ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲಿಗಣನಾಥ ಅವರ ‘ಗುಡದೂರು’

ಇನ್ನೂ ಮಲಗಿದಂತೆಯೇ ಇರುವ ಹೈದರಾಬಾದ್ ಕರ್ನಾಟಕವನ್ನು ಎಚ್ಚರಿಸಲೋ ಎಂಬಂತೆ ಸಾಲು ಸಾಲು ಕಥೆಗಾರರು ಬರುತ್ತಿದ್ದಾರೆ. ಅವರೊಳಗಿನ ಅರಿವು ಹೊಸ ಬೆಳಕಾಗಿದೆ. ಅಂತಹವರಲ್ಲಿ ಕಲಿಗಣನಾಥ ಗುಡದೂರು ಅವರೂ ಒಬ್ಬರು. ಅವರ ಕಥೆಗಲ್ಲಿ ಇರುವ ತಹತಹ ಮೊದಲ ಸಂಕಲನ ‘ಉಡಿಯಲ್ಲಿಯ ಉರಿ’ ಯಲ್ಲಿಯೇ ಗೊತ್ತಾಗಿ ಹೋಗಿದೆ.

ಹೈದರಾಬಾದ್ ಕರ್ಣಾಟಕದ ದೊಡ್ಡ ಜೀವ ಸಿ ಚನ್ನಬಸವಣ್ಣ ಅವರ ಮುಚ್ಚಟೆಯಲ್ಲಿ ಅರಳಿದ ಈ ಕಥೆಗಾರ ಕೂಸುಗಳು ಬೆಳೆದು ನಿಂತಿರುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಕಲಿಗಣನಾಥ ತಮ್ಮ ಎರಡನೆಯ ಸಂಕಲನ ‘ಮತಾಂತರ’ಕ್ಕೆ ಇನ್ನಿಲ್ಲದ ಕಿರುಕುಳವನ್ನು ಕಂಡವರು. ನೊಂದವರು.

ಈ ಎಲ್ಲವನ್ನೂ ಮೀರಿ ಈಗ ‘ಮಾಮೂಲಿ ಗಾಂಧಿ’ ಮೂಲಕ ಮತ್ತೆ ಓದುಗರ ಮುಂದೆ ಬರುತ್ತಿದ್ದಾರೆ. ಅವರ ನೊಂದ ಮನಕ್ಕೆ ಈ ಸಂಕಲನ ಒಂದಿಷ್ಟು ತಂಪು ತರಲಿ ಎಂದು ಹಾರೈಸುತ್ತಾ ಅವರು ಇತ್ತೀಚಿಗೆ ಆರಂಭಿಸಿರುವ ‘ಗುಡದೂರು’ ಬ್ಲಾಗ್ ಗೆ ಭೇಟಿ ಕೊಡಿ ಎಂಬ ಮನವಿ ನಿಮ್ಮ ಮುಂದೆ ಇಡುತ್ತಿದ್ದೇವೆ.

cover-p-11

‍ಲೇಖಕರು avadhi

26 January, 2009

2 Comments

  1. basavaraja halli

    ತಮ್ಮ ನೂರು ನೋವುಗಳನ್ನು, ಅಪಮಾನಗಳನ್ನು ಪ್ರಪಾತಕ್ಕೆ ನೂಕಿ ಸದಾ ಸೃಜನಶೀಲತೆಯತ್ತ ಕಣ್ಣುಹಾಯಿಸುತ್ತಾ ವಾಸ್ತವದ ನೆಲೆಗಟ್ಟಿನಲ್ಲಿ ಜೀವಂತಿಕೆಯ ಕಥೆಗಳನ್ನು ಬರೆಯುತ್ತಿರುವ ನನ್ನ ಗುರುಗಳಾದ ‘ಕಲಿಗಣನಾಥ ಗುಡದೂರು’ ಅವರ ಬಗ್ಗೆ ‘ಲೈಟ್ ಆ್ಯಂಡ್ ಸ್ವೀಟ್’ ಆಗಿ ಬರೆಯುವ ಮೂಲಕ ಅವರ ‘ಗುಡದೂರು’ ಗೆ ತಮ್ಮ ಅವಧಿಯಲ್ಲಿ ಜಾಗ ನೀಡಿದ್ದಕ್ಕೆ ಜಿ.ಎನ್.ಮೋಹನ್ ಸರ್ಗೆ ತುಂಬಾ ತುಂಬಾ ಧನ್ಯವಾದ.
    -ಬಸವರಾಜ ಹಳ್ಳಿ

  2. basavaraajahalli

    avdhiyalli kaligananath Gudadur avar
    a ‘gudadooru’ Blognnu Sherpade Maduva moolak
    mattobba Kathegararanna Parichayisiddiri
    Tumbu Thanks – Basavaraja Halli

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading