ಪ್ರಶ್ನೆಯೊಂದಕ್ಕೆ ಹೇಳ್ತಿದ್ರು. ತೋಟ ನೋಡಿಕೊಳ್ಳಬೇಕಾದ ಪರಿಸ್ಥಿತಿಯ ಒತ್ತಡದಿಂದಾಗಿ ಅವರಿಗೆ ನಟನೆಯಲ್ಲಿ ಮುಂದುವರಿಯಲಾಗಲಿಲ್ಲವೆಂದು. ಅವರ ಡಾನ್ಸ್ ಮೆಚ್ಚಿಕೊಂಡ ನಮ್ಮಂಥ ಅಭಿಮಾನಿಗಳಿಗೆ ಎಂಥಾ ನಷ್ಟ! ಯಾರಿಗೆ ಹೇಳೋದು ನಮ್ಮ ಕಷ್ಟ? 
ಶ್ರೀದೇವಿ, ಊರ್ಮಿಳಾರಿಗೇನೋ ಅವರ ಪ್ರತಿಭೆಯ, ಶಕ್ತಿಯ ಮಟ್ಟಕ್ಕೆ ಅವಕಾಶ, ವೇದಿಕೆ ಸಿಕ್ಕಿದೆ ಅನಿಸುವುದಾದರೂ, ಶ್ರೀದೇವಿಯವರ ದಿವ್ಯತ್ವ ಪೂರ್ಣ ಪ್ರಮಾಣದಲ್ಲಿ ವ್ಯಕ್ತವಾಯಿತೋ? ನಾ ನೋಡಿರುವ ಸೀಮಿತ ಸಂಖ್ಯೆಯ ಅವರ ಸಿನೆಮಾ ಆಧಾರದ ಮೇಲೆ ನನಗದು ಸ್ಪಷ್ಟವಿಲ್ಲ. ಮತ್ತು ಊರ್ಮಿಳಾರಂಥವರಿಂದ ಪ್ರತಿಭೆ ಪೂರ್ಣ ಪ್ರಮಾಣಕ್ಕೆ ತೆಗೆಯಲು ರಾಮ್ ಗೋಪಾಲ್ ವರ್ಮರಂಥವರೇ ಹುಟ್ಟಿ ಬರಬೇಕೇನೋ?

ಈ ಅಂತರವನ್ನು ಹೇಗೆ ತುಂಬುವುದು? ಮಜಾ ಟಾಕೀಸ್ ನಲ್ಲಿ ಅನ್ಸುತ್ತೆ, ಒಮ್ಮೆ ಹರಿಣಿ ಶ್ರೀಕಾಂತರ soul touching ಮಿಂಚಿನಂಥಹ ಡಾನ್ಸ್ ನೋಡಿ ಅದು ಮನಸಲ್ಲೇ ಕೂತು, ಅವರು ತೆರೆಯ ಮೇಲೆ ಕಣ್ಣಿಗೆ ಕಂಡಾಗಲೆಲ್ಲ ಅದೇ ನೆನಪಾಗಿ, ಇವರು ಎಂಥೆಂಥಾ ಪಾತ್ರಗಳಲ್ಲೆಲ್ಲಾ ಅಭಿನಯಿಸಬಹುದು, ಅಂಥಾ ಪಾತ್ರಗಳೇನಾದ್ರೂ ಅವರಿಗೆ ಸಿಕ್ಕಿವೆಯ ಮುಂತಾಗಿ ಅಭಿಮಾನಿ ಮನಸು ಅದರ ಕೆಲಸ ಮಾಡುತ್ತಿತ್ತು, ಅವರು ಕಂಡಾಗಲೆಲ್ಲ ಇವೆಲ್ಲಾ ನೆನಪಾಗುವ ಪರಿಣಾಮ ಈಗ ನಾನಿಲ್ಲಿ ಬರೆಯುತ್ತಿರುವುದು.

ನಾವು ಬರೀ ಫ್ಯಾನ್ಸ್ ಆಗಿರದೆ ಅವರ ಎನರ್ಜಿ, ಪ್ರತಿಭೆ ಮಟ್ಟವನ್ನ ಆಳವಾಗಿ ತಿಳಿದು, ಅವರಿಗೆ ಮಾತ್ರ ಹೊಂದೋ/ನಮ್ಮಿಷ್ಟದ ಪಾತ್ರಗಳನ್ನ  ಅವರು ಮಾಡಿದ್ರೆ ಹೇಗಿರುತ್ತೆ/ಚೆನ್ನಾಗಿರುತ್ತೆ ಅಂತ ಊಹಿಸ್ಕೊಂಡು ನಿಟ್ಟುಸಿರು ಬಿಡ್ತೇವೆ.
Very few are blessed to have the full flow of divine/universal energy within and that divinity flows through us too through their art and expressions!

ಆ divine shock ನಮಗೂ ಹೊಡೆಸಿ ಎಚ್ಚರಗೊಳಿಸುತ್ತಾರೆ ಏನೋ ಅದ್ಭುತದ್ದು ಇದೆ ನೋಡಿಲ್ಲಿ ಎಂಬಂತೆ!
ಒಂದೋ, ಇಂಥವರ ಕಲೆಯಲ್ಲಿನ ದಿವ್ಯತೆ ಅರ್ಥ ಮಾಡಿಕೊಂಡೋರು ಅವರ ಕಲಾಭಿವ್ಯಕ್ತಿ ಪೂರ್ಣ ಪ್ರಮಾಣದಲ್ಲಿ ಬರಲು ಕೈ ಜೋಡಿಸಬೇಕಾಗುತ್ತೆ ಇಲ್ಲವೇ ಆ ಪ್ರತಿಭೆಗಳೇ ಇದಕ್ಕೊಂದು ದಾರಿ ಮಾಡ್ಕೊಳ್ಳಬೇಕಾಗುತ್ತೆ. ಇಲ್ಲದಿದ್ದರೆ ಆ ಶಕ್ತಿಯ, ಬೆಳಕಿನ ಹರಿವಿಗೆ ದಾರಿ ಇರದೆ, ಅದು ಒಂದು ಕೊರಗಾಗಿ ಅವರನ್ನ ದಿನವೂ ಕೊಲ್ಲುವುದಿಲ್ಲವಾ? (ಮೊನ್ನೆ ನಟಿ ಭವಾನಿ ಪ್ರಕಾಶ್ ರವರು ಸ್ಪೀಡ್ ನ್ಯೂಸ್ ಕನ್ನಡ ಚಾನೆಲ್ ನಲ್ಲಿ ಅವರ ಮನಸು, ಕನ್ನಡ ಚಿತ್ರರಂಗದಲ್ಲಿ ಅವರಿಗಾದ ನಿರಾಶೆ, ನೋವು, ಆಸೆ, ಕನಸುಗಳನೆಲ್ಲಾ ಹದವಾಗಿ ಅಳುಕಿಲ್ಲದೆ ತೆರೆದಿಟ್ಟರು. ಮಾತಲ್ಲಿ ನೋವಿನ ನಿರಾಶೆಯ ಛಾಯೆಯಿದ್ದರೂ ಭರವಸೆಯ ದೃಷ್ಟಿ, ನೇರನುಡಿ ಉಳ್ಳವರಾಗಿ, ಕೇಳಬೇಕಾದ ಪ್ರಶ್ನೆಗಳನೆಲ್ಲಾ ಕೇಳಿ ಬೆರಗು, ಖುಷಿ ಮೂಡಿಸಿದರು. ಒಬ್ಬ ವ್ಯಕ್ತಿ ಆಗಲ್ಲದೆ, ಹೀಗಲ್ಲದೆ ಇನ್ನಾವಾಗ ಸುಂದರವಾಗಿ ಕಾಣುವುದು!… ಇದನ್ನೆಲ್ಲಾ ಯಾರನ್ನ ಕೇಳಬೇಕು ನಾವು ಎಂದು ಒತ್ತಿ ಒತ್ತಿ ತಿರುತಿರುಗಿ ಕೇಳುತ್ತಿದ್ದರು. ಪುಸ್ತಕದ ಒಂದು ಪಾತ್ರ, ತೆರೆಯ ಮೇಲೆ ಮೂಡಬೇಕೆಂದರೆ ಅದೆಷ್ಟು ದಶಕ, ಶತಕಗಳೇ ಕಾಯಬೇಕೋ?ಯಾವ ಮನಸನ್ನ ಯಾವ ಪಾತ್ರ ಆಳವಾಗಿ ಮುಟ್ಟಿದೆಯೋ ಆ ಮನಸೇ ಸೂಕ್ತವೇನೋ, ನಿರ್ದೇಶಿಸಲು!ಒಂದಷ್ಟು ತಯಾರಿ, ಕೊಂಚ ತರಬೇತಿ, ನುರಿತವರ ಮಾರ್ಗದರ್ಶನ ಸಾಕೆನೋ, ಮುಂದುವರೆಯಲು!) ಇಲ್ಲಾ, ಈ ದೈವೀಕ ಕಲಾವಿದರೇ ನಿರ್ದೇಶಕರೂ ಆದರೆ? (ಅವರಿಗಿಂತ ಅವರ ದೈವತ್ವ ಅರ್ಥವಾದೀತೇ ಇನ್ನೊಬ್ಬರಿಗೆ – ಅವರಲ್ಲೂ ಅದ ಕಾಣುವ ಕಂಗಳಿಲ್ಲದೆ, ಪರಿಭಾವಿಸುವ ವಿಶಾಲ ಆಯಾಮವಿಲ್ಲದೆ?) ನೋಡಬೇಕು ಅಂಥವರ ಕೈಯಲ್ಲರಳಿದ ಚಿತ್ರಗಳ ನಾವು!

ಹ್ಮ್! ದಿವ್ಯ ಪ್ರತಿಭೆಗಳನ್ನ ಅರ್ಥ ಮಾಡಿಕೊಂಡು, ಅವರ ದಿವ್ಯತೆಗೆ ದಾರಿ ತೋರುವವರು ಇಡೀ ವಿಶ್ವದ ಲೆಕ್ಕದಲ್ಲಿ ಬೆರಳೆಣಿಕೆಯಷ್ಟಿರುವಾಗ ನಾವ್ ನಿಂತ ನೆಲದಲ್ಲೇ ಅದಕೆ ದಾರಿ ಬೇಕೆಂದರೆ ಹೇಗೆ? ವಿಶ್ವಮಾನವ ತತ್ವದಲಿ ಕಲೆಯನ್ನೂ ನೊಡಬೇಕಲ್ಲವೇನು. ತಾನುದ್ಧಾರವಾದರೆ ಸಾಕು ಅಂತಿಲ್ಲದೆ, ಬಂದ ದಾರಿ, ನೆಲೆಯ ಮರೆಯದೆ ಅದನ್ನೂ ಪೋಷಿಸುವ, ಬೆಳೆಸುವ ಮನಸಿದ್ದರೆ ಜನರೇಷನ್ ಗಳ ಶಾಪದ ಸರಪಳಿ ಕಡಿಯಬಹುದಲ್ಲವಾ.

‍ಲೇಖಕರು Admin

May 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: