ಬಂದೇಸಾಬ ಮೇಗೇರಿ
ಇವರಪ್ಪ ಶ್ರೀಮಂತನಲ್ಲ. ಬಡವನಂತೂ ಅಲ್ವೇ ಅಲ್ಲ. ಹೊಟ್ಟೆ ತುಂಬಾ ಊಟ ಮಾಡಿ ಮಲಗುವ ವಯಸ್ಸದು. ಲೋಕದ ಚಿಂತೆ ಇವನಿಗಿರಲಿಲ್ಲ. ಮುಂಜಾನೆ ಲೇಟಾಗಿ ಏಳುವುದು ಈತನ ಸ್ಟೈಲ್. ನೀಟಾಗಿ ಬಿಸ್ಕೆಟ್ ಚಹಾ ಹೀರಿ ಆಟಕ್ಕೆ ಹೋದನೆಂದರೆ ಮತ್ತೆ 9 ಗಂಟೆಗೆ ಬಂದು ಶಾಲೆಗೆ ಹೋಗುವುದು. ನಂತರ ಮಧ್ಯಾಹ್ನ ಊಟಕ್ಕೆ ಅಮ್ಮ ಮಾಡಿದ ಬಿಸಿ ಅನ್ನ-ಸಾಂಬಾರ. ಮತ್ತೆ ಸ್ಕೂಲ್. ವಾಪಸ್ ಬಂದ್ಮೇಲೆ ಆಟ.
ಹೀಗಿದ್ದವನು ಒಮ್ಮಿಂದೊಮ್ಮೇಲೆ ಬದಲಾಗಿದ್ದು ಮನೆಯಲ್ಲಿ ಅಷ್ಟೇ ಅಲ್ಲ, ಶಾಲೆ, ಊರ ವಾತಾವರಣದಲ್ಲೂ ಆಶ್ಚರ್ಯವಾಗಿತ್ತು. ದಿನದಿಂದ ದಿನಕ್ಕೆ ಈತ ಬದಲಾದ. ಸ್ಕೂಲ್ನಲ್ಲಿ ಒಂದು ಲೆವೆಲ್ನಲ್ಲಿ ಹವಾ ಮೆಂಟೇನ್ ಮಾಡ್ತಾ ಹೋಗ್ತಾನೆ ಈ ಪೋರ. ಈತನ ಹೆಸರು ಪ್ರದೀಪ. ಏನು ವಿಷಯನೋ ಗೊತ್ತಿಲ್ಲ ಚಿಕ್ಕವನಿದ್ದಾಗಲೇ ದಿಲ್ಲಾನ ಅಂತ ಪೆಟ್ ನೆಮ್ ನಿಂದಾಗಿ ಹೆಸರಾಗಿದ್ದ. ನೋಡಲು ಸುಂದರ, ಗೌರವರ್ಣದವನು. ಗಾಳಿ ಬಂದರೆ ಹಾರಿ ಹೋಗುವಷ್ಟು ತೆಳಗಿದ್ದ; ಎತ್ತರನೂ ಇದ್ದ. ಆಟ ಪಾಠದಲ್ಲಿ ಇವನನ್ನು ಮೀರಿಸುವವರು ಮತ್ತೋರ್ವರಿರಲಿಲ್ಲ. ಆ ಅವಕಾಶವನ್ನು ಬೇರೊಬ್ಬರಿಗೆ ಕೊಡುತ್ತಿರಲೂ ಇಲ್ಲ. ಅಂದಹಾಗೆ ಅವರಪ್ಪ ತನ್ನ ಪಾಡಿಗೆ ಪಾಂಡುರಂಗ ಭಜನೆ ಮಾಡುತ್ತ ಸಮಯ ಕಳೆದರೆ, ಈ ಪ್ರದೀಪ ಎಲ್ಲರ ಮನಸಲ್ಲೂ ನಂದಾದೀಪ ಹಚ್ಚುತ್ತ ಹೊರಟ.
ಹೈಸ್ಕೂಲ್ ನಂತರ ಪಿಯುಸಿ ಮುಗಿಸಿಕೊಂಡು ಬಂದ ನೋಡಿ ಡಿಗ್ರಿಗೆ. ಇವನ ವಾಕ್ ಚಾತುರ್ಯಕ್ಕೆ ಸಲಾಮ್ ಹೊಡೆಯಬೇಕು. ಹಾಗೆ ಮಾತಾಡುತ್ತಿದ್ದ. ಎಂತಹ ವೈರಿ ಇದ್ರೂ ಹಾಯ್ ದೋಸ್ತ್ ಎಂದು ಹೇಳಿ, ಬಿರುಕು ಬಿಟ್ಟ ಸ್ನೇಹವನ್ನು ಪುನರ್ ಪ್ರತಿಷ್ಠಾಪಿಸುತ್ತಿದ್ದರು. ರಾಜ್ಯಶಾಸ್ತ್ರದ ಕ್ಲಾಸ್ನಲ್ಲಿ ಲೆಕ್ಚರರೇ ದಂಗಾಗಬೇಕು ಹಂಗ ಮಾತಾಡ್ತಿದ್ದ. ಇವನ ಪ್ರಶ್ನೆಗೆ ಅವರು ಎರಡು ತಾಸು ಹೆಚ್ಚಿಗೇನೆ ಓದ್ಕೊಂಡು ಬರಬೇಕು. ಹಂಗ ಇರ್ತಿದ್ವು ಪ್ರದೀಪನ ಪ್ರಶ್ನೆಗಳು. ರಾಜ್ಯ ರಾಜಧಾನಿ, ದೇಶ, ವಿದೇಶಗಳ ರಾಜಧಾನಿ, ಎಮ್ಮೆಲ್ಲೆ, ಎಮ್ಪಿ, ಸಂಸದರ ಎಲ್ಲರ ಹೆಸರನ್ನು ಲೀಲಾಜಾಲವಾಗಿ ಹೇಳಿ ಮುಗಿಸಿ ಬಿಡುತ್ತಿದ್ದ. ಅಬ್ಬಾ! ಎಂತ ಜಾಣ್ಮೆಯ ಹುಡುಗನೀತ ಎಂದು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವ ಹಾಗೆ ಇತ್ತು ಈತನ ವೈಭವಪೇರಿತ ಜಾಣ್ಮೆ.
ಪ್ರದೀಪ ಎಲ್ಲರಂತೆ ಆಟವಾಡುತ್ತಿದ್ದ. ಆದರೆ ರಾತ್ರಿ ಈತನ ಓದು ಜೋರಾಗಿರುತ್ತಿತ್ತು. ಈ ಗುಟ್ಟನ್ನು ಮಾತ್ರ ಯಾರಿಗೂ ಬಿಟ್ಟು ಕೊಟ್ಟಿರಲಿಲ್ಲ. ಈತ ಪಠ್ಯಪುಸ್ತಕದ ಜೊತೆಗೆ ಸಾಹಿತ್ಯಾಭಿಮಾನಿಯೂ ಆಗಿದ್ದ ಎಂಬುದು ತಡವಾಗಿ ಬೆಳಕಿಗೆ ಬಂತು. ಸಾಹಿತ್ಯ ಕೃಷಿಯಲ್ಲಿ ಪಳಗುತ್ತಿದ್ದ ಅಂತ ಕಾಣುತ್ತೆ. ನಿಂತಲ್ಲೇ ಕವನ ಕಟ್ಟೇ ಬಿಡುತ್ತಿದ್ದ. ಎಲ್ಲರ ಉತ್ತರ ಭೇಷ್ ಅನ್ನುವುದೊಂದೇ ಆಗಿತ್ತು. ಆಗಲೇ ದಿನಪತ್ರಿಕೆಯಲ್ಲಿ ತನ್ನ ಕವನಗಳು ರಾರಾಜಿಸುತ್ತಿದ್ದನ್ನು ಗೆಳೆಯರಿಗೂ ತೋರಿಸಿ ಖುಷಿ ಪಡುತ್ತಿದ್ದ. ಏಷ್ಟೋ ತಿಂಗಳ ನಂತರ ಗೊತ್ತಾಯ್ತು. ಈತನ ಓದಿನ ರಹಸ್ಯ. ಮನೆಯಲ್ಲಿನ ಸಣ್ಣ ಗ್ರಂಥಾಲಯದಲ್ಲಿ ಇದ್ದವು ಒಬ್ಬ ವಿಜ್ಞಾನಿಯ ಬುಕ್ಸ್. ಅವೇ ಅಬ್ದುಲ್ ಕಲಾಮ್ರ ಪುಸ್ತಕಗಳು. ಕಲಾಂರೇ ಈತನಿಗೆ ಆಧ್ಯ ದ್ರೋಣಾಚಾರ್ಯ ಗುರುಗಳಾಗಿದ್ದರು. ಕಲಾಮ್ರ ಬಡತನದ ಬದುಕು, ಜೀವನ ವಿಧಾನಗಳೆಲ್ಲವನ್ನೂ ತಿಳಿದುಕೊಂಡಿದ್ದ. ಅವನ ನೋಟ್ ಬುಕ್ನಲ್ಲಿಯೂ ಕಲಾಮ್ರ ಫೋಟೊ. ನನಗೆ ಮುಂದೆ ಹುಟ್ಟುವ ಮಗನಿಗೆ ಕಲಾಮ್ ಎಂದೇ ಹೆಸರು ನಾಮಕರಣ ಮಾಡುತ್ತೇನೆ; ಜಾತಿ ಹೊರತು ಪಡಿಸಿ ಎಂದಿದ್ದ.
ಪ್ರದೀಪನ ಇಲ್ಲಿಯವರೆಗಿನ ಶಿಕ್ಷಣಕ್ಕೆ ಕಲಾಮರೇ ದಾರಿದೀಪ. ಈತನಿಗೆ ಅವರೇ ದ್ರೋಣಾಚಾರ್ಯರು. ಜುಲೈ 27ರಂದು ದೇಶದ ಶ್ರೇಷ್ಟ ವಿಜ್ಞಾನಿ ಮಹಾ ಪ್ರಸ್ಥಾನವಾದಾಗ ಪ್ರದೀಪನನ್ನು ಸಮಾಧಾನಿಸಲು ನನ್ನ ಕೈಯಲ್ಲಿ ಆಗಲಿಲ್ಲ. ಕಾರಣ ನಾನು ಭಾವಪರಶನಾಗಿದ್ದೆ. ಕಲಾಮ್ ಯುವಕರಿಗೆ ಸ್ಪೂತರ್ಿಯ ಚಿಲುಮೆಯಾಗಿದ್ದರು. ಅವರ ಸರಳತೆಯ ಜೀವನಕ್ಕೆ ಮಾರು ಹೋಗದವರಾರೂ ಇರಲಿಲ್ಲ. ಅವರು ಯುವ ಜನಾಂಗದ ಮೇಲೆ ಹೆಚ್ಚು ನಂಬಿಕೆಯನ್ನು ಇಟ್ಟವರು. ಅಂತಹ ಇನ್ನೊಬ್ಬ ಅಬ್ದುಲ್ ಕಲಾಮ್ ಹುಟ್ಟಿ ಬರಲೇಂದು ಆಶಿಸೋಣ.







really inspiring story
thank you sir
maga super.yaru a dillana?
akka avanu nanna degree friendu akka
supper baredidira dost, diillananannu navu nodilla bt kannmunde band avane mestru kalamara anubavada abhimanvnnu hellikondantte ettu dost..du well all d best.
thank you
dosta
superb article dude……
very nice.
so beautiful article sir, like it………………………………………………..