ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರ್ನಾಟಕ ಲೇಖಕಿಯರ ಸಂಘದ ಇಂದಿರಾ ರತ್ನ ದತ್ತಿ ಪ್ರಶಸ್ತಿ ಪ್ರಕಟ

ಸಾಹಿತ್ಯಾಸಕ್ತರೂ, ಕಲೇಸಂ ಅಭಿಮಾನಿಗಳೂ ಆದ ತುಮಕೂರಿನ ರಾಜನ್ ಅವರು ತಮ್ಮ ಸಹೋದರಿಯರಾದ ಇಂದಿರಾ ಮತ್ತು ರತ್ನ ಅವರ ಹೆಸರಿನಲ್ಲಿ ಕಲೇಸಂನಲ್ಲಿ ದತ್ತಿಯನ್ನು ಇಟ್ಟಿದ್ದಾರೆ.

ಲೇಖಕಿಯೂ ಆಗಿದ್ದು, ಕನ್ನಡಪರ ಹೋರಾಟ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಕಲೇಸಂ ಅಧ್ಯಕ್ಷರಾದ ಪ್ರೊ. ಆರ್. ಸುನಂದಮ್ಮ ತಿಳಿಸಿದ್ದಾರೆ.

ತೀರ್ಪುಗಾರರಾಗಿ ಡಾ. ಆರ್. ಸುನಂದಮ್ಮ, ಸುಮಾ ಸತೀಶ್, ಲಲಿತಾ ಹೊಸಪ್ಯಾಟಿ, ಅನುರಾಧ ಬಿ ಟಿ ಹಾಗೂ ಅನಸೂಯಾ ಹೊಂಬಾಳೆ ಅವರಿದ್ದರು.

2025 ನೆಯ ಸಾಲಿಗೆ – ಲಲಿತಮ್ಮ ಡಾ. ಚಂದ್ರಶೇಖರ್, 2026 ನೆಯ ಸಾಲಿಗೆ – ಡಾ. ಮೀರಾ ಶಿವಲಿಂಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮವು ನವೆಂಬರ್ 2 ರಂದು ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತದೆ ಎಂದು ಸುನಂದಮ್ಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‍ಲೇಖಕರು Admin

23 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading