ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರ್ನಾಟಕ ಸಿರಿ ಧಾನ್ಯಗಳು…

’ಸಹಜ ಸಾಗುವಳಿ’ಯ ಈ ಸಲದ ಸಂಚಿಕೆ ಮಾರುಕಟ್ಟೆಯಲ್ಲಿ

ಈ ಸಂಚಿಕೆಯ ಒಂದು ಲೇಖನ ನಿಮಗಾಗಿ.

ಕಿರುಧಾನ್ಯಂ ಗೆಲ್ಗೆ… ಸಿರಿ ಕರ್ನಾಟಕ ಬಾಳ್ಗೆ

ಪಿ ವಿ ಸತೀಶ್

ಕರ್ನಾಟಕ ಸಿರಿ(ಕಿರು) ಧಾನ್ಯಗಳ ಆಹಾರ ಮತ್ತು ಬೇಸಾಯವನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿರಬೇಕು. ಏಕೆಂದರೆ
1. ಸಿರಿಧಾನ್ಯಗಳೇ ಭವಿಷ್ಯತ್ತಿನ ಆಹಾರ ಮತ್ತು ಬೇಸಾಯ ಎಂಬುದು ಪ್ರಪಂಚದಾದ್ಯಂತ ಸಾಬೀತಾಗಿದೆ. ಮುಂಬರುವ ಹವಾಮಾನ ಬದಲಾವಣೆಯ ದಶಕಗಳಲ್ಲಿ ಅವುಗಳ ಮಹತ್ವ ಅಧಿಕವಾಗಿದೆ. ಕಿರುಧಾನ್ಯಗಳಿಗೆ ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯುವ ಮಳೆಯಾಶ್ರಿತದ ಬೆಳೆಗಳಿವು. ಮುಂದಿನ ದಶಕಗಳಲ್ಲಿ ನೀರಿನ ಕೊರತೆ ಇನ್ನಷ್ಟು ಉಲ್ಭಣಗೊಳ್ಳುವ ಸ್ಥಿತಿಯಿರುವಾಗ, ನೀರು ಉಳಿಸುವಲ್ಲಿ ಕಿರುಧಾನ್ಯಗಳ ಪಾತ್ರ ಮಹತ್ವದಾಗಿರುತ್ತದೆ. ಕರ್ನಾಟಕದಲ್ಲಿ ವರ್ಷಾನುವರ್ಷ ನೀರಿನ ಕೊರತೆ ಹೆಚ್ಚಾಗುತ್ತಿದ್ದು, ಇದರ ಸುತ್ತಲೂ ರಾಜಕೀಯ ಮತ್ತು ಅಂತರ ರಾಜ್ಯ ಸಂಘರ್ಷಗಳು ತಲೆದೋರುತ್ತಿರುವ ಪರಿಸ್ಥಿತಿಯಲ್ಲಿ ಇದಕ್ಕೆ ದುಪ್ಪಟ್ಟು ಮಹತ್ವವಿದೆ.
2. ಕರ್ನಾಟಕದ ಕೃಷಿ ಭೂಮಿಯ ಸಿಂಹಪಾಲು ಮಳೆಯಾಶ್ರಿತವೇ ಆಗಿರುವಾಗ ನೀರಾವರಿ ಆಶ್ರಿತ ಕೃಷಿಗೆ ಭವಿಷ್ಯವಿಲ್ಲ. ನೀರುಬಾಕ ಬೆಳೆಗಳಾದ ಕಬ್ಬು ಇತ್ಯಾದಿಗಳು ಕರ್ನಾಟಕ ರೈತರಲ್ಲಿ ತೀವ್ರ ಸಿಟ್ಟು ಮತ್ತು ಅಸಮಧಾನವನ್ನು ಹುಟ್ಟುಹಾಕುತ್ತಿವೆ. ಶಾಂತಿಯುತ ಕೃಷಿ ವಾತಾವರಣ ನಿರ್ಮಾಣ ಮಾಡಲು, ಕಬ್ಬನ್ನು ಮೀರಿ ಯೋಚಿಸಬೇಕಾದುದ್ದು ನಮಗೆ ಬಹಳ ಮುಖ್ಯವಾಗಿದೆ. ಕಿರುಧಾನ್ಯಗಳು ಈ ಸುವರ್ಣ ಅವಕಾಶವನ್ನು ಒದಗಿಸುತ್ತವೆ.
3. ಭಾರತ ಸರ್ಕಾರದ ಹೊಸ ಆಹಾರ ಭದ್ರತೆ ನೀತಿಯು ಪಡಿತರ ವ್ಯವಸ್ಥೆಯಲ್ಲಿ ಕಿರುಧಾನ್ಯಗಳ ವಿತರಣೆಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಕಿರುಧಾನ್ಯ ಬೆಳೆಯುವ ರೈತರಿಗೆ ಹಿಂದೆಂದೂ ಇಲ್ಲದಂಥ ಮಾರುಕಟ್ಟೆ ಅವಕಾಶ ಒದಗಿ ಬರಲಿದೆ. ಜೊತೆಗೆ, ಭಾರತೀಯ ಮಧ್ಯಮವರ್ಗದಲ್ಲಿ ಕಿರುಧಾನ್ಯಗಳಲ್ಲಿ ಅಡಗಿರುವ ಪೌಷ್ಟಿಕತೆ ಮತ್ತು ಆರೋಗ್ಯದ ಗುಣಗಳ ಬಗ್ಗೆ ಅರಿವು ಮೂಡಿ ಬರುತ್ತಿದೆ. ಹೀಗಾಗಿ ಸಾವಯವ ಕಿರುಧಾನ್ಯ ಮಾರುಕಟ್ಟೆ ಪ್ರತಿ ವರ್ಷ 20%ರಷ್ಟು ವಿಸ್ತಾರಗೊಳ್ಳುತಲಿದೆ.
4. ಭಾರತ ಸರ್ಕಾರದ RKY ಅಡಿಯಲ್ಲಿ ಈಗ INSIMP-Initiative for Nutritional Security through Intensive Millet Promotion ಎನ್ನುವ ಕಾರ್ಯಕ್ರಮವಿದೆ. ಇದರಡಿ ಕಿರುಧಾನ್ಯ ಬೆಳೆಯುವ ರೈತರಿಗೆ ಒಂದು ಹೆಕ್ಟೇರಿಗೆ 5000 ರೂಪಾಯಿಯಂತೆ ಬೀಜ-ಒಳಸುರಿ ಸಬ್ಸಿಡಿ ಕೊಡಲಾಗುತ್ತದೆ. ಆಂಧ್ರ ಪ್ರದೇಶದ ಮೇಡಕ್ ಜಿಲ್ಲೆಯಲ್ಲಿ ‘ಡೆಕ್ಕನ್ ಡೆವಲೆಪ್ಮೆಂಟ್ ಸೊಸೈಟಿ’ ಕಳೆದ ಎರಡು ವರ್ಷದಲ್ಲಿ ಸರ್ಕಾರದ ಈ ಕಾರ್ಯಕ್ರಮಕ್ಕೆ ರೈತರದ್ದೇ ಯೋಜನೆ ರೂಪಿಸಿ ಸರ್ಕಾರ ಅದನ್ನು ಒಪ್ಪಿಕೊಳ್ಳುವಂತೆ ಮಾಡುವ ಮೂಲಕ ಸುಮಾರು 5000 ರೈತರಿಗೆ ಒಟ್ಟು ಒಂದು ಕೋಟಿ ರೂಪಾಯಿಯ ಹಣ ರೂಪದ ಒತ್ತಾಸೆ ತಂದು ಕೊಡುವಲ್ಲಿ ಸಫಲವಾಗಿದೆ.
5. ಹೈಬ್ರಿಡ್ ಬೀಜಗಳು, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸಬ್ಸಿಡಿ ದರದಲ್ಲಿ ಒದಗಿಸುವ ಸರ್ಕಾರದ ನೀತಿಗೆ ವಿರೋಧವಾಗಿ, ಮೇಡಕ್ ರೈತರು ತಮ್ಮದೇ ಸ್ವಂತ ಬೀಜ ಮತ್ತು ತಮ್ಮದೇ ಸ್ವಂತ ಕೊಟ್ಟಿಗೆ ಗೊಬ್ಬರ/ಜೈವಿಕ ಗೊಬ್ಬರವನ್ನು ಬಳಸಲು ತಮಗೆ ಮುಕ್ತ ಅವಕಾಶ ಇರಬೇಕೆಂದು ಯಶಸ್ವಿಯಾಗಿ ವಾದಿಸಿದ್ದಾರೆ. ಈ ಮೂಲಕ ಈ ಕಾರ್ಯಕ್ರಮದಲ್ಲಿ ಖಾಸಗಿ ಕಂಪನಿಗಳಿಗೆ ಯಾವುದೇ ಹಣ ಸೋರಿ ಹೋಗದಂತೆ ನೋಡಿಕೊಂಡಿದ್ದಾರೆ.
6. ಆಂದ್ರದಲ್ಲಿ INSIMP ಕಾರ್ಯಕ್ರಮದಲ್ಲಿ ಸರ್ಕಾರದ ಹೈಬ್ರಿಡ್ ಬೀಜಗಳು ಮತ್ತು ರಸಗೊಬ್ಬರಗಳನ್ನು ಬಳಸಿದ ರೈತರಿಗಿಂತ ಮೇಡಕ್ ರೈತರು, 20% ಹೆಚ್ಚು ಇಳುವರಿ ಪಡೆದಿದ್ದಾರೆ. ಈ ಮೂಲಕ ಪರಿಸರ ಸ್ನೇಹಿ ಕೃಷಿ ಪದ್ಧತಿಗಳು ಸರ್ಕಾರಿ ಪದ್ಧತಿಗಳಿಗಿಂತ ಹೆಚ್ಚು ಶ್ರೇಷ್ಠ ಎಂದು ಸಾಬೀತು ಮಾಡಿ ತೋರಿಸಿದ್ದಾರೆ.
ಈ ಮೇಲಿನ ಅಂಶಗಳ ಬೆಳಕಿನಲ್ಲಿ ನಾವು ಕರ್ನಾಟಕ ಸರ್ಕಾರವನ್ನು ಈ ಕೆಳಗಿನಂತೆ ಒತ್ತಾಯಿಸುತ್ತೇವೆ:
1. ಹಿಂದಿನ ವರ್ಷಗಳ ಹೂಡಿಕೆಗಳಿಗಿಂತ 300% ಹೆಚ್ಚು ವೂತ್ತವನ್ನು ಕಿರುಧಾನ್ಯ ಬೆಳೆಯುವ ರೈತರ ಮೇಲೆ ಹೂಡಿಕೆ ಮಾಡಬೇಕು.
2. ಈ ಎಲ್ಲಾ ಹೂಡಿಕೆಗಳು ‘ನೇರ ಆದಾಯ ವರ್ಗಾವಣೆ’ಯ ರೂಪದಲ್ಲಿರಲಿ. ಆಗ ಮಾತ್ರ ರೈತರು ತಮ್ಮಲ್ಲಿರುವ ಹಣ ಮತ್ತು ಅಗತ್ಯಗಳಿಗೆ ಹೊಂದುವಂತಹ ಕೃಷಿಯನ್ನು ಮಾಡುವ ಸ್ವಾತಂತ್ರ ಹೊಂದಿರುತ್ತಾರೆ.
3. ಮಳೆಯಾಶ್ರಿತ ಕಿರುಧಾನ್ಯ ಬೆಳೆಗಾರರಿಗೆ ಅವರು ಮಾಡುವ ಈ ಘನಕಾರ್ಯಕ್ಕಾಗಿ 5000 ರೂಪಾಯಿಗಳ ನಗದು ರೂಪದ ಗೌರವಧನವನ್ನು ಕೊಡಬೇಕು, ನೀರಿನ ಉಳಿತಾಯ, ಪೋಷ್ಟಿಕಾಂಶ ಪೂರೈಕೆ, ಜೀವ ವೈವಿಧ್ಯತೆ ಸಂರಕ್ಷಣೆ, ಪರಿಸರ ಜತನದ ರೂಪದಲ್ಲ್ ಅವರು ನೀಡುತ್ತಿರುವ ಕೊಡುಗೆ ಅಪಾರ. ಕಬ್ಬು ಮತ್ತು ಭತ್ತ ಬೆಳೆಯುವವರಿಗೆ ಹೋಲಿಸಿದರೆ ಪ್ರತಿಯೊಬ್ಬ ಕಿರುಧಾನ್ಯ ರೈತರು 6-10 ದಶಲಕ್ಷ ಲೀಟರ್ ನೀರನ್ನು ಈ ದೇಶಕ್ಕಾಗಿ ಉಳಿಸುತ್ತಿದ್ದಾರೆ. ನೀರಿನ ತೀವ್ರ ಕೊರತೆ ಅನುಭವಿಸುತ್ತಿರುವ ಕರ್ನಾಟಕದಂಥ ರಾಜ್ಯಕ್ಕಂತೂ ಇದು ತುಂಬಾ ದೊಡ್ಡ ಪ್ರಮಾಣವೇ ಆಯಿತು. ಈ ಉಳಿಕೆಯಾದ ನೀರು ಗ್ರಾಮಗಳಲ್ಲಿ ಕುಡಿಯಲು ಮತ್ತು ಇತರ ಮನೆಕೆಲಸಗಳಿಗೆ ಬರುತ್ತದೆ.
4. ಕಿರುಧಾನ್ಯಗಳು ಅಸಾಧಾರಣ ಪೌಷ್ಟಿಕಾಂಶ ಹೊಂದಿರುವ ಧಾನ್ಯಗಳು. ಹೀಗಾಗಿ ಜನರಿಗೆ ಪೌಷ್ಟಿಕತೆ ಪೂರೈಕೆಯ ತುರ್ತಿದ್ದಾಗ ಕಿರುಧಾನ್ಯಗಳು ಅವರನ್ನು ಕಾಪಾಡಬಲ್ಲುವು. ಕರ್ನಾಟಕದ ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ಮಕ್ಕಳ ಅಪೌಷ್ಠಿಕತೆ ಭಯ ಹುಟ್ಟಿಸುವಂತಿದೆ. ಕೆಲ ವರದಿಗಳ ಪ್ರಕಾರ- 1. ಐದು ವರ್ಷ ಕೆಳಗಿನ 42.5% ಮಕ್ಕಳು ತಮ್ಮ ವಯಸ್ಸಿನ ಅಗತ್ಯಕ್ಕಿಂತ ಅತಿ ಕಡಿಮೆ ತೂಕ ಹೊಂದಿದ್ದಾರೆ. 2. 48% ಮಕ್ಕಳು ತಮ್ಮ ವಯಸ್ಸಿಗೆ ಹೋಲಿಸಿದರೆ ಕುಬ್ಜ ಬೆಳವಣಿಗೆ ಹೊಂದಿದ್ದಾರೆ. 3. 19.8% ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಎತ್ತರ ಮತ್ತು ದಪ್ಪ ತೀರಾ ಕಡಿಮೆ ಇದೆ. 4. ಬಡ ಜಿಲ್ಲೆಗಳಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿದ್ದು 50% ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. 5. ಕಿರುಧಾನ್ಯದ ಆಹಾರ ನಮ್ಮ ಮಕ್ಕಳ ಅಪೌಷ್ಟಿಕತೆ ನೀಗಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಹೀಗಾಗಿ ಕಿರುಧಾನ್ಯ ರೈತರು ನಮ್ಮ ಜನರ ಆರೋಗ್ಯ ಮತ್ತು ಪೌಷ್ಟಿಕತೆಗೆ ನೀಡುವ ಕೊಡುಗೆಗಾಗಿ ಅವರನ್ನು ಬಹುವಾಗಿ ಆಧರಿಸಬೇಕು.
5. ಕೊನೆಯದಾಗಿ, ಕಿರುಧಾನ್ಯ ಬೆಳೆಯುವ ರೈತರು, ದೊಡ್ಡ ರೀತಿಯಲ್ಲಿ ಜೀವ ವೈವಿಧ್ಯತೆಯ ಸಂರಕ್ಷಕರಾಗಿದ್ದಾರೆ. ‘ಜೀವ ವೈವಿಧ್ಯತೆ ಸಂರಕ್ಷಣೆ 2012’ ನಂತರದಲ್ಲಿ, ‘ಜೀವ ವೈವಿಧ್ಯತಾ ಕೃಷಿಯ ಮೂಲಕ ಕನಿಷ್ಠ 5% ಕೃಷಿಯ ಬೆಳೆವಣಿಗೆಯನ್ನು ಸಾಧಿಸಬೇಕು’ ಎನ್ನುವ ಸರ್ಕಾರಿ ನೀತಿ ಇದೆ. ಈ ಅವಕಾಶವನ್ನು ಬಳಸಿಕೊಂಡು ಕರ್ನಾಟಕ ಸರ್ಕಾರವು ಭಾರತ ಸರ್ಕಾರದ ಜೀವ ವೈವಿಧ್ಯತ ಫಂಡಿನ ಕನಿಷ್ಠ 20% ಆದರೂ ಪಡೆದುಕೊಂಡು ಕರ್ನಾಟಕದ ಕಿರುಧಾನ್ಯ ಬೆಳೆಯುವ ರೈತರಿಗೆ ಲಭ್ಯವಾಗಿಸಬೇಕು.
ಈ ಎಲ್ಲವನ್ನು ರೈತರಿಗೆ ನೇರ ಆದಾಯ ವರ್ಗಾವಣೆಯಾಗಿ ಪರಿವರ್ತಿಸಬೇಕು. ಒಂದು ಸಲ ಆದಾಯ ಸಂಬಂಧಿ ಪ್ರಶ್ನೆಗಳು ಇತ್ಯರ್ಥವಾದಾಗ ರೈತರು ತಮ್ಮ ಮಣ್ಣಿನ ಫಲವತ್ತು ಹೆಚ್ಚಿಸುವ, ಆರೋಗ್ಯ ಮತ್ತು ಮೇವಿನ ಗುಣಮಟ್ಟವನ್ನು ಹೆಚ್ಚಿಸುವ ಶ್ರೇಷ್ಟ ಕೃಷಿ ಪದ್ಧತಿಗಳನ್ನು ಸ್ವ-ಇಚ್ಚೆಯಿಂದ ಕೈಗೊಳ್ಳುತ್ತಾರೆ.
6. ಈ ಎಲ್ಲಾ ಪ್ರಯತ್ನಗಳು ಪೌಷ್ಟಿಕತೆ, ಪರಿಸರ ಪೂರಕ ಕೃಷಿ ಮತ್ತು ಸಂಮೃಧ್ದ ರೈತರನ್ನು ಹೊಂದಿದ ಸಿರಿ ಕರ್ನಾಟಕದ ಸೃಷ್ಟಿಗೆ ದಾರಿಯಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕರ್ನಾಟಕದಾದ್ಯಂತ ಪ್ರತಿ ಹೋಬಳಿಯಲ್ಲಿ ನಿರ್ದಿಷ್ಟ ಪ್ರಮಾಣದ ಕಿರುಧಾನ್ಯ ಉತ್ಪಾದನೆಯ ಗುರಿ ಹೊಂದಿದ ‘ಕಿರುಧಾನ್ಯ ಹಬ್’ಗಳನ್ನು ಸೃಷ್ಟಿ ಮಾಡಬೇಕು. ಈ ಪ್ರತಿಯೊಂದು ಹಬ್ಗಳು ಆ ಪ್ರದೇಶದಲ್ಲಿ ಬೆಳೆದ ಕಿರುಧಾನ್ಯಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ದಾಸ್ತಾನು ಕೇಂದ್ರಗಳಾಗಬೇಕು. ಹೋಬಳಿಗಳು ಪಡಿತರ ವ್ಯವಸ್ಥೆಯನ್ನೂ ಒಳಗೊಂಡಂತೆ ಇತರ ಸಾರ್ವಜನಿಕ ಅಹಾರ ಪದ್ಧತಿಗಳಿಗೆ ಕಿರುಧಾನ್ಯಗಳನ್ನು ಒದಗಿಸಿಕೊಡುವ ಚೈತನ್ಯಶೀಲ ಕೇಂದ್ರಗಳಾಗಬೇಕು. ಇಂಥ ಸಂಗ್ರಹಣ, ಸಂಸ್ಕರಣ ಮತ್ತು ದಾಸ್ತಾನು ಕೇಂದ್ರಗಳು ಸ್ಥಳೀಯ ಯುವಕರಿಗೆ ನೌಕರಿಯ ವಿಪುಲ ಅವಕಾಶಗಳನ್ನು ಒದಗಿಸುವ ಕೇಂದ್ರಗಳಾಗುವುದರಲ್ಲಿ ಅನುಮಾನವಿಲ್ಲ. ಇಂಥ ಆಹಾರ ಮತ್ತು ಕೃಷಿ ಪರಿಸರವು ರೈತರ ಮುಂದಾಳತ್ವ ಹೊಂದಿ ್ತು ಅವರ ಕನಸಿನ ಪರಿಸರ ಪ್ರಿಯ ಸುಸ್ಥಿರ ಭವಿಷ್ಯದ ಕರ್ನಾಟಕವನ್ನು ಸೃಷ್ಟಿಸಬಲ್ಲುದು.
ಚಮತ್ಕಾರಕ ಕಿರುಧಾನ್ಯಗಳಿಗೆ ಮನ್ನಣೆ – ರಾಷ್ಟ್ರೀಯ ಕಿರುಧಾನ್ಯ ಯೋಜನೆ INSIMP
‘ಮಿಲೆಟ್ ನೆಟ್ವರ್ಕ್ಕ ಆಫ್ ಇಂಡಿಯಾ-ಮಿನಿ’ ಕಿರುಧಾನ್ಯಗಳಿಗೆ ಒತ್ತಾಸೆ ಕೊಡುವಂತೆ ಪ್ರಾರಂಭದಿಂದಲೂ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದೆ. ಈ ಒತ್ತಾಸೆ ಸಬ್ಸಿಡಿಯ ರೂಪದಲ್ಲಿರದೆ, ತೀರಾ ಪ್ರತಿಕೂಲ ಪರಿಸ್ಥಿತಿಯಲ್ಲೂ ಕಿರುಧಾನ್ಯಗಳನ್ನು ಬೆಳೆಯುವ ಈ ರೈತರ ಪರಿಸರ ಸೇವೆಗೆ ಮನ್ನಣೆಯ ರೂಪದಲ್ಲಿರಬೇಕು ಎಂಬುದು ‘ಮಿನಿ’ಯ ವಾದ. 2011ರಲ್ಲಿ ಆಂಧ್ರಪ್ರದೇಶದ ಮೇಡಕ್ ಜಿಲ್ಲೆಯ ಮಹಿಳಾ ರೈತರ ನಿಯೋಗವು ರಾಷ್ಟ್ರೀಯ ಸಲಹಾ ಕೌನ್ಸಿಲ್ನ ಕಾರ್ಯದರ್ಶಿ ಶ್ರೀ ರಾಜು ಅವರನ್ನು ಭೆಟ್ಟಿ ಮಾಡಿ ಕಿರುಧಾನ್ಯಗಳನ್ನು ‘ಪೌಷ್ಟಿಕತೆ ಮೌಲ್ಯ’ದ ಧಾನ್ಯಗಳೆಂದು ಪರಿಗಣಿಸಿ ವಿವಿಧ ಸರ್ಕಾರಿ ಆಹಾರ ಕಾರ್ಯಕ್ರಮಗಳ ಭಾಗವಾಗಿಸಬೇಕು ಎಂದು ಒತ್ತಾಯಿಸಿದರು. ಕಿರುಧಾನ್ಯಗಳನ್ನು ಸಾರ್ವಜನಿಕ ಆಹಾರ ವ್ಯವಸ್ಥೆ/ಪಡಿತರ ವ್ಯವಸ್ಥೆಗೆ ಸೇರ್ಪಡೆ ಮಾಡಬೇಕು ಎಂಬ ಒತ್ತಾಯವನ್ನೂ ಮುಂದಿಟ್ಟರು. ಅದೇ ವರ್ಷ ಹಣಕಾಸು ಮಂತ್ರಾಲಯವು ಪೌಷ್ಟಿಕ ಕಿರುಧಾನ್ಯ(ನ್ಯೂಟ್ರಿ ಸೀರಿಯಲ್ಸ್) ಉತ್ತೇಜನಕ್ಕೆ 300 ಕೋಟಿ ರೂಪಾಯಿಯನ್ನು ಘೋಷಿಸಿತು. ಇದಾದ ತಕ್ಷಣವೇ ಭಾರತದಲ್ಲಿ ಕಿರುಧಾನ್ಯ ಉತ್ಪಾದನೆ ಹೆಚ್ಚಿಸಲು Initiative for Nutritional Security through Intensive Millet Promotion(INSIMP) ಎನ್ನುವ ಕಾರ್ಯಕ್ರಮವನ್ನು ಘೋಷಿಸಿತು.
ಹೈಬ್ರಿಡ್/ಅಧಿಕ ಇಳುವರಿ ಕಿರುಧಾನ್ಯಗಳ ಬೀಜದ ಜೊತೆಗೆ ಕೀಟನಾಶಕ, ಕಳೆನಾಶಕ, ಯೂರಿಯಾ ಇತ್ಯಾದಿಗಳನ್ನು ಹೊಂದಿದ ಕಿಟ್ಗಳನ್ನು ರೈತರಿಗೆ ಕೊಡುವುದು ಈ ಕಾರ್ಯಕ್ರಮದ ವಿಧಾನ. ಒಂದು ಹೆಕ್ಟೇರಿಗೆ 3000 ರೂಪಾಯಿಗಳ ಒಳಸುರಿ ಕಿಟ್ ಮತ್ತು ಒಂದು ಕ್ವಿಂಟಲಿಗೆ 2000 ರೂಪಾಯಿ(ಹೈಬ್ರಿಡ್), 3000 ರೂಪಾಯಿ(ಅಧಿಕ ಇಳುವರಿ) ಬೀಜಗಳ ಕಿಟ್ ಅನ್ನು ಗೊತ್ತು ಪಡಿಸಿ ಸಕರ್ಾರ ಈ ಸಬ್ಸಿಡಿ ಹಣವನ್ನು ಭರಿಸುವುದು ಎಂದಾಯಿತು. ಈ ಹಣವನ್ನು ಬೀಜ, ಒಳಸುರಿ ಉತ್ಪಾದಿಸುವ ಕಂಪನಿಗಳಿಗೆ ಪಾವತಿಸಿ ರೈತರಿಗೆ ಬೀಜ ಮತ್ತು ಒಳಸುರಿಗಳನ್ನು ಒದಗಿಸುವುದು ಎಂದಾಯಿತು. 2011ರಲ್ಲಿ 7 ಲಕ್ಷ ಹೆಕ್ಟೇರೆ ಭೂಮಿಯನ್ನು ಕಿರುಧಾನ್ಯ ಬೇಸಾಯದಡಿ ತರಲಾಯಿತು.
ಈ ಯೋಜನೆ ಕಿರುಧಾನ್ಯ ಬೇಸಾಯದ ಪರಿಕಲ್ಪನೆಯನ್ನು ಸಂಪೂರ್ಣ ತಲೆಕೆಳಗಾಗಿಸಿತ್ತು. ಕಿರುಧಾನ್ಯದ ಜೀವವೈವಿಧ್ಯತಾ ಕೃಷಿಯನ್ನು ಗೌರವಿಸದೆ, ಕಿರುಧಾನ್ಯ ಬೇಸಾಯಕ್ಕೆ ರಸಗೊಬ್ಬರ, ಹೈಬ್ರಿಡ್ ಬೀಜಗಳ ಅವಶ್ಯಕತೆ ಇಲ್ಲ ಎಂಬ ಅಂಶವನ್ನು ಕಡೆಗಣಿಸಿ, ಅದೇ ಹಳೇ ಹಸಿರು ಕ್ರಾಂತಿ ಪದ್ಧತಿಗೇ ಆತುಕೊಂಡಿತ್ತು. ಇದನ್ನು ನಾವು ಬಲವಾಗಿ ವಿರೋಧಿಸಿದೆವು. ‘ಮಿನಿ’ ಮತ್ತು ‘ಡಿಡಿಎಸ್’ ಇದರ ವಿರುದ್ಧ ಪ್ರಚಾರಾಂದೋಲನ ಕೈಗೊಂಡು ಆಂಧ್ರ ಪ್ರದೇಶ ಸಕರ್ಾರದ ಕೃಷಿ ಇಲಾಖೆಯ ಕಮಿಷರನ್ನು ಕಂಡಡ್ಡೀ ಕಾರ್ಯಕ್ರಮದ ಪುನರ್ ವಿಮಶರ್ೆ ಮಾಡುವಂತೆ ಒತ್ತಾಯಿಸಿದೆವು.
ನಮ್ಮ ಒತ್ತಾಯಕ್ಲೆ ಮಣಿದ ಕಮಿಷನರರು, ಮೇಡಕ್ ಜಿಲ್ಲೆಯಲ್ಲಿ 2500 ಎಕರೆ ಪ್ರದೇಶದಲ್ಲಿ ನಮ್ಮ ವಿಧಾನದಲ್ಲಿ INSIMP ಕೈಗೊಳ್ಳುವಂತೆ ಕೇಳಿದರು. ನಾವು ಆ ಸವಾಲನ್ನು ಒಪ್ಪಿಕೊಂಡೆವು. ರೈತ ಸಮುದಾಯದೊಟ್ಟಿಗೆ ಅನೇಕ ಸಭೆಗಳನ್ನು ನಡೆಸಿದ ನಂತರ ‘ಮೇಡಕ್ ಜಿಲ್ಲಾ ಕಿರುಧಾನ್ಯ ಬೆಳೆಗಾರರ ಫೆಡರೇಷನ್’ ಸ್ಥಾಪಿಸಿ ಇದರ ಮುಖಾಂತರ ಸರ್ಕಾರದೊಟ್ಟಿಗೆ ವ್ಯವಹರಿಸುವುದಾಗಿ ಜನರು ತೀರ್ಮಾನಿಸಿದರು. ಮಹಿಳಾ ರೈತರೇ ಪ್ರಧಾನವಾಗಿದ್ದ 1432 ರೈತರು ಸಹಕಾರಿ ಸಂಘವನ್ನು ನೋಂದಾಯಿಸಿದರು.
ಮೊದಲ ಬೆಳೆ ಬಂದಾಗ ಕೃಷಿ ಇಲಾಖೆ ರೈತರ ಹೊಲಗಳಲ್ಲಿ ಇಳುವರಿ ಪರೀಕ್ಷೆ ಮಾಡಿತು. ಸ್ವಂತ ಬೀಜ, ಸಾವಯವ ಗೊಬ್ಬರ ಬಳಸಿದ್ದ ನಮ್ಮ ರೈತರಿಗೆ ಹೆಕ್ಟೇರಿಗೆ 16 ಕ್ವಿಂಟಲ್ ಇಳುವರಿ ದಾಖಲಾಯಿತು. ಸರ್ಕಾರಿ ಪದ್ಧತಿಯ ಭೂಮಿಯಲ್ಲಿ ಹೆಕ್ಟೆರಿಗೆ 10 ಕ್ವಿಂಟಲ್ನಿಂದ 13 ಕ್ವಿಂಟಲ್ ದಾಖಲಾಯಿತು. ಇದು ನಮ್ಮ ರೈತರಿಗೆ ತುಂಬಾ ಉತ್ತೇಜನಕಾರಿಯಾಯಿತು. . ಆಂದ್ರ ಸರ್ಕಾರ ಈ ಹಿಂದೆಯೇ ಮಾಡಿಕೊಂಡ ಒಪ್ಪಂದದಂತೆ ಬೀಜ ಮತ್ತು ಒಳಸುರಿ ಕಿಟ್ಗೆ ಕೊಡಬೇಕಾದ 19 ಲಕ್ಷ 93 ಸಾವಿರ ಹಣವನ್ನು ಫೆಡರೇಷನ್ಗೆ ಕೊಟ್ಟಿತು. ಅಲ್ಲದೆ 2012ರಲ್ಲಿ INSIMPಗೆ ಕೆಲಸ ಮಾಡುವಂತೆ ನಮ್ಮನ್ನು ಆಹ್ವಾನಿಸಿ 5000 ಹೆಕ್ಟೇರ್ ಭೂಮಿಯನ್ನು ವಹಿಸಿಕೊಟ್ಟಿತು.
ಆದರೆ ನಮ್ಮ ದುರದೃಷ್ಟಕ್ಕೆ ಹೊಸದಾಗಿ ಬಂದ ಕಮಿಷನರ್ ಇದಕ್ಕೆ ಕೊಕ್ಕೆ ಹಾಕಿದರು. ನಾವು ಪ್ರಿನ್ಸಿಪಲ್ ಸೆಕ್ರೆಟರಿಯವರನ್ನು ಕಂಡೆವು. ಮೇಡಕ್ ರೈತರಿಗೆ ಬೀಜ ಮತ್ತು ಒಳಸುರಿ ಕಿಟ್ ಜಾಗದಲ್ಲಿ ನಗದು ರೂಪದಲ್ಲಿ ಹಣ ಕೊಡಬೇಕೆಂದು ಮತ್ತೆ ಅದೇಶವಾಯಿತು. ಎರಡನೆ ವರ್ಷ ನಮ್ಮ ರೈತರ ಹೊಲಗಳಲ್ಲಿ ಹೆಕ್ಟೇರಿಗೆ 18 ಕ್ವಿಂಟಲ್ ದಾಖಲಾಯಿತು. ಇದು ರಾಸಾಯನಿಕದಲ್ಲಿ ಬೆಳೆದ ಹೈಬ್ರಿಡ್ ಜೋಳದ ಇಳುವರಿಗಿಂತ ಹೆಚ್ಚಾಗಿತ್ತು. ನಮ್ಮ ಸ್ಥಳೀಯ ಬೀಜಗಳ ಮಿಶ್ರ ಬೆಳೆ ಪದ್ಧತಿ ಏಕಬೆಳೆ ರಾಸಾಯನಿಕ ಕೃಷಿಯಷ್ಟೆ ಅಥವಾ ಅದಕ್ಕಿಂತ ಹೆಚ್ಚು ಇಳುವರಿ ಕೊಡುತ್ತದೆ, ವರ್ಷದಿಂದ ವರ್ಷಕ್ಕೆ ಇಳುವರಿ ಸ್ಥಿರಗೊಳ್ಳುತ್ತದೆ ಎಂಬ ನಮ್ಮ ಯಾವತ್ತೂ ವಾದಕ್ಕೆ ಸಕರ್ಾರ ಎಚ್ಚೆತ್ತುಕೊಂಡಿತ್ತು.

 

‍ಲೇಖಕರು avadhi

16 August, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading